ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಎನ್ಎಫ್ ಎಸ್ಎ / ಪಿಎಂ-ಜಿಕೆ III ಆಹಾರ ಧಾನ್ಯಗಳ ಸುರಕ್ಷಿತ ಮತ್ತು ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ನ್ಯಾಯ ಬೆಲೆ ಅಂಗಡಿಗಳನ್ನು ದೀರ್ಘಾವಧಿಯವರೆಗೆ ಮತ್ತು ವಾರದ ಎಲ್ಲಾ ದಿನಗಳವರೆಗೆ ತೆರೆದಿಡಲು ಸೂಚಿಸಲಾಗಿದೆ.

Posted On: 16 MAY 2021 1:12PM by PIB Bengaluru

ನ್ಯಾಯಬೆಲೆ ಬೆಲೆ ಅಂಗಡಿಗಳ (ಎಫ್ಪಿಎಸ್)  ಕೆಲಸದ ಸಮಯವನ್ನು ಮೊಟಕುಗೊಳಿಸುವಂತಹ ಕೆಲವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಲಾಕ್ ಡೌನ್ ದೃಷ್ಟಿಯಿಂದ, 2021 ಮೇ 15 ರಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಿಂದ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ  ಈ ಸೂಚನೆಯನ್ನು ನೀಡಲಾಗಿದೆ:  ನ್ಯಾಯಬೆಲೆ ಅಂಗಡಿಗಳನ್ನು ತಿಂಗಳ ಎಲ್ಲಾ ದಿನಗಳಲ್ಲಿ ತೆರೆಯ ಬೇಕು ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ  ಕೋವಿಡ್-19  ಶಿಷ್ಟಾಚಾರ,  ಸರಿಯಾದ ಸಾಮಾಜಿಕ ಅಂತರ / ಅನುಸರಿಸಲು ಅನುವು ಮಾಡಿಕೊಡಲು  ಪಿಎಮ್ ಜಿ ಕೆ ಎ ವೈ III ಮತ್ತು ಎನ್ ಎಫ್ ಎಸ್ ಎ ಆಹಾರ ಧಾನ್ಯಗಳನ್ನು ದಿನವಿಡೀ  ನುಗ್ಗಾಟವಿರದಂತೆ ವಿತರಿಸಬೇಕು. ಇದಕ್ಕೆ ಅನುಕೂಲವಾಗುವಂತೆ, ನಿಯಮಿತ ಮಾರುಕಟ್ಟೆ ತೆರೆಯುವ ನಿರ್ಬಂಧಿತ ಗಂಟೆಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ  ವಿನಂತಿಸಲಾಗಿದೆ.

ಈ ಇಲಾಖೆಯು ನೀಡುವ ಸಲಹೆಗಳ ಪ್ರಕಾರ ಕೋವಿಡ್ -19 ಶಿಷ್ಟಾಚಾರವನ್ನು ಪಾಲಿಸಿದರೆ ಈ ಕ್ರಮವು ಪಿಎಂಜಿಕೆ III ಮತ್ತು ಎನ್ ಎಫ್ ಎಸ್ ಎ ಅಡಿಯಲ್ಲಿ ಆಹಾರ ಧಾನ್ಯವನ್ನು ಎಲ್ಲಾ ಎನ್ಎಫ್ಎಸ್ಎ ಫಲಾನುಭವಿಗಳಿಗೆ ಸುರಕ್ಷಿತ ಮತ್ತು ಸಮಯಕ್ಕೆ ಅನುಗುಣವಾಗಿ ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ.  ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಎಫ್ ಪಿ ಎಸ್ ಗಳಲ್ಲಿ ಆಹಾರ ಧಾನ್ಯಗಳನ್ನು ಸಕಾಲದಲ್ಲಿ ವಿತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಲಾಗಿದೆ.

 "ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ" (ಪಿಎಂ-ಜಿಕೆಐ III) ಅನ್ನು ಎರಡು ತಿಂಗಳ ಅವಧಿಗೆ ಅಂದರೆ ಮೇ ಮತ್ತು ಜೂನ್ 2021 ರ ಹಿಂದಿನ ಮಾದರಿಯಲ್ಲಿ ಅನುಷ್ಠಾನಗೊಳಿಸಲು ವಿತರಣೆಯನ್ನು ಪ್ರಾರಂಭಿಸಲಾಯಿತು.  ಎನ್ಎಫ್ಎಸ್ಎಯ ಎರಡೂ ವಿಭಾಗಗಳ ವ್ಯಾಪ್ತಿಯಲ್ಲಿ ಅವುಗಳೆಂದರೆ ಅಂತ್ಯೋದಯ ಅನ್ನ ಯೋಜನೆ (ಎ ಎ ವೈ) ಮತ್ತು ಆದ್ಯತೆಯ ಮನೆಯವರು (ಪಿಹೆಚ್ ಹೆಚ್) ವ್ಯಾಪ್ತಿಯಲ್ಲಿ ಬರುವ ಸುಮಾರು 80 ಕೋಟಿ ಫಲಾನುಭವಿಗಳಿಗೆ ತಮ್ಮ ನಿಯಮಿತ ಮಾಸಿಕವಾಗಿ ನೀಡುವುದಕ್ಕಿಂತ ಹೆಚ್ಚುವರಿಯಾಗಿ ಉಚಿತ ಆಹಾರ ಧಾನ್ಯಗಳನ್ನು (ಅಕ್ಕಿ / ಗೋಧಿ) ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕಿ.ಗ್ರಾಂ, ನೀಡಲಾಗುವುದು.


ಸೂಚನಾ ಪತ್ರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿರಿ 



(Release ID: 1719137) Visitor Counter : 259