ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೇಂದ್ರ ಸಚಿವ ಸದಾನಂದ ಗೌಡ ಅವರಿಂದ ಕೋವಿಡ್ ಸಂಬಂಧಿತ  ಔಷಧಿಗಳ ಲಭ್ಯತೆಯ  ಪರಿಶೀಲನೆ

Posted On: 18 MAY 2021 7:33PM by PIB Bengaluru

ಕೋವಿಡ್-19 ನಿರ್ವಹಣೆಗೆ ಬೇಕಾದ ಔಷಧಿಗಳ ಲಭ್ಯತೆಯನ್ನು ಪರಿಶೀಲಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಸದಾನಂದ ಗೌಡ ಅವರು ಇಂದು ಔಷಧೀಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

 

ದೇಶಾದ್ಯಂತ ಔಷಧಿಗಳು ಯಾವುದೇ ಅಡಚಣೆಯಿಲ್ಲದೇ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಔಷಧೀಯ ಇಲಾಖೆಯು ರಾಜ್ಯಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಟ್ವೀಟ್ನಲ್ಲಿ ಹೇಳಿದ್ದಾರೆ.

***(Release ID: 1719758) Visitor Counter : 34