ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಆಮ್ಲಜನಕ ಸಿಲಿಂಡರ್‌ಗಳು ಮತ್ತು ಕ್ರಯೋಜೆನಿಕ್ ಟ್ಯಾಂಕರುಗಳ/ ಕಂಟೇನರ್‌ಗಳ ಆಮದಿಗೆ ಕಾರ್ಯವಿಧಾನ ಸರಳೀಕರಣ
Posted On:
05 MAY 2021 6:18PM by PIB Bengaluru
ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯು (ಪಿಇಎಸ್‌ಒ) ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ಕ್ರಯೋಜೆನಿಕ್ ಟ್ಯಾಂಕರುಗಳು/ ಕಂಟೇನರ್‌ಗಳನ್ನು ಆಮದು ಮಾಡಿಕೊಳ್ಳಲು ಪ್ರಸ್ತುತ ಇರುವ ಜಾಗತಿಕ ತಯಾರಕರ ನೋಂದಣಿ ಮತ್ತು ಅನುಮೋದನೆಯ ಕಾರ್ಯವಿಧಾನವನ್ನು ಭಾರತ ಸರಕಾರ ಮರುಪರಿಶೀಲನೆ ಮಾಡಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅಂತಹ ನೋಂದಣಿ ಮತ್ತು ಅನುಮೋದನೆ ನೀಡುವ ಮೊದಲು ʻಪಿಇಎಸ್‌ಒʼ ಜಾಗತಿಕ ತಯಾರಕರ ಉತ್ಪಾದನಾ ಘಟಕಗಳ ಭೌತಿಕ ತಪಾಸಣೆಯನ್ನು ನಡೆಸಲು ಸಾಧ್ಯವಿಲ್ಲ. ಈಗ ತಯಾರಕರು ಐಎಸ್ಒ ಪ್ರಮಾಣಪತ್ರ; ಸಿಲಿಂಡರ್‌ಗಳು/ ಟ್ಯಾಂಕರುಗಳು/ ಕಂಟೇನರ್‌ಗಳು, ಅವುಗಳ ನಿರ್ದಿಷ್ಟತೆಗಳು, ರೇಖಾಚಿತ್ರಗಳು ಮತ್ತು ಬ್ಯಾಚ್ ಸಂಖ್ಯೆಗಳ ಪಟ್ಟಿ; ಹೈಡ್ರೋ ಟೆಸ್ಟ್ ಸರ್ಟಿಫಿಕೇಟ್ ಮತ್ತು ಥರ್ಡ್ ಪಾರ್ಟಿ ತಪಾಸಣಾ ಪ್ರಮಾಣಪತ್ರ ಸೇರದಂತೆ ವಿವರಗಳನ್ನು ಸಲ್ಲಿಕೆ ಮಾಡಿದ ಕೂಡಲೇ ಯಾವುದೇ ವಿಳಂಬವಿಲ್ಲದೆ ಆನ್‌ಲೈನ್‌ನಲ್ಲೇ ಅಂತಹ ಅನುಮೋದನೆಗಳನ್ನು ನೀಡಲಾಗುತ್ತದೆ. ಈ ಸಂಬಂಧ ಯಾವುದೇ ರೀತಿಯ ಸ್ಪಷ್ಟೀಕರಣ ಅಗತ್ಯವಾದಲ್ಲಿ, ʻಪಿಇಎಸ್‌ಒʼದ ʻಸ್ಫೋಟಕಗಳ ನಿಯಂತ್ರಕ ಅಧಿಕಾರಿ ಶ್ರೀ ಎಸ್.ಡಿ. ಮಿಶ್ರಾ (ಮೊಬೈಲ್ ಸಂಖ್ಯೆ 9725850352, ಇಮೇಲ್ ಐಡಿ sdmishra@explosives.gov.in) ಮತ್ತು ʻಪಿಇಎಸ್‌ಒʼದ ಸ್ಫೋಟಕಗಳ ನಿಯಂತ್ರಕ ಅಧಿಕಾರಿ ಡಾ. ಎಸ್.ಕೆ.ಸಿಂಗ್ (ಮೊಬೈಲ್ ಸಂಖ್ಯೆ 8447639102, ಇಮೇಲ್ ಐಡಿ sksingh@explosives.gov.in) ಅವರನ್ನು ಸಂಪರ್ಕಿಸಬಹುದು.
***
(Release ID: 1716340)
Visitor Counter : 278