ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ-ಕೇರ್ಸ್ ನಿಧಿಯ ಮೂಲಕ 1.5 ಲಕ್ಷ ಆಕ್ಸಿಕೇರ್ ಸಿಸ್ಟಮ್  ಖರೀದಿ


1,50,000 ಆಕ್ಸಿಕೇರ್ ಸಿಸ್ಟಮ್ಗಳ ಖರೀದಿಗೆ ಪಿಎಂ-ಕೇರ್ಸ್ ನಿಧಿಯಿಂದ 322.5 ಕೋಟಿ ರೂ.

ರೋಗಿಗಳಿಗೆ ನೀಡುವ ಆಮ್ಲಜನಕವನ್ನು ಅವರ ಎಸ್‌ಪಿಒ 2 ಮಟ್ಟದ ಆಧಾರದ ಮೇಲೆ ನಿಯಂತ್ರಿಸಲು ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸಮಗ್ರ ವ್ಯವಸ್ಥೆ

ಡಿಆರ್‌ಡಿಒ ಭಾರತದ ಅನೇಕ ಕೈಗಾರಿಕೆಗಳಿಗೆ ತಂತ್ರಜ್ಞಾನವನ್ನು ವರ್ಗಾಯಿಸಿದ್ದು, ಅವುಗಳು ಭಾರತದಾದ್ಯಂತ ಆಕ್ಸಿಕೇರ್ ವ್ಯವಸ್ಥೆಗಳನ್ನು ಉತ್ಪಾದಿಸಲಿವೆ

ಆಕ್ಸಿಕ್ಯೇರ್ ಸಿಸ್ಟಮ್ ವಾಡಿಕೆಯ ಅಳತೆ ಮತ್ತು ಆಮ್ಲಜನಕ ಹರಿವಿನ ಮಾನವ ಹೊಂದಾಣಿಕೆಗಳ ಅಗತ್ಯವನ್ನು ತೆಗೆದುಹಾಕುವ ಮೂಲಕ ಆರೋಗ್ಯ ಸಿಬ್ಬಂದಿಯ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ

Posted On: 12 MAY 2021 6:16PM by PIB Bengaluru

322.5 ಕೋಟಿ ರೂ.ಗಳ ವೆಚ್ಚದಲ್ಲಿ 1,50,000 ಯುನಿಟ್ ಆಕ್ಸಿಕೇರ್ ಸಿಸ್ಟಮ್ ಗಳನ್ನು ಖರೀದಿಸಲು ಪಿಎಂ-ಕೇರ್ಸ್ ನಿಧಿ ಅನುಮತಿ ನೀಡಿದೆ. ರೋಗಿಗಳಿಗೆ ನೀಡುವ ಆಮ್ಲಜನಕವನ್ನು ಅವರ ಎಸ್ಪಿಒ 2 ಮಟ್ಟಗಳ ಆಧಾರದ ಮೇಲೆ ನಿಯಂತ್ರಿಸಲು ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಸಮಗ್ರ ವ್ಯವಸ್ಥೆ ಇದಾಗಿದೆ.

ವ್ಯವಸ್ಥೆಯನ್ನು ಎರಡು ಸಂರಚನೆಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೂಲ ಆವೃತ್ತಿಯು 10 ಲೀಟರ್ ಆಕ್ಸಿಜನ್ ಸಿಲಿಂಡರ್, ಒತ್ತಡ ನಿಯಂತ್ರಕ ಕಮ್ ಹರಿವಿನ ನಿಯಂತ್ರಕ, ಆರ್ದ್ರಕ ಮತ್ತು ಮೂಗಿನ ತೂರುನಳಿಗೆಯನ್ನು ಒಳಗೊಂಡಿದೆ. ಇದರಲ್ಲಿ ಎಸ್ಪಿಒ 2 ಮಟ್ಟವನ್ನು ಆಧರಿಸಿ ಆಮ್ಲಜನಕದ ಹರಿವನ್ನು ಕೈಯಾರೆ ನಿಯಂತ್ರಿಸಲಾಗುತ್ತದೆ. ಇಂಟಿಲಿಜೆಂಟ್ (ಬುದ್ಧಿವಂತ) ಸಂರಚನೆಯು ಮೂಲ ಆವೃತ್ತಿಯ ಜೊತೆಗೆ ಕಡಿಮೆ ಒತ್ತಡದ ನಿಯಂತ್ರಕ, ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆ ಮತ್ತು ಎಸ್ಪಿಒ 2 ಪ್ರೋಬ್ ಮೂಲಕ ಆಮ್ಲಜನಕವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುವ ವ್ಯವಸ್ಥೆಯನ್ನು ಒಳಗೊಂಡಿದೆ.

ಎಸ್ಪಿಒ 2 ಆಧಾರಿತ ಆಮ್ಲಜನಕ ನಿಯಂತ್ರಣ ವ್ಯವಸ್ಥೆಯು ರೋಗಿಯ ಎಸ್ಪಿಒ 2 ಮಟ್ಟವನ್ನು ಆಧರಿಸಿ ಆಮ್ಲಜನಕದ ಬಳಕೆಯನ್ನು ಉತ್ತಮಗೊಳಿಸುತ್ತದೆ ಮತ್ತು ಪೋರ್ಟಬಲ್ ಆಕ್ಸಿಜನ್ ಸಿಲಿಂಡರ್ ಕ್ಷಮತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ವ್ಯವಸ್ಥೆಯಿಂದ ಹರಿವನ್ನು ಪ್ರಾರಂಭಿಸಲು ಎಸ್ಪಿಒಮೌಲ್ಯವನ್ನು ಆರೋಗ್ಯ ಸಿಬ್ಬಂದಿಯು ಸರಿಹೊಂದಿಸಬಹುದು ಮತ್ತು ಎಸ್ಪಿಒಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ವ್ಯವಸ್ಥೆಯು ಅದನ್ನು ಪ್ರದರ್ಶಿಸುತ್ತದೆ. ಇದು ದಿನನಿತ್ಯದ ಮಾಪನ ಮತ್ತು ಆಕ್ಸಿಜನ್ ಹರಿವಿನ ಮಾನವ ಹೊಂದಾಣಿಕೆಗಳ ಅಗತ್ಯವನ್ನು ತೆಗೆದುಹಾಕುವ ಮೂಲಕ ಆರೋಗ್ಯ ಸಿಬ್ಬಂದಿಯ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಟೆಲಿ-ಸಮಾಲೋಚನೆಗೆ ಸಹ ಅನುಕೂಲವಾಗುತ್ತದೆ. ಕಡಿಮೆ ಎಸ್ಪಿಒ 2 ಮಟ್ಟ ಮತ್ತು ಪ್ರೋಬ್ ಗಳ ಸಂಪರ್ಕ ಕಡಿತ ಸೇರಿದಂತೆ ವಿವಿಧ ವೈಫಲ್ಯಗಳ ಸಂದರ್ಭದಲ್ಲಿ ಸ್ವಯಂಚಾಲಿತ ವ್ಯವಸ್ಥೆಯು ಸೂಕ್ತ ಆಡಿಯೊ ಎಚ್ಚರಿಕೆ ನೀಡುತ್ತದೆ. ಆಕ್ಸಿಕೇರ್ ವ್ಯವಸ್ಥೆಗಳನ್ನು ಮನೆಗಳು, ಕ್ವಾರಂಟೈನ್ ಕೇಂದ್ರಗಳು, ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಬಳಸಬಹುದು.

ಇದರ ಜೊತೆಯಲ್ಲಿ, ಆಮ್ಲಜನಕವನ್ನು ಸಮರ್ಥವಾಗಿ ಬಳಸುವುದಕ್ಕಾಗಿ ನಾನ್-ರಿಬ್ರೀಥರ್ ಮಾಸ್ಕ್ (ಎನ್ಆರ್ಎಂ) ಅನ್ನು ಆಕ್ಸಿಕೇರ್ ಸಿಸ್ಟಂಗಳೊಂದಿಗೆ ಸಂಯೋಜಿಸಲಾಗಿದೆ, ಇದರಿಂದಾಗಿ ಶೇ.30-40 ರಷ್ಟು ಆಮ್ಲಜನಕ ಉಳಿತಾಯವಾಗುತ್ತದೆ.

ಪ್ರಸ್ತುತ ವೈದ್ಯಕೀಯ ಶಿಷ್ಟಾಚಾರವು ಎಲ್ಲಾ ತೀವ್ರ ಮತ್ತು ನಿರ್ಣಾಯಕ ಕೋವಿಡ್ -19 ರೋಗಿಗಳಿಗೆ ಆಮ್ಲಜನಕದ ಚಿಕಿತ್ಸೆಯನ್ನು ಶಿಫಾರಸು ಮಾಡುತ್ತದೆ. ಆಮ್ಲಜನಕದ ಉತ್ಪಾದನೆ, ಸಾರಿಗೆ ಮತ್ತು ಶೇಖರಣೆಯ ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ, ಆಮ್ಲಜನಕ ಸಿಲಿಂಡರ್ಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ. ಆಮ್ಲಜನಕ ಚಿಕಿತ್ಸೆಯ ಅಗತ್ಯವಿರುವ ಬಹುತೇಕ ಸಂಖ್ಯೆಯ ರೋಗಿಗಳ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಕೇವಲ ಒಂದು ರೀತಿಯ ವ್ಯವಸ್ಥೆಯನ್ನು ಮಾತ್ರ ಹೊಂದುವುದು ಸಾಧುವಾಗುವುದಿಲ್ಲಏಕೆಂದರೆ ವ್ಯವಸ್ಥೆಯ ಮೂಲ ಸಾಧನಗಳನ್ನು ತಯಾರಿಸುವ ಎಲ್ಲಾ ಉತ್ಪಾದನಾ ಘಟಕಗಳು ಈಗಾಗಲೇ ಅವುಗಳ ಗರಿಷ್ಠ ಸಾಮರ್ಥ್ಯದಲ್ಲಿ ಚಾಲನೆಯಲ್ಲಿವೆ. ವ್ಯವಸ್ಥೆಯ ಮಿಶ್ರಣ ಮತ್ತು ಹೊಂದಾಣಿಕೆಯು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಉಪಯುಕ್ತ ವ್ಯವಸ್ಥೆ ಎಂದು ಸಾಬೀತುಪಡಿಸುತ್ತದೆ. ಈಗಿರುವ ಕಾರ್ಬನ್-ಮ್ಯಾಂಗನೀಸ್ ಸ್ಟೀಲ್ ಸಿಲಿಂಡರ್ಗಳ ದೇಶೀಯ ತಯಾರಕರ ಸಾಮರ್ಥ್ಯವು ಬಹಳ ಸೀಮಿತವಾಗಿದೆ. ಪರ್ಯಾಯವಾಗಿ, ಡಿಆರ್ಡಿಒ ಲಘುವಾದ ಪೋರ್ಟಬಲ್ ಸಿಲಿಂಡರ್ಗಳನ್ನು ಸಲಹೆ ಮಾಡಿದೆ. ಇದು ಸಾಮಾನ್ಯ ಆಮ್ಲಜನಕ ಸಿಲಿಂಡರ್ಗಳಿಗೆ ಬದಲಿಯಾಗಿ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ.

ಡಿಆರ್ಡಿಒ ತಂತ್ರಜ್ಞಾನವನ್ನು ಭಾರತದ ಅನೇಕ ಕೈಗಾರಿಕೆಗಳಿಗೆ ವರ್ಗಾಯಿಸಿದೆ, ಇವುಗಳು ಭಾರತದಾದ್ಯಂತ ಆಕ್ಸಿಕೇರ್ ವ್ಯವಸ್ಥೆಗಳನ್ನು ಉತ್ಪಾದಿಸಲಿವೆ.

***(Release ID: 1718116) Visitor Counter : 185