ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

49,965 ಕೋಟಿ ರೂ.ಗಳನ್ನು ನೇರವಾಗಿ (ಡಿಬಿಟಿ) ಭಾರತದಾದ್ಯಂತದ ರೈತರ ಖಾತೆಗೆ ವರ್ಗಾಯಿಸಲಾಗಿದೆ


ಏಪ್ರಿಲ್, 2020 ರಿಂದ ಏಪ್ರಿಲ್ 2021ರ ಕೋವಿಡ್ -19 ಅವಧಿಯಲ್ಲಿ ಒಎನ್ಒಆರ್ಸಿ (ಒನ್ ನೇಷನ್ ಒನ್ ರೇಷನ್ ಕಾರ್ಡ್ – ಒಂದು ದೇಶ ಒಂದು ಪಡಿತರ) ಅಡಿಯಲ್ಲಿ 18.3 ಕೋಟಿ ಪೋರ್ಟಬಿಲಿಟಿ (ವರ್ಗಾಯಿಸಬಹುದಾದ) ವಹಿವಾಟುಗಳು  ಒಂದು ಕಡೆಯಿಂದ ಬೇರೆಡೆಗೆ ಹೋಗಿ ದುಡಿಯುವ ಮತ್ತು ವಲಸಿಗರಲ್ಲಿ ಹೆಚ್ಚಿನ ಬಳಕೆಯನ್ನು ತೋರಿಸುತ್ತವೆ

34 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಿಎಂಜಿಕೆಎವೈ-3 ರ ಅಡಿಯಲ್ಲಿ ಮೇ 2021 ರ ತಿಂಗಳಿಗೆ ಎಫ್ ಸಿಐ ಡಿಪೋಗಳಿಂದ 15 ಲಕ್ಷ ಮೆಟ್ರಿಕ್ ಟನ್ನಿಗಿಂತ ಹೆಚ್ಚಿನ ಆಹಾರ ಧಾನ್ಯಗಳನ್ನು ಪಡೆದಿವೆ.

ಪಿಎಂಜಿಕೆಎವೈ-3 ಅಡಿಯಲ್ಲಿ ಇದುವರೆಗೆ 12 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ 1 ಲಕ್ಷ ಮೆ.ಟನ್ ಆಹಾರ ಧಾನ್ಯಗಳನ್ನು 2 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ.

ಒಎನ್ಒಆರ್ ಸಿ ಯೋಜನೆಯ ಆರಂಭದಿಂದಲೂ ಒಟ್ಟು 26.3 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗಿದೆ

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸುಧಾಂಶು ಪಾಂಡೆಯವರು  ಪಿಎಂಜಿಕೆಎವೈ-3 ಮತ್ತು ಒಎನ್ಒಆರ್ಸಿ ಯೋಜನೆಗಳ ಬಗ್ಗೆ ಮಾಧ್ಯಮದವರಿಗೆ ವಿವರಿಸಿದರು

Posted On: 10 MAY 2021 5:28PM by PIB Bengaluru

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸುಧಾಂಶು ಪಾಂಡೆಯವರು  ಇಂದು ಪಿಎಂಜಿಕೆಎವೈ-3 ಮತ್ತು ಒಎನ್ಒಆರ್ ಸಿ (ಒನ್ ನೇಷನ್ ಒನ್ ರೇಷನ್ ಕಾರ್ಡ್ ಒಂದು ದೇಶ ಒಂದು ಪಡಿತರಯೋಜನೆಯ ಬಗ್ಗೆ ವಿಡಿಯೋ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನಯೋಜನೆ” (ಪಿಎಂ-ಜಿಕೆಎವೈ III) ಕುರಿತು ಮಾತನಾಡಿದ ಕಾರ್ಯದರ್ಶಿಯವರು, ಇಲಾಖೆ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ” (ಪಿಎಂ-ಜಿಕೆಎವೈ III) ಅನ್ನು ಎರಡು ತಿಂಗಳ ಅವಧಿಗೆ ಅಂದರೆ ಮೇ ಮತ್ತು ಜೂನ್ 2021 ಅನುಷ್ಠಾನಕ್ಕಾಗಿ ಪ್ರಾರಂಭಿಸಿದೆ ಎಂದು ಹೇಳಿದರು. ಮೊದಲಿನ ಮಾದರಿಯಲ್ಲಿಯೇ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕಿ.ಗ್ರಾಂ ಪ್ರಮಾಣದಲ್ಲಿ ಉಚಿತ  ಆಹಾರ ಧಾನ್ಯಗಳ (ಅಕ್ಕಿ / ಗೋಧಿ) ಹೆಚ್ಚುವರಿ ಕೋಟಾವನ್ನು ಒದಗಿಸುವ ಮೂಲಕ, ಎರಡೂ ವಿಭಾಗಗಳ ಅಡಿಯಲ್ಲಿ ಅವುಗಳೆಂದರೆ ಆಂತ್ಯೋದಯ ಅನ್ನ ಯೋಜನೆ (ಎಎವೈ)ಯವರು ಮತ್ತು ಆದ್ಯತೆಯ ಮನೆಯವರು (ಪಿಎಚ್ಹೆಚ್). ಇವುಗಳ ಸುಮಾರು 80 ಕೋಟಿ ಫಲಾನುಭವಿಗಳಿಗೆ ತಮ್ಮ ನಿಯಮಿತ ಮಾಸಿಕ ಎನ್ಎಫ್ಎಸ್ಎ ಅರ್ಹತೆಗಿಂತ ಹೆಚ್ಚಿನದಾಗಿ ವಿತರಿಸಲಾಗುವುದು.   ಆಹಾರ ಸಬ್ಸಿಡಿ ಮತ್ತು ಅಂತರರಾಜ್ಯ ಸಾರಿಗೆ ಇತ್ಯಾದಿಗಳ ಕಾರಣದಿಂದಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ನೆರವು ನೀಡುವ 26,000 ಕೋಟಿ ರೂಪಾಯಿಗಳ ಎಲ್ಲಾ ಖರ್ಚುಗಳನ್ನು ಭಾರತ ಸರ್ಕಾರ ಭರಿಸಲಿದೆ

ಮಾಧ್ಯಮಗಳಿಗೆ ಮಾಹಿತಿ ನೀಡುವಾಗ, ಶ್ರೀ ಪಾಂಡೆ ಅವರು 2021 ಮೇ ತಿಂಗಳ ವೇಳಾಪಟ್ಟಿಯ ಪ್ರಕಾರ ಆಹಾರ ಧಾನ್ಯಗಳ ವಿತರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.  2021 ಮೇ  10 ವೇಳೆಗೆ, 15.55 ಎಲ್ಎಂಟಿ ಆಹಾರ ಧಾನ್ಯಗಳನ್ನು ಎಫ್ ಸಿಐ ಡಿಪೋಗಳಿಂದ 34 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಡೆದಿವೆ ಮತ್ತು 1 ಲಕ್ಷ ಎಂ.ಟಿ.ಗಿಂತಲೂ ಹೆಚ್ಚಾಗಿ  12 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ  2 ಕೋಟಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಿಎಂಜಿಕೆಎವೈ- III ಆಹಾರ ಧಾನ್ಯಗಳ ವಿತರಣೆಯನ್ನು ಮೇ ಮತ್ತು ಜೂನ್ 2021 ಜೂನ್ 2021 ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಕ್ರಿಯಾ ಯೋಜನೆಯನ್ನು ಸೂಚಿಸಿವೆ ಎಂದು ಅವರು ಹೇಳಿದರು.

ಕೋವಿಡ್ -19 ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸಲಹೆಗಳ ಪ್ರಕಾರ. ಎಲ್ಲಾ ಸುರಕ್ಷತಾ ಶಿಷ್ಟಾಚಾರಗಳನ್ನು   ಅನುಸರಿಸಿದ ನಂತರ ಇಲಾಖೆಯು ಯೋಜನೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ ಮತ್ತು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವ್ಯಾಪಕ ಪ್ರಚಾರವನ್ನು ನೀಡಲು ಮತ್ತು ಇಪಿಒಎಸ್ ಸಾಧನಗಳ ಮೂಲಕ ಪಾರದರ್ಶಕ ರೀತಿಯಲ್ಲಿ ಪಿಎಂಜಿಕೆಎವೈ- III ಆಹಾರ ಧಾನ್ಯಗಳನ್ನು ಸಕಾಲಿಕವಾಗಿ ವಿತರಿಸುವುದನ್ನು ಖಚಿತಪಡಿಸುತ್ತಿದೆ ಎಂದು ಅವರು ಹೇಳಿದರು., 2021 ಏಪ್ರಿಲ್ 26 ರಂದು ಆಹಾರ ಕಾರ್ಯದರ್ಶಿಗಳು / ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳೊಂದಿಗೆ ಕಾರ್ಯದರ್ಶಿ (ಡಿ ಎಫ್ ಪಿಡಿ)ಯವರಿಂದ ಮತ್ತು ಆಹಾರ ಧಾನ್ಯಗಳ ವಿತರಣೆಯ ಪ್ರಗತಿಯನ್ನು ಕಾರ್ಯತಂತ್ರಗೊಳಿಸಲು ಮತ್ತು ಪರಿಶೀಲಿಸಲು 2021 ಮೇ 5 ರಂದು ಜಂಟಿ ಕಾರ್ಯದರ್ಶಿ (ಬಿಪಿ, ಪಿಡಿ) ಅವರಿಂದ.ವಿಡಿಯೋ ಮುಖಾಂತರ ಸಭೆಗಳನ್ನು ನಡೆಸಲಾಯಿತು

 

'ಒನ್ ನೇಷನ್ ಒನ್ ರೇಷನ್ ಕಾರ್ಡ್' (ಒಎನ್ಒಆರ್ಸಿ) ಮಹತ್ವವನ್ನು ಒತ್ತಿಹೇಳುತ್ತಾ, ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ, ಇದು ರಾಷ್ಟ್ರೀಯ ಆಹಾರಭದ್ರತಾ ಕಾಯ್ದೆ, 2013 (ಎನ್ಎಫ್ಎಸ್ಎ) ಅಡಿಯಲ್ಲಿ. ರಾಷ್ಟ್ರವ್ಯಾಪಿ ಪಡಿತರ ಚೀಟಿಗಳನ್ನು ಉಪಯೋಗಿಸುವುದನ್ನು ಪರಿಚಯಿಸಲು ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ ಮತ್ತು ಪ್ರಯತ್ನವಾಗಿದೆ ಎಂದು ಹೇಳಿದರು. ಎಲ್ಲಾ ವಲಸೆ ಫಲಾನುಭವಿಗಳಿಗೆ ತಮ್ಮ ಎನ್ಎಫ್ಎಸ್ಎ ಆಹಾರ ಧಾನ್ಯಗಳು / ಪ್ರಯೋಜನಗಳನ್ನು ದೇಶದಲ್ಲಿ ಎಲ್ಲಿಯಾದರೂ ಪಡೆಯಲು  ಅನುಕೂಲ ಮಾಡಿಕೊಡುವ ಗುರಿ ಇದು ಹೊಂದಿದೆ. ಪ್ರಸ್ತುತ, ವ್ಯವಸ್ಥೆಯನ್ನು 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಲಭವಾಗಿ  ಸಕ್ರಿಯಗೊಳಿಸಲಾಗಿದೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸುಮಾರು 69 ಕೋಟಿ ಫಲಾನುಭವಿಗಳನ್ನು (86% ಎನ್ಎಫ್ಎಸ್ಎ ಜನಸಂಖ್ಯೆ) ಒಳಗೊಂಡಿವೆ.

ಒಎನ್ಒಆರ್ ಸಿಯನ್ನು ಈಗ 32 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಶ್ರೀ ಪಾಂಡೆ ಹೇಳಿದರು. ಒಎನ್ಒಆರ್ ಸಿ ಅಡಿಯಲ್ಲಿ ಮಾಸಿಕ ಸರಾಸರಿ 1.5 ರಿಂದ 1.6 ಕೋಟಿ ಸಾಮರ್ಥ್ಯದ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದರು. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಾದ್ಯಂತ 26.3 ಕೋಟಿಗೂ ಹೆಚ್ಚು ಪೋರ್ಟಬಿಲಿಟಿ ವಹಿವಾಟುಗಳು (ಅಂತರ್-ರಾಜ್ಯ ವಹಿವಾಟುಗಳು ಸೇರಿದಂತೆ) ನಡೆದಿವೆ ಎಂದು ಶ್ರೀ ಪಾಂಡೆ ಮಾಹಿತಿ ನೀಡಿದರು ಯೋಜನೆ 2019 ಆಗಸ್ಟ್ ನಲ್ಲಿ ಪ್ರಾರಂಭವಾದಾಗಿನಿಂದ, ಏಪ್ರಿಲ್, 2020 ರಿಂದ ಏಪ್ರಿಲ್ 2021 ರವರೆಗಿನ ಕೋವಿಡ್ -19  ಅವಧಿಯಲ್ಲಿ ಸುಮಾರು 18.3 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗಿದೆಕೋವಿಡ್ -19    ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಬಂದ ಎನ್ಎಫ್ಎಸ್ಎ ಫಲಾನುಭವಿಗಳಿಗೆ ಎನ್ಎಫ್ಎಸ್ಎ ಆಹಾರ ಧಾನ್ಯಗಳ ಸಿಗುವಿಕೆಯನ್ನು ಖಚಿತಪಡಿಸಿಕೊಳ್ಳಲು ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಇಲಾಖೆಯು ವಿಡಿಯೋ ಸಭೆಗಳು / ಸಲಹೆಗಳ ಮೂಲಕ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರವಾಗಿ ಅನುಸರಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.   

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಒಎನ್ಒಆರ್ ಸಿ ಯೋಜನೆ, 14445 ಟೋಲ್ ಫ್ರೀ ಸಂಖ್ಯೆ ಮತ್ತು ಮೇರಾ ರೇಷನ್ಮೊಬೈಲ್ ಅಪ್ಲಿಕೇಶನ್ನ ಬಗ್ಗೆ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಮೂಡಿಸಲು ಕೋರಲಾಗಿದೆ. ಎನ್ಎಫ್ಎಸ್ಎ ಫಲಾನುಭವಿಗಳ, ನಿರ್ದಿಷ್ಟವಾಗಿ ವಲಸೆ ಬಂದ ಎನ್ಎಫ್ಎಸ್ಎ ಫಲಾನುಭವಿಗಳ ಅನುಕೂಲಕ್ಕಾಗಿ ಇಲಾಖೆಯು ಇತ್ತೀಚೆಗೆ ಎನ್ಐಸಿ ಸಹಯೋಗದೊಂದಿಗೆ ಇದನ್ನು ಒಂಬತ್ತು ವಿವಿಧ ಭಾಷೆಗಳಲ್ಲಿ ಅಭಿವೃದ್ಧಿಪಡಿಸಿದೆ, ಅವುಗಳಾವುವೆಂದರೆ ಇಂಗ್ಲಿಷ್, ಹಿಂದಿ, ಒರಿಯಾ, ಪಂಜಾಬಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಗುಜರಾತಿಮೇರಾ ರೇಷನ್ ಅಪ್ಲಿಕೇಶನ್-ನಲ್ಲಿ ಹೆಚ್ಚಿನ ಪ್ರಾದೇಶಿಕ ಭಾಷೆಗಳನ್ನು ಸೇರಿಸಲು ಪ್ರಯತ್ನಗಳು ನಡೆಯುತ್ತಿವೆ.

2021-22 ರಬಿಯ ವ್ಯಾಪಾರ ಋತುವಿನಲ್ಲಿ ಖರೀದಿ ಸುಗಮವಾಗಿ ನಡೆಯುತ್ತಿರುವುದರಿಂದ, 2021 ಮೇ 9 ವೇಳೆಗೆ ಒಟ್ಟು 337.95 ಎಲ್ಎಂಟಿ ಗೋಧಿಯನ್ನು ಸಂಗ್ರಹಿಸಲಾಗಿದೆ ಹಾಗು ಕಳೆದ ವರ್ಷ 248.021 ಎಲ್ಎಂಟಿ ಗೋಧಿಯನ್ನು ಇದೇ ದಿನದಲ್ಲಿ ಸಂಗ್ರಹಿಸಲಾಗಿತ್ತು ಎಂದು ಶ್ರೀ ಪಾಂಡೆ ಮಾಹಿತಿ ನೀಡಿದರು. ಕಳೆದ ವರ್ಷದ 28.15 ಲಕ್ಷ ರೈತರಿಗೆ ಹೋಲಿಸಿದರೆ ಇದುವರೆಗೆ ಸುಮಾರು 34.07 ಲಕ್ಷ ರೈತರಿಗೆ ಅನುಕೂಲವಾಗಿದೆ ಎನ್ನುವ ಮಾಹಿತಿ ನೀಡಿದರುಭಾರತದಾದ್ಯಂತ 19,030 ಖರೀದಿ ಕೇಂದ್ರಗಳ ಮೂಲಕ ಖರೀದಿಯನ್ನು ಮಾಡಲಾಗಿದೆ ಎಂದರುಹರಿಯಾಣ ಮತ್ತು ಪಂಜಾಬ್ ಸಹ ಎಂಎಸ್.ಪಿಯ ಪರೋಕ್ಷ ಪಾವತಿಯಿಂದ ರೈತರಿಗೆ  ಆನ್ ಲೈನ್ ವರ್ಗಾವಣೆಗೆ (ಡಿಬಿಟಿ) ಬದಲಾಗಿದೆ, ರೈತರು ಈಗ ದೇಶಾದ್ಯಂತ ಯಾವುದೇ ವಿಳಂಬವಿಲ್ಲದೆ ತಮ್ಮ ಬೆಳೆಗಳ ಮಾರಾಟದ ನೇರ ಲಾಭಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಗೋಧಿ ಖರೀದಿಯ ಒಟ್ಟು 49,965 ಕೋಟಿ ರೂ.ಗಳನ್ನು ಡಿಬಿಟಿ ಪಾವತಿಯ ಮುಖಾಂತರ ಭಾರತದಾದ್ಯಂತ ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಕಾರ್ಯದರ್ಶಿ ಮಾಹಿತಿ ನೀಡಿದರು. ಪಂಜಾಬಿನಲ್ಲಿ 21,588 ಕೋಟಿ ರೂ. ಮತ್ತು ಹರಿಯಾಣದಲ್ಲಿ ಸುಮಾರು 11,784 ಕೋಟಿ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೋವಿಡ್ ಎರಡನೇ ಅಲೆಯಿಂದಾಗಿ, ಗೋಧಿ ಮತ್ತು ಅಕ್ಕಿ ದಾಸ್ತಾನುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಭಾರತ ಸರ್ಕಾರವು 2021-22ನೇ ಸಾಲಿಗೆ ಒಎಂಎಸ್ಎಸ್ (ಡಿ) ನೀತಿಯನ್ನು ಉದಾರೀಕರಣಗೊಳಿಸಿದೆ ಎಂದು ಶ್ರೀ ಪಾಂಡೆ ಹೇಳಿದರು. ಒಎಂಎಸ್ಎಸ್ (ಡಿ) ಅಡಿಯಲ್ಲಿ ಆಹಾರ ಧಾನ್ಯಗಳ ಮಾರಾಟವು ಖರೀದಿ ಮಾಡದೇ ಇದ್ದ ರಾಜ್ಯಗಳಲ್ಲಿ ಪ್ರಾರಂಭವಾಗಿದೆ ಮತ್ತು ಇದುವರೆಗೆ 2800 ಮೆ.ಟನ್ ಮಾರಾಟವಾಗಿದೆ ಎಂದು ತಿಳಿಸಲಾಯಿತು.

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ, ಸುಮಾರು 928.77 ಎಲ್ಎಂಟಿ ಆಹಾರ ಧಾನ್ಯಗಳು, 363.89 ಎಲ್ಎಂಟಿ ಗೋಧಿ ಮತ್ತು 564.88 ಎಲ್ಎಂಟಿ ಅಕ್ಕಿಯನ್ನು ಕೇಂದ್ರ ಉಗ್ರಾಣದಿಂದ 1.4.2020 ರಿಂದ 31.3.2021 ರವರೆಗೆ ವಿತರಣೆಗಾಗಿ ನೀಡಲಾಗಿದೆ ಎಂದು ತಿಳಿಸಲಾಯಿತು.

ಖಾದ್ಯ ತೈಲಗಳ ಬೆಲೆ ಏರಿಕೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀ ಪಾಂಡೆ, ಖಾದ್ಯ ತೈಲಗಳ ಬೆಲೆಯನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರುವಿವಿಧ ಏಜೆನ್ಸಿಗಳ ತೆರವು ಸಂಬಂಧಿತ ಪರೀಕ್ಷೆಗಳಿಂದಾಗಿ ಕೆಲವು ದಾಸ್ತಾನುಗಳು ಬಂದರುಗಳಲ್ಲಿ ಸಿಲುಕಿಕೊಂಡಿವೆಈಗ ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಶೀಘ್ರದಲ್ಲೇ ಅವುಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ ಮತ್ತು ಇದು ತೈಲ ಬೆಲೆಗಳಲ್ಲಿ ಸ್ವಲ್ಪ ಇಳಿಕೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಸಕ್ಕರೆ ಸಬ್ಸಿಡಿ ಬಗ್ಗೆ ಮತ್ತೊಂದು ಪ್ರಶ್ನೆಗೆ ಉತ್ತರಿಸುವಾಗ, ಸಕ್ಕರೆ ಮತ್ತು ಎಥೆನಾಲ್ ಉದ್ಯಮದ ಬಗ್ಗೆ ವಿವರವಾದ ವಿಮರ್ಶೆ ನಡೆಯುತ್ತಿದೆ ಎಂದು ಶ್ರೀ ಪಾಂಡೆ ಮಾಹಿತಿ ನೀಡಿದರು. ವರ್ಷ ನಾವು 7.2% ನಷ್ಟು ಮಿಶ್ರಣದ ಗುರಿಯನ್ನು ಸಾಧಿಸಿದ್ದೇವೆ ಮತ್ತು ವರ್ಷದ ಅಂತ್ಯದ ವೇಳೆಗೆ 8.5% ಮಿಶ್ರಣದ ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರುಪ್ರಸ್ತುತ ದೇಶದ 11 ರಾಜ್ಯಗಳು ಈಗಾಗಲೇ 9 - 10% ನಷ್ಟು ಮಿಶ್ರಣವನ್ನು ಸಾಧಿಸಿವೆ, ಉಳಿದ ರಾಜ್ಯಗಳು ಇದರ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

***



(Release ID: 1717548) Visitor Counter : 191