ಇಂಧನ ಸಚಿವಾಲಯ
ಎನ್ ಟಿ ಪಿ ಸಿ ದೇಶಾದ್ಯಂತ ಕೋವಿಡ್ ಆರೈಕೆ ಸೌಲಭ್ಯಗಳನ್ನು ಹೆಚ್ಚಿಸಿದೆ
Posted On:
15 MAY 2021 2:36PM by PIB Bengaluru
ಭಾರತದ ಅತಿದೊಡ್ಡ ಸಂಯೋಜಿತ ಇಂಧನ ಸಂಸ್ಥೆಯಾದ ಎನ್ ಟಿಪಿಸಿ ಲಿಮಿಟೆಡ್, 500 ಕ್ಕೂ ಹೆಚ್ಚು ಹಾಸಿಗೆಗಳನ್ನು ಆಮ್ಲಜನಕ ಸೌಲಭ್ಯಗಳೊಂದಿಗೆ ಮತ್ತು 1100 ಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳನ್ನು ವಿವಿಧ ರಾಜ್ಯಗಳಲ್ಲಿನ ಘಟಕಗಳಾದ್ಯಂತ ಸೇರಿಸಿದೆ.
ಎನ್ ಸಿಆರ್ ಪ್ರದೇಶದಲ್ಲಿ, ಸಂಸ್ಥೆಯು 200 ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳು ಮತ್ತು 140 ಪ್ರತ್ಯೇಕ ಹಾಸಿಗೆಗಳ ಸೌಲಭ್ಯದೊಂದಿಗೆ ಕೋವಿಡ್ ಆರೈಕೆ ಕೇಂದ್ರಗಳನ್ನು ಬದರ್ಪುರ, ನೋಯ್ಡಾ ಮತ್ತು ದಾದ್ರಿಗಳಲ್ಲಿ ಸ್ಥಾಪಿಸಿದೆ. ಇದಲ್ಲದೆ, ಸಂಸ್ಥೆಯು ಒಡಿಶಾದ ಸುಂದರ್ ಗಢದಲ್ಲಿ 500 ಹಾಸಿಗೆಗಳ ಕೋವಿಡ್ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದು, ಅಲ್ಲಿ 20 ವೆಂಟಿಲೇಟರ್ ಗಳನ್ನು ಒದಗಿಸಲಾಗಿದೆ.
ಕಂಪನಿಯು ಈಗಾಗಲೇ ಎನ್ ಸಿಆರ್ ನಲ್ಲಿ 11 ಆಮ್ಲಜನಕ ಉತ್ಪಾದನಾ ಘಟಕಗಳಿಗೆ ಆದೇಶಗಳನ್ನು ನೀಡಿದೆ. ಬಾಟ್ಲಿಂಗ್ ಸೌಲಭ್ಯ ಹೊಂದಿರುವ 2 ದೊಡ್ಡ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದಲ್ಲದೆ, ಕಂಪನಿಯು ಇತರ ರಾಜ್ಯಗಳಲ್ಲಿ 8 ವಿವಿಧ ಸ್ಥಳಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದೆ. ಇದರ ಜೊತೆಗೆ, ಇತರ ರಾಜ್ಯಗಳ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಂಸ್ಥೆಯು ಸಹಾಯವನ್ನು ನೀಡಿದೆ.
ಇದಲ್ಲದೆ, ದಾದ್ರಿ, ಕೊರ್ಬಾ, ಕನಿಹಾ, ರಾಮಗುಂಡಮ್, ವಿಂಧ್ಯಾಚಲ್, ಬಾಢ್ ಮತ್ತು ಬಾದರ್ಪುರ್, ಎನ್ ಟಿಪಿಸಿಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಆರೈಕೆ ಕೇಂದ್ರ, ಉತ್ತರ ಕರಣಪುರ, ಬೊಂಗೈಗಾಂವ್ ಮತ್ತು ಸೋಲಾಪುರದಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಸ್ಥಾಪಿಸಲಿದೆ. ಇತರ ಆಸ್ಪತ್ರೆಗಳು ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿವೆ.
ಇದರ ನಡುವೆ, ಎನ್ ಟಿಪಿಸಿ ತನ್ನ ಕಾರ್ಯಾಚರಣೆಗಳಲ್ಲಿ 70,000 ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಸಹವರ್ತಿಗಳಿಗೆ ಲಸಿಕೆ ಹಾಕಿಸಿದೆ. ಘಟಕದ ಸ್ಥಳಗಳಲ್ಲಿ ಬೃಹತ್ ಲಸಿಕಾ ಅಭಿಯಾನವು ಮುಂದುವರಿಯುತ್ತದೆ.
ಎನ್ ಟಿಪಿಸಿ ತನ್ನ ಅನೇಕ ಘಟಕದ ಸ್ಥಳಗಳಲ್ಲಿ 18-44 ವರ್ಷದ ವಿಭಾಗದಲ್ಲಿ ಅರ್ಹರಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ. ಆಯಾ ರಾಜ್ಯ ಆಡಳಿತಗಳ ಸಮನ್ವಯದೊಂದಿಗೆ ಎನ್ ಟಿಪಿಸಿ ಕೇಂದ್ರಗಳಲ್ಲಿ ಲಸಿಕಾ ಕಾಯರ್ಕ್ರಮವನ್ನು ಕೈಗೊಳ್ಳಲಾಗಿದೆ.
ವಿಶೇಷ ಕಾರ್ಯಪಡೆಯಿಂದ ಸಂಯೋಜಿಸಲ್ಪಟ್ಟ ಘಟಕಗಳಾದ್ಯಂತ ರೋಗಿಗಳಿಗೆ ಉತ್ತಮ ಸಮನ್ವಯಕ್ಕಾಗಿ ಭಾರತದ ಅತಿದೊಡ್ಡ ಸಂಯೋಜಿತ ಶಕ್ತಿ ಉತ್ಪಾದಕ ಸಂಸ್ಥೆಯು 24X7 ನಿಯಂತ್ರಣ ಕೊಠಡಿಗಳನ್ನು ನಡೆಸುತ್ತಿದೆ. ತನ್ನ ವಿವಿಧ ಪಟ್ಟಿಯಲ್ಲಿರುವ ಮತ್ತು ಪಟ್ಟಿಯಲ್ಲಿರದ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಇತರ ಚಿಕಿತ್ಸಾ ಸೌಲಭ್ಯಗಳ ಸಮನ್ವಯಕ್ಕೆ ಕಾರ್ಯಪಡೆಯು ಸಹಾಯ ಮಾಡುತ್ತದೆ. 24X7 ನಿಯಂತ್ರಣ ಕೊಠಡಿಯು ಔಷಧಿಗಳು, ಆಸ್ಪತ್ರೆ ಉಪಕರಣಗಳು, ಸೇವೆಗಳ ಜೊತೆಗೆ ದೈನಂದಿನ ವರದಿ ಮತ್ತು ಎಂಐಎಸ್ ಸಂಗ್ರಹಣೆಗಾಗಿ ಸಹಕರಿಸುತ್ತದೆ.
ಇದಲ್ಲದೆ, ಎಲ್ಲಾ ಕೋವಿಡ್ ರೋಗಿಗಳಿಗೆ ಉತ್ತಮ ಆರೋಗ್ಯ ಸಹಾಯವನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಎನ್ ಟಿಪಿಸಿ ಆಸ್ಪತ್ರೆಗಳು ಮತ್ತು ಅದರ ವೈದ್ಯಕೀಯ ತಂಡದೊಂದಿಗೆ ಸಮನ್ವಯದಲ್ಲಿದೆ. ಅಗತ್ಯವಾದ ಆದರೆ ವಿರಳ ಔಷಧಿಗಳು ಮತ್ತು ಆಮ್ಲಜನಕದಂತಹ ಇತರ ಅಗತ್ಯ ವಸ್ತುಗಳ ಲಭ್ಯತೆಯನ್ನು ಸುಲಭಗೊಳಿಸಲು ಎನ್ ಟಿಪಿಸಿ ವಿದ್ಯುತ್ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದೊಂದಿಗೆ ಸಹಕರಿಸುತ್ತಿದೆ.
***
(Release ID: 1718921)
Visitor Counter : 189