ರೈಲ್ವೇ ಸಚಿವಾಲಯ

ದೆಹಲಿ ತಲುಪಿದ ಮೊದಲ ಆಕ್ಸಿಜನ್‌ ಎಕ್ಸ್‌ಪ್ರೆಸ್‌


ಮಧ್ಯಪ್ರದೇಶದ ಜಬಲ್ಪುರ್ ಮತ್ತು ಭೋಪಾಲ್‌ನತ್ತ 64 ಮೆಟ್ರಿಕ್ ಟನ್ ಸಾಗಣೆ

100 ಮೆ.ಟನ್‌ಗಿಂತಲೂ ಹೆಚ್ಚು ಆಕ್ಸಿಜನ್‌ ಹೊತ್ತ ಇನ್ನೂ 2 ರೈಲುಗಳು ಸದ್ಯದಲ್ಲೇ ಲಖನೌ ತಲುಪುವ ನಿರೀಕ್ಷೆಯಿದೆ

ಈಗಾಗಲೇ ಆರು ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುಗಳ ಮೂಲಕ ಸುಮಾರು 450 ಮೆಟ್ರಿಕ್ ಟನ್ ದ್ರವ ರೂಪದ ಮೆಡಿಕಲ್ ಆಕ್ಸಿಜನ್ ಅನ್ನು ಪೂರೈಸಲಾಗಿದೆ

Posted On: 27 APR 2021 5:00PM by PIB Bengaluru

ಭಾರತೀಯ ರೈಲ್ವೆಯು ದೇಶದ ವಿವಿಧ ಭಾಗಗಳಿಗೆ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ತಲುಪಿಸುವ ನಿಟ್ಟಿನಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಿದೆ. ಇಲ್ಲಿಯವರೆಗೆ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ದೆಹಲಿಗೆ 6 ಆಕ್ಸಿಜನ್ ಎಕ್ಸ್ ಪ್ರೆಸ್ರೈಲುಗಳಲ್ಲಿ 450 ಮೆಟ್ರಿಕ್ ಟನ್ಗಳನ್ನು ತಲುಪಿಸಲಾಗಿದೆ, 10,000 ಕಿ.ಮೀ.ಗಿಂತಲೂ ಹೆಚ್ಚು (ಖಾಲಿ ಮತ್ತು ಲೋಡ್ ಮಾಡಿದ ಪರಿಸ್ಥಿತಿಗಳಲ್ಲಿ) ದೂರ ಕ್ರಮಿಸಿ, 26 ಟ್ಯಾಂಕರ್ಗಳ ಮೂಲಕ ಇದನ್ನು ಪೂರೈಸಲಾಗಿದೆ.

ಪ್ರಸ್ತುತ, ಮತ್ತೊಂದು ಆಕ್ಸಿಜನ್ ಎಕ್ಸ್ಪ್ರೆಸ್ ಬೊಕಾರೊದಿಂದ ಜಬಲ್ಪುರ್ ಮೂಲಕ ಭೋಪಾಲ್ನತ್ತ ಸಾಗುತ್ತಿದೆ. ರೈಲು ಆರು ಟ್ಯಾಂಕರ್ಗಳಲ್ಲಿ 64 ಮೆಟ್ರಿಕ್ ಟನ್ ದ್ರವ ರೂಪದ ವೈದ್ಯಕೀಯ ಆಮ್ಲಜನಕವನ್ನು ಸಾಗಿಸುತ್ತಿದೆ. ಇದು ಭೋಪಾಲ್ ಮತ್ತು ಜಬಲ್ಪುರ್ ನಗರದ ಮೂಲಕ ಮಧ್ಯಪ್ರದೇಶದಲ್ಲಿ ಆಮ್ಲಜನಕದ ಬೇಡಿಕೆಯನ್ನು ಮರುಪೂರಣ ಮಾಡುತ್ತದೆ.

ಲಖನೌದಿಂದ ಮತ್ತೊಂದು ಖಾಲಿ ರೇಕ್ ಬೊಕಾರೊ ತಲುಪಿದೆ, ಇದು ಆಮ್ಲಜನಕ ಮರುಭರ್ತಿ ಮಾಡಿದ ಟ್ಯಾಂಕರ್ಗಳನ್ನು ಹೊತ್ತು ಉತ್ತರ ಪ್ರದೇಶದ ಬೇಡಿಕೆಯನ್ನು ಈಡೇರಿಸಲಿದೆ.

ದೆಹಲಿಯ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಮಂಗಳವಾರ ಮುಂಜಾನೆ 70 ಮೆಟ್ರಿಕ್ ಟನ್ ಗಿಂತಲೂ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಿದೆ.

ಇಲ್ಲಿಯವರೆಗೆ, ಅಂದಾಜಿನ ಪ್ರಕಾರ ಭಾರತೀಯ ರೈಲ್ವೆ ಉತ್ತರ ಪ್ರದೇಶಕ್ಕೆ 202 ಮೆಟ್ರಿಕ್ ಟನ್, ಮಹಾರಾಷ್ಟ್ರಕ್ಕೆ 174 ಮೆಟ್ರಿಕ್ ಟನ್ ಮತ್ತು ದೆಹಲಿಗೆ 70 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಿದೆ. ಮುಂದಿನ 24 ಗಂಟೆಗಳಲ್ಲಿ ಮಧ್ಯಪ್ರದೇಶವು 64 ಮೆಟ್ರಿಕ್ ಟನ್ಗಳನ್ನು ಪಡೆಯಲಿದೆ.

***


(Release ID: 1714568) Visitor Counter : 218