ರೈಲ್ವೇ ಸಚಿವಾಲಯ

ಪರಿಹಾರ ವಿತರಿಸಿದ ಭಾರತೀಯ ರೈಲ್ವೆಯ 100ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು


100 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳಿಂದ 6260 ಮೆಟ್ರಿಕ್ ಟನ್ ಆಮ್ಲಜನಕ ವಿತರಣೆ

ನಿನ್ನೆ 800 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಪೂರೈಸಿದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು

ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ  ಮತ್ತು ಉತ್ತರಾಖಂಡಕ್ಕೆ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳಿಂದ ಆಮ್ಲಜನಕ ಪರಿಹಾರ

120 ಮೆಟ್ರಿಕ್ ಟನ್ ಮತ್ತು 55 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಹೊತ್ತ ಮೊದಲ ಆಕ್ಸಿಜನ್ ರೈಲುಗಳು ನಿನ್ನೆ ರಾತ್ರಿ ಡೆಹ್ರಾಡೂನ್ ಮತ್ತು ಪುಣೆಗೆ ಪಯಣ.

ಮಹಾರಾಷ್ಟ್ರಕ್ಕೆ 407 ಮೆಟ್ರಿಕ್ ಟನ್, ಉತ್ತರ ಪ್ರದೇಶಕ್ಕೆ1680 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 360 ಮೆಟ್ರಿಕ್ ಟನ್, ಹರಿಯಾಣಕ್ಕೆ 939 ಮೆಟ್ರಿಕ್ ಟನ್, ತೆಲಂಗಾಣಕ್ಕೆ 123 ಮೆಟ್ರಿಕ್ ಟನ್, ರಾಜಸ್ಥಾನಕ್ಕೆ 40 ಮೆಟ್ರಿಕ್ ಟನ್, ಕರ್ನಾಟಕಕ್ಕೆ 120 ಮೆಟ್ರಿಕ್ ಟನ್ ಮತ್ತು ದೆಹಲಿಗೆ 2404 ಮೆಟ್ರಿಕ್ ಟನ್|ಗಿಂತ ಹೆಚ್ಚಿನ ಆಮ್ಲಜನಕ ಇಳಿಸಿದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು

Posted On: 12 MAY 2021 3:52PM by PIB Bengaluru

ಕೊರೊನಾ ವಿರುದ್ಧದ ಹೋರಾಟಕ್ಕೆ ಎದುರಾಗುತ್ತಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆ, ದೇಶಾದ್ಯಂತ ಹಲವಾರು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ(ಎಲ್ಎಂಒ)ವನ್ನು ವಿತರಿಸುವ ಮೂಲಕ ಪರಿಹಾರ ನೀಡುವ ಪಯಣವನ್ನು ಮುಂದುವರಿಸಿದೆ. ಇದುವರೆಗೆ ಭಾರತೀಯ ರೈಲ್ವೆಯು 396ಕ್ಕಿಂತ ಹೆಚ್ಚಿನ ಟ್ಯಾಂಕರ್|ಗಳಲ್ಲಿ ಸುಮಾರು 6260 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ವಿವಿಧ ರಾಜ್ಯಗಳಿಗೆ ವಿತರಿಸಿದೆ.

ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ನಿನ್ನೆ ಒಂದೇ ದಿನ ವಿವಿಧ ರಾಜ್ಯಗಳಿಗೆ 800 ಮೆಟ್ರಿಕ್ ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ವಿತರಿಸಿವೆ.

100 ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ಇದುವರೆಗೆ ತಮ್ಮ ಪಯಣ ಪೂರ್ಣಗೊಳಿಸಿ, ವಿವಿಧ ರಾಜ್ಯಗಳಿಗೆ ಪರಿಹಾರ ಒದಗಿಸಿವೆ.

ಆಮ್ಲಜನಕಕ್ಕೆಬೇಡಿಕೆ ಇಡುವ ರಾಜ್ಯಗಳಿಗೆ ಅಲ್ಪಾವಧಿಯಲ್ಲಿ ತ್ವರಿತವಾಗಿ ಸಾಧ್ಯವಾದಷ್ಟು ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಒದಗಿಸುವುದು ಭಾರತೀಯ ರೈಲ್ವೆಯ ಪ್ರಯತ್ನವಾಗಿದೆ.

ಭಾರತೀಯ ರೈಲ್ವೆಯು ಮಹಾರಾಷ್ಟ್ರಕ್ಕೆ 407 ಮೆಟ್ರಿಕ್ ಟನ್, ಉತ್ತರ ಪ್ರದೇಶಕ್ಕೆ ಸುಮಾರು 1680 ಮೆಟ್ರಿಕ್ ಟನ್, ಮಧ್ಯ ಪ್ರದೇಶಕ್ಕೆ 360 ಮೆಟ್ರಿಕ್ ಟನ್, ಹರಿಯಾಣಕ್ಕೆ 939 ಮೆಟ್ರಿಕ್ ಟನ್, ತೆಲಂಗಾಣಕ್ಕೆ 123 ಮೆಟ್ರಿಕ್ ಟನ್, ರಾಜಸ್ಥಾನಕ್ಕೆ 40 ಮೆಟ್ರಿಕ್ ಟನ್, ಕರ್ನಾಟಕಕ್ಕೆ ನಿನ್ನೆ 120 ಮೆಟ್ರಿಕ್ ಟನ್ ಮತ್ತು ದೆಹಲಿಗೆ 2404 ಮೆಟ್ರಿಕ್ ಟನ್|ಗಿಂತ ಹೆಚ್ಚಿನ ಆಮ್ಲಜನಕವನ್ನು ಪೂರೈಸಿದೆ.

ಜಾರ್ಖಂಡ್| ಶೆಮ್|ಶೆಡ್|ಪುರ(ಟಾಟಾ  ನಗರ)ದಿಂದ 120 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಚೊಚ್ಚಲ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ನಿನ್ನೆ ರಾತ್ರಿ ಉತ್ತರಾಖಂಡಕ್ಕೆ ತಲುಪಿತು.

ಒಡಿಶಾದ ಅಂಗುಲ್|ನಿಂದ 55 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್ ನಿನ್ನೆ ತಡರಾತ್ರಿ ಪುಣೆ ತಲುಪಿತು.

ಬೇಡಿಕೆಯ ರಾಜ್ಯಗಳಿಗೆ ಹೊಸ ಮತ್ತು ತಾಜಾ ಆಮ್ಲಜನಕವನ್ನು ಪೂರೈಸುವುದು ಕ್ರಿಯಾಶೀಲ ಕೆಲಸ. ಇದರ ಅಂಕಿಅಂಶಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತಿದೆ. ದ್ರವೀಕೃತ ವೈದ್ಯಕೀಯ ಆಮ್ಲಜನಕ ಹೊತ್ತ ಹೆಚ್ಚಿನ ಸಂಖ್ಯೆಯ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳು ಇಂದು ರಾತ್ರಿ ವಿವಿಧ ರಾಜ್ಯಗಳಿಗೆ ಪಯಣ ಬೆಳೆಸುವ ನಿರೀಕ್ಷೆ ಇದೆ.

***


(Release ID: 1718120) Visitor Counter : 233