ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಜಾಗತಿಕ ನಾವೀನ್ಯತಾ ಪಾಲುದಾರಿಕೆ ಕುರಿತು ಭಾರತ ಮತ್ತು ಬ್ರಿಟನ್ ನಡುವಿನ ಒಪ್ಪಂದಕ್ಕೆ ಸಂಪುಟದ ಘಟನೋತ್ತರ ಅನುಮೋದನೆ

Posted On: 05 MAY 2021 12:22PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬ್ರಿಟನ್ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್ಸಿಡಿಒ) ನಡುವೆ ಜಾಗತಿಕ ನಾವೀನ್ಯತಾ ಪಾಲುದಾರಿಕೆ (ಜಿಐಪಿ) ತಿಳುವಳಿಕೆ ಪತ್ರಕ್ಕೆ ಘಟನೋತ್ತರವಾಗಿ ಅನುಮೋದನೆ ನೀಡಿದೆ.

ಉದ್ದೇಶಗಳು:

ಒಪ್ಪಂದದ ಮೂಲಕ ಭಾರತ ಮತ್ತು ಬ್ರಿಟನ್ ಜಾಗತಿಕ ನಾವೀನ್ಯತಾ ಸಹಭಾಗಿತ್ವವನ್ನು ಪ್ರಾರಂಭಿಸುತ್ತವೆ. ಸಹಭಾಗಿತ್ವವು ಮೂರನೇ ದೇಶಗಳಲ್ಲಿ ತಮ್ಮ ಆವಿಷ್ಕಾರಗಳನ್ನು ಹೆಚ್ಚಿಸಲು ಭಾರತೀಯ ನಾವೀನ್ಯಕಾರರಿಗೆ ನೆರವಾಗುತ್ತದೆ ಮತ್ತು ಮೂಲಕ ದೇಶಗಳು ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ಸ್ವಯಂ ಸುಸ್ಥಿರವಾಗಲು ಸಹಾಯ ಮಾಡುತ್ತದೆ. ಇದು ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಸಹ ಪೋಷಿಸುತ್ತದೆ. ಜಿಐಪಿ ಆವಿಷ್ಕಾರಗಳು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ಡಿಜಿ) ಸಂಬಂಧಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಮೂಲಕ ಸ್ವೀಕರಿಸುವ ದೇಶಗಳು ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಮೂಲ ಧನಸಹಾಯ, ಅನುದಾನ, ಹೂಡಿಕೆಗಳು ಮತ್ತು ತಾಂತ್ರಿಕ ನೆರವಿನ ಮೂಲಕ, ಸಹಭಾಗಿತ್ವವು ಭಾರತೀಯ ಉದ್ಯಮಿಗಳು ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಆಯ್ಕೆ ಮಾಡಲು ಅವುಗಳಿಗೆ ನಾವೀನ್ಯತಾ ಅಭಿವೃದ್ಧಿ ಪರಿಹಾರಗಳನ್ನು ನೀಡಲು ಸಹಾಯ ಮಾಡುತ್ತದೆ.

ಜಿಐಪಿ ಅಡಿಯಲ್ಲಿ ಆಯ್ಕೆ ಮಾಡಲಾದ ನಾವೀನ್ಯತೆಗಳು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯನ್ನು ವೇಗಗೊಳಿಸುತ್ತದೆ ಮತ್ತು ಜನಸಂಖ್ಯೆಯ ಬಹುತೇಕರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಹೀಗಾಗಿ ಸ್ವೀಕರಿಸುವ ದೇಶಗಳಲ್ಲಿ ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.

ಗಡಿಯಾಚೆಗಿನ ನಾವೀನ್ಯತೆ ವರ್ಗಾವಣೆಗಾಗಿ ಜಿಐಪಿ ಮುಕ್ತ ಮತ್ತು ಅಂತರ್ಗತ -ಮಾರುಕಟ್ಟೆ (-ಬಜಾರ್) ಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಫಲಿತಾಂಶ ಆಧಾರಿತ ಪರಿಣಾಮ ಮೌಲ್ಯಮಾಪನದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಮೂಲಕ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಉತ್ತೇಜಿಸುತ್ತದೆ.

***(Release ID: 1716265) Visitor Counter : 85