ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯಿಂದ ಆಕ್ಷಿಜನ್ ಎಕ್ಸ್ ಪ್ರೆಸ್ ಸೇವೆ ಪಡೆದ 9 ನೇ ರಾಜ್ಯವಾಗಿ ಉತ್ತರಾಖಂಡ
ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ತೆಲಂಗಾಣ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ 5735 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ
ವಿವಿಧ ರಾಜ್ಯಗಳಿಗೆ 375 ಟ್ಯಾಂಕರ್ ಗೂ ಹೆಚ್ಚು ಲೋಡ್ ಆಮ್ಲಜನಕ ವಿತರಣೆ
90 ಕ್ಕೂ ಹೆಚ್ಚು ಆಕ್ಸಿಜನ್ ಎಕ್ಸ್ ಪ್ರೆಸ್ ಯಾನ ಪೂರ್ಣ
120 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ಇಂದು ರಾತ್ರಿ ಉತ್ತರಾಖಂಡಕ್ಕೆ
50 ಮೆಟ್ಟಿಕ್ ಟನ್ ಗೂ ಹೆಚ್ಚು ಆಮ್ಲಜನಕ ಹೊತ್ತ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ಇಂದು ಪುಣೆಗೆ
120 ಮೆಟ್ರಿಕ್ ಟನ್ ಆಮ್ಲಜನಕ ಸ್ವೀಕರಿಸಿದ ಬೆಂಗಳೂರು
ಈವರೆಗೆ ಮಹಾರಾಷ್ಟ್ರಕ್ಕೆ 293 ಮೆಟ್ರಿಕ್, ಉತ್ತರ ಪ್ರದೇಶಕ್ಕೆ ಸುಮಾರು 1630 ಮೆಟ್ರಿಕ್ ಟನ್, ಹರ್ಯಾಣಕ್ಕೆ 812 ಮೆಟ್ರಿಕ್ ಟನ್, ತೆಲಂಗಾಣಕ್ಕೆ 123 ಮೆಟ್ರಿಕ್ ಟನ್, ರಾಜಸ್ಥಾನಕ್ಕೆ 40 ಮೆಟ್ರಿಕ್ ಟನ್, ಕರ್ನಾಟಕಕ್ಕೆ 120 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ
Posted On:
11 MAY 2021 5:17PM by PIB Bengaluru
ಎಲ್ಲಾ ಅಡೆತಡೆಗಳನ್ನು ದಾಟಿ ಹೊಸ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವ ಭಾರತೀಯ ರೈಲ್ವೆ ದೇಶದ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ ಪೂರೈಸುವ ತನ್ನ ಯಾನವನ್ನು ಮುಂದುವರೆಸಿದೆ. ಈವರೆಗೆ ಭಾರತೀಯ ರೈಲ್ವೆ ಹಲವಾರು ರಾಜ್ಯಗಳಿಗೆ 375 ಕ್ಕೂ ಹೆಚ್ಚು ಟ್ಯಾಂಕರ್ ಗಳ ಮೂಲಕ ಸುಮಾರು 5735 ಮೆಟ್ರಿಕ್ ಟನ್ ಎಲ್.ಎಂ.ಒ ಪೂರೈಸಿದೆ.
ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ ನಿನ್ನೆ ದೇಶದ ವಿವಿಧ ಭಾಗಗಳಿಗೆ 755 ಮೆಟ್ರಿಕ್ ಟನ್ ಎಲ್.ಎಂ.ಒ ವಿತರಿಸಲಾಗಿದೆ. ಈವರೆಗೆ 90 ಕ್ಕೂ ಹೆಚ್ಚು ಆಕ್ಸಿಜನ್ ಎಕ್ಸ್ ಪ್ರೆಸ್ ತನ್ನ ಯಾನವನ್ನು ಪೂರ್ಣಗೊಳಿಸಿದೆ. ಬೇಡಿಕೆ ಸಲ್ಲಿಸುವ ರಾಜ್ಯಗಳಿಗೆ ಭಾರತೀಯ ರೈಲ್ವೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಎಲ್.ಎಂ.ಓ ವಿತರಿಸುತ್ತಿದೆ.
ಈವರೆಗೆ ಮಹಾರಾಷ್ಟ್ರಕ್ಕೆ 293 ಮೆಟ್ರಿಕ್, ಉತ್ತರ ಪ್ರದೇಶಕ್ಕೆ ಸುಮಾರು 1630 ಮೆಟ್ರಿಕ್ ಟನ್, ಮಧ್ಯಪ್ರದೇಶಕ್ಕೆ 340 ಮೆಟ್ರಿಕ್ ಟನ್, ಹರ್ಯಾಣಕ್ಕೆ 812 ಮೆಟ್ರಿಕ್ ಟನ್, ತೆಲಂಗಾಣಕ್ಕೆ 123 ಮೆಟ್ರಿಕ್ ಟನ್, ರಾಜಸ್ಥಾನಕ್ಕೆ 40 ಮೆಟ್ರಿಕ್ ಟನ್, ಕರ್ನಾಟಕಕ್ಕೆ 120 ಮೆಟ್ರಿಕ್ ಟನ್ ಮತ್ತು ದೆಹಲಿಗೆ 2383 ಮೆಟ್ರಿಕ್ ಟನ್ ಗೂ ಹೆಚ್ಚು ಆಮ್ಲಜನಕ ಪೂರೈಕೆ ಮಾಡಲಾಗಿದೆ.
ಡೆಹರಾಡೂನ್ [ಉತ್ತರಾಖಂಡ್] ಮತ್ತು ಪುಣೆ [ಮಹಾರಾಷ್ಟ್ರ] ತನ್ನ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ಸೇವೆ ಸ್ವೀಕರಿಸಲಿದೆ. ಜಾರ್ಖಂಡ್ ನ ಟಾಟಾ ನಗರದಿಂದ ಹೊರಟ 120 ಮೆಟ್ರಿಕ್ ಟನ್ ಹೊತ್ತ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ಇಂದು ರಾತ್ರಿ ಉತ್ತರಾಖಂಡ್ ತಲುಪುವ ನಿರೀಕ್ಷೆಯಿದೆ.
ಅಂಗುಲ್ [ಒಡಿಶಾ] ನಿಂದ 50 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತು ಹೊರಟಿರುವ ಆಕ್ಸಿಜನ್ ಎಕ್ಸ್ ಪ್ರೆಸ್ ಇಂದು ಪುಣೆ ತಲುಪಲಿದೆ.
ಆಮ್ಲಜಕ ಪೂರೈಕೆ ಅತ್ಯಂತ ಕ್ರಿಯಾತ್ಮಕ ಕಸರತ್ತು ಆಗಿದ್ದು, ಅಂಕಿ ಅಂಶಗಳು ಎಲ್ಲಾ ಕಾಲದಲ್ಲೂ ನವೀಕರಿಸಲ್ಪಡುತ್ತವೆ. ಇನ್ನೂ ಹೆಚ್ಚು ಆಮ್ಲಜನಕ ತುಂಬಿರುವ ಎಕ್ಸ್ ಪ್ರೆಸ್ ರೈಲುಗಳು ಇಂದು ರಾತ್ರಿ ತನ್ನ ಯಾನ ಆರಂಭಿಸಲಿವೆ.
***
(Release ID: 1718043)
Visitor Counter : 237