ರೈಲ್ವೇ ಸಚಿವಾಲಯ

ಆಮ್ಲಜನಕದ ಸರಬರಾಜು 20 ದಿನಗಳಲ್ಲಿ 126 ಮೆ.ಟನ್ ನಿಂದ 7900 ಮೆ.ಟನ್ ವರೆಗೆ; ಏಪ್ರಿಲ್ 24 ರಂದು ಮೊದಲ ವಿತರಣೆಯೊಂದಿಗೆ ಪ್ರಾರಂಭಿಸಿ, ರೈಲ್ವೆಯು 12 ರಾಜ್ಯಗಳಿಗೆ ಆಮ್ಲಜನಕವನ್ನು ತಲುಪಿಸಲು ಆಕ್ಸಿಜನ್ ಎಕ್ಸ್ ಪ್ರೆಸ್ ಕಾರ್ಯಾಚರಣೆಯನ್ನು ಹೆಚ್ಚಿಸಿದೆ


ಆಂಧ್ರಪ್ರದೇಶಕ್ಕೆ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ 40 ಮೆಟ್ರಿಕ್ ಟನ್ ಎಲ್ಎಂಒನೊಂದಿಗೆ ನೆಲ್ಲೂರಿಗೆ ಹೋಗುತ್ತಲಿದೆ.

ಕೇರಳಕ್ಕೆ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ 118 ಮೆ.ಟನ್ ಎಲ್ಎಂಒನೊಂದಿಗೆ ಎರ್ನಾಕುಲಂಗೆ ಹೋಗುತ್ತಲಿದೆ.

ತಮಿಳುನಾಡಿಗೆ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ 80 ಮೆ.ಟನ್ ತಲುಪಿಸುತ್ತದೆ

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಪ್ರತಿದಿನ ಸುಮಾರು 800 ಮೆ.ಟನ್ ಎಲ್ಎಂಒಗಳನ್ನು ರಾಷ್ಟ್ರದಲ್ಲಿ ತಲುಪಿಸುತ್ತವೆ

ಆಕ್ಸಿಜನ್ ಎಕ್ಸ್ ಪ್ರೆಸ್ಗಳ ಮೂಲಕ ಆಮ್ಲಜನಕವನ್ನು ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ತಲುಪಿಸುತ್ತಿದೆ

ಈವರೆಗೆ ಮಹಾರಾಷ್ಟ್ರದಲ್ಲಿ 462 ಮೆ.ಟನ್ , ಉತ್ತರ ಪ್ರದೇಶದಲ್ಲಿ ಸುಮಾರು 2210 ಮೆ.ಟನ್, ಮಧ್ಯಪ್ರದೇಶದಲ್ಲಿ 408 ಮೆ.ಟನ್, ಹರಿಯಾಣದಲ್ಲಿ 1228 ಮೆ.ಟನ್, ತೆಲಂಗಾಣದಲ್ಲಿ 308 ಮೆ.ಟನ್, ರಾಜಸ್ಥಾನದಲ್ಲಿ 72 ಮೆ.ಟನ್, ಕರ್ನಾಟಕದಲ್ಲಿ 120 ಮೆ.ಟನ್, ಉತ್ತರಾಖಂಡದಲ್ಲಿ 80 ಮೆ.ಟನ್ ತಮಿಳುನಾಡಿನಲ್ಲಿ ಮತ್ತು ದೆಹಲಿಯಲ್ಲಿ 2934 ಮೆ.ಟನ್. ಆಮ್ಲಜನಕವನ್ನು ತಲುಪಿಸಲಾಗಿದೆ

Posted On: 14 MAY 2021 6:51PM by PIB Bengaluru

ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆಯು ದೇಶಾದ್ಯಂತ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್ಎಂಒ) ತಲುಪಿಸುವ ಮೂಲಕ ಪರಿಹಾರವನ್ನು ತಲುಪಿಸುವ ಕಾರ್ಯವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಭಾರತೀಯ ರೈಲ್ವೆಯು ಸುಮಾರು 500 ಟ್ಯಾಂಕರ್ಗಳಲ್ಲಿ ಸುಮಾರು 7900 ಮೆ.ಟನ್ ಎಲ್ಎಂಒವನ್ನು ದೇಶದ ವಿವಿಧ ರಾಜ್ಯಗಳಿಗೆ ತಲುಪಿಸಿದೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುಮಾರು 800 ಮೆ.ಟನ್ ಎಲ್ಎಂಒಗಳನ್ನು ರಾಷ್ಟ್ರದಲ್ಲಿ ತಲುಪಿಸುತ್ತಿವೆ.

ಆಕ್ಸಿಜನ್ ಎಕ್ಸ್ ಪ್ರೆಸ್ ಗಳು 20 ದಿನಗಳ ಹಿಂದೆ ಏಪ್ರಿಲ್ 24, 2021 ರಂದು ಮಹಾರಾಷ್ಟ್ರದಲ್ಲಿ 126 ಮೆ.ಟನ್ ಎಲ್ಎಂಒ ನೊಂದಿಗೆ ತಲುಪಿಸುವ ಕಾರ್ಯವನ್ನು ಪ್ರಾರಂಭಿಸಿದ್ದನ್ನು ಗಮನಿಸಬಹುದು.

ಕೇವಲ 20 ದಿನಗಳ ಅವಧಿಯಲ್ಲಿ, ಸುಮಾರು 7900 ಮೆ.ಟನ್ ವೈದ್ಯಕೀಯ ಆಮ್ಲಜನಕವನ್ನು 12 ರಾಜ್ಯಗಳಿಗೆ ತಲುಪಿಸಲು ರೈಲ್ವೆಯು ತನ್ನ ಆಕ್ಸಿಜನ್ ಎಕ್ಸ್ ಪ್ರೆಸ್ ಕಾರ್ಯಾಚರಣೆಯನ್ನು ಹೆಚ್ಚಿಸಿದೆ.

ದೇಶದ ಉದ್ದಗಲಕ್ಕೆ ಸಂಚರಿಸುತ್ತಾ, ಭಾರತೀಯ ರೈಲ್ವೆಯು ಪಶ್ಚಿಮದಲ್ಲಿ ಹಪಾ ಮತ್ತು ಮುಂಡ್ರಾ ಮತ್ತು ರೂರ್ಕೆಲಾ, ದುರ್ಗಾಪುರ, ಟಾಟಾನಗರ, ಪೂರ್ವದ ಅಂಗುಲ್ ಮುಂತಾದ ಸ್ಥಳಗಳಿಂದ ಆಮ್ಲಜನಕವನ್ನು ತೆಗೆದುಕೊಂಡು ನಂತರ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು , ಹರಿಯಾಣ, ತೆಲಂಗಾಣ, ಪಂಜಾಬ್, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶದ ರಾಜ್ಯಗಳಿಗೆ ತಲುಪಿಸುತ್ತಿದೆ.  

ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ರೈಲ್ವೆ ಆಕ್ಸಿಜನ್ ಎಕ್ಸ್ ಪ್ರೆಸ್ ಸರಕು ರೈಲುಗಳ ಚಾಲನೆಯಲ್ಲಿ ಹೊಸ ಮಾನದಂಡಗಳನ್ನು ಮತ್ತು ಅಭೂತಪೂರ್ವ ಮಾನದಂಡಗಳನ್ನು ರಚಿಸುತ್ತಿದೆ. ಈ ನಿರ್ಣಾಯಕ ಸರಕು ರೈಲುಗಳ ಸರಾಸರಿ ವೇಗವು ಹೆಚ್ಚಿನ ಸಂದರ್ಭಗಳಲ್ಲಿ 55ಕ್ಕಿಂತ ಹೆಚ್ಚಿನದಾಗಿದೆ. ಹೆಚ್ಚಿನ ಆದ್ಯತೆಯ ಗ್ರೀನ್ ಕಾರಿಡಾರ್ ನಲ್ಲಿ ಚಾಲನೆಯಲ್ಲಿರುವ, ಹೆಚ್ಚಿನ ತುರ್ತು ಪ್ರಜ್ಞೆಯೊಂದಿಗೆ, ವಿವಿಧ ವಲಯಗಳ ಕಾರ್ಯಾಚರಣಾ ತಂಡಗಳು ಅತ್ಯಂತ ಸವಾಲಿನ ಸಂದರ್ಭಗಳಲ್ಲಿ ಇಪ್ಪತ್ತನಾಲ್ಕು ಘಂಟೆಗಳ ಕಾಲ ಕೆಲಸ ಮಾಡುತ್ತಿದ್ದು, ಆಮ್ಲಜನಕವು ಸಾಧ್ಯವಾದಷ್ಟು ವೇಗವಾಗಿ ತಲುಪುವುದನ್ನು ಖಚಿತ ಪಡಿಸುತ್ತವೆ. ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿ ಬದಲಾವಣೆಗಳಿಗಾಗಿ ತಾಂತ್ರಿಕ ನಿಲುಗಡೆಗಳನ್ನು 1 ನಿಮಿಷಕ್ಕೆ ಇಳಿಸಲಾಗಿದೆ.

ರೈಲು ಮಾರ್ಗಗಳನ್ನು ಮುಕ್ತವಾಗಿ ಇಡಲಾಗುತ್ತದೆ ಮತ್ತು ಆಕ್ಸಿಜನ್ ಎಕ್ಸ್ಪ್ರೆಸ್ ತಡೆಯಿಲ್ಲದೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಜಾಗರೂಕತೆಯನ್ನು ವಹಿಸಿಲಾಗುತ್ತಿದೆ.

ಇತರ ಸರಕು ಸಾಗಣಿಕೆಯ ವೇಗವು ಕಡಿಮೆಯಾಗಬಾರದು ಎನ್ನುವ ರೀತಿಯಲ್ಲಿ ಇದನ್ನು ಮಾಡಲಾಗುತ್ತದೆ.

ಕಳುಹಿಸಲು ತಯಾರಾಗುತ್ತಿದ್ದಂತೆಯೇ, ಆಂಧ್ರಪ್ರದೇಶ ಮತ್ತು ಕೇರಳದ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ಗಳು ಕ್ರಮವಾಗಿ 40 ಮೆ.ಟನ್ ಮತ್ತು 118 ಮೆ.ಟನ್ ಆಕ್ಸಿಜನ್ ಪರಿಹಾರದೊಂದಿಗೆ ಸಾಗುತ್ತಿವೆ.

ತಮಿಳುನಾಡಿಗೆ ಮೊದಲ ಆಕ್ಸಿಜನ್ ಎಕ್ಸ್ಪ್ರೆಸ್ ಇಂದು ಬೆಳಿಗ್ಗೆ 80 ಮೆ.ಟನ್ ಸರಬರಾಜು ಮಾಡಲಾಗಿದೆ ಮತ್ತು ಎರಡನೇ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಕೂಡ ಮಾರ್ಗದಲ್ಲಿದೆ.

130 ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ಈವರೆಗೆ ತಮ್ಮ ಯಾನವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ನೀಡಿವೆ ಎನ್ನುವುದನ್ನು ಗಮನಿಸಬಹುದು.

ಕೋರಿಕೊಂಡಿರುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಎಂಒ ತಲುಪಿಸಲು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ.

ಈ ಸುದ್ದಿ ಬಿಡುಗಡೆಯ ಸಮಯದವರೆಗೆ, ಮಹಾರಾಷ್ಟ್ರದಲ್ಲಿ 462 ಮೆ.ಟನ್, ಯುಪಿಯಲ್ಲಿ ಸುಮಾರು 2210 ಮೆ.ಟನ್, ಮಧ್ಯಪ್ರದೇಶದಲ್ಲಿ 408 ಮೆ.ಟನ್, ಹರಿಯಾಣದಲ್ಲಿ 1228 ಮೆ.ಟನ್, ತೆಲಂಗಾಣದಲ್ಲಿ 308 ಮೆ.ಟನ್, ರಾಜಸ್ಥಾನದಲ್ಲಿ 72 ಮೆ.ಟನ್, ಕರ್ನಾಟಕದಲ್ಲಿ 120 ಮೆ.ಟನ್, 80 ಮೆ.ಟನ್ ಉತ್ತರಾಖಂಡದಲ್ಲಿ, ತಮಿಳುನಾಡಿನಲ್ಲಿ 80 ಮೆ.ಟನ್ ಮತ್ತು ದೆಹಲಿಯಲ್ಲಿ 2934 ಮೆ.ಟನ್ ಆಮ್ಲಜನಕವನ್ನು ತಲುಪಿಸಲಾಗಿದೆ.

ಹೊಸ ಆಕ್ಸಿಜನ್ ಎಕ್ಸ್ ಪ್ರೆಸ್ ಗಳನ್ನು ಚಲಾಯಿಸುವುದು ಬಹಳ ಕ್ರಿಯಾತ್ಮಕ ಕ್ರಿಯೆಯಾಗಿದ್ದು, ಅಂಕಿಅಂಶಗಳು ಯಾವಾಗಲೂ ಹೊಸದಾಗಿ ಬದಲಾಗುತ್ತಿರುತ್ತವೆ. ಮತ್ತಷ್ಟು ಆಮ್ಲಜನಕ ತುಂಬಿಕೊಂಡ ಆಕ್ಸಿಜನ್ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ರಾತ್ರಿಯ ನಂತರ ತಮ್ಮ ಪ್ರಯಾಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ರೈಲ್ವೆ ವಿವಿಧ ಮಾರ್ಗಗಳನ್ನು ಆಮ್ಲಜನಕ ಪೂರೈಕೆ ಸ್ಥಳಗಳೊಂದಿಗೆ ಯೋಜಿಸಿಕೊಂಡಿದೆ ಮತ್ತು ರಾಜ್ಯಗಳ ಯಾವುದೇ ಮುಂದಿನ ಅಗತ್ಯತೆಗಳೊಂದಿಗೆ ಸಿದ್ಧವಾಗಿದೆ. ದ್ರವ ವೈದ್ಯಕೀಯ ಆಮ್ಲಜನಕವನ್ನು ತರಲು ರಾಜ್ಯಗಳು ಭಾರತೀಯ ರೈಲ್ವೆಗೆ ಟ್ಯಾಂಕರ್ಗಳನ್ನು ಒದಗಿಸುತ್ತವೆ.

***


(Release ID: 1718733) Visitor Counter : 251