ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಮಣ್ಣಿನಲ್ಲಿ ಯೋಗ ಚಾಪೆ ಅಭಿವೃದ್ಧಿಪಡಿಸಿದ ಅಸ್ಸಾಂನ 6 ಯುವತಿಯರು: ವಾಟರ್ ಹಯಸಿಂಥ್ ಅಂದರೆ  ನೀರಿನಲ್ಲಿ ಹರಡುವ ಅಂತರಗಂಗೆ  ಕಳೆಗಿಡಗಳ ಪಿಡುಗಿನಿಂದ ಸರೋವರಗಳ ರಕ್ಷಣೆಗೆ ಸಹಕಾರಿ

Posted On: 04 MAY 2021 1:14PM by PIB Bengaluru

ಅಸ್ಸಾಂನ ಮೀನುಗಾರಿಕಾ ಸಮುದಾಯದ ಆರು ಯುವತಿಯರ ಮಣ್ಣಿನಲ್ಲಿ ಸುಲಭವಾಗಿ ಕರಗುವ ಮತ್ತು ಮಿಶ್ರ ಗೊಬ್ಬರವಾಗುವ ಯೋಗ ಚಾಪೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಮಸ್ಯೆಯಿಂದ  ಜಲಮೂಲಗಳನ್ನು ರಕ್ಷಿಸಬಹುದು.

ಈ ಯುವತಿಯರು ಗುವಾಹತಿ ನಗರದ ನೈರುತ್ಯದಲ್ಲಿರುವ ಶಾಶ್ವತ ಸ್ವಚ್ಛ ನೀರಿನ ಸರೋವರವಾದ ಡೀಪರ್ ಬಿಲ್ ತಟದಲ್ಲಿ ವಾಸಿಸುವ ಮೀನುಗಾರಿಕಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದನ್ನು ರಾಮ್ಸರ್ ತಾಣವಾಗಿ [ಅಂತಾರಾಷ್ಟ್ರೀಯ ಪ್ರಾಮುಖ್ಯದ ಒರತೆ ಭೂಮಿ] ಮತ್ತು ವನ್ಯ ಜೀವಿ ಅಭಯಾರಣ್ಯ ಎಂದು ಗುರುತಿಸಲಾಗಿದೆ. ಇಲ್ಲಿನ 9 ಹಳ್ಳಿಗಳ ಮೀನುಗಾರಿಕಾ ಸಮುದಾಯಕ್ಕೆ ಶತಮಾನಗಳಿಂದಲೂ ಇದು ಆದಾಯ ಹಂಚಿಕೆಯ ಮೂಲವಾಗಿದೆ. ಆದರೆ ಇತ್ತೀಚೆಗೆ ಈ ಭಾಗ ಅತಿಯಾದ ಬೆಳವಣಿಗೆ ಮತ್ತು ನೀರಿನ ಮೇಲೆ ಹಯಸಿಂತ್ ಗಿಡದ ಹರಡುವಿಕೆಯಿಂದಾಗಿ ಸಮಸ್ಯೆಯಾಗಿ ಪರಿಣಮಿಸಿದೆ.

ಈ ಅವಿಷ್ಕಾರ ಮಾಡಿರುವ ಬಾಲಕಿಯರ ಕುಟುಂಬಗಳ ಬದುಕು ನೇರವಾಗಿ ಇಲ್ಲಿನ ಗದ್ದೆಯನ್ನು ಅವಲಂಬಿಸಿದೆ. ಇದು ಪರಿಸರ ಸಂರಕ್ಷಣೆ ಮತ್ತು ಡೀಪರ್ ಬಿಲ್ ಸುರಕ್ಷತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ ಮತ್ತು ಸ್ಥಳೀಯ ಜೀವನೋಪಾಯವನ್ನು ಖಚಿತಪಡಿಸುತ್ತದೆ. ಇಲ್ಲಿನ ಮೂರ್ಹೆನ್ ಯೋಗ ಮ್ಯಾಟ್ಅನ್ನು ವಿಶಿಷ್ಟ ಉತ್ಪನ್ನವಾಗಿ ಶೀಘ್ರದಲ್ಲೇ ವಿಶ‍್ವ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ನಾರ್ಥ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಷನ್ ಅಂಡ್ ರೀಚ್ [ಎನ್.ಇ.ಸಿ.ಟಿ.ಎ.ಆರ್] ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ [ಡಿ.ಎಸ್.ಟಿ] ಯ ಸ್ವಾಯತ್ತ ಸಂಸ್ಥೆಯಾಗಿದೆ. ಕನಸು ಅಂದರೆ ಸಿಮಂಗ್ಎಂಬ ಹೆಸರಿನಿಂದ ಕರೆಯುವ ಈ ಸಂಸ್ಥೆಯಲ್ಲಿ ಇಲ್ಲಿನ ಸಂಪೂರ್ಣ ಮಹಿಳಾ ಸಮುದಾಯ ಭಾಗಿಯಾಗಿದೆ. ಇದರ ನೇತೃತ್ವ ವಹಿಸಿರುವ ಆರು ಯುವತಿಯರು ವಾಟರ್ ಹಯಸಿಂತ್ ಗಿಡಗಳಿಂದ ಸಂಪತ್ತು ಸೃಷ್ಟಿಸಲು ಮುಂದಾಗಿದ್ದಾರೆ.

ವಾಟರ್ ಹಯಸಿಂತ್ ನ ಗುಣಲಕ್ಷಣಗಳ ಎಲ್ಲಾ ಅಂಶಗಳನ್ನು ಮತ್ತು ಚಾಪೆಯಂತಹ ಉತ್ಪನ್ನದ ಕ್ರಿಯಾತ್ಮಕ ಅಂಶಗಳನ್ನು ಪರಿಗಣಿಸಿ ಯೋಗ ಮಾಡಲು ತಯಾರಿಸಿರುವ ಚಾಪೆ ಅತ್ಯಂತ ಉಪಯುಕ್ತವಾಗಿದೆ. ಶೇ 100 ರಷ್ಟು ನೇಯ್ದ, ಮಣ್ಣಿನಲ್ಲಿ ಸುಲಭವಾಗಿ ಕರಗುವ ಹಾಗು ಶೇ 100 ರಷ್ಟು ಮಿಶ್ರ ಗೊಬ್ಬರ ಅಂಶಗಳುಳ್ಳ ಚಾಪೆಯನ್ನು ಅನೇಕ ಪರಿಸರ ಮತ್ತು ಸಾಮಾಜಿಕ ಪ್ರಯೋಜನಗಳನ್ನು ಒದಗಿಸುವ ಸಾಧನವಾಗಿ ಪರಿಗಣಿಸಲಾಗಿದೆ. ಪೈಬರ್ ಸಂಸ್ಕರಣೆ ಮತ್ತು ತಾಂತ್ರಿಕ ನೈಪುಣ್ಯದ ಮೂಲಕ ಅಭಿವೃದ್ಧಿಪಡಿಸಿರುವ ಈ ಚಾಪೆ ಮೂಲಕ ನೀರಿನ ಕಳೆ  ತೊಡೆದುಹಾಕುವುದಷ್ಟೇ ಅಲ್ಲ ಗದ್ದೆಯ ಆಸುಪಾಸಿನ ಪರಿಸರ ವ್ಯವಸ್ಥೆಯನ್ನು ಸುಧಾರಿಸಬಹುದಾಗಿದೆ. ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಉಪಯುಕ್ತ ಉತ್ಪನ್ನಗಳ ಸುಸ್ಥಿರ ಉತ್ಪಾದನೆಗೆ ಇದು ಸಹಾಯ ಮಾಡಲಿದೆ ಮತ್ತು ಸ್ಥಳೀಯ ಸಮುದಾಯಗಳನ್ನು ಸಂಪೂರ್ಣವಾಗಿ ಆತ್ಮ ನಿರ್ಭರ್ ಆಗಿ ಜೀವನೋಪಾಯ ಕಟ್ಟಿಕೊಳ್ಳಲು ಸಹಕರಿಸಲಿದೆ. 

ವಾಟರ್ ಹಯಸಿಂತ್ ಅನ್ನು ನೇಯ್ಗೆಗೂ ಮುನ್ನ ಸಂಗ್ರಹಿಸಿ, ಒಣಗಿಸುವ ಮತ್ತು ತಯಾರಿಕೆಗೆ ಸಜ್ಜುಗೊಳಿಸುವುದು ಅತ್ಯಂತ ಪ್ರಮುಖ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಸೋಲಾರ್ ಡ್ರೈಯರ್ ಗಳನ್ನು ಬಳಕೆ ಮಾಡುವಂತಹ ತಂತ್ರಜ್ಞಾನ ಕೂಡ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಕಳೆಗಿಡ ಒಣಗಿಸುವ ಸಮಯ ಕಡಿಮೆಯಾಗಿದ್ದುಮೂರು ದಿನಗಳಲ್ಲಿ ಒಣಗಿಸಬಹುದಾಗಿದೆ.  ಇಲ್ಲಿ ಆರು ತಿಂಗಳ ಸುದೀರ್ಘ ಅವಧಿ ಮಳೆಯಾಗುತ್ತದೆ [ಮೇ-ಅಕ್ಟೋಬರ್]. ಈ ಭಾಗದಲ್ಲಿ ಆಗಾಗ್ಗೆ ಸಂಭವಿಸುವ ಭಾರೀ ಮಳೆಯಿಂದ ಸಮಯದ ನಷ್ಟವನ್ನು ಸಹ ಸರಿದೂಗಿಸಬಹುದಾಗಿದೆ. 

ಮಹಿಳೆಯರು ವಿಭಿನ್ನವಾದ ಅಸ್ಸಾಂನ ಮಗ್ಗವನ್ನು ಬಳಸಿಕೊಂಡು ವಾಟರ್ ಹಯಸಿಂತ್ - ಅಂತರಗಂಗೆ ಕಳೆಗಿಡವನ್ನು ವಿವಿಧ ತಂತ್ರಗಳ ಸಹಾಯದಿಂದ ಉತ್ತಮ ಗುಣಮಟ್ಟದ, ಆರಾಮದಾಯಕ ಚಾಪೆ ಹೆಣೆಯುತ್ತಾರೆ. ಮಿಶ್ರಗೊಬ್ಬರದ ಅಂಶಗಳುಳ್ಳ ವಸ್ತುಗಳು ಮತ್ತು ಸಾಧನಗಳ ಮೂಲಕ ಯೋಗ ಮ್ಯಾಟ್ ನೇಯುತ್ತಾರೆ. ಇದರ ತಯಾರಿಕೆಯಲ್ಲಿ ಮೂರು ಹಳ್ಳಿಗಳ [ ಕಿಯೋತ್ಪಾರ, ನೋಟುನ್ ಬಸ್ತಿ ಮತ್ತು ಬೊರ್ಬೊರಿ] 38 ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ತಂತ್ರಜ್ಞಾನದ ಮೂಲಕ ಉತ್ಪಾದನೆ ಪ್ರಮಾಣ ಹೆಚ್ಚಿಸಬಹುದಾಗಿದೆ.

ಸ್ಥಳೀಯವಾಗಿ ಲಭ್ಯವಿರುವ, ನೈಸರ್ಗಿಕ ಸಾಮಗ್ರಿಗಳಾದ ಲೋಹರ್ ಘಾಟ್ ಅರಣ್ಯ ವಲಯ, ಕಮ್ರೂಪ್ ಜಿಲ್ಲೆಯ   ಬಣ‍್ಣ ಬಣ‍್ಣದ ನೇಯ್ಗೆ ಬಗ್ಗೆ 7ವೇವ್ಸ್” [ಸೀಮಾಂಗ್ ನ ಸಹೋದರಿಯರ ಸಾಮೂಹಿಕ ಪ್ರಯತ್ನ] ತಂಡ ನೇಯ್ಗೆಯ ಪರಿಣಿತಿ ಒದಗಿಸಿದೆ. ಚಾಪೆಯ ನೇಯ್ಗೆ ರಚನೆಗೆ ಹೊಂದಿಕೊಳ್ಳಲು ವಿವಿಧ ಉಪಕರಣಗಳನ್ನು ಬದಲಾಯಿಸಲಾಯಿತು.

ಕಾಮ್ ಸೊರೈ [ಡೀಪರ್ ಬೀಲ್ ವನ್ಯಜೀವಿ ಅಭಯಾರಣ್ಯದ ಪ್ರದೇಶ] ಹೆಸರಿನ ಮೂರ್ಹನ್ ಯೋಗ ಮ್ಯಾಟ್ಹತ್ತಿ ಕ್ಯಾನ್ವಸ್ ಬಟ್ಟೆಯ ಮೂಲಕ ಹೊರ ಬರುತ್ತದೆ. ಇಲ್ಲಿ ಯಾವುದೇ ಜಿಪ್ ಅಥವಾ ಲೋಹದ ಮುಚ್ಚುವಿಕೆ ಸಾಧನಗಳನ್ನು ಬಳಸುವುದಿಲ್ಲ. ಈ ಚೀಲ ಹೊಂದಾಣಿಕೆ ಪಟ್ಟಿಯನ್ನು ಹೊಂದಿದೆ ಮತ್ತು ಜೈವಿಕ ವಿಘಟನೆಯೊಂದಿಗೆ ಹೊಂದಿಕೊಳ್ಳುವಂತೆ ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ.  

ಮ್ಯಾಟ್ ನಿರ್ಮಾಣದಲ್ಲಿ ತೊಡಗಿರುವ ಮಹಿಳೆಯರು

ಹೆಚ್ಚಿನ ಮಾಹಿತಿಗಾಗಿ ಪ್ರೊ. [ಡಾಕ್ಟರ್] ಅರುಣ್ ಕೆ. ಸರ್ಮಾ. ಮಹಾ ನಿರ್ದೇಶಕರು, ನಾರ್ಥ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಷನ್ ಅಂಡ್ ರೀಚ್ [ಎನ್.ಇ.ಸಿ.ಟಿ,ಎ.ಆರ್] (011 26566778; 7358473508) ಗೆ ಸಂಪರ್ಕಿಸಬಹುದಾಗಿದೆ.

***



(Release ID: 1715924) Visitor Counter : 202