ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಡಿಎ ಆರ್ ಪಿಜಿ ಕಾರ್ಯದರ್ಶಿಗಳು ಕೋವಿಡ್ 19 ಸಾರ್ವಜನಿಕ ಕುಂದುಕೊರತೆಗಳನ್ನು ಕೇಂದ್ರ ಸಚಿವಾಲಯಗಳು / ಇಲಾಖೆಗಳ ಕುಂದುಕೊರತೆ ಅಧಿಕಾರಿಗಳೊಂದಿಗೆ ಮತ್ತು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಶೀಲಿಸಿದರು
ನಾಗರಿಕ ಕೇಂದ್ರಿತ ಸೇವೆಗಳನ್ನು ಸಮಯಕ್ಕೆ ಅನುಗುಣವಾಗಿ ತಲುಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಾಂಕ್ರಾಮಿಕ ಕಾಲದಲ್ಲಿ ಸಮಯ ಮತ್ತು ಗುಣಮಟ್ಟದ ಕುಂದುಕೊರತೆ ಪರಿಹಾರವನ್ನು ಅನುಸರಿಸುವ ಅಗತ್ಯದ ಮೇಲೆ ಒತ್ತು ನೀಡಲಾಯಿತು.
Posted On:
06 MAY 2021 4:30PM by PIB Bengaluru
ಡಿಎಆರ್ಪಿಜಿ ಕಾರ್ಯದರ್ಶಿಗಳು ಇಂದು 84 ಕೇಂದ್ರ ಸಚಿವಾಲಯಗಳು / ಇಲಾಖೆಗಳ ಕುಂದುಕೊರತೆ ಅಧಿಕಾರಿಗಳು ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಕುಂದುಕೊರತೆ ಅಧಿಕಾರಿಗಳೊಂದಿಗೆ 2 ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿದ್ದರು. ಸಾಂಕ್ರಾಮಿಕ ಕಾಲದಲ್ಲಿ ಸಮಯಕ್ಕೆ ತಕ್ಕಂತೆ ಕುಂದುಕೊರತೆ ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅಳವಡಿಸಿಕೊಂಡ ನೀತಿಗಳನ್ನು ಅವರು ಎತ್ತಿ ತೋರಿಸಿದರು. ಸಾಂಕ್ರಾಮಿಕಕ್ಕೆ ಸಂಬಂಧಿಸಿದ ನಾಗರಿಕರ ಕುಂದುಕೊರತೆಗಳನ್ನು ಮೇಲ್ವಿಚಾರಣೆ ಮಾಡಲು ಮೀಸಲಾದ ಕೋವಿಡ್-19 ಪೋರ್ಟಲ್ ಅನ್ನು ಕಾರ್ಯಗತಗೊಳಿಸುವುದು, ಪ್ರತಿ ಕುಂದುಕೊರತೆಗಳಿಗೆ ಒಂದು ಅನನ್ಯ ಗುರುತಿನ ಸಂಖ್ಯೆಯನ್ನು ನಿಗದಿಪಡಿಸುವುದು, ಕುಂದುಕೊರತೆಗಳನ್ನು 11 ವರ್ಗಗಳಾಗಿ ವರ್ಗೀಕರಿಸುವುದು, ಕುಂದುಕೊರತೆ ಪರಿಹಾರ ಸಮಯವನ್ನು 60 ದಿನಗಳಿಂದ 3 ದಿನಗಳಿಗೆ ಇಳಿಸುವುದು, ಪರಿಗಣಿಸಲಾದ ವಿಶ್ಲೇಷಣೆಗಾಗಿ ಸ್ವಯಂ ರಚಿತವಾಗುವ ಇಮೇಲ್ ಜ್ಞಾಪನೆಗಳು ಮತ್ತು ದೈನಂದಿನ ವರದಿ ಉತ್ಪಾದನೆ. ಮಾರ್ಚ್ 30, 2020 ರಿಂದ ಮೇ 3 2021 ರ ಅವಧಿಯಲ್ಲಿ ಡಿಎಆರ್ಪಿಜಿಯ ಸಿಪಿಜಿಆರ್ ಎಂಎಸ್ ಪೋರ್ಟಲ್ 1.92 ಲಕ್ಷ ಪಿಜಿ ಪ್ರಕರಣಗಳನ್ನು ಸ್ವೀಕರಿಸಿದ್ದು, ಅದರಲ್ಲಿ 1.66 ಲಕ್ಷ ಪ್ರಕರಣಗಳನ್ನು ಪರಿಹರಿಸಲಾಗಿದೆ. ಕೇಂದ್ರ ಸಚಿವಾಲಯಗಳು / ಇಲಾಖೆಗಳು 1.16 ಲಕ್ಷ ಪಿಜಿ ಪ್ರಕರಣಗಳನ್ನು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು 0.50 ಲಕ್ಷ ಪಿಜಿ ಪ್ರಕರಣಗಳನ್ನು ಪರಿಹರಿಸಿದೆ. ಮಾರ್ಚ್ 1, 2021 ರಿಂದ ಮೇ 3, 2021 ರ ಅವಧಿಯಲ್ಲಿ ಸಿಪಿಜಿಆರ್ ಎಂಎಸ್ ಪೋರ್ಟಲ್ 14137 ಪಿಜಿ ಪ್ರಕರಣಗಳನ್ನು ಸ್ವೀಕರಿಸಿದ್ದು, ಅದರಲ್ಲಿ 9267 ಪ್ರಕರಣಗಳನ್ನು ಪರಿಹರಿಸಲಾಗಿದೆ.
ಸಿಪಿಜಿಆರ್ ಎಂಎಸ್ ಸುಧಾರಣೆಗಳ ತ್ವರಿತ ಅನುಷ್ಠಾನ, ಸಿಪಿಜಿಆರ್ಎಎಂಎಸ್ ನೊಂದಿಗೆ ರಾಜ್ಯ ಪೋರ್ಟಲ್ ಗಳ ಏಕೀಕರಣ, ಸಿಪಿಜಿಆರ್ ಎಂಎಸ್ ನೊಂದಿಗೆ ಜಿಲ್ಲಾ ಪೋರ್ಟಲ್ ಗಳನ್ನು ಸಂಯೋಜಿಸುವುದು, ಕುಂದುಕೊರತೆಗಳ ಮೂಲ ಕಾರಣವನ್ನು ವಿಶ್ಲೇಷಿಸುವುದು ಮತ್ತು ವ್ಯವಸ್ಥಿತ ಸುಧಾರಣೆಗಳನ್ನು ತರುವುದು ಮತ್ತು ಮೇಲ್ಮನವಿ ಪ್ರಾಧಿಕಾರ ವ್ಯವಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಯಲ್ಲಿ ಮುಂದಿನ ಮಾರ್ಗಸೂಚಿ ಇದೆ ಎಂದು ಕಾರ್ಯದರ್ಶಿಗಳು ಹೇಳಿದರು. ಸಾಂಕ್ರಾಮಿಕ ಅವಧಿಯಲ್ಲಿ ಕುಂದುಕೊರತೆ ಪರಿಹಾರವನ್ನು ಒದಗಿಸುವಲ್ಲಿ ನಾಗರಿಕರತ್ತ ಕೇಂದ್ರೀಕರಿಸುವಲ್ಲಿ ಗಮನಹರಿಸಬೇಕೆಂದು ಅವರು ಎಲ್ಲಾ ಕುಂದುಕೊರತೆ ಅಧಿಕಾರಿಗಳನ್ನು ಕೋರಿದರು.
****
(Release ID: 1716640)
Visitor Counter : 215