ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ದೇಶಾದ್ಯಂತ ನಾನಾ ರೂಪದ ಕೋವಿಡ್ ಸೋಂಕು ಪತ್ತೆಗೆ ಅನುಕೂಲವಾಗುವ ನೂತನ ಮಲ್ಟಿಪ್ಲೆಕ್ಸ್ ಆರ್ ಟಿ-ಪಿಸಿಆರ್ ಕಿಟ್ ಅಭಿವೃದ್ಧಿಪಡಿಸಿದ ಡಿಎಸ್ ಟಿ ಸಂಸ್ಥೆ
ಸಾರ್ಸ್-ಸಿಒವಿ-2 ಸೋಂಕಿನ ನಾನಾ ರೂಪಾಂತರಿ ಕೋವಿಡ್-19 ವಿರುದ್ಧದ ನಮ್ಮ ಹೋರಾಟಕ್ಕೆ ಈ ನವೀನ ಆರ್ ಟಿ-ಪಿಸಿಆರ್ ಕಿಟ್ ಮಹತ್ವದ ಅಸ್ತ್ರವಾಗಲಿದೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ|| ಅಶುತೋಷ್ ಶರ್ಮ
Posted On:
18 MAY 2021 5:21PM by PIB Bengaluru
ಜಾಗತಿಕ ಸಾಂಕ್ರಾಮಿಕಕ್ಕೆ ಕಾರಣವಾಗಿರುವ ನಾನಾ ವಿಧದ ರೂಪಾಂತರಿ ಕೋವಿಡ್-19 ಸೋಂಕು ಪತ್ತೆಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿರುವ ಮಲ್ಟಿಪ್ಲೆಕ್ಸ್ ಆರ್ ಟಿ-ಪಿಸಿಆರ್ ಕಿಟ್ ಹೆಚ್ಚಿನ ನಿಖರತೆಯನ್ನು ಹೊಂದಿದೆ.
ಹಲವು ಬಗೆಯ ರೂಪಾಂತರಗಳೊಂದಿಗೆ ಸಾಂಕ್ರಾಮಿಕದ ಎರಡನೇ ಅಲೆ ಮುಂದುವರಿದಿದ್ದು, ಸೋಂಕನ್ನು ಖಚಿತವಾಗಿ ಪತ್ತೆಹಚ್ಚಲು ಮಲ್ಟಿಪ್ಲೆಕ್ಸ್ ಆರ್ ಟಿ-ಪಿಸಿಆರ್ ಮೂಲಕ ನಿರ್ದಿಷ್ಟ ಜೀನ್ ಗಳ ಮೂಲಕ ನಿಖರ ಪತ್ತೆಯಲ್ಲಿ ನಿರ್ಣಾಯಕವಾಗುತ್ತದೆ.
ಕೊರೊನಾ ಸೋಂಕು ಇತರೆ ಆರ್ ಎನ್ ಎ ಸೋಂಕಿಗಳಿಗಿಂತ ಕಡಿಮೆ ದೋಷಗಳನ್ನು ಮಾಡಿದರೂ, ಎಸ್, ಆರ್ ಮತ್ತು ಎನ್ ಜೀನ್ ಗಳಲ್ಲಿನ ರೂಪಾಂತರಗಳು ಆರ್ ಟಿ-ಪಿಸಿಆರ್ ಮೂಲಕ ಮಧ್ಯಪ್ರವೇಶ ಮಾಡುವುದು ಸುಲಭವಾಗುತ್ತದೆ. ಉದಾಹರಣೆಗೆ “ಹೊಸ ಆತಂಕಕಾರಿ ರೂಪಾಂತರ” ಬಿ1.1.7(ಇದನ್ನು ಬ್ರಿಟನ್ ರೂಪಾಂತರಿ ಎಂದು ಕರೆಯಲಾಗುತ್ತದೆ) ಇದು 69-70 ಡೆಲ್ ಇರುತ್ತದೆ, ಆರ್ ಎನ್ ಎ ಯಲ್ಲಿನ ಆರು ನೆಲೆಗಳನ್ನು ಅಳಿಸಿ ಹಾಕುವುದರ ಪರಿಣಾಮ, ಆರ್ ಟಿ-ಪಿಸಿಆರ್ ಮೂಲಕ ಎಸ್ ಜೀನ್ ಹೊರ ಹೋಗುತ್ತದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಬರುವ ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆ ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಎಸ್ ಸಿಟಿಐಎಂಎಸ್ ಟಿ) ಹೊಸ ಮಲ್ಟಿಪ್ಲೆಕ್ಸ್ ಆರ್ ಟಿ-ಪಿಸಿಆರ್ ಕಿಟ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಎರಡು ಬಗೆಯ ಸಾರ್ಸ್ ಸಿಒವಿ2 ಜೀನ್ ಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಜೀನ್ ಗಳು – ಆರ್ ಡಿ ಆರ್ ಪಿ ಮತ್ತು ಒಆರ್ ಎಫ್ ಬಿ-ಎನ್ಎಸ್ ಪಿ 14 ಇವುಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಮನುಷ್ಯರಲ್ಲಿನ ಆರ್ ಎನ್ ಎ ಪಿ ಜೀನ್ ಮೂಲಕ ಆಂತರಿಕ ನಿಯಂತ್ರಣದಿಂದ ಸೋಂಕಿನ ರೂಪಾಂತರಿಯ ಪ್ರಮಾಣವನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ.
ಕೋವಿಡ್-19 ಪತ್ತೆಯಲ್ಲಿ ಆರ್ ಡಿಆರ್ ಪಿ ಮತ್ತು ಒಆರ್ ಎಫ್ 1ಬಿ- ಎನ್ ಎಸ್ ಪಿ 14 ಜೀನ್ ಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ ಎಂಬುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಎರಡನೇ ಅಲೆಯಲ್ಲಿ ಹಲವು ಬಗೆಯ ರೂಪಾಂತರಗಳನ್ನು ಗುರಿಯಾಗಿಟ್ಟುಕೊಳ್ಳುವ ಉದ್ದೇಶದಿಂದ ಎರಡು ಅತ್ಯಂತ ನಿಖರವಾದ ಜೀನ್ ಗಳಾದ ಆರ್ ಡಿಆರ್ ಪಿ ಮತ್ತು ಒಆರ್ ಎಫ್- ಎನ್ ಎಸ್ ಪಿ14 ಮೂಲಕ ನಿಖರ ಫಲಿತಾಂಶ ದೊರಕಲಿದೆ. ಒಆರ್ ಎಫ್ ಬಿ-ಎನ್ ಎಸ್ ಪಿ14 ಇದು ಕೋವಿಡ್-19ನಲ್ಲಿ ಅತ್ಯಂತ ಕನಿಷ್ಠವಾಗಿ ರೂಪಾಂತರಗೊಂಡಿರುವ ತಳಿ ಆಗಿದೆ ಮತ್ತು ಸದ್ಯ ಒಆರ್ ಎಫ್-ಎನ್ ಎಸ್ ಪಿ14 ಗುರಿಯಾಗಿಟ್ಟುಕೊಂಡಿರುವ ಯಾವುದೇ ಕಿಟ್ ಮಾರುಕಟ್ಟೆಯಲ್ಲಿಲ್ಲ.
ಹೊಸ ಕಿಟ್ ಮಲ್ಟಿಪ್ಲೆಕ್ಸ್ ಟಾಕ್ಮನ್ ರಾಸಾಯನಶಾಸ್ತ್ರವನ್ನು ಆಧರಿಸಿದೆ, ಎಲ್ಲ ಮೂರು ಜೀನ್ ಗಳಲ್ಲಿ ಒಂದೇ ಕ್ರಿಯೆಯಲ್ಲಿ ವೃದ್ಧಿಸುತ್ತದೆ. ನಾಸೋಫಾರಂಜಿಯಲ್ ಸ್ವ್ಯಾಬ್ ಮಾದರಿಯಿಂದ ಆರ್ ಎನ್ ಎಗೆ ಬೇಕಾದ ಸಮಯವನ್ನು ಹೊರತುಪಡಿಸಿ 45 ನಿಮಿಷಗಳಲ್ಲಿ ಅವು ವರ್ಧನೆಯಾಗುತ್ತದೆ. ಎರಡು ಖಚಿತ ವಂಶವಾಹಿನಿಗಳನ್ನು ಗುಣಿಸುವುದರಿಂದ ಒಂದು ಹೊಸ ರೂಪಾಂತರಿಯನ್ನು ಪಟ್ಟಿಮಾಡಲು ಸಾಧ್ಯವಾಗುತ್ತದೆ ಮತ್ತು ಅದನ್ನು ಸೀಕ್ವೆನ್ಸ್ ಅನಾಲಿಸಿಸ್ ಗೆ ಒಳಪಡಿಸಲು ಗುರುತಿಸಬಹುದಾಗಿದೆ. ಎರಡು ಜೀನ್ ಗಳ ಮಲ್ಪಿಫೆಕ್ಸ್ ಮಾಡುವುದರಿಂದ ಜೀನ್ ಗಳಲ್ಲಿ ಒಂದನ್ನು ವರ್ಧಿಸಲು ಮತ್ತು ಅನುಕ್ರಮ ವಿಶ್ಲೇಷಣೆಗೆ ಗುರುತಿಸಬಹುದಾದರೆ, ಆಗ ಸಂಭವನೀಯ ರೂಪಾಂತರವನ್ನು ಕಿರುಪಟ್ಟಿ ಮಾಡಲು ಸಾಧ್ಯವಾಗುತ್ತದೆ.
ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಈ ಕಿಟ್ ಗೆ ಐಸಿಎಂಆರ್ ಮಾನ್ಯತೆ ನೀಡಿದೆ ಮತ್ತು ಇದು ಕೋವಿಡ್-19 ಪತ್ತೆಯಲ್ಲಿ ಶೇ.100ರಷ್ಟು ನಿರ್ದಿಷ್ಟವಾಗಿ ಮತ್ತು ಶೇ.97.3ರಷ್ಟು ಸೂಕ್ಷ್ಮವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಂಡುಬಂದಿದೆ.
ಕಿಟ್ ನ ವಾಣಿಜ್ಯೀಕರಣಕ್ಕೆ 2021ರ ಮೇ 14ರಂದು ಎಸ್ ಸಿಟಿಐಎಂಎಸ್ ಟಿ, ಹೈದ್ರಾಬಾದ್ ನ ಹುವೆಲ್ ಲೈಫ್ ಸೈನ್ಸಸ್ ಸಂಸ್ಥೆಯೊಂದಿಗೆ ವಿಶೇಷ ಪರವಾನಗಿಯಡಿ ಒಪ್ಪಂದಕ್ಕೆ ಸಹಿ ಹಾಕಿದೆ.
“ಈ ವಿಶಿಷ್ಟ ಆರ್ ಟಿ-ಪಿಸಿಆರ್ ಕಿಟ್ ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಮಹತ್ವದ ಅಸ್ತ್ರವಾಗಲಿದೆ ಮತ್ತು ಸಾರ್ಸ್-ಸಿಒವಿ-2 ರೂಪಾಂತರಿ ಪತ್ತೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ” ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ|| ಅಶುತೋಷ್ ಶರ್ಮಾ ಹೇಳಿದ್ದಾರೆ.
***
(Release ID: 1719793)
Visitor Counter : 224