ಬುಡಕಟ್ಟು ವ್ಯವಹಾರಗಳ ಸಚಿವಾಲಯ
ವನ್ ಧನ್ ಯೋಜನೆಯಿಂದ ಒಡಿಶಾದ ಬುಡಕಟ್ಟಿನವರ ಜೀವನೋಪಾಯದ ಸುಧಾರಣೆ
Posted On:
04 MAY 2021 4:22PM by PIB Bengaluru
ಟ್ರೈಫೆಡ್ (TRIFED) ನ “ಸಂಕಲ್ಪ ಸೆ ಸಿದ್ಧಿ” - ಹಳ್ಳಿ ಮತ್ತು ಡಿಜಿಟಲ್ ಸಂಪರ್ಕದ ಅಭಿಯಾನದ ಒಂದು ಭಾಗವಾಗಿ, ತಂಡಗಳು (TRIFED ಮತ್ತು ರಾಜ್ಯ ಅನುಷ್ಠಾನ ಏಜೆನ್ಸಿಗಳು / ಮಾರ್ಗದರ್ಶನ ಏಜೆನ್ಸಿಗಳು / ಪಾಲುದಾರರ ಅಧಿಕಾರಿಗಳನ್ನು ಒಳಗೊಂಡಂತೆ) ವನ್ ಧನ್ ವಿಕಾಸ್ ಕೇಂದ್ರಗಳ ಸ್ಥಿತಿಯನ್ನು ಸಕ್ರಿಯಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ಹಳ್ಳಿಗಳಿಗೆ ಭೇಟಿ ನೀಡುತ್ತಿವೆ. ದೇಶಾದ್ಯಂತ ಈ ತಂಡಗಳು ಭೇಟಿ ನೀಡುತ್ತಿವೆ ಮತ್ತು ವನ್ ಧನ್ ವಿಕಾಸ್ ಕೇಂದ್ರಗಳ ತಳಮಟ್ಟದ ಅನುಷ್ಠಾನದ ಮೇಲ್ವಿಚಾರಣೆಗೆ ಇವು ಟ್ರೈಫೆಡ್ ತಂಡಕ್ಕೆ ಅನುಕೂಲವಾಗಿದೆ.
ವನ್ ಧನ್ ಯೋಜನೆಯ ಅನುಷ್ಠಾನವು ಶೀಘ್ರವಾಗಿ ನಡೆಯುತ್ತಿರುವ ರಾಜ್ಯವೆಂದರೆ ಒಡಿಶಾ. 660 ವನ್ ಧನ್ ವಿಕಾಸ್ ಕೇಂದ್ರಗಳೊಂದಿಗೆ 22 ವನ್ ಧನ್ ವಿಕಾಸ್ ಕೇಂದ್ರ ಕ್ಲಸ್ಟರ್ ಗಳಾಗಿ ಸೇರಿಕೊಂಡಿದ್ದು, 6300 ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ರಾಜ್ಯದಲ್ಲಿ ಪ್ರಯೋಜನವಾಗಿದೆ.
ಕಳೆದ ಕೆಲವು ತಿಂಗಳುಗಳಿಂದ, ಮಯೂರ್ ಭಂಜ್, ಕಿಯೋಂಜಿಹಾರ್, ರಾಯಗಢ್, ಸುಂದರ್ಗರ್ ಮತ್ತು ಕೊರಪುತ್ ನಲ್ಲಿ ರಾಜ್ಯದಾದ್ಯಂತ ಹರಡಿರುವ ಈ ಕ್ಲಸ್ಟರ್ ಗಳಲ್ಲಿ ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗಿಗೆ ಅಗತ್ಯವಾದ ಯಂತ್ರೋಪಕರಣಗಳ ತರಬೇತಿ, ಸಂಗ್ರಹಣೆ ನಡೆಯುತ್ತಿದೆ. ಬುಡಕಟ್ಟು ಜನಾಂಗದವರು ಕಚ್ಚಾ ವಸ್ತುಗಳ ಉತ್ಪಾದನೆ ಮತ್ತು ಸಂಸ್ಕರಣೆ ಈ ತಿಂಗಳ ಮೊದಲಲ್ಲಿ ಪ್ರಾರಂಭಿಸಿದ್ದಾರೆ.
ಮಯೂರ್ ಭಂಜ್ ಜಿಲ್ಲೆಯಲ್ಲಿ, ಬುಡಕಟ್ಟು ಫಲಾನುಭವಿಗಳಾದ ಲುಗುಬುರು ವಿಡಿವಿಕೆಸಿ, ಮಾಧರಿತ್ರಿ ವಿಡಿವಿಕೆಸಿ ಮತ್ತು ಭೀಮಕುಂಡ್ ವಿಡಿವಿಕೆಸಿ ತಟ್ಟೆಗಳನ್ನು, ಸಾಲ್ ಎಲೆಗಳಿಂದ ಮಾಡಿದ ಕಪ್ ಗಳು, ಕುಸುಮ್ ಎಣ್ಣೆ ಮತ್ತು ಸಂಸ್ಕರಿಸಿದ ಜೇನುತುಪ್ಪ ಉತ್ಪಾದಿಸಲು ಸಾಲ್ ಎಲೆ, ಸಾಲ್ ಬೀಜಗಳು, ಕುಸುಮ್ ಬೀಜಗಳು ಮತ್ತು ಕಾಡು ಜೇನುತುಪ್ಪವನ್ನು ಸಂಸ್ಕರಿಸುವ ಕೆಲಸ ಮಾಡಲಿದ್ದು,. ಕಿಯೋಂಝಾರ್ ಜಿಲ್ಲೆಗಳಲ್ಲಿ, ಅಂಚಲಿಕಾ ಖಂಡಧರ್ ವಿಡಿವಿಕೆಸಿಯ ಬುಡಕಟ್ಟಿನ ಫಲಾನುಭವಿಗಳು ಮಾವಿನಕಾಯಿ, ಸಾಸಿವೆ ಮತ್ತು ಅರಿಶಿನವನ್ನು ಮಾವಿನ ಹಪ್ಪಳ, ಮಾವಿನ ಉಪ್ಪಿನಕಾಯಿ, ಅರಿಶಿನ ಪುಡಿ ಮತ್ತು ಸಾಸಿವೆ ಎಣ್ಣೆಗಾಗಿ ಸಂಸ್ಕರಿಸಲಿದ್ದಾರೆ.
ಬನ್ ದುರ್ಗಾ ವಿಡಿವಿಕೆಸಿ ಕ್ಲಸ್ಟರ್ ನಲ್ಲಿ ಹುಣಸೆಹಣ್ಣು, ಸಾಲ್ ಬೀಜಗಳು ಮತ್ತು ಚಾರ್ ಬೀಜಗಳನ್ನು ಬೀಜತೆಗೆದ ಹುಣಸೆಹಣ್ಣು, ಹುಣಸೆಹಣ್ಣಿನ ಬಿಲ್ಲೆ, ಸಾಲ್ ಶಾಂಪೂ ಮತ್ತು ಚಾರ್ ಬೀಜಗಳ ಪ್ಯಾಕ್ ಗಳನ್ನು ಮಾಡಲಾಗುತ್ತದೆ.
ಕೊರಾಪುಟ್, ರಾಯಗಢ ಮತ್ತು ಸುಂದರ್ಗರ್ ಜಿಲ್ಲೆಗಳಲ್ಲಿ ವಿಡಿವಿಕೆ ಕ್ಲಸ್ಟರ್ ಗಳಲ್ಲಿ ಸಂಸ್ಕರಿಸಲಾಗುವ ಇತರ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಹುಣಸೆ ಬಿಲ್ಲೆ, ಮಾಹುವಾ ಎಣ್ಣೆ, ಸಾವಯವ ಪ್ಯಾಕೇಜ್ಡ್ ಅಕ್ಕಿ, ಮಾಹುವಾ ಎಣ್ಣೆ, ಬೇವಿನ ಎಣ್ಣೆ, ಬೇವಿನ ಕೇಕ್ (ಬಿಲ್ಲೆ), ಬೀಜತೆಗೆದ ಚಿರೋಂಜಿ ಮತ್ತು ಅರಿಶಿನ ಪುಡಿ ಸೇರಿವೆ.
ಅನೇಕ ಉಪಕ್ರಮಗಳಲ್ಲಿ, ಬುಡಕಟ್ಟು ಜನಸಂಖ್ಯೆಯಲ್ಲಿ ಉದ್ಯೋಗ ಮತ್ತು ಆದಾಯವನ್ನು ಸೃಷ್ಟಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ವನ್ ಧನ್ ಬುಡಕಟ್ಟು ಸ್ಟಾರ್ಟ್ ಅಪ್ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ, ಇದು 'ಸಣ್ಣ ಅರಣ್ಯ ಉತ್ಪಾದನೆಯ ಮಾರುಕಟ್ಟೆಗಾಗಿ ಕಾರ್ಯವಿಧಾನ (ಎಂಎಫ್ಪಿ)’ ದ ಒಂದು ಭಾಗವಾಗಿದೆ. ಎಂಎಫ್ಪಿ ಯೋಜನೆಗಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಮೌಲ್ಯ ಸರಪಳಿಯ ಅಭಿವೃದ್ಧಿಯ ಮುಖಾಂತರ ತರಲಾಗಿದೆ.
ಅರಣ್ಯ ಆಧಾರಿತ ಬುಡಕಟ್ಟು ಜನಾಂಗದವರಿಗೆ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸಲು ಅನುಕೂಲವಾಗುವಂತೆ ವನ್ ಧನ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅದೇ ಯೋಜನೆಯ ಒಂದು ಅಂಶವಾದ ವನ್ ಧನ್ ಬುಡಕಟ್ಟು ಸ್ಟಾರ್ಟ್ ಅಪ್ ಯೋಜನೆಯು ಅರಣ್ಯ ಸಣ್ಣ ಉತ್ಪನ್ನಗಳ ಮೌಲ್ಯವರ್ಧನೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಗಾಗಿ ಇರುವ ಒಂದು ಕಾರ್ಯಕ್ರಮವಾಗಿದೆ.
ಕಳೆದ 18 ತಿಂಗಳುಗಳಲ್ಲಿ, ವನ್ ಧನ್ ವಿಕಾಸ್ ಯೋಜನೆಯು ಭಾರತದಾದ್ಯಂತ ರಾಜ್ಯ ನೋಡಲ್ ಮತ್ತು ಅನುಷ್ಠಾನ ಸಂಸ್ಥೆಗಳ ನೆರವಿನೊಂದಿಗೆ ತ್ವರಿತವಾಗಿ ಅಳವಡಿಸಿಕೊಳ್ಳುವುದು ಮತ್ತು ದೃಢವಾಗಿ ಅನುಷ್ಠಾನಗೊಳಿಸುವ ಮೂಲಕ ಮಹತ್ತರವಾದ ಜನಪ್ರಿಯತೆಯನ್ನು ಗಳಿಸಿದೆ.
ವಿಡಿವಿಕೆಸಿಗಳು ಈ ಕ್ಲಸ್ಟರ್ ಗಳೊಂದಿಗೆ ಒಡಿಶಾದಲ್ಲಿ ಜನಪ್ರಿಯತೆಯನ್ನು ಮತ್ತು ಉತ್ಪಾದನೆಯನ್ನು ಪ್ರಾರಂಭಿಸುವುದರೊಂದಿಗೆ, ಈ ಕಾರ್ಯಕ್ರಮದ ಪ್ರಯೋಜನಗಳು ಈ ಪೂರ್ವ ರಾಜ್ಯದ ಬುಡಕಟ್ಟು ಜನರನ್ನು ತಲುಪುತ್ತವೆ ಮತ್ತು ಅವರ ಜೀವನ ಮತ್ತು ಜೀವನೋಪಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
***
(Release ID: 1716035)
Visitor Counter : 251