ಸಂಪುಟ
ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ “ಮುಂದುವರಿದ ಕೆಮಿಸ್ಟ್ರಿ ಕೋಶ ಬ್ಯಾಟರಿ ಸ್ಟೋರೇಜ್ ಕುರಿತ ರಾಷ್ಟ್ರೀಯ ಕಾರ್ಯಕ್ರಮ’ಕ್ಕೆ ಸಂಪುಟದ ಅನುಮೋದನೆ
Posted On:
12 MAY 2021 3:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಐವತ್ತು (50) ಗಿಗಾ ವ್ಯಾಟ್ ಗಂಟೆಗಳ (ಡಿಡಬ್ಲ್ಯುಎಚ್) ಎ.ಸಿಸಿ ಮತ್ತು 4 ಜಿಡ್ಬ್ಲುಎಚ್ “ನಿಚ್’ ಎಸಿಸಿಯ 18,100 ಕೋಟಿ ರೂ. ಮೌಲ್ಯದ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪಿ.ಎಲ್.ಐ.) ಯೋಜನೆಯ “ಮುಂದುವರಿದ ಕೆಮಿಸ್ಟ್ರೀ ಕೋಶ (ಎ.ಸಿ.ಸಿ.) ಬ್ಯಾಟರಿ ಸ್ಟೋರೇಜ್ ರಾಷ್ಟ್ರೀಯ ಕಾರ್ಯಕ್ರಮ’ ಅನುಷ್ಠಾನಗೊಳಿಸುವ ಬೃಹತ್ ಕೈಗಾರಿಕೆ ಇಲಾಖೆಯ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ.
ಎಸಿಸಿ ಹೊಸ ಪೀಳಿಗೆಯ ಮುಂದುವರಿದ ಸ್ಟೋರೇಜ್ ತಂತ್ರಜ್ಞಾನವಾಗಿದ್ದು, ಅದು ಎಲೆಕ್ಟ್ರೋಕೆಮಿಕಲ್ ಅಥವಾ ರಾಸಾಯನಿಕ ಇಂಧನವಾಗಿ ವಿದ್ಯುಚ್ಛಕ್ತಿಯನ್ನು ಸಂಗ್ರಹಿಸಿ, ಯಾವಾಗ ಅಗತ್ಯವೋ ಆಗ ಅದನ್ನು ಮತ್ತೆ ವಿದ್ಯುತ್ ಇಂಧನವಾಗಿ ಪರಿವರ್ತಿಸುತ್ತದೆ. ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಾಹನಗಳು, ಮುಂದುವರಿದ ವಿದ್ಯುತ್ ಗ್ರಿಡ್ ಗಳು, ಛಾವಣಿಯ ಸೌರ ವಿದ್ಯುತ್ ಇತ್ಯಾದಿ. ಬ್ಯಾಟರಿ ಬಳಕೆ ವಲಯದ ಪ್ರಮುಖ ಬಳಕೆದಾರರಾಗಿದ್ದು, ಮುಂಬರುವ ವರ್ಷಗಳಲ್ಲಿ ಸದೃಢ ವೃದ್ಧಿ ಸಾಧಿಸಲಿದ್ದಾರೆ. ಪ್ರಬಲ ಬ್ಯಾಟರಿ ತಂತ್ರಜ್ಞಾನಗಳು ವಿಶ್ವದ ಕೆಲವು ಬೃಹತ್ ಬೆಳವಣಿಗೆಯ ಕ್ಷೇತ್ರಗಳನ್ನು ನಿಯಂತ್ರಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
ಈ ಮಧ್ಯೆ ಹಲವು ಕಂಪನಿಗಳು ಈಗಾಗಲೇ ಬ್ಯಾಟರಿ ಪ್ಯಾಕ್ ಗಳಲ್ಲಿ ಹೂಡಿಕೆ ಆರಂಭಿಸಿವೆ, ಆದರೆ ಜಾಗತಿಕ ಸರಾಸರಿಗಳಿಗೆ ಹೋಲಿಸಿದರೆ ಈ ಸೌಲಭ್ಯಗಳ ಸಾಮರ್ಥ್ಯ ತುಂಬಾ ಚಿಕ್ಕದಾಗಿದ್ದರೂ, ಭಾರತದಲ್ಲಿ ಎಸಿಸಿಗಳ ಮೌಲ್ಯವರ್ಧನೆಯೊಂದಿಗೆ ಉತ್ಪಾದನೆಯಲ್ಲಿ ಇನ್ನೂ ಕಡಿಮೆ ಹೂಡಿಕೆ ಇದೆ. ಪ್ರಸ್ತುತ ಭಾರತದಲ್ಲಿನ ಎಲ್ಲ ಎಸಿಸಿ ಬೇಡಿಕೆಯನ್ನು ಆಮದು ಮೂಲಕವೇ ಪೂರೈಸಲಾಗುತ್ತಿದೆ. ಮುಂದುವರಿದ ಕೆಮಿಸ್ಟ್ರೀ ಕೋಶ (ಎಸಿಸಿ) ಬ್ಯಾಟರಿ ಸ್ಟೋರೇಜ್ ನ ರಾಷ್ಟ್ರೀಯ ಕಾರ್ಯಕ್ರಮವು ಆಮದು ಅವಲಂಬನೆಯನ್ನು ತಗ್ಗಿಸುತ್ತದೆ. ಇದು ಆತ್ಮನಿರ್ಭರ ಭಾರತ ಉಪಕ್ರಮಕ್ಕೂ ಬೆಂಬಲ ನೀಡಲಿದೆ. ಎ.ಸಿ.ಸಿ. ಬ್ಯಾಟರಿ ಸ್ಟೋರೇಜ್ ಉತ್ಪಾದಕರನ್ನು ಪಾರದರ್ಶಕ ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಉತ್ಪಾದನಾ ಸೌಲಭ್ಯವು ಎರಡು ವರ್ಷಗಳ ಒಳಗಾಗಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಈ ಉಪಕ್ರಮದಲ್ಲಿ ಆ ನಂತರ ಮುಂದಿನ ಐದು ವರ್ಷಗಳವರೆಗೆ ಪ್ರೋತ್ಸಾಹಕವನ್ನು ವಿತರಿಸಲಾಗುತ್ತದೆ.
ವರ್ಧಿತ ನಿರ್ದಿಷ್ಟ ಶಕ್ತಿಯ ಸಾಂದ್ರತೆ ಮತ್ತು ಆವರ್ತನಗಳು ಮತ್ತು ಸ್ಥಳೀಯ ಮೌಲ್ಯವರ್ಧನೆಯೊಂದಿಗೆ ಪ್ರೋತ್ಸಾಹಕ ಮೊತ್ತವು ಹೆಚ್ಚಳವಾಗುತ್ತದೆ. ಪ್ರತಿ ಆಯ್ದ ಎಸಿಸಿ ಬ್ಯಾಟರಿ ಸ್ಟೋರೇಜ್ ತಯಾರಕರು ಕನಿಷ್ಠ ಐದು (5) ಜಿಡಬ್ಲ್ಯೂಹೆಚ್ ಸಾಮರ್ಥ್ಯದ ಎಸಿಸಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಬದ್ಧರಾಗಿರಬೇಕು ಮತ್ತು ಐದು ವರ್ಷಗಳಲ್ಲಿ ಯೋಜನಾ ಮಟ್ಟದಲ್ಲಿ ಕನಿಷ್ಠ ಶೇ.60 ದೇಶೀಯ ಮೌಲ್ಯವರ್ಧನೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಮಿಗಿಲಾಗಿ, ಫಲಾನುಭವಿ ಸಂಸ್ಥೆ ಕನಿಷ್ಠ ಶೇ.25ರಷ್ಟು ದೇಶೀಯ ಮೌಲ್ಯ ಸೇರ್ಪಡೆ ಸಾಧಿಸಬೇಕು ಮತ್ತು ಎರಡು ವರ್ಷಗಳ ಒಳಗಾಗಿ (ಮೂಲ ಘಟಕದ ಮಟ್ಟದಲ್ಲಿ) ಕಡ್ಡಾಯವಾಗಿರುವ 225 ಕೋಟಿ ರೂ/ಜಿ.ಡಬ್ಲ್ಯುಎಚ್ ಹೂಡಿಕೆ ಮಾಡಬೇಕು ಮತ್ತು ಅದನ್ನು ಮೂಲ ಘಟಕದಲ್ಲಿ, ಸಮಗ್ರ ಘಟಕದ ಪ್ರಕರಣದಲ್ಲಿ ಅಥವಾ ಯೋಜನಾ ಮಟ್ಟದಲ್ಲಿ, ಹಬ್ ಮತ್ತು ಸ್ಪೋಕ್ ವಿನ್ಯಾಸದ ಪ್ರಕರಣದಲ್ಲಿ 5 ವರ್ಷಗಳ ಒಳಗಾಗಿ ಶೇ.60ರಷ್ಟು ದೇಶೀಯ ಮೌಲ್ಯ ಸೇರ್ಪಡೆ ಹೆಚ್ಚಿಸಬೇಕು.
ಈ ಯೋಜನೆಯ ನಿರೀಕ್ಷಿತ ಫಲಶ್ರುತಿ/ಪ್ರಯೋಜನಗಳು ಈ ಕೆಳಕಂಡಂತಿವೆ:
- ಕಾರ್ಯಕ್ರಮದಡಿಯಲ್ಲಿ ಭಾರತದಲ್ಲಿ ಒಟ್ಟು 50 ಜಿಡಬ್ಲ್ಯುಎಚ್ ಎಸಿಸಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು.
- ಎಸಿಸಿ ಬ್ಯಾಟರಿ ಸ್ಟೋರೇಜ್ ಉತ್ಪಾದನಾ ಯೋಜನೆಗಳಲ್ಲಿ ಸುಮಾರು 45,000 ಕೋಟಿ ರೂ. ನೇರ ಹೂಡಿಕೆ.
- ಭಾರತದಲ್ಲಿ ಬ್ಯಾಟರಿ ಸ್ಟೋರೇಜ್ ಗೆ ಬೇಡಿಕೆ ಸೃಷ್ಟಿಸಲು ಅನುಕೂಲ.
- ಮೇಕ್ ಇನ್ ಇಂಡಿಯಾವನ್ನು ಸುಗಮಗೊಳಿಸಿ: ದೇಶೀಯ ಮೌಲ್ಯ-ಸೇರ್ಪಡೆಗೆ ಹೆಚ್ಚಿನ ಒತ್ತು ಮತ್ತು ಅದರಿಂದ ಆಮದು ಅವಲಂಬನೆ ತಗ್ಗಿಸುವುದು.
- ಈ ಕಾರ್ಯಕ್ರಮದ ಅಡಿಯಲ್ಲಿ ಎಸಿಸಿಗಳು ಉತ್ಪಾದನೆ ಮತ್ತು ಇ.ವಿ.ಗಳ ಅಳವಡಿಕೆ ಹೆಚ್ಚಾಗುವ ನಿರೀಕ್ಷೆಯಿದ್ದು, ಈ ಕಾರ್ಯಕ್ರಮದ ಅವಧಿಯಲ್ಲಿ ಇವಿ ಅಳವಡಿಕೆಯಿಂದ ತೈಲ ಆಮದು ವೆಚ್ಚದ ಕಡಿತದ ಕಾರಣ ಭಾರತಕ್ಕೆ ರೂ.2,00,000 ಕೋಟಿಯಿಂದ 2,50,000 ಕೋಟಿ ರೂ. ನಿವ್ವಳ ಉಳಿತಾಯ ಆಗಲಿದೆ.
- ಎಸಿಸಿಗಳ ಉತ್ಪಾದನೆಯು ಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸುವಲ್ಲಿ ಸಾಬೀತಾಗಿರುವ ಇವಿಗಳಿಗೆ ಬೇಡಿಕೆಯನ್ನು ಹೆಚ್ಚಿಸಲಿದೆ, ಭಾರತವು ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಕಾರ್ಯಸೂಚಿಯನ್ನು ಅನುಸರಿಸುತ್ತಿರುವಾಗ, ಹವಾಮಾನ ಬದಲಾವಣೆಯನ್ನು ಎದುರಿಸಲು ಭಾರತದ ಬದ್ಧತೆಗೆ ಅನುಗುಣವಾಗಿ ಭಾರತದ ಹಸಿರು ಮನೆ ಅನಿಲ (ಜಿ,ಎಚ್.ಜಿ) ಹೊರಸೂಸುವಿಕೆಯನ್ನು ತಗ್ಗಿಸಲು ಎಸಿಸಿ ಕಾರ್ಯಕ್ರಮವು ಪ್ರಮುಖ ಕೊಡುಗೆ ನೀಡಲಿದೆ.
- ಇದು 20,000 ಕೋಟಿ ರೂಪಾಯಿ ವಾರ್ಷಿಕ ಆಮದಿಗೆ ಪರ್ಯಾಯವಾಗಲಿದೆ.
- ಎಸಿಸಿಯಲ್ಲಿ ಉನ್ನತ ನಿರ್ದಿಷ್ಠ ಇಂಧನ ಸಾಂಧ್ರತೆ ಮತ್ತು ಆವರ್ತನದ ಸಾಧನೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
- ಹೊಸ ಮತ್ತು ನಿಚ್ ಕೋಶ ತಂತ್ರಜ್ಞಾನವನ್ನು ಉತ್ತೇಜಿಸಲಿದೆ.
***
(Release ID: 1718028)
Visitor Counter : 324
Read this release in:
Punjabi
,
Bengali
,
Assamese
,
Malayalam
,
English
,
Urdu
,
Marathi
,
Hindi
,
Manipuri
,
Gujarati
,
Odia
,
Tamil
,
Telugu