ರೈಲ್ವೇ ಸಚಿವಾಲಯ

ಕೋವಿಡ್ ಆರೈಕೆ ಕೋಚ್ ಗಳನ್ನು ರಾಜ್ಯಗಳಿಗೆ ಒದಗಿಸಲು ಸಜ್ಜಾದ ಭಾರತೀಯ ರೈಲ್ವೆ


ಪ್ರಸ್ತುತ 3,816 ಕೋವಿಡ್ ಆರೈಕೆ ಕೋಚ್ ಗಳು ಲಭ್ಯ: ರಾಜ್ಯ ಸರ್ಕಾರದ ಬೇಡಿಕೆಗಳಿಗೆ ಅನುಗುಣವಾಗಿ ರವಾನೆ

ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಗೆ 21 ಕೋವಿಡ್ ಆರೈಕೆ ಕೋಚ್ ಗಳ ರವಾನೆ: ಕೋವಿಡ್ ಆರೈಕೆ ಕೋಚ್ ಗಳಿಗೆ ದಾಖಲಾದ 47 ರೋಗಿಗಳು

ಶಕುರ್ ಬಸ್ತಿಗೆ 50, ಆನಂದ್ ವಿಹಾರ್ ಗೆ 25, ವಾರಣಸಿಗೆ 10, ಭಡೋಹಿ 10, ಫೈಜಾಬಾದ್ ಗೆ 10 ಕೋವಿಡ್ ಆರೈಕೆ ಕೋಚ್ ಗಳನ್ನು ರವಾನಿಸಿದ ಭಾರತೀಯ ರೈಲ್ವೆ

Posted On: 24 APR 2021 7:04PM by PIB Bengaluru

ಆರೋಗ್ಯದ ಆರೈಕೆಗೆ ಭಾರತ ಸರ್ಕಾರ ಕೈಗೊಳ್ಳುತ್ತಿರುವ ಸರ್ವ ರೀತಿಯ ಪ್ರಯತ್ನಗಳಿಗೆ ಭಾರತೀಯ ರೈಲ್ವೆ ಸಹ ಪೂರಕವಾಗಿ ಸ್ಪಂದಿಸಿದೆ. ಭಾರತೀಯ ರೈಲ್ವೆ 5601 ರೈಲುಗಳ ಕೋಚ್ ಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಿದ್ದು, ಪೈಕಿ 3816 ಕೋವಿಡ್ ಆರೈಕೆ ಕೋಚ್ ಗಳು ಇದೀಗ ಬಳಕೆಗೆ ಲಭ್ಯವಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಎಂ..ಎಚ್.ಎಫ್.ಡಬ್ಲ್ಯೂ ಜಾರಿಮಾಡಿರುವ ಮಾರ್ಗ ಸೂಚಿಯಂತೆ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡಲು ನಿಯೋಜಿಸಬಹುದಾದ ಸೌಮ್ಯ ಪ್ರಕರಣಗಳಿಗೆ ಕೋವಿಡ್ ಆರೈಕೆ ಕೋಚ್ ಗಳನ್ನು ಬಳಕೆ ಮಾಡಬಹುದಾಗಿದೆ. ರಾಜ್ಯ ಸರ್ಕಾರಗಳ ಬೇಡಿಕೆಗಳಿಗೆ ಅನುಗುಣವಾಗಿ ಕೋವಿಡ್ ಆರೈಕೆ ಕೋಚ್ ಗಳನ್ನು ರವಾನಿಸಲಾಗುತ್ತಿದೆ.

2021 ಏಪ್ರಿಲ್ 24 ಮಾಹಿತಿಯಂತೆ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಗೆ ಪಶ್ಚಿಮ ರೈಲ್ವೆಯಿಂದ 21 ಕೋವಿಡ್ ಆರೈಕೆ ಕೋಚ್ ಗಳನ್ನು ರವಾನಿಸಲಾಗಿದೆ. ಕೋವಿಡ್ ಆರೈಕೆ ಕೋಚ್ ಗಳಲ್ಲಿ 47 ರೋಗಿಗಳು ದಾಖಲಾಗಿದ್ದಾರೆ.

ಮಧ್ಯ ಪ್ರದೇಶ ಸರ್ಕಾರ 20 ಕೋವಿಡ್ ಆರೈಕೆ ಕೋಚ್ ಗಳನ್ನು ಭೋಪಾಲ್ ಮತ್ತು 20 ಕೋವಿಡ್ ಆರೈಕೆ ಕೋಚ್ ಗಳನ್ನು ಪಶ್ಚಿಮ ರೈಲ್ವೆಯ ಹಬಿಬ್ ಗಂಜ್ ರೈಲು ನಿಲ್ದಾಣದಲ್ಲಿ ನಿಯೋಜಿಸುವಂತೆ ಮನವಿ ಮಾಡಿದೆ. ಕೋವಿಡ್ ಆರೈಕೆ ಕೋಚ್ ಗಳನ್ನು 2021 ಏಪ್ರಿಲ್ 25 ರಂದು ಹಸ್ತಾಂತರಿಸುತ್ತಿದ್ದು, ನಂತರ ಇವು ಬಳಕೆಗೆ ಲಭ್ಯವಾಗಲಿದೆ.

ಉತ್ತರ ರೈಲ್ವೆಯಲ್ಲಿ 50 ಕೋವಿಡ್ ಆರೈಕೆ ಕೋಚ್ ಗಳನ್ನು ಶಕುರ್ ಬಸ್ತಿ, ಆನಂದ್ ವಿಹಾರ್ ಗೆ 25 ಕೋವಿಡ್ ಕೇರ್ ಕೋಚ್ ಗಳು, 10 ವಾರಣಸಿ, 10 ಬಡೋಹಿ ಮತ್ತು 10 ಕೋಚ್ ಗಳನ್ನು ಫೈಜಾಬಾದ್ ಗೆ ರವಾನಿಸಲಾಗಿದೆ. ಶಕುರ್ ಬಸ್ತಿಯಲ್ಲಿ 3 ಮಂದಿ ರೋಗಿಗಳನ್ನು ದಾಖಲು ಮಾಡಲಾಗಿದೆ.

***


(Release ID: 1714032) Visitor Counter : 198