ಇಂಧನ ಸಚಿವಾಲಯ

ಎನ್ ಎಚ್ ಪಿಸಿ ಕೇಂದ್ರ  ಇಂಧನ ವಲಯದ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗಾಗಿ ಬೃಹತ್ ಕೋವಿಡ್ ಲಸಿಕೆ ಶಿಬಿರವನ್ನು ಆಯೋಜಿಸಿತು

Posted On: 19 MAY 2021 6:21PM by PIB Bengaluru

ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಶ್ರೀ ಆರ್.ಕೆ ಸಿಂಗ್, ಗೌರವಾನ್ವಿತ ರಾಜ್ಯ ಸಚಿವರು (ಸ್ವತಂತ್ರ ಶುಲ್ಕ) (ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ) ಮತ್ತು ರಾಜ್ಯ ಸಚಿವರು (ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ), ಅವರ ನಿರ್ದೇಶನದಂತೆ ದೊಡ್ಡ ಪ್ರಮಾಣದ ಕೋವಿಡ್  ಲಸಿಕೆ ನೀಡುವ ಕರೆಯನ್ನು ಅನುಸರಿಸಿ, , ವಿದ್ಯುತ್ ಸಚಿವಾಲಯದ ಅಡಿಯಲ್ಲಿ ನಡೆಯುತ್ತಿರುವ ಕೇಂದ್ರ ಸಾರ್ವಜನಿಕ ವಲಯದ ಎನ್ಎಚ್ಪಿಸಿ ಲಿಮಿಟೆಡ್ ನವದೆಹಲಿಯ ಅಪೊಲೊ ಆಸ್ಪತ್ರೆಗಳ ಸಹಯೋಗದೊಂದಿಗೆ 2021 ಮೇ 18 ರಿಂದ 19 ರವರೆಗೆ ಬಾದರ್ಪುರದ ರಾಷ್ಟ್ರೀಯ ವಿದ್ಯುತ್ ತರಬೇತಿ ಸಂಸ್ಥೆಯಲ್ಲಿ (ಎನ್ಪಿಟಿಐ) ಎರಡು  ದಿನಗಳ ಲಸಿಕಾ ಶಿಬಿರವನ್ನು ನೌಕರರಿಗೆ (ಗುತ್ತಿಗೆ ನೌಕರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ) ಮತ್ತು ಕುಟುಂಬ ಸಚಿವಾಲಯದ ಕುಟುಂಬ ಸದಸ್ಯರಿಗೆ (18-44 ವರ್ಷಗಳು) , ಭಾರತ ಸರ್ಕಾರದ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್ಆರ್ಇ), ಮತ್ತು ದೆಹಲಿ / ಎನ್ಸಿಆರ್ ಪ್ರದೇಶದ ವಿದ್ಯುತ್ ಮತ್ತು ಎಂಎನ್ಆರ್ಇ ಸಚಿವಾಲಯದ ಅಡಿಯಲ್ಲಿನ ವಿವಿಧ ಸಿಪಿಎಸ್ಯು / ಸಂಸ್ಥೆಗಳ ಕುಟುಂಬ ಸದಸ್ಯರಿಗೆ ಲಸಿಕೆ ನೀಡಲಾಯಿತು. 45 ರಿಂದ 60 ವರ್ಷದೊಳಗಿನ ಬಾಕಿ ಉಳಿದ ನೌಕರರು ಮತ್ತು ಕುಟುಂಬ ಸದಸ್ಯರಿಗೆ ಮೊದಲ ದೋಸನ್ನು ಸಹ ನೀಡಲಾಯಿತು.

ಎನ್ಎಚ್ ಪಿಸಿಯ  ಸಿಎಂಡಿಯಾದ ಶ್ರೀ .ಕೆ. ಸಿಂಗ್ರವರು ಎನ್ಎಚ್ ಪಿಸಿ, ಎನ್ಪಿಟಿಐ ಮತ್ತು ಅಪೊಲೊ ಆಸ್ಪತ್ರೆಗಳ ಅಧಿಕಾರಿಗಳೊಂದಿಗೆ ದೆಹಲಿಯ ಬದರ್ಪುರದ ಎನ್ಪಿಟಿಐನಲ್ಲಿ ನಡೆದ ಕೋವಿಡ್ 19 ವ್ಯಾಕ್ಸಿನೇಷನ್ ಶಿಬಿರದಲ್ಲಿ, ,

ಶ್ರೀ .ಕೆ. ಸಿಂಗ್, ಸಿಎಂಡಿ, ಎಎನ್ಎಚ್ ಪಿಸಿ, ಮೊದಲ ದಿನ ಲಸಿಕೆ ನೀಡುವ ಸ್ಥಳಕ್ಕೆ ಭೇಟಿ ನೀಡಿ, ಬಿಕ್ಕಟ್ಟಿನ ಅವಧಿಯಲ್ಲಿ ಸಮರ್ಪಣಾಭಾವದಿಂದ ಶಿಬಿರವನ್ನು ಸ್ಥಾಪಿಸುವಲ್ಲಿ ತೊಡಗಿರುವ ಎನ್ಎಚ್ಪಿಸಿ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಲಸಿಕಾ  ಶಿಬಿರಕ್ಕೆ ಸ್ಥಳವನ್ನು ಒದಗಿಸಿದ್ದಕ್ಕಾಗಿ ಅಪೊಲೊ ಆಸ್ಪತ್ರೆಗಳು ಮತ್ತು ಎನ್ಪಿಟಿಐಗೆ ಧನ್ಯವಾದಗಳನ್ನು ಅರ್ಪಿಸಿದರು.

ಎರಡು ದಿನಗಳ ಲಸಿಕಾ ಶಿಬಿರವು , ಎನ್ಎಚ್ ಪಿಸಿಯಿಂದ ನಡೆಸಲ್ಪಟ್ಟ ಲಸಿಕಾ ಅಭಿಯಾನದಲ್ಲಿ ಅತಿ ಹೆಚ್ಚು ಲಸಿಕೆಗೆ ಸಾಕ್ಷಿಯಾಯಿತುಇದರಲ್ಲಿ ಎಂಒಪಿ, ಎನ್ಎಚ್ ಪಿಸಿ, ಎನ್ ಟಿ ಪಿಸಿ, ಐರೆಡಾ, ಎನ್ ಪಿಟಿಐ, ಬಿಹೆಚ್ ಇಎಲ್, ಆರ್ ಇಸಿ, ಟಿಎಚ್ ಡಿಸಿ, ಪಿಟಿಸಿ, ಸಿವಿಪಿಪಿಪಿಎಲ್, ಬಿಬಿಎಂಬಿ ಮತ್ತು ಯುಪಿಎಲ್ ಮೊದಲಾದ 1270 ಜನರು ಕೋವಿಶೀಲ್ಡ್ ಲಸಿಕೆಯನ್ನು ಪಡೆದರು.

ಇಂಧನ ಕ್ಷೇತ್ರದ ಸಿಬ್ಬಂದಿಗಳ ಸುರಕ್ಷತೆಗಾಗಿ ಲಸಿಕೆ ಶಿಬಿರವನ್ನು ಆಯೋಜಿಸಲಾಗಿದ್ದು, ಇದರಿಂದಾಗಿ 24x7 ನಿರಂತರ ವಿದ್ಯುತ್ ಸರಬರಾಜು ಖಾತ್ರಿಪಡಿಸಿಕೊಳ್ಳಲಾಗಿದೆ.

***


(Release ID: 1720056) Visitor Counter : 197