ಸಂಪುಟ

ವೈಮಾನಿಕ ಪ್ರಯಾಣಿಕರ ರೋಪ್ ವೇ ವ್ಯವಸ್ಥೆ ಅಭಿವೃದ್ಧಿಗಾಗಿ ಉತ್ತರಾಖಂಡ್ ಸರ್ಕಾರಕ್ಕೆ ಐಟಿಬಿಪಿ ಭೂಮಿ ವರ್ಗಾವಣೆಗೆ ಸಚಿವ ಸಂಪುಟ ಅನುಮೋದನೆ

Posted On: 12 MAY 2021 8:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮಸ್ಸೂರಿಯಲ್ಲಿರುವ ಇಂಡೋ ಟಿಬೇಟಿಯನ್ ಗಡಿ ಪೊಲೀಸ್ (ಐಟಿಬಿಪಿ)ಗೆ ಸೇರಿದ 1500 ಚದರ ಮೀಟರ್ ಭೂಮಿಯನ್ನು ಉತ್ತರಾಖಂಡ್ ಸರ್ಕಾರಕ್ಕೆ ತನ್ನ ಮೂಲಸೌಕರ್ಯ ಯೋಜನೆಗೆ ಅಂದರೆ ಡೆಹ್ರಾಡೂನ್ ಮತ್ತು ಮಸ್ಸೂರಿ ನಡುವೆ ವೈಮಾನಿಕ ಪ್ರಯಾಣಿಕರ ರೋಪ್ ವೇ ವ್ಯವಸ್ಥೆಅಭಿವೃದ್ಧಿಗಾಗಿ ವರ್ಗಾವಣೆ ಮಾಡಲು ಅನುಮೋದನೆ ನೀಡಿದೆ

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ  ಡೆಹ್ರಾಡೂನ್ ಪುರ್ಕುಲ್ ಗಾಂವ್ (ಲೋಯರ್ ಟರ್ಮಿನಲ್ ಸ್ಟೇಷನ್ ) ಮತ್ತು ಮಸ್ಸೂರಿಯ ಲೈಬ್ರರಿ (ಅಪ್ಪರ್ ಟರ್ಮಿನಲ್ ಸ್ಟೇಷನ್ ) ನಡುವೆ 5580 ಮೀಟರ್ ಉದ್ದದ ಉದ್ದೇಶಿತ ರೋಪ್ ವೇ ಮೋನೋ ಕೇಬಲ್ ರೋಪ್ ವೇ ಆಗಿದ್ದು, ಅದನ್ನು ಅಂದಾಜು ವೆಚ್ಚ 285 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿದೆ, ಇದು ಪ್ರತಿ ಗಂಟೆಗೆ ಪ್ರತಿದಿಕ್ಕಿನಿಂದ 1 ಸಾವಿರ ಜನರನ್ನು ಹೊತ್ತೊಯ್ಯಲಿದೆ. ಇದರಿಂದಾಗಿ ಡೆಹ್ರಾಡೂನ್ ಮತ್ತು ಮಸ್ಸೂರಿ ನಡುವೆ ರಸ್ತೆ ಮೇಲಿನ ವಾಹನ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸಲಿದೆ

ಅಲ್ಲದೆ, ಯೋಜನೆಯಿಂದ 350 ಮಂದಿಗೆ ಪ್ರತ್ಯಕ್ಷ ಉದ್ಯೋಗ ಮತ್ತು 1500ಕ್ಕೂ ಅಧಿಕ ಮಂದಿಗೆ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಯೋಜನೆ ಪೂರ್ಣಗೊಂಡ ನಂತರ, ರೋಪ್ ವೇ ಪ್ರವಾಸಿಗರಿಗೆ ಭಾರಿ ಆಕರ್ಷಣೆಯಾಗುವುದರ ಜೊತೆಗೆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರಕಲಿದೆ ಮತ್ತು ಪ್ರವಾಸೋದ್ಯಮ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

***



(Release ID: 1718111) Visitor Counter : 198