ಭೂವಿಜ್ಞಾನ ಸಚಿವಾಲಯ

ಮೂರನೇ ಆರ್ಕ್ಟಿಕ್ ವಿಜ್ಞಾನ ಸಚಿವಾಲಯದ ಸಮಾವೇಶದಲ್ಲಿ ಭಾರತ ಭಾಗಿ; ಆರ್ಕ್ಟಿಕ್ ನಲ್ಲಿ ಸಂಶೋಧನೆ ಮತ್ತು ದೀರ್ಘಾವಧಿಯ ಸಹಕಾರ ಕುರಿತು ಯೋಜನೆ ವಿನಿಮಯ

Posted On: 08 MAY 2021 7:30PM by PIB Bengaluru

ಆರ್ಕ್ಟಿಕ್ ಪ್ರದೇಶದಲ್ಲಿ ಸಂಶೋಧನೆ ಮತ್ತು ಸಹಕಾರ ಕುರಿತಂತೆ ಚರ್ಚಿಸುವ ಜಾಗತಿಕ ವೇದಿಕೆ- 3ನೇ ಆರ್ಕ್ಟಿಕ್ ವಿಜ್ಞಾನ ಸಚಿವಾಲಯದ(ಎಎಸ್ ಎಂ3) ಸಭೆಯಲ್ಲಿ (2021 ಮೇ8 -9) ಭಾರತ ಭಾಗವಹಿಸಿತ್ತು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಭೂ ವಿಜ್ಞಾನ ಸಚಿವ ಡಾ.ಹರ್ಷವರ್ಧನ್, ಆರ್ಕ್ಟಿಕ್ ಪ್ರದೇಶದಲ್ಲಿ ಸಂಶೋಧನೆ, ಕಾರ್ಯ ಮತ್ತು ಸಹಕಾರ ಕುರಿತಂತೆ  ದೀರ್ಘಾವಧಿಯ ಯೋಜನೆಗಳು ಮತ್ತು ಭಾರತದ ಮುನ್ನೋಟವನ್ನು ಭಾಗಿದಾರರೊಂದಿಗೆ ಹಂಚಿಕೊಂಡರು. ನಿಗಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಜ್ಞಾನವೃದ್ಧಿಗೆ ದತ್ತಾಂಶ ಹಂಚಿಕೊಳ್ಳುವ ಸಹಯೋಗವನ್ನು ಅವರು ಸ್ವಾಗತಿಸಿದರು. ಆರ್ಕ್ಟಿಕ್ ಪ್ರದೇಶದಲ್ಲಿ ನಿಗಾ, ಸಂಶೋಧನೆ, ಸಾಮರ್ಥ್ಯವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ಮೂಲಕ ಪ್ರದೇಶದ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಭಾರತ ಸಕಾರಾತ್ಮಕ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ’’ ಎಂದು ಡಾ.ಹರ್ಷವರ್ಧನ್ ಹೇಳಿದರು. ಮುಂದಿನ ಅಥವಾ ಭವಿಷ್ಯದ ಎಎಸ್ ಎಂ ಆತಿಥ್ಯ ವಹಿಸಿಕೊಳ್ಳಲು ಭಾರತಕ್ಕೆ ಅವಕಾಶ ನೀಡಬೇಕು ಎಂದು ಅವರು ಪ್ರಸ್ತಾಪಿಸಿದರು.

ಆರ್ಕ್ಟಿಕ್ ಪ್ರದೇಶದಲ್ಲಿ  ದೂರಸಂವೇದಿ ಮತ್ತು ಸ್ಥಾನಿಕ ನಿಗಾ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡುವುದಾಗಿ ಭಾರತ ತನ್ನ ಯೋಜನೆಯನ್ನು ಹಂಚಿಕೊಂಡಿದೆಸಾಗರದ ಮೇಲ್ಮೈ ಏರಿಳಿತ ಮತ್ತು ಕಡಲ ಹವಾಮಾನ ಮಾನದಂಡಗಳ ಮೇಲೆ ದೀರ್ಘಾವಧಿಯ ನಿಗಾ ಇಡಲು ದೇಶ     ಆರ್ಕ್ಟಿಕ್  ನಲ್ಲಿ ಓಪನ್ ಒಷನ್ ಮೂರಿಂಗ್ ಅನ್ನು ನಿಯೋಜಿಸಲಿದೆ. ಅಮೆರಿಕಾ ಸಹಯೋಗದೊಂದಿಗೆ ನೈಸರ್ (ನಾಸಾ-ಇಸ್ರೋ ಸಿಂಥೆಟಿಕ್ ಅಪಾರ್ಚರ್ ರಡಾರ್ ) ಉಪಗ್ರಹ ಯೋಜನೆಯನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಸುಧಾರಿತ ರಡಾರ್ ಬಳಸಿ ಭೂ ಮೇಲ್ಮೈ ಬದಲಾವಣೆಗಳ ಕಾರಣ ಮತ್ತು ಪರಿಣಾಮಗಳ ಜಾಗತಿಕ ಮಾನದಂಡಗಳನ್ನು ರೂಪಿಸುವುದು  ನೈಸರ್ ಗುರಿಯಾಗಿದೆಸುಸ್ಥಿರ ಆರ್ಕ್ಟಿಕ್ ನಿಗಾ ಜಾಲಕ್ಕೆ (ಎಸ್ ಎಒಎನ್ )ಗೆ ಭಾರತದ ಕೊಡುಗೆ ಮುಂದುವರಿಯಲಿದೆ.

ಎಎಸ್ಎಂ-1 ಮತ್ತು ಎಎಸ್ ಎಂ-2, ಮೊದಲ ಎರಡು ಸಭೆಗಳು ಕ್ರಮವಾಗಿ 2016ರಲ್ಲಿ ಅಮೆರಿಕಾದಲ್ಲಿ ಮತ್ತು 2018ರಲ್ಲಿ ಜರ್ಮನಿಯಲ್ಲಿ ನಡೆದಿದ್ದವು. ಎಎಸ್ ಎಂ 3 ಅನ್ನು ಐಸ್ ಲ್ಯಾಂಡ್ ಮತ್ತು ಜಪಾನ್ ಜಂಟಿಯಾಗಿ ಆಯೋಜಿಸಿದ್ದು, ಇದು ಏಷ್ಯಾದಲ್ಲಿ ನಡೆದ ಮೊದಲ ಸಚಿವರ ಸಭೆಯಾಗಿದೆ. ಆರ್ಕ್ಟಿಕ್ ಪ್ರದೇಶದ ಸಾಮೂಹಿಕ ತಿಳುವಳಿಕೆಯನ್ನು ಹೆಚ್ಚಿಸಲು, ನಿರಂತರ ಮೇಲ್ವಿಚಾರಣೆಗೆ ಒತ್ತು ನೀಡಲು ಮತ್ತು ತೊಡಗಿಸಿಕೊಳ್ಳಲು ಹಾಗೂ ನಿಗಾ ವ್ಯವಸ್ಥೆ ಬಲವರ್ಧನೆಗೊಳಿಸಲು ಶೈಕ್ಷಣಿಕ, ದೇಶಿಯ ಸಮುದಾಯಗಳು, ಸರ್ಕಾರ ಮತ್ತು ನೀತಿ ನಿರೂಪಕರು ಸೇರಿದಂತೆ ನಾನಾ ಪಾಲುದಾರರಿಗೆ ಅವಕಾಶ ಒದಗಿಸಿಕೊಡಲು ಸಭೆಯನ್ನು ವಿನ್ಯಾಸಗೊಳಿಸಲಾಗಿದೆ ವರ್ಷದ ಸಭೆಯ ಘೋಷ ವಾಕ್ಯ ಆರ್ಕ್ಟಿಕ್ ಸುಸ್ಥಿರತೆಗಾಗಿ ಜ್ಞಾನ’’ ಎಂಬುದಾಗಿದೆ.

ಆರ್ಕ್ಟಿಕ್ ತಾಪಮಾನ ಮತ್ತು ಹಿಮ ಕರಗುವಿಕೆ ಬಗ್ಗೆ ಜಾಗತಿಕ ಕಾಳಜಿ ಇದೆ, ಏಕೆಂದರೆ ಅವು ಹವಾಮಾನ, ಸಮುದ್ರ ಮಟ್ಟವನ್ನು ನಿಯಂತ್ರಿಸುವಲ್ಲಿ ಮತ್ತು ಜೀವ ವೈವಿಧ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ಆರ್ಕ್ಟಿಕ್ ಮತ್ತು ಹಿಂದೂ ಮಹಾಸಾಗರ(ಇದು ಭಾರತದ ಮುಂಗಾರನ್ನು ನಿರ್ವಹಿಸುತ್ತದೆ) ನಡುವಿನ ಸಂಪರ್ಕದ ಸಾಕ್ಷ್ಯಗಳು ಬೆಳೆಯುತ್ತದೆ. ಆದ್ದರಿಂದ ಭೌತಿಕ ಪ್ರಕ್ರಿಯೆಗಳ ತಿಳುವಳಿಕೆಯನ್ನು ಸುಧಾರಿಸುವುದು ಮತ್ತು ಭಾರತದಲ್ಲಿ ಬೇಸಿಗೆಯ ಮುಂಗಾರಿನಲ್ಲಿ ಆರ್ಕ್ಟಿಕ್ ಹಿಮದ ಕರಗುವಿಕೆಯನ್ನು ಪ್ರಮಾಣಿಕರಿಸುವುದು ಬಹು ಮುಖ್ಯ,

2013ರಿಂದೀಚೆಗೆ ಭಾರತ ಇತರೆ 12 ದೇಶಗಳೊಂದಿಗೆ(ಜಪಾನ್, ಚೀನಾ, ಫ್ರಾನ್ಸ್, ಜರ್ಮನಿ, ಯುಕೆ, ಇಟಲಿ, ಸ್ವಿಟ್ಜರ್ ಲ್ಯಾಂಡ್, ಪೋಲ್ಯಾಂಡ್, ಸ್ಪೇನ್, ನೆದರ್ ಲ್ಯಾಂಡ್ಸ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ) ರಾಷ್ಟ್ರಗಳೊಂದಿಗೆ ಆರ್ಕ್ಟಿಕ್ ಮಂಡಳಿಯ ವೀಕ್ಷಕಸ್ಥಾನಮಾನವನ್ನು ಗಳಿಸಿದೆ. ಆರ್ಕ್ಟಿಕ್ ಮಂಡಳಿ ಆರ್ಕ್ಟಿಕ್ ಪರಿಸರ ರಕ್ಷಣೆ, ಸುಸ್ಥಿರ ಅಭಿವೃದ್ಧಿ ನಿಟ್ಟಿನಲ್ಲಿ ಸಹಕಾರ, ಸಮನ್ವಯ ಮತ್ತು ಸಮಾಲೋಚನೆ ಉತ್ತೇಜಿಸಲು ಉನ್ನತ ಮಟ್ಟದ ಅಂತರ ಸರ್ಕಾರಗಳ ವೇದಿಕೆಯಾಗಿದೆ. ಆರ್ಕ್ಟಿಕ್ ಮಂಡಳಿಯ ಭಾಗವಾಗಿ ಭಾರತ ಸುರಕ್ಷಿತ ಸ್ಥಿರ ಮತ್ತು ಸುಭದ್ರ ಆರ್ಕ್ಟಿಕ್ ನಿರ್ಮಾಣ ನಿಟ್ಟಿನಲ್ಲಿ ಪರಿಣಾಮಕಾರಿ ಸಹಕಾರ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಲು ಅಂತಾರಾಷ್ಟ್ರೀಯ ಸಮಾಲೋಚನೆಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ

ಆರ್ಕ್ಟಿಕ್  ಜೊತೆಗಿನ ಭಾರತದ ಪಾಲುದಾರಿಕೆ 1920ರಿಂದಲೂ ಇದ್ದು, ಪ್ಯಾರಿಸ್ ನಲ್ಲಿ ಸ್ವಾಲ್ಬರ್ಡ್  ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಆರಂಭವಾಯಿತು. ಜುಲೈ 2008ರಿಂದೀಚೆಗೆ ಭಾರತ ಆರ್ಕ್ಟಿಕ್ ನಾರ್ವೆಯ ಸ್ವಾಲ್ಬರ್ಡ್ ಪ್ರದೇಶದ ನೈ ಅಲೆಸುಂಡ್ ನಲ್ಲಿ ಹಿಮಾದ್ರಿ ಎಂದು ಕರೆಯಲ್ಪಡುವ ಜಾಗದಲ್ಲಿ ಕಾಯಂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದೆ. ಅಲ್ಲದೆ ಜುಲೈ 2014ರಿಂದೀಚೆಗೆ ಕೋಂಗ್ಸ್ ಫೋರ್ಡೆನ್ ಫಾಡ್ಜ್ ನಲ್ಲಿ ಇಂಡ್ರ್ಯಾಕ್ ಎಂದು ಕರೆಯಲ್ಪಡುವ ಜಾಗದಲ್ಲಿ ಮಲ್ಟಿ ಸೆನ್ಸಾರ್ ಮೋರ್ಡ್ ವೀಕ್ಷಣಾಲಯವನ್ನು ನಿಯೋಜಿಸಿದೆ. ಭಾರತದಿಂದ ಆರ್ಕ್ಟಿಕ್  ಪ್ರದೇಶದಲ್ಲಿ ಸಂಶೋಧನೆಗಳನ್ನು ಭಾರತ ಸರ್ಕಾರದ ಭೂ ವಿಜ್ಞಾನಗಳ ಸಚಿವಾಲಯದಡಿ ಬರುವ ಗೋವಾದ ರಾಷ್ಟ್ರೀಯ ಧೃವ ಮತ್ತು ಸಾಗರ ಸಂಶೋಧನೆ(ಎನ್ ಸಿಪಿಒಆರ್) ಸಂಯೋಜಿಸುತ್ತದೆ, ನಡೆಸುತ್ತದೆ ಮತ್ತು ಉತ್ತೇಜಿಸುತ್ತದೆ.

***



(Release ID: 1717136) Visitor Counter : 242