ಭೂವಿಜ್ಞಾನ ಸಚಿವಾಲಯ
ಅಖಿಲ ಭಾರತ ಹವಾಮಾನ ಗ್ರಹಿಕೆ (ಬೆಳಿಗ್ಗೆ)
Posted On:
14 MAY 2021 10:05AM by PIB Bengaluru
ಭಾರತ ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ (ಐಎಂಡಿ) ಪ್ರಕಾರ:
(ಪ್ರಕಟಣೆ ಸಮಯ: 14 ಮೇ 2021, ಶುಕ್ರವಾರ, 08:00 ಗಂಟೆ ಭಾರತೀಯ ಕಾಲಮಾನ 0530 ಗಂಟೆಯಲ್ಲಿ ಗಮನಿಸಿದ ಅಂಶಗಳ ಆಧಾರದ ಮೇಲೆ)
ಅಖಿಲ ಭಾರತ ಹವಾಮಾನ ಮುನ್ಸೂಚನೆ (ಬೆಳಿಗ್ಗೆ)
- ಲಕ್ಷದ್ವೀಪ ಪ್ರದೇಶ ಮತ್ತು ನೆರೆಯ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಸ್ಪಷ್ಟವಾದ ಕಡಿಮೆ ಒತ್ತಡದ ಪ್ರದೇಶವು ಮುಂದುವರೆದಿದೆ. ಇದರ ಪ್ರಭಾವದಿಂದ ಮಧ್ಯ ಹವಾಗೋಲದ ಮಟ್ಟದವರೆಗೆ ವಿಸ್ತರಣೆಗೊಂಡ ಚಂಡಮಾರುತದ ಪರಿಚಲನೆಯು ಮುಂದಿನ 12 ಗಂಟೆಗಳಲ್ಲಿ ಅದೇ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿ ಮಾರ್ಪಡುವ ಸಾಧ್ಯತೆಯಿದೆ ಮತ್ತು ನಂತರದ 24 ಗಂಟೆಗಳಲ್ಲಿ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಇದು ಮತ್ತಷ್ಟು ತೀವ್ರಗೊಂಡು ಉತ್ತರ ವಾಯವ್ಯ ದಿಕ್ಕಿನಲ್ಲಿ ಗುಜರಾತ್ ಮತ್ತು ನೆರೆಯ ಪಾಕಿಸ್ತಾನ ಕರಾವಳಿಗಳ ಕಡೆಗೆ ಚಲಿಸುವ ಸಾಧ್ಯತೆಯಿದೆ. ಇದು ಮೇ 18ರ ಸಂಜೆ ಗುಜರಾತ್ ಕರಾವಳಿಯ ಬಳಿಗೆ ತಲುಪುವ ಸಾಧ್ಯತೆಯಿದೆ.
- ಮಧ್ಯ ಮತ್ತು ಊರ್ಧ್ವ ವಾಯುಗೋಲದ ಪಶ್ಚಿಮದಲ್ಲಿ ಸಮುದ್ರ ಮಟ್ಟದಿಂದ 5.8 ಕಿ.ಮೀ ಎತ್ತರದಲ್ಲಿ ಸುಮಾರು 75°ಪೂ ರೇಖಾಂಶದ ಉದ್ದಕ್ಕೂ ಮತ್ತು 30°ಉ ಅಕ್ಷಾಂಶದ ಉತ್ತರಕ್ಕೆ ಪಶ್ಚಿಮ ಅಡಚಣೆಯು ಕನಿಷ್ಠ ವಾಯುಭಾರ ಪ್ರದೇಶ ರೇಖೆಯನ್ನು ಸೂಚಿಸುತ್ತದೆ.
- ಆಗ್ನೇಯ ಮಧ್ಯಪ್ರದೇಶ ಮತ್ತು ನೆರೆಹೊರೆಯಲ್ಲಿ ಸಮುದ್ರ ಮಟ್ಟದಿಂದ 0.9 ಕಿ.ಮೀ. ವರೆಗೆ ವಿಸ್ತರಿಸಿದ ಚಂಡಮಾರುತದ ಪರಿಚಲನೆಯು ಮುಂದುವರಿದಿದೆ.
- ಆಗ್ನೇಯ ಮಧ್ಯಪ್ರದೇಶ ಮತ್ತು ದಕ್ಷಿಣ ತಮಿಳುನಾಡಿನ ನೆರೆಯ ಭಾಗದಲ್ಲಿ ವಿದರ್ಭ, ತೆಲಂಗಾಣ ಮತ್ತು ರಾಯಲಸೀಮದಾದ್ಯಂತ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಆಗ್ನೇಯ ವಾಯುಭಾರ ಕುಳಿ (ಎರಡು ಹೆಚ್ಚು ವಾಯುಭಾರದ ಪ್ರದೇಶಗಳ ನಡುವಿನ ಪ್ರದೇಶ – ಟ್ರಾಫ್)/ ವಾಯು ಸಂಪರ್ಕ ಕಡಿತವು ಮುಂದುವರಿಯುತ್ತದೆ.
- ಆಗ್ನೇಯ ಮಧ್ಯಪ್ರದೇಶದ ಮೇಲೆ ಮತ್ತು ಅಸ್ಸಾಂನ ನೆರೆಯ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಗಂಗಾನದಿ ಜಲಾನಯನ ಪ್ರದೇಶದಾದ್ಯಂತ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆಯಿಂದ ಪೂರ್ವ ಪಶ್ಚಿಮ ವಾಯುಭಾರ ಕುಳಿ (ಟ್ರಾಫ್) ಮುಂದುವರಿದಿದೆ.
- ದಕ್ಷಿಣ ಉತ್ತರ ಪ್ರದೇಶದ ಕೇಂದ್ರ ಭಾಗ ಮತ್ತು ನೆರೆಹೊರೆಯ ಭಾಗಗಳಲ್ಲಿ ಸಮುದ್ರ ಮಟ್ಟದಿಂದ ಸರಾಸರಿ 0.9 ಕಿ.ಮೀ. ವರೆಗೆ ಚಂಡಮಾರುತದ ಪರಿಚಲನೆ ಮುಂದುವರೆದಿದೆ.
ಮಧ್ಯ ಪಾಕಿಸ್ತಾನ ಮತ್ತು ನೆರೆಹೊರೆಯ ಮೇಲೆ ಸಮುದ್ರ ಮಟ್ಟದಿಂದ 1.5 ಕಿ.ಮೀ. ವರೆಗೆ ವಿಸ್ತರಿಸಿದಂತೆ ಚಂಡಮಾರುತದ ಪರಿಚಲನೆಯು ಮುಂದುವರಿದಿದೆ.
(ಗ್ರಾಫಿಕ್ಸ್ನಲ್ಲಿ ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ)
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು www.imd.gov.in ಗೆ ಭೇಟಿ ನೀಡಿ ಅಥವಾ ಸಂಪರ್ಕಿಸಿ: +91 1124631913, 24643965, 24629798 (1875 ರಿಂದ ರಾಷ್ಟ್ರಕ್ಕಾಗಿ ಸೇವೆ)
***
(Release ID: 1718609)
Visitor Counter : 198