ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಆಮ್ಲಜನಕ ಪುಷ್ಟೀಕರಣ ಘಟಕಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಕಂಪನಿಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡಿದ  ಸಿಎಸ್ಐಆರ್-ಸಿಎಂಇಆರ್ ಐ

Posted On: 29 APR 2021 4:23PM by PIB Bengaluru

ದುರ್ಗಾಪುರದ ಸಿಎಸ್ಐಆರ್-ಸಿಎಂಇಆರ್ ತಾನು ಅಭಿವೃದ್ಧಿಪಡಿಸಿರುವ ಆಮ್ಲಜನಕ ಪುಷ್ಟೀಕರಣ ಘಟಕದ ತಂತ್ರಜ್ಞಾನವನ್ನು ಸಿಎಸ್ಐಆರ್-ಸಿಎಂಇಆರ್ ನಿರ್ದೇಶಕ ಪ್ರೊ||(ಡಾ) ಹರೀಶ್ ಹಿರಾನಿ ಅವರ ಸಮಕ್ಷಮದಲ್ಲಿ ಇಂದು ರಾಜ್ ಕೋಟ್ ಮೆಸರ್ಸ್ ಜ್ಯೋತಿ ಸಿಎನ್ ಸಿ ಆಟೋಮೇಷನ್ ಲಿಮಿಟೆಡ್ ಮತ್ತು ಗುರುಗ್ರಾಮದ ಮೆಸರ್ಸ್ ಜಿಆರ್ ಐಡಿ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳಿಗೆ ಹಸ್ತಾಂತರಿಸಲಾಯಿತು

ಸಂದರ್ಭದಲ್ಲಿ ಪ್ರೊ|| ಹಿರಾನಿ ಅವರು, ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕ ಸನ್ನಿವೇಶದಲ್ಲಿ ವಿಶೇಷವಾಗಿ ಆಮ್ಲಜನಕದ ಉತ್ತಮ ವಿತರಣಾ ಕಾರ್ಯತಂತ್ರಗಳ ಅಗತ್ಯವಿದೆ ಎಂದು ಉಲ್ಲೇಖಿಸಿದರು. ಸರಾಸರಿ ಓರ್ವ ವ್ಯಕ್ತಿಗೆ 5-20 ಎಲ್ ಪಿಎಂ ಆಕ್ಸಿಜನ್ ಅಗತ್ಯವಿದೆ. ಸಿಎಸ್ಐಆರ್-ಸಿಎಂಇಆರ್ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದಿಂದ ಆಕ್ಸಿಜನ್ ಅನ್ನು ಮನೆಯಲ್ಲೇ ಪುಷ್ಟೀಕರಣಗೊಳಿಸಿಕೊಳ್ಳಬಹುದಾಗಿದೆ ಮತ್ತು ಬಾಹ್ಯ ವ್ಯಕ್ತಿಗಳಿಂದ ಸ್ವತಂತ್ರ ನೀಡುವ ಜೊತೆಗೆ ಅಪಾಯವನ್ನು ತಗ್ಗಿಸಲಿದೆ ಮತ್ತು ದೊಡ್ಡ ಸಿಲಿಂಡರ್ ನಿರ್ವಹಣೆ ಕಷ್ಟವನ್ನು ತಪ್ಪಿಸಲಿದೆ. ಸಿಎಸ್ಐಆರ್-ಸಿಎಂಇಆರ್ , ಒಇಯು ಅಭಿವೃದ್ಧಿಪಡಿಸಿದ್ದು, ಇದು ರೋಗಿಗಳು ಅತ್ಯಂತ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯಕವಾಗಲಿದೆ.

ಸಿಎಸ್ಐಆರ್-ಸಿಎಂಇಆರ್ ಉತ್ಪಾದನೆ, ಮಾರುಕಟ್ಟೆ ಮತ್ತು ಸೇವೆಯ ಪರವಾನಗಿಯನ್ನು ನಾಲ್ಕು ಉದ್ದಿಮೆಗಳಿಗೆ ವರ್ಗಾಯಿಸಿದೆ ಎಂದು ಪ್ರೊ|| ಹಿರಾನಿ ಹೇಳಿದರು. ನಾಲ್ವರು ವ್ಯಕ್ತಿಗಳು 2021 ಮೇ ಎರಡನೇ ವಾರದ ವೇಳೆಗೆ ಉತ್ಪನ್ನವನ್ನು ಉತ್ಪಾದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುರುಗ್ರಾಮದ ಮೆಸರ್ಸ್ ಜಿಆರ್ ಐಡಿ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಗುಪ್ತಾ ಅವರು ಸಂಸ್ಥೆ ಆಮ್ಲಜನಕ ಪುಷ್ಟೀಕರಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದಕ್ಕೆ ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಅದರ ಬಳಕೆಗೆ ಅಗತ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚೀನಾ ಮತ್ತು ಅಮೆರಿಕದಿಂದ ಕೆಲವು ಅಗತ್ಯ ಕಂಪ್ರಸರ್ ಗಳ ಆಮದು ಅಡೆತಡೆಗಳಿಂದ ಹೊರಬರುವುದಾಗಿ ಅವರು ಭರವಸೆ ನೀಡಿದರು. ಆರಂಭಿಕವಾಗಿ ತಮ್ಮ ಕಂಪನಿ ಪ್ರತಿ ದಿನ 25 ರಿಂದ 50 ಯಂತ್ರಗಳನ್ನು ಉತ್ಪಾದಿಸಲಿದೆ. ಆನಂತರ ಉತ್ಪಾದನಾ ವೇಗವನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು. ಸಿಎಸ್ಐಆರ್-ಸಿಎಂಇಆರ್ ಅಹಮದಾಬಾದ್ ಮೂಲದ ಕಂಪನಿಗಳ ಮೂಲವನ್ನು ಬಳಸಿಕೊಳ್ಳುವ ಬಗ್ಗೆ ಅನ್ವೇಷಿಸುವಂತೆ ಸಲಹೆ ಮಾಡಿತು. ಮಾರುಕಟ್ಟೆಯಲ್ಲಿ ಉತ್ಪನ್ನ ವ್ಯಾಪಕವಾಗಿ ಸ್ವೀಕೃತಿಯಾಗುವಂತೆ ಮಾಡಲು ಅದರ ಸುಂದರತೆ ಮತ್ತು ಉತ್ಪನ್ನಗಳದ ಡಿಜಿಟಲ್ ಕಾರ್ಯರೂಪ ಬಳಸಿಕೊಳ್ಳಲು ತಮ್ಮ ಕಂಪನಿ ಕಾರ್ಯನಿರ್ವಹಿಸಲಿದೆ ಎಂದು ಗುಪ್ತಾ ಹೇಳಿದರು. ಇದರ ಉತ್ಪಾದನೆಯನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ಮಾತ್ರ ತಾವು ನೋಡುತ್ತಿಲ್ಲ, ಸಮಾಜಕ್ಕೆ ಸೇವೆ ಸಲ್ಲಿಸುವ ದೃಷ್ಟಿಯಿಂದ ನೋಡುತ್ತಿದ್ದೇವೆ ಎಂದು ಗುಪ್ತಾ ಹೇಳಿದರು.

ತಂತ್ರಜ್ಞಾನ ವರ್ಗಾವಣೆ ವೇಳೆ ರಾಜ್ ಕೋಟ್ ಮೆಸರ್ಸ್ ಜ್ಯೋತಿ ಸಿಎನ್ ಸಿ ಆಟೊಮೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು, ಒಂದು ವಾರದಲ್ಲಿ ತಾವು ಮಾದರಿ ಉತ್ಪನ್ನವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಭರವಸೆ ನೀಡಿದರು. ಅಲ್ಲದೆ ತಮ್ಮದೇ ಕಂಪ್ರಸರ್ ಉತ್ಪಾದನಾ ಸಾಮರ್ಥ್ಯ ಹೊಂದಿರುವುದರಿಂದ ಬೇಡಿಕೆಗೆ ತಕ್ಕಂತೆ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಸ್ತುತ ಪ್ರತಿ ದಿನ ಒಂದು ಸಾವಿರಕ್ಕೂ ಅಧಿಕ ಯಂತ್ರಗಳಿಗೆ ಬೇಡಿಕೆ ಇದೆ. ಇದು ಅತಿ ದೊಡ್ಡ ಬೇಡಿಕೆಯಾಗಿದೆ ಎಂದು ಅವರು ಹೇಳಿದರು. ಯಂತ್ರದ ರೂಪ, ಪೋರ್ಟಬಲಿಟಿ ಮತ್ತು ವೆಚ್ಚದ ಆಯಾಮಗಳನ್ನು ಪರಿಗಣಿಸಿ ಲೋಹದ ಹೊದಿಕೆ ಬದಲು ಪ್ಲಾಸ್ಟಿಕ್ ಹೊದಿಕೆ ಬಗ್ಗೆ ನಾವು ಚಿಂತನೆ ನಡೆಸಿದ್ದೇವೆ ಎಂದು ಅವರು ಹೇಳಿದರು. ಸದ್ಯದ ಸನ್ನಿವೇಶದಲ್ಲಿ ಬೇಡಿಕೆಯನ್ನು ಪೂರೈಸಲು ದಿನದ 24 ಗಂಟೆಗಳೂ ಘಟಕದ ಕಾರ್ಯನಿರ್ವಹಣೆ  ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸಲಾಗುವುದು ಎಂದು ಹೇಳಿದರು.

***



(Release ID: 1714947) Visitor Counter : 187