ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಕೋವಿಡ್-19 ಪ್ರಕರಣಗಳ ಮನೆ ಆರೈಕೆಗೆ ಸಲಹೆಗಳನ್ನು ಬಿಡುಗಡೆ ಮಾಡಿದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ

Posted On: 30 APR 2021 3:00PM by PIB Bengaluru

ಸೌಮ್ಯ ರೋಗಲಕ್ಷಣಗಳಿರುವ ಕೋವಿಡ್-19 ಪ್ರಕರಣಗಳನ್ನು ಮನೆಯಲ್ಲಿಯೇ ನಿಭಾಯಿಸಲು "ಕೋವಿಡ್-19 ನಿರ್ವಹಣೆಯಲ್ಲಿ ಮನೆ ಆರೈಕೆಗೆ ಸಲಹೆಗಳು" ಎಂಬ ಸರಳವಾದ ಚಿತ್ರರೂಪವನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ಬಿಡುಗಡೆ ಮಾಡಿದೆ.

ಯಾವುದೇ ಕೋವಿಡ್-19 ರೋಗಲಕ್ಷಣಗಳು ಕಾಣಿಸಿಕೊಂಡರೆ ಜನರು ಭಯಭೀತರಾಗಬೇಕಾಗಿಲ್ಲ. ಬಹುತೇಕ ಮಂದಿ ಸ್ವಯಂ-ಆರೈಕೆ ಕ್ರಮಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿಯೇ ತಮ್ಮ ಸೋಂಕುಗಳನ್ನು ನಿರ್ವಹಿಸಬಹುದು ಎಂದು ಸಲಹೆಗಳಲ್ಲಿ ಹೇಳಲಾಗಿದೆ. ಇದು ರೋಗದ ಸಾಮಾನ್ಯ ರೋಗಲಕ್ಷಣಗಳನ್ನು ಪಟ್ಟಿ ಮಾಡುತ್ತದೆ. ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ, ಅವರು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಮತ್ತು ಸ್ವಯಂ-ಆರೈಕೆ ಕ್ರಮಗಳನ್ನು ಅನುಸರಿಸಲು ಪ್ರಾರಂಭಿಸಬೇಕು ಎಂದು ಇದರಲ್ಲಿ ಶಿಫಾರಸು ಮಾಡಲಾಗಿದೆ. ಸೋಂಕಿನ ವಿರುದ್ಧ ಹೋರಾಡಲು ದೇಹದ ರೋಗ ನಿರೋಧಕ ಪ್ರತಿಕ್ರಿಯೆಯಲ್ಲಿ ಇವು ಹಸ್ತಕ್ಷೇಪ ಮಾಡುವುದರಿಂದ ಜನರು ಚಿಂತಿಸಬಾರದು ಅಥವಾ ಆತಂಕಕ್ಕೊಳಗಾಗಬಾರದು ಎಂದು ಸಲಹೆ ನೀಡಲಾಗಿದೆ.

ಪ್ರತ್ಯೇಕವಾಗಿರಬೇಕು, ವಿಶ್ರಾಂತಿ ಪಡೆಯಬೇಕು ಮತ್ತು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಬೇಕು. ರೋಗಿಯ ರಕ್ತದಲ್ಲಿನ ಆಮ್ಲಜನಕದ ಮಟ್ಟ ಮತ್ತು ತಾಪಮಾನವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಜ್ವರ ಮುಂದುವರಿದರೆ ಅಥವಾ ಆಮ್ಲಜನಕದ ಮಟ್ಟವು (ಎಸ್ಪಿಒ 2) ಶೇ.92 ಕ್ಕಿಂತ ಕಡಿಮೆಯಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಎಸ್ಪಿಒ 2 ಮಟ್ವು ಶೇ. 94 ಕ್ಕಿಂತ ಕಡಿಮೆಯಿದ್ದರೆ ಶ್ವಾಸಕೋಶದ ಆಮ್ಲಜನಕೀಕರಣವನ್ನು ಸುಧಾರಿಸಲು ಸಹಾಯ ಮಾಡಲು ಅನುಸರಿಸಬೇಕಾದ ಭಂಗಿಗಳನ್ನು ಇದು ವಿವರಿಸುತ್ತದೆ. ರೋಗಿಯ ಕೋಣೆಯಲ್ಲಿ ಚೆನ್ನಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಬೇಕಾದ ಪ್ರಾಮುಖ್ಯತೆಯನ್ನೂ ಮಾರ್ಗದರ್ಶಿ ವಿವರಿಸುತ್ತದೆ.

ವೈರಾಣುವಿನ ಸೋಂಕು ಹರಡುವುದನ್ನು ಕಡಿಮೆ ಮಾಡಲು ಲಸಿಕೆ ಪಡೆಯಬೇಕಾದ ಮಹತ್ವದ ಬಗ್ಗೆಯೂ ಮಾರ್ಗದರ್ಶಿ ವಿವರಿಸುತ್ತದೆ. ಲಸಿಕೆ ಪಡೆದ ನಂತರವೂ ಸಹ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತ್ಯಗತ್ಯ ಎಂಬುದನ್ನು ಇದು ತಿಳಿಸುತ್ತದೆ.

Please Click here to see PSAHomeCareTips_FINALHINDI

Please Click here to see PSAHomeCareTips_COVID-19_FINALENGLISH

***(Release ID: 1715095) Visitor Counter : 31