ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಮಾರಾಟಕ್ಕಾಗಿ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿದ ಆಸಕ್ತಿ

Posted On: 18 MAY 2021 5:04PM by PIB Bengaluru

ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶಿತ ಪ್ರಾಧಿಕಾರವು ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಸಿಎಂ (ಎಸ್ ಪಿ) ಕಾಯ್ದೆ ಮತ್ತು ಎಂಎಂಡಿಆರ್ ಕಾಯ್ದೆಯಡಿ 2021 ಮಾರ್ಚ್ 25 ರಂದು ಕಲ್ಲಿದ್ದಲು ಮಾರಾಟಕ್ಕೆ ಮೀಸಲಿಡಲಾಗಿಟ್ಟಿತ್ತುಇದು ಕಲ್ಲಿದ್ದಲು ಗಣಿಗಳ ಹರಾಜಿನ ಎರಡನೇ ಹಂತವಾಗಿದೆ ಹಾಗು  ಭಾರತೀಯ ಕಲ್ಲಿದ್ದಲು ಕ್ಷೇತ್ರದ ಉದಾರೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಇದು ದಕ್ಷತೆ, ಸ್ಪರ್ಧೆ ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ, ಇದು ಸಕ್ರಿಯ ಕಲ್ಲಿದ್ದಲು ಮಾರುಕಟ್ಟೆಯ ಅಭಿವೃದ್ಧಿಗೆ ಕಾರಣವಾಗುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

ಹಂತದ ಹರಾಜು ಪ್ರತಿಕ್ರಿಯೆಗೆ ಇಲ್ಲಿಯವರೆಗೆ ಬಂದ ಪ್ರತಿಕ್ರಿಯೆಯು ಅಭೂತಪೂರ್ವಾಗಿದೆ, ಇದು ಸುಮಾರು 50 ಗಣಿ ನಿರ್ದಿಷ್ಟ ಟೆಂಡರ್ ದಾಖಲೆಗಳನ್ನು  ಬಿಡ್ಡುದಾರರು ಇಲ್ಲಿಯವರೆಗೆ ಖರೀದಿಸುತ್ತಿದ್ದಾರೆ ಮತ್ತು ಇತರ ಅನೇಕ ನಿರೀಕ್ಷಿತ ಬಿಡ್ಡುದಾರರು ಟೆಂಡರ್ ದಾಖಲೆಗಳನ್ನು ಹರಾಜಿನ ಪೋರ್ಟಲ್-ನಿಂದ .ನೋಂದಾಯಿಸುವ ಮತ್ತು ಖರೀದಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಭಾರತದ ವಿವಿಧ ರಾಜ್ಯಗಳಲ್ಲಿ ಲಾಕ್ ಡೌನ್ ಷರತ್ತುಗಳನ್ನು ತೆಗೆದುಹಾಕಿದ ನಂತರ ಆಸಕ್ತರು  ಪರಿಶೀಲನೆಗಾಗಿ ಗಣಿ ಸ್ಥಳಗಳಿಗೆ ಹೋಗಲು ಬಿಡ್ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಲಾಗಿದೆ.

***




(Release ID: 1719705) Visitor Counter : 148