ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ 76 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

Posted On: 25 APR 2021 11:34AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಕೊರೊನಾ, ನಮ್ಮೆಲ್ಲರ ಧೈರ್ಯ ದುಖಃವನ್ನು ಭರಿಸುವ ಶಕ್ತಿಯನ್ನು ಪರೀಕ್ಷಿಸುತ್ತಿರುವ ಸಮಯದಲ್ಲಿ ನಿಮ್ಮೊಂದಿಗೆ ಮನದ ಮಾತನ್ನಾಡುತ್ತಿದ್ದೇನೆ. ನಮ್ಮ ಬಹಳಷ್ಟು ಪ್ರಿಯರು ಸಮಯಕ್ಕೂ ಮುನ್ನವೇ ನಮ್ಮಿಂದ ಅಗಲಿದ್ದಾರೆ. ಕೊರೊನಾದ ಮೊದಲ ಅಲೆಯ ವಿರುದ್ಧ ಯಶಸ್ವಿಯಾಗಿ ಹೋರಾಡಿ ಗೆದ್ದ ನಂತರ ದೇಶದ ವಿಶ್ವಾಸ ಹೆಚ್ಚಿತ್ತು. ಆತ್ಮ ವಿಶ್ವಾಸದಿಂದ ಕೂಡಿತ್ತು. ಆದರೆ ಬಿರುಗಾಳಿ ದೇಶವನ್ನು ತಲ್ಲಣಗೊಳಿಸಿದೆ.

ಸ್ನೇಹಿತರೆ, ಕಳೆದ ದಿನಗಳಲ್ಲಿ ಸಂಕಷ್ಟದಿಂದ ಹೊರಬರಲು ಬೇರೆ ಬೇರೆ ವಿಭಾಗದ ಪರಿಣಿತರೊಂದಿಗೆ, ತಜ್ಞರೊಂದಿಗೆ ನಾನು ಸುದೀರ್ಘ ಚರ್ಚೆ ನಡೆಸಿದ್ದೇನೆ. ನಮ್ಮ ಔಷಧೀಯ ಕ್ಷೇತ್ರದವರಾಗಲಿ, ಲಸಿಕೆ ತಯಾರಕರಾಗಲಿ, ಆಮ್ಲಜನಕ ಉತ್ಪಾದನಾ ಸಂಬಂಧಿ ಜನರಾಗಲಿ ಅಥವಾ ವೈದ್ಯಕೀಯ ಕ್ಷೇತ್ರದ ಪರಿಣಿತರಾಗಲಿ ಎಲ್ಲರೂ ಮಹತ್ವಪೂರ್ಣ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಪ್ರಸ್ತುತ ನಾವು ಹೋರಾಟದಲ್ಲಿ ಜಯಗಳಿಸಲು ತಜ್ಞರ ಮತ್ತು ವಿಜ್ಞಾನಿಗಳ ಸಲಹೆಗಳಿಗೆ ಆದ್ಯತೆ ನೀಡಬೇಕಿದೆ. ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಮುಂದುವರಿಸಲು ಭಾರತ ಸರ್ಕಾರ ಸಂಪೂರ್ಣ ಶಕ್ತಿಯೊಂದಿಗೆ ಸಿದ್ಧವಾಗಿದೆ. ರಾಜ್ಯ ಸರ್ಕಾರಗಳೂ ತಮ್ಮ ಕರ್ತವ್ಯ ನಿಭಾಯಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಿವೆ.

ಸ್ನೇಹಿತರೆ, ಸಂದರ್ಭದಲ್ಲಿ ಕೊರೊನಾ ವಿರುದ್ಧ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಬಹುದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರಿಗೆ ರೋಗದ ಬಗ್ಗೆ ಎಲ್ಲ ರೀತಿಯ ಅನುಭವಗಳಾಗಿವೆನಮ್ಮೊಂದಿಗೆ ಈಗ ಮುಂಬೈಯಿಂದ ಪ್ರಸಿದ್ಧ ವೈದ್ಯರಾದ ಶಶಾಂಕ್ ಜೋಷಿ ಸಂಪರ್ಕದಲ್ಲಿದ್ದಾರೆ.

ಡಾಕ್ಟರ್ ಶಶಾಂಕ್ ಅವರಿಗೆ ಕೊರೊನಾ ಚಿಕಿತ್ಸೆ ಮತ್ತು ಇದಕ್ಕೆ ಸಂಬಂಧಿಸಿದ ಸಂಶೋಧನೆ ಕುರಿತು ಬಹಳ ಆಳವಾದ ಅನುಭವವಿದೆ. ಅವರುಇಂಡಿಯನ್ ಕಾಲೇಜ್ ಆಫ್ ಫಿಸಿಶಿಯನ್ಸ್’  ಡೀನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬನ್ನಿ ಡಾಕ್ಟರ್ ಶಶಾಂಕ್ ಅವರೊಂದಿಗೆ ಮಾತನಾಡೋಣ

ಮೋದಿಯವರು: ಡಾಕ್ಟರ್ ಶಶಾಂಕ್ ಅವರೇ ನಮಸ್ಕಾರ

ಡಾ.ಶಶಾಂಕ್ : ನಮಸ್ಕಾರ ಸರ್

ಮೋದಿಯವರುಈಗ ಕೆಲ ದಿನಗಳ ಹಿಂದೆಯಷ್ಟೇ ನಿಮ್ಮೊಂದಿಗೆ ಮಾತನಾಡುವ ಅವಕಾಶ ಲಭಿಸಿತ್ತು. ನಿಮ್ಮ ವಿಚಾರಗಳಲ್ಲಿನ ಸ್ಪಷ್ಟತೆ ನನಗೆ ಬಹಳ ಇಷ್ಟವಾಯಿತು. ದೇಶದ ಸಮಸ್ತ ನಾಗರಿಕರು ನಿಮ್ಮ ವಿಚಾರಗಳನ್ನು ಅರಿಯಲಿ ಎಂದು ನನಗೆ ಅನ್ನಿಸಿತು. ಯಾವ ವಿಚಾರಗಳು ಕೇಳಿ ಬರುತ್ತಿವೆಯೋ ಅವನ್ನೇ ಒಂದು ಪ್ರಶ್ನೆಯ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಡಾ.ಶಶಾಂಕ್ ಅವರೇ ನೀವು ಹಗಲಿರುಳು ಜೀವನ ರಕ್ಷಣೆಯ ಕೆಲಸದಲ್ಲಿ ತೊಡಗಿದ್ದೀರಿ. ಎಲ್ಲಕ್ಕಿಂತ ಮೊದಲು 2 ನೇ ಅಲೆಯ ಬಗ್ಗೆ ನೀವು ಜನರಿಗೆ ಮಾಹಿತಿ ನೀಡಿ ಎಂದು ನಾನು ಬಯಸುತ್ತೇನೆ. ವೈದ್ಯಕೀಯವಾಗಿ ಇದು ಹೇಗೆ ಭಿನ್ನವಾಗಿದೆ ಮತ್ತು ಏನೇನು ಮುಂಜಾಗೃತೆಗಳನ್ನು ಕೈಗೊಳ್ಳಬೇಕು

ಡಾ.ಶಶಾಂಕ್ : ಧನ್ಯವಾದಗಳು ಸರ್, 2 ನೇ ಅಲೆ ಬಹಳ ತೀವ್ರವಾಗಿ ಹರಡುತ್ತಿದೆ. ಮೊದಲನೇ ಅಲೆಗಿಂತಲೂ ವೇಗವಾಗಿ ವೈರಾಣು ಹರಡುತ್ತಿದೆ, ಆದರೆ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚೇತರಿಕೆ ಇದೆ ಮತ್ತು ಮೃತ್ಯು ದರ ಬಹಳ ಕಡಿಮೆ ಇದೆ ಎಂಬುದು ಒಳ್ಳೆಯ ವಿಷಯ. ಇದರಲ್ಲಿ 2-3 ವ್ಯತ್ಯಾಸಗಳಿವೆ, ಮೊದಲನೇಯದ್ದು ಯುವಜನತೆ ಮತ್ತು ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಅದರ ಲಕ್ಷಣಗಳು ಹಿಂದಿನಂತೆಯೇ ಉಸಿರಾಟದ ತೊಂದರೆ, ಒಣ ಕೆಮ್ಮು, ಜ್ವರ, ಎಲ್ಲವೂ ಇವೆ. ಆದರೆ ಅದರೊಂದಿಗೆ ರುಚಿ ಕಳೆದುಕೊಳ್ಳುತ್ತಾರೆ ಮತ್ತು ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಜನರು ಸ್ವಲ್ಪ ಭಯಭೀತರಾಗಿದ್ದಾರೆ. ಭೀತಿಗೊಳಗಾಗುವ ಅವಶ್ಯಕತೆ ಖಂಡಿತ ಇಲ್ಲ. ಶೇ 80-90 ಜನರಲಲಿ ಯಾವ ಲಕ್ಷಣಗಳು ಕಂಡುಬರುವುದಿಲ್ಲ. ಮ್ಯುಟೇಶನ್ ಎಂದು ಹೇಳುತ್ತಾರಲ್ಲವೇ ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಮ್ಯುಟೇಶನ್ ಆಗುತ್ತಲೇ ಇರುತ್ತದೆ, ನಾವು ಬಟ್ಟೆ ಬದಲಿಸಿದಂತೆ ವೈರಾಣು ತನ್ನ ಸ್ವರೂಪವನ್ನು ಬದಲಿಸುತ್ತಲೇ ಇರುತ್ತದೆ. ಆದ್ದರಿಂದ ಹೆದರುವ ಅವಶ್ಯಕತೆಯಿಲ್ಲ. ಅಲೆಯನ್ನೂ ನಾವು ದಾಟಿ ಬರಲಿದ್ದೇವೆ. ಅಲೆಗಳು ಬರುತ್ತಲೇ ಇರುತ್ತವೆ, ವೈರಾಣು ಕೂಡಾ ಬಂದು ಹೋಗುತ್ತಿರುತ್ತದೆ. ಇವೇ ಬೇರೆ ಬೇರೆ ಲಕ್ಷಣಗಳಾಗಿವೆ. ವೈದ್ಯಕೀಯವಾಗಿ ನಾವು ಸನ್ನದ್ಧರಾಗಿರಬೇಕು. 14 ರಿಂದ 21 ದಿನಗಳ ಕೋವಿಡ್ ಇರುತ್ತದೆ. ಸಮಯದಲ್ಲಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು

ಮೋದಿಯವರು: ಡಾ.ಶಶಾಂಕ್ ಅವರೇ ನಿಮ್ಮ ವಿಶ್ಲೇಷಣೆ ನನಗೂ ಬಹಳ ಆಸಕ್ತಿಕರವಾಗಿದೆ. ನನಗೆ ಬಹಳಷ್ಟು ಪತ್ರಗಳು ಬಂದಿವೆ. ಚಿಕಿತ್ಸೆ ಕುರಿತು ಜನರಲ್ಲಿ ಬಹಳ ಸಂದೇಹಗಳಿವೆ. ಕೆಲ ಔಷಧಿಗಳ ಬೇಡಿಕೆ ಹೆಚ್ಚಿದೆ. ಆದ್ದರಿಂದ ಕೋವಿಡ್ ಚಿಕಿತ್ಸೆ ಬಗ್ಗೆಯೂ ಸಹ ಖಂಡಿತ ನೀವು ತಿಳಿಸಬೇಕೆಂದು ನಾನು ಬಯಸುತ್ತೇನೆ

ಡಾ.ಶಶಾಂಕ್ : ಹಾಂ ಸರ್, ಕ್ಲಿನಿಕಲ್ ಚಿಕಿತ್ಸೆಯನ್ನು ಜನರು ಬಹಳ ತಡವಾಗಿ ಆರಂಭಿಸುತ್ತಾರೆ. ಹಾಗಾಗಿ ರೋಗ ತಂತಾನೇ ಹೊರಟುಹೋಗುತ್ತದೆ ಎಂಬ ಭರವಸೆಯಲ್ಲಿರುತ್ತಾರೆ ಮತ್ತು ಮೊಬೈಲ್ ನಲ್ಲಿ ಹರಿದಾಡುವ ಸುದ್ದಿಗಳನ್ನು ನಂಬುತ್ತಾರೆ. ಸರ್ಕಾರ ನೀಡಿದ ಸೂಚನೆಗಳನ್ನು ಪಾಲಿಸಿದರೆ ಇಂಥ ಸಂಕಷ್ಟಗಳು ಎದುರಾಗುವುದಿಲ್ಲ. ಹಾಗಾಗಿ ಕೋವಿಡ್ ಚಿಕಿತ್ಸೆ ವಿಧಾನದಲ್ಲಿ 3 ಬಗೆಯ ಹಂತಗಳಿವೆ. ಅಲ್ಪ ಅಥವಾ ಮೈಲ್ಡ್ ಕೋವಿಡ್, ಮಧ್ಯಮ ಅಥವಾ ಮಾಡರೇಟ್ ಕೋವಿಡ್ ಅಥವಾ ತೀವ್ರತರವಾದ ಕೋವಿಡ್ ಇದನ್ನು ಸಿವಿಯರ್ ಕೋವಿಡ್ ಎನ್ನುತ್ತಾರೆ. ಅಲ್ಪ ಕೋವಿಡ್ ರೋಗಿಗಳಿಗೆ ಆಕ್ಸಿಜೆನ್ ಮಾನಿಟರಿಂಗ್ ಮಾಡುತ್ತೇವೆ. ನಾಡಿ ಮಿಡಿತ, ಜ್ವರದ ಮೇಲೆ ನಿಗಾವಹಿಸುತ್ತೇವೆ. ಜ್ವರ ಹೆಚ್ಚಾಗುವಂತಿದ್ದರೆ ಕೆಲವೊಮ್ಮೆ ಪ್ಯಾರಾಸಿಟಮಾಲ್ ಔಷಧಿ ಬಳಸುತ್ತೇವೆ. ಮಾಡರೇಟ್ ಕೋವಿಡ್ ಇದ್ದಲ್ಲಿ ಅಥವಾ ತೀವ್ರತರವಾದ ಕೋವಿಡ್ ಇದ್ದಲ್ಲಿ ತಮ್ಮ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅವಶ್ಯಕ. ಸೂಕ್ತ ಮತ್ತು ಕಡಿಮೆ ದರದ ಔಷಧಿಗಳು ಲಭ್ಯವಿವೆ. ಇಂಥದ್ದರಲ್ಲಿ ಸ್ಟೆರಾಯ್ಡ್ ಗಳು ಜೀವರಕ್ಷಣೆ ಮಾಡಬಲ್ಲವು. ಇನ್ ಹೇಲರ್ಸ್ ನೀಡುತ್ತೇವೆ, ಮಾತ್ರೆಗಳನ್ನು ನೀಡಬಹುದು, ಇದರೊಟ್ಟಿಗೆ ಆಕ್ಸಿಜೆನ್ ಕೂಡ ಕೊಡಬೇಕಾಗುತ್ತದೆ. ಇದಕ್ಕೆ ಸಣ್ಣ ಪುಟ್ಟ ಚಿಕಿತ್ಸೆಗಳಿವೆ. ಆದರೆ ಒಂದು ಹೊಸ ಪ್ರಯೋಗಾತ್ಮಕ ಔಷಧಿಯೂ ಲಭ್ಯವಿದೆ. ಅದರ ಹೆಸರು ರೆಮ್ ಡೆಸಿವಿರ್. ಇದರಿಂದ ಆಸ್ಪತ್ರೆಯಲ್ಲಿ ಉಳಿಯಬೇಕಾಗುವ ಅವಧಿ 2-3 ದಿನ ಕಡಿಮೆ ಆಗುವ ಉಪಯೋಗವಿದೆ. ಉಪಯುಕ್ತತೆ ಇದೆ. ವೈದ್ಯಕೀಯ ಚಿಕಿತ್ಸೆಯಲ್ಲಿ ಸಹಾಯಕಾರಿಯಾಗಿದೆಮೊದಲ 9-10 ದಿನಗಳೊಳಗೆ ನೀಡಿದಾಗ ಮಾತ್ರ ಔಷಧಿ ಕೆಲಸ ಮಾಡುತ್ತದೆ ಮತ್ತು ಇದನ್ನು 5 ದಿನ ಮಾತ್ರ ನೀಡಬೇಕಾಗುತ್ತದೆ. ರೆಮ್ ಡೆಸಿವಿರ್ ಹಿಂದೆ ಜನರು ಮುಗಿಬೀಳುತ್ತಿದ್ದಾರೆ. ಇದರ ಅವಶ್ಯಕತೆಯಿಲ್ಲ ಔಷಧಿ ಸ್ವಲ್ಪ ಪರಿಣಾಮಕಾರಿಯಾಗಿದೆ. ಯಾರಿಗೆ ಪ್ರಾಣವಾಯು ಆಕ್ಸಿಜೆನ್ ನೀಡಲಾಗುತ್ತದೆಯೋ, ಆಸ್ಪತ್ರೆಯಲ್ಲಿ ಯಾರು ಭರ್ತಿಯಾಗುತ್ತಾರೋ ಅವರು ವೈದ್ಯರ ಸಲಹೆ ಮೇರೆಗೆ ಇದನ್ನು ತೆಗೆದುಕೊಳ್ಳಬೇಕು. ಇದನ್ನು ಎಲ್ಲರೂ ಅರಿತುಕೊಳ್ಳುವುದು ಬಹಳ ಅವಶ್ಯಕವಾಗಿದೆ. ನಾವು ಪ್ರಾಣಾಯಾಮ ಮಾಡೋಣ. ನಮ್ಮ ದೇಹದಲ್ಲಿರುವ ಶ್ವಾಸಕೋಶಗಳನ್ನು ಸ್ವಲ್ಪ ಹಿಗ್ಗಿಸೋಣ. ಹೆಪಾರಿನ್ ಎಂದು ಕರೆಯಲ್ಪಡುವ ರಕ್ತವನ್ನು ತೆಳುವಾಗಿಸುವ ಔಷಧಿಯಂಥ ಸಣ್ಣ ಪುಟ್ಟ ಔಷಧಿಗಳನ್ನು ನೀಡುವುದರಿಂದ ಶೇ 98 ರಷ್ಟು ಜನರು ಚೇತರಿಸಿಕೊಳ್ಳುತ್ತಾರೆ. ವೈದ್ಯಕೀಯ ಚಿಕಿತ್ಸೆಯನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಅವಶ್ಯಕ. ದುಬಾರಿ ಔಷಧಿಗಳ ಹಿಂದೆ ಬೀಳುವ ಅವಶ್ಯಕತೆಯಿಲ್ಲ ಸರ್. ನಮ್ಮ ಬಳಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಪ್ರಾಣವಾಯು ಆಕ್ಸಿಜೆನ್ ಲಭ್ಯವಿದೆ, ವೆಂಟಿಲೇಟರ್ ಸೌಲಭ್ಯವಿದೆ. ಎಲ್ಲವೂ ಇದೆ ಸರ್. ಔಷಧಿ ದೊರೆತಾಗ ಅದನ್ನು ಅವಶ್ಯಕತೆಯಿದ್ದವರಿಗೆ ಮಾತ್ರ ನೀಡಬೇಕು. ಇದರ ಬಗ್ಗೆ ಬಹಳಷ್ಟು ಭ್ರಮೆ ಆವರಿಸಿದೆ. ಆದ್ದರಿಂದಲೇ ನಮ್ಮ ಬಳಿ ವಿಶ್ವದ ಅತ್ಯುತ್ತಮ ಚಿಕಿತ್ಸಾ ಸೌಲಭ್ಯವಿದೆ ಎಂದು ಸ್ಪಷ್ಟೀಕರಣೆ ನೀಡಬಯಸುತ್ತೇನೆ ಸರ್. ಭಾರತದಲ್ಲಿ ಚೇತರಿಕೆ ಪ್ರಮಾಣ ಅತ್ಯಂತ ಹೆಚ್ಚಾಗಿದೆ ಎಂಬುದನ್ನು ನೀವು ನೋಡಬಹುದು. ನೀವು ಯುರೋಪ್, ಅಮೇರಿಕಕ್ಕೆ ಹೋಲಿಸಿದಲ್ಲಿ ನಮ್ಮ ಚಿಕಿತ್ಸಾ ಶಿಷ್ಠಾಚಾರದಿಂದ ರೋಗಿಗಳು ಗುಣಮುಖರಾಗುತ್ತಿದ್ದಾರೆ.

ಮೋದಿಯವರು: ಡಾ.ಶಶಾಂಕ್ ಅವರೇ ಅನಂತ ಧನ್ಯವಾದಗಳು. ನಮಗೆ ಡಾ.ಶಶಾಂಕ್ ಅವರು ನೀಡಿದ ಮಾಹಿತಿ ಬಹಳ ಅವಶ್ಯಕವಾಗಿದೆ ಮತ್ತು ಲಾಭದಾಯಕವಾಗಿದೆ

ಸ್ನೇಹಿತರೆ, ನಿಮಗೆ ಯಾವುದೇ ಮಾಹಿತಿ ಬೇಕೆಂದಲ್ಲಿ, ಯಾವುದೇ ಅನುಮಾನಗಳಿದ್ದಲ್ಲಿ ವಿಶ್ವಾಸಾರ್ಹ ಮೂಲದಿಂದಲೇ ಮಾಹಿತಿ ಪಡೆಯಿರಿ ಎಂದು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ನಿಮ್ಮ ಕುಟುಂಬ ವೈದ್ಯರಾಗಲಿ, ಸಮೀಪದ ವೈದ್ಯರಿಂದಾಗಲಿ ಫೋನ್ ಮೂಲಕ ಸಂಪರ್ಕಿಸಿ ಸಲಹೆಗಳನ್ನು ಪಡೆಯಿರಿ. ನಮ್ಮ ವೈದ್ಯರು ಸ್ವತಃ ತಾವೇ ಜವಾಬ್ದಾರಿ ಹೊತ್ತು ಮುಂದೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದೆಷ್ಟೋ ವೈದ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮಾಹಿತಿ ಒದಗಿಸುತ್ತಿದ್ದಾರೆಫೋನ್ ಮೂಲಕ, ವಾಟ್ಸಾಪ್ ಮೂಲಕ ಸಮಾಲೋಚನೆ ನಡೆಸುತ್ತಿದ್ದಾರೆ. ಹಲವಾರು ಆಸ್ಪತ್ರೆಗಳ ವೆಬ್ ಸೈಟ್ ಗಳಿವೆ ಅಲ್ಲಿ ಮಾಹಿತಿಯೂ ಲಭ್ಯ ಮತ್ತು ವೈದ್ಯರೊಂದಿಗೆ ಸಮಾಲೋಚನೆಗೂ ಅವಕಾಶವಿದೆ. ಇದು ತುಂಬಾ ಮೆಚ್ಚುಗೆಯ ವಿಷಯವಾಗಿದೆ

ನನ್ನೊಂದಿಗೆ ಶ್ರೀನಗರದಿಂದ ಡಾಕ್ಟರ್ ನಾವೀದ್ ನಜೀರ್ ಶಾ ಸಂಪರ್ಕದಲ್ಲಿದ್ದಾರೆ. ಡಾಕ್ಟರ್ ನಾವೀದ್ ಶ್ರೀನಗರದ ಒಂದು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ನಾವೀದ್ ತಮ್ಮ ಉಸ್ತುವಾರಿಯಲ್ಲಿ ಅನೇಕ ಕೊರೋನಾ ರೋಗಿಗಳನ್ನು ಗುಣಪಡಿಸಿದ್ದಾರೆ. ರಮ್ ಜಾನ್ ಪವಿತ್ರ ಮಾಸದಲ್ಲಿ ಡಾ. ನಾವೀದ್ ತಮ್ಮ ಕಾರ್ಯವನ್ನೂ ನಿಭಾಯಿಸುತ್ತಿದ್ದಾರೆ ಹಾಗೂ ಅವರು ನಮ್ಮೊಂದಿಗೆ ಮಾತುಕತೆಗೆ ಸಮಯವನ್ನೂ ಮೀಸಲಿಟ್ಟಿದ್ದಾರೆ. ಬನ್ನಿ, ಅವರೊಂದಿಗೇ ಮಾತನಾಡೋಣ.

ಮೋದಿ: ಡಾ. ನಾವೀದ್ ಅವರೇ, ನಮಸ್ಕಾರ

ಡಾ.ನಾವೀದ್: ನಮಸ್ಕಾರ ಸರ್

ಮೋದಿ: ಡಾಕ್ಟರ್ ನಾವೀದ್, “ಮನದ ಮಾತುಕಾರ್ಯಕ್ರಮದಲ್ಲಿ ನಮ್ಮ ಶ್ರೋತೃಗಳು ಕಠಿಣ ಕಾಲದಲ್ಲಿ ಭಯ ನಿರ್ವಹಣೆಯ ಪ್ರಶ್ನೆಯನ್ನು ಎತ್ತಿದ್ದಾರೆ. ತಾವು ತಮ್ಮ ಅನುಭವದಿಂದ ಅವರಿಗೆ ಏನು ಉತ್ತರ ನೀಡುತ್ತೀರಿ?

ಡಾ.ನಾವೀದ್: ನೋಡಿ, ಕೊರೋನಾ ಆರಂಭವಾದಾಗ ನಮ್ಮ ಸಿಟಿ ಆಸ್ಪತ್ರೆಯೇ ಕಾಶ್ಮೀರದ ಮೊಟ್ಟಮೊದಲ ಕೋವಿಡ್ ಆಸ್ಪತ್ರೆಯೆಂದು ಗುರುತಿಸಲ್ಪಟ್ಟಿತು. ವೈದ್ಯಕೀಯ ಕಾಲೇಜಿನಲ್ಲಿ ಸಮಯದಲ್ಲಿ ಒಂದು ಭಯದ ವಾತಾವರಣವಿತ್ತು. ಜನರಲ್ಲಂತೂ ಕೋವಿಡ್ ಸೋಂಕು ಯಾರಿಗಾದರೂ ಬಂದರೆ ಮರಣಶಿಕ್ಷೆಯೆಂದೇ ಪರಿಗಣಿಸುವ ಭಾವನೆಯಿತ್ತು. ಇಂಥದ್ದರಲ್ಲಿ ನಮ್ಮ ಆಸ್ಪತ್ರೆಯ ವೈದ್ಯವೃಂದ ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಕೆಲಸ ಮಾಡುತ್ತಿದ್ದೆವು. ನಾವು ರೋಗಿಗಳನ್ನು ಹೇಗೆ ಎದುರಿಸಬೇಕು ಎಂದು ಅವರಲ್ಲೂ ಒಂದು ರೀತಿಯ ಆತಂಕದ ವಾತಾವರಣವಿತ್ತು. ನಮಗೆ ಸೋಂಕು ಉಂಟಾಗಬಹುದೆನ್ನುವ ಭಯ ಇರಲಿಲ್ಲ ಎಂದೇನಲ್ಲ. ಆದರೆ, ಸಮಯ ಕಳೆದಂತೆ . ಸಮರ್ಪಕವಾಗಿ ರಕ್ಷಣಾ ಸಲಕರಣೆ ಧರಿಸಿದರೆ, ನಿಯಮಗಳು, ನಿಖರವಾದ ಯೋಜನೆಯನ್ನು ಪರಿಪಾಲಿಸಿದರೆ ನಾವೂ ಸುರಕ್ಷಿತವಾಗಿ ಇರಬಹುದು. ಹಾಗೂ ಇತರ ಸಿಬ್ಬಂದಿಯೂ ಸುರಕ್ಷಿತವಾಗಿರಬಹುದು ಎಂಬುದನ್ನು ನಾವು ಮನಗಂಡೆವು. ರೋಗಿಗಳ ಕೆಲವು ಸಂಬಂಧಿಗಳು ಅನಾರೋಗ್ಯಕ್ಕೀಡಾದರು, ಅವರಿಗೆ ರೋಗದ ಯಾವ ಲಕ್ಷಣಗಳು ಇರಲಿಲ್ಲ. ಸರಿಸುಮಾರು ಶೇಕಡ 90-95ಕ್ಕೂ ಹೆಚ್ಚು ರೋಗಿಗಳು ಔಷಧಗಳಿಲ್ಲದೆಯೂ ಗುಣಮುಖರಾಗುತ್ತಿದ್ದುದನ್ನೂ ನಾವು ನೋಡಿದೆವು. ಸಮಯ ಕಳೆದಂತೆ ಜನರಲ್ಲಿ ಕೊರೋನಾ ಬಗ್ಗೆ ಇದ್ದ ಭಯ ಕಡಿಮೆಯಾಯಿತು. ಈಗ ಎರಡನೇ ಅಲೆ ನಮಗೆ ಬಂದೆರಗಿದೆ. ಸಮಯದಲ್ಲಿಯೂ ನಾವು ಭಯಪಡುವ ಅಗತ್ಯವಿಲ್ಲ. ಸಂದರ್ಭದಲ್ಲೂ ರಕ್ಷಣಾತ್ಮಕ ಮಾರ್ಗಗಳನ್ನು ಪಾಲನೆ ಮಾಡಬೇಕು. ಏನೇನು ಕೊರೋನಾ ಮಾರ್ಗಸೂಚಿಗಳಿವೆಯೋ ಅವುಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ಕೈಗಳಿಗೆ ಸ್ಯಾನಿಟೈಸರ್ ಬಳಕೆ ಮಾಡುವುದು, ಅಷ್ಟೇ ಅಲ್ಲದೆ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು, ಗುಂಪು ಸೇರುವುದನ್ನು ತಡೆಯಬೇಕು. ಇವುಗಳನ್ನು ಅನುಸರಿಸಿದರೆ ನಾವು ನಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಚೆನ್ನಾಗಿಯೇ ನಿಭಾಯಿಸಿಕೊಂಡು ಹೋಗಬಹುದು ಹಾಗೂ ಸೋಂಕಿನಿಂದ ರಕ್ಷಿಸಿಕೊಳ್ಳಲೂಬಹುದು.

ಮೋದಿ ಜಿ: ಡಾ.ನಾವೀದ್, ಲಸಿಕೆಯ ಕುರಿತಾಗಿಯೂ ಜನರಲ್ಲಿ ಹಲವಾರು ಪ್ರಶ್ನೆಗಳಿವೆ. ಲಸಿಕೆಯಿಂದ ಎಷ್ಟು ರಕ್ಷಣೆ ಸಿಗುತ್ತದೆ, ಲಸಿಕೆ ತೆಗೆದುಕೊಂಡ ಬಳಿಕ ಎಷ್ಟು ಅಸ್ವಸ್ಥರಾಗುತ್ತೇವೆ?   ಬಗ್ಗೆ ಸ್ವಲ್ಪ ಹೇಳಿ, ಇದರಿಂದ ನಮ್ಮ ಕೇಳುಗರಿಗೂ ಸಾಕಷ್ಟು ಲಾಭವಾಗುತ್ತದೆ.

ಡಾ.ನಾವೀದ್: ಯಾವಾಗ ಕೊರೋನಾ ಸೋಂಕು ನಮಗೆ ಎದುರಾಯಿತೋಅಂದಿನಿಂದ ಇಂದಿನವರೆಗೂ ನಮ್ಮಲ್ಲಿ ಕೋವಿಡ್-19 ಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲ. ಅಂದರೆ, ನಾವು ರೋಗದ ವಿರುದ್ಧ ಎರಡು ಮಾರ್ಗಗಳ ಮೂಲಕ ಮಾತ್ರ ಹೋರಾಟ ಮಾಡಬಹುದು. ಮೊದಲನೆಯದಾಗಿ, ರಕ್ಷಣಾ ವಿಧಾನಗಳನ್ನು ಪರಿಪಾಲಿಸುವುದು. ಯಾವುದೇ ಪರಿಣಾಮಕಾರಿ ಲಸಿಕೆ ನಮಗೆ ಸಿಕ್ಕರೂ ರೋಗದಿಂದ ನಮಗೆ ಮುಕ್ತಿ ದೊರೆಯುತ್ತದೆ ಎಂದು ನಾವು ಮೊದಲಿನಿಂದಲೂ ಹೇಳುತ್ತ ಬಂದಿದ್ದೇವೆ. ನಮ್ಮ ದೇಶದಲ್ಲಿ ಎರಡು ಲಸಿಕೆಗಳು ಸಮಯದಲ್ಲಿ ಲಭ್ಯ ಇವೆ. ಅವು ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್. ಇವು ನಮ್ಮಲ್ಲಿಯೇ ತಯಾರಿಸುತ್ತಿರುವ ಲಸಿಕೆಗಳು. ಇತರ ಸಂಸ್ಥೆಗಳು ಸಹ ತಮ್ಮ ಪ್ರಯೋಗಗಳನ್ನು ಮಾಡಿವೆ. ಅದರಲ್ಲಿ ಶೇ.60ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ. ನಾವು ಜಮ್ಮು ಕಾಶ್ಮೀರದ ಬಗ್ಗೆಯೇ ಹೇಳಿದರೆ, ನಮ್ಮ ಕೇಂದ್ರಾಡಳಿತ ಪ್ರದೇಶದಲ್ಲಿ ಈವರೆಗೆ 15ರಿಂದ 16 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಬಗ್ಗೆ ಸಾಕಷ್ಟು ತಪ್ಪು ತಿಳಿವಳಿಕೆ ಅಥವಾ ಮಿಥ್ಯಗಳು ಪ್ರಚಲಿತದಲ್ಲಿವೆ. ಇಂತಿಂಥ ಅಡ್ಡ ಪರಿಣಾಮಗಳು ಇವೆ ಎಂದು ಹೇಳಲಾಗುತ್ತಿದ್ದರೂ  ಇಲ್ಲಿಯವರೆಗೆ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಯಾವುದೇ ಇನ್ನಿತರ ಲಸಿಕೆ ಪಡೆದುಕೊಂಡಾಗಲೂ ಆಗುವ ಕೆಲವು ಅಡ್ಡಪರಿಣಾಮಗಳು ಮಾತ್ರ ಕಂಡುಬಂದಿವೆ. ಕೆಲವರಿಗೆ ಜ್ವರ ಬಂದಿರಬಹುದು, ಇಡೀ ದೇಹದಲ್ಲಿ ನೋವು, ಲಸಿಕೆ ಹಾಕಿಸಿಕೊಂಡ ಜಾಗದಲ್ಲಿ ನೋವು ಇವು ಸಾಮಾನ್ಯ. ಇವುಗಳನ್ನು ನಾವು ಪ್ರತಿಯೊಬ್ಬರಲ್ಲಿ ನೋಡಿದ್ದೇವೆ. ಆದರೆ, ಯಾವುದೇ ಅತಿಯಾದ ತೊಂದರೆ, ಕೆಟ್ಟ ಪರಿಣಾಮಗಳನ್ನು ನಾವು ನೋಡಿಲ್ಲ. ಜನರಲ್ಲಿ ಇನ್ನೊಂದು ಶಂಕೆಯಿದೆ. ಎರಡನೆಯದಾಗಿ ಲಸಿಕೆ ಪಡೆದುಕೊಂಡ ಬಳಿಕವೂ ಸೋಂಕು ಉಂಟಾಗುತ್ತಿದೆಯಲ್ಲ ಎನ್ನುವುದುಲಸಿಕೆ ಪಡೆದುಕೊಂಡ ಬಳಿಕವೂ ಸೋಂಕು ಉಂಟಾಗಬಹುದು ಎಂದು ಕಂಪೆನಿಗಳೇ ಸೂಚನೆ ನೀಡಿವೆ. ಅವರಲ್ಲೂ ಸೋಂಕು ದೃಢಪಡಬಹುದು. ಆದರೆ, ರೋಗದ ತೀವ್ರತೆ ಲಸಿಕೆ ಪಡೆದವರಲ್ಲಿ ಹೆಚ್ಚಾಗಿರುವುದಿಲ್ಲ. ಅಂದರೆ, ಸೋಂಕು ಬರಬಹುದು ಆದರೆ, ಜೀವಕ್ಕೆ ಎರವಾಗುವಷ್ಟರ ಮಟ್ಟಿಗೆ  ಅನಾರೋಗ್ಯ ಉಂಟಾಗುವುದಿಲ್ಲ. ಹೀಗಾಗಿ, ಲಸಿಕೆಯ ಕುರಿತು ಇಂಥ ಯಾವುದೇ ತಪ್ಪು ತಿಳಿವಳಿಕೆಗಳಿದ್ದರೆ ಅವುಗಳನ್ನು ತಲೆಯಿಂದ ತೆಗೆದುಹಾಕುವುದು ಉತ್ತಮ. ಯಾರ್ಯಾರ ಪಾಳಿ ಬಂದಿದೆಯೋ ಅವರು ಲಸಿಕೆ ಹಾಕಿಸಿಕೊಳ್ಳಬೇಕು. ಮೇ 1ರಿಂದ ಇಡೀ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮ ಆರಂಭವಾಗುತ್ತಿದೆ. ಜನರಲ್ಲಿ ನಾನು ಮನವಿ ಮಾಡುವುದೇನೆಂದರೆ, ಎಲ್ಲರೂ ಬಂದು ಲಸಿಕೆ ಹಾಕಿಸಿಕೊಳ್ಳಿ. ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಿ. ಆಗ ಒಟ್ಟಾರೆ ನಮ್ಮ ಸಮಾಜ, ಸಮುದಾಯವೂ ಕೋವಿಡ್-19 ಸೋಂಕಿನಿಂದ ರಕ್ಷಣೆ ಪಡೆಯುತ್ತದೆ.  

ಮೋದಿ ಜಿ: ಡಾ.ನಾವೀದ್ ತುಂಬು ಹೃದಯದ ಧನ್ಯವಾದಗಳು. ತಮಗೆ ರಂಜಾನ್ ಪವಿತ್ರ ಮಾಸದ ಅನೇಕಾನೇಕ ಶುಭಕಾಮನೆಗಳು.

ಡಾ.ನಾವೀದ್: ಅನೇಕಾನೇಕ ಧನ್ಯವಾದಗಳು.

ಮೋದಿ ಜಿ: ಸ್ನೇಹಿತರೆ, ಕೊರೋನಾದ ಸಂಕಟ ಕಾಲದಲ್ಲಿ ಲಸಿಕೆಯ ಪ್ರಾಮುಖ್ಯತೆ ಬಗೆಗೆ ಎಲ್ಲರಿಗೂ ತಿಳಿಯುತ್ತಿದೆ. ಹೀಗಾಗಿ, ಲಸಿಕೆಯ ಕುರಿತು ಯಾವುದೇ ರೀತಿಯ ವದಂತಿಗೆ ಕಿವಿಗೊಡಬೇಡಿ ಎನ್ನುವುದು ನನ್ನ ಒತ್ತಾಯ. ಭಾರತ ಸರ್ಕಾರದ ವತಿಯಿಂದ ಎಲ್ಲ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ಕಳುಹಿಸಲಾಗಿದೆ. ಅದರ ಲಾಭವನ್ನು 45 ವರ್ಷ ಮೇಲ್ಪಟ್ಟವರು ಪಡೆದುಕೊಳ್ಳಬಹುದೆಂದು ತಮಗೆಲ್ಲರಿಗೂ ತಿಳಿದಿದೆ. ಇನ್ನು, ಮೇ 1ರಿಂದ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೆ ಲಸಿಕೆ ಲಭ್ಯವಾಗುತ್ತದೆ. ಈಗ ದೇಶದ ಕಾರ್ಪೋರೇಟ್ ವಲಯ, ಕಂಪೆನಿಗಳು ಸಹ ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸುವ ಅಭಿಯಾನದಲ್ಲಿ ಭಾಗಿಯಾಗಲು ಸಾಧ್ಯವಿದೆ. ಪ್ರಸ್ತುತ ನಡೆಯುತ್ತಿರುವ ಭಾರತ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮ ಮುಂದೆಯೂ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲು ನಾನು ಇಚ್ಛಿಸುತ್ತೇನೆ. ಕೇಂದ್ರದಿಂದ ದೊರೆಯುತ್ತಿರುವ ಉಚಿತ ಲಸಿಕೆಯ ಲಾಭವನ್ನು ತಮ್ಮ ರಾಜ್ಯಗಳಲ್ಲಿ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದು ನಾನು ರಾಜ್ಯಗಳಿಗೆ ಒತ್ತಾಯಿಸುತ್ತೇನೆ

ಸ್ನೇಹಿತರೆ, ರೋಗವಿದ್ದಾಗ ನಮ್ಮ ಹಾಗೂ ನಮ್ಮ ಪರಿವಾರದ ಕಾಳಜಿ ವಹಿಸುವುದು ಮಾನಸಿಕವಾಗಿ ಎಷ್ಟು ಕಷ್ಟದ್ದೆಂದು ನಮಗೆ ತಿಳಿದಿದೆ. ಆದರೆ, ನಮ್ಮ ಆಸ್ಪತ್ರೆಗಳ ಶುಶ್ರೂಷಾ ಸಿಬ್ಬಂದಿ ಇದೇ ಕೆಲಸವನ್ನು ಏಕಕಾಲದಲ್ಲಿ ಅನೇಕ ಮಂದಿಗೆ ನಿರಂತರವಾಗಿ ಮಾಡಬೇಕಿರುತ್ತದೆ. ಸೇವಾ ಭಾವನೆ ನಮ್ಮ ಸಮಾಜದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಶುಶ್ರೂಷಾ ಸಿಬ್ಬಂದಿ ಮೂಲಕ ನಡೆಯುತ್ತಿರುವ ಸೇವೆ ಮತ್ತು ಪರಿಶ್ರಮದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ಓರ್ವ ಸಿಬ್ಬಂದಿಯೇ ಚೆನ್ನಾಗಿ ಹೇಳಬಲ್ಲರು. ಹೀಗಾಗಿ, ನಾನು ರಾಯ್ ಪುರದ ಡಾ.ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಭಾವನಾ ಧ್ರುವ ಅವರೊಂದಿಗೆಮನದ ಮಾತುಕಾರ್ಯಕ್ರಮಕ್ಕೆ ಆಹ್ವಾನವಿತ್ತಿದ್ದೆ. ಅವರು ಅನೇಕ ಕೊರೋನಾ ರೋಗಿಗಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ, ಬನ್ನಿ, ಅವರೊಂದಿಗೆ ಮಾತನಾಡೋಣ.

ಮೋದಿ ಜಿ: ನಮಸ್ಕಾರ ಭಾವನಾ ಜೀ.

ಭಾವನಾ: ಆದರಣೀಯ ಪ್ರಧಾನಮಂತ್ರಿಯವರೇ, ನಮಸ್ಕಾರ

ಮೋದಿ : ಭಾವನಾ ಅವರೇ

ಭಾವನಾ: ಹಾ ಸರ್

ಮೋದಿ: ತಾವು ಪರಿವಾರದಲ್ಲಿ ಎಷ್ಟೆಲ್ಲ ಜವಾಬ್ದಾರಿ ನಿಭಾಯಿಸುತ್ತೀರಿ, ಎಷ್ಟು ವಿಧವಿಧವಾದ ಕೆಲಸ ಮಾಡುತ್ತೀರಿ, ಅದರೊಂದಿಗೇ ಕೊರೋನಾ ರೋಗಿಗಳ ಜತೆಗೂ ಕೆಲಸ ಮಾಡುತ್ತೀರಿ ಎನ್ನುವುದನ್ನುಮನದ ಮಾತುಕಾರ್ಯಕ್ರಮದ ಕೇಳುಗರಿಗೆ ಹೇಳಿ. ಕೊರೋನಾ ರೋಗಿಗಳಿಗಾಗಿ ಮಾಡಿದ ಕೆಲಸದ ಅನುಭವವನ್ನು ದೇಶವಾಸಿಗಳು ಖಂಡಿತವಾಗಿ ಕೇಳಲು ಇಚ್ಛಿಸುತ್ತಾರೆ. ಏಕೆಂದರೆ, ಸಿಸ್ಟರ್ , ನರ್ಸ್ ಗಳು ರೋಗಿಗಳ ನಿಕಟ ಸಂಪರ್ಕದಲ್ಲಿರುವವರಾಗಿದ್ದಾರೆ. ಸಂಪರ್ಕ ದೀರ್ಘಕಾಲದವರೆಗೂ ಇರುತ್ತದೆ. ಅವರು ಪ್ರತಿಯೊಂದನ್ನೂ ಅತ್ಯಂತ ನಿಕಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಈಗ ಹೇಳಿ.

ಭಾವನಾ: ಹೌದು, ಸರ್. ಕೋವಿಡ್ ಸೋಂಕು ಚಿಕಿತ್ಸೆಯಲ್ಲಿ ನನ್ನ ಒಟ್ಟಾರೆ ಅನುಭವ 2 ತಿಂಗಳದ್ದು ಸರ್. ನಾವು 14 ದಿನಗಳ ಕಾಲ ಕರ್ತವ್ಯ ನಿಭಾಯಿಸುತ್ತೇವೆ, ಬಳಿಕ ನಮಗೆ 14 ದಿನಗಳ ಕಾಲ ವಿರಾಮ ನೀಡಲಾಗುತ್ತದೆ. ಪುನಃ ಎರಡು ತಿಂಗಳ ಬಳಿಕ ಕೋವಿಡ್ ಕರ್ತವ್ಯಪಾಳಿ ಪುನರಾವರ್ತನೆಯಾಗುತ್ತದೆ ಸರ್. ಯಾವಾಗ ನನ್ನನ್ನು ಮೊದಲ ಬಾರಿ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಯಿತೊ ಆಗ ಇದರ ಬಗ್ಗೆ ನನ್ನ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದೆ, ಇದು ಮೇ ತಿಂಗಳ ಮಾತು. ನಾನು ಮಾಹಿತಿ ನೀಡುತ್ತಿದ್ದಂತೆಯೇ ಎಲ್ಲರೂ ಹೆದರಿಕೊಂಡರು. ಗಾಬರಿಯಾದರು. “ಮಗಳೇ, ಜಾಗರೂಕತೆವಹಿಸಿ ಕೆಲಸ ಮಾಡುಎಂದರುಅದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು ಸರ್. ಮಧ್ಯದಲ್ಲಿ ನನ್ನ ಮಗಳು ನನ್ನನ್ನು ಕೇಳಿದಳು, “ಅಮ್ಮಾ, ನೀವು ಕೋವಿಡ್ ಕರ್ತವ್ಯಕ್ಕೆ ಹೋಗುತ್ತಿದ್ದೀರಾ?’ ಎಂದು. ಸಮಯ ನನಗೆ ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.

ಆದರೆ, ಕೋವಿಡ್ ರೋಗಿಗಳ ಬಳಿಗೆ ಹೋದಾಗ ಮನೆಯ ಜವಾಬ್ದಾರಿಯನ್ನು ಮನೆಯಲ್ಲೇ ಬಿಟ್ಟು ನಡೆದೆ. ನಾನು ಕೋವಿಡ್ ರೋಗಿಗಳೊಂದಿಗೆ ಬೆರೆತಾಗ ಅವರು ತೀವ್ರವಾಗಿ ಭಯಗೊಂಡಿದ್ದರು, ಆತಂಕಿತರಾಗಿದ್ದರು. ಕೋವಿಡ್ ಹೆಸರಿನಿಂದಲೇ ರೋಗಿಗಳು ಎಷ್ಟು ಕಂಗಾಲಾಗುತ್ತಿದ್ದರೆಂದರೆ, ತಮಗೇನು ಆಗುತ್ತಿದೆ ಎನ್ನುವುದು ಅವರಿಗೆ ತಿಳಿಯುತ್ತಿರಲಿಲ್ಲ. ಹಾಗೂ ಮುಂದೇನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ. ನಾವು ಅವರ ಭಯವನ್ನು ದೂರವಿಡಲು ಅವರೊಂದಿಗೆ ಆತ್ಮೀಯವಾಗಿ ಬೆರೆತು, ಅವರಿಗೆ ಆರೋಗ್ಯಪೂರ್ಣ ವಾತಾವರಣ ನೀಡಿದೆವು  ಸರ್. ನಮಗೆ ಯಾವಾಗ ಕೋವಿಡ್ ಕರ್ತವ್ಯ ಆರಂಭವಾಯಿತೋ ಆಗ ಎಲ್ಲಕ್ಕಿಂತ ಮೊದಲು ಪಿಪಿಇ ಕಿಟ್ ಧರಿಸಲು ಸೂಚಿಸಲಾಯಿತು. ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಬಹಳ ಕಠಿಣ. ಸರ್, ನಮಗೆ ಅದು ನಮಗೆ ಬಹಳ ಕಷ್ಟವಾಗಿತ್ತು. ನಾನು 2 ತಿಂಗಳ ಕೆಲಸದಲ್ಲಿ ಪ್ರತಿ ಸ್ಥಳದಲ್ಲೂ 14-14 ದಿನಗಳ ಕಾಲ ಕರ್ತವ್ಯ ನಿಭಾಯಿಸಿದ್ದೇನೆ. ವಾರ್ಡಲ್ಲಿ, ತೀವ್ರ ನಿಗಾ ಘಟಕದಲ್ಲಿ, ಐಸೋಲೇಷನ್ ನಲ್ಲಿ ಕೆಲಸ ಮಾಡಿದ್ದೇನೆ ಸರ್.

ಮೋದಿ: ಅಂದರೆ, ಒಟ್ಟಾರೆಯಾಗಿ, ತಾವು ಒಂದು ವರ್ಷದಿಂದ ಇದೇ ಕೆಲಸವನ್ನು ಮಾಡುತ್ತಿದ್ದೀರಿ.

ಭಾವನಾ: ಹೌದು ಸರ್, ಅಲ್ಲಿಗೆ ಹೋಗುವ ಮುನ್ನ ನನ್ನ  ಸಹೋದ್ಯೋಗಿಗಳು ಯಾರೆಂದು ತಿಳಿದಿರಲಿಲ್ಲ. ನಾವು ಒಂದು ತಂಡದ ಸದಸ್ಯರಂತೆ ಕೆಲಸ ಮಾಡಿದ್ದೇವೆ ಸರ್. ಏನೇ ಸಮಸ್ಯೆಗಳಿದ್ದರೂ ಅವರೊಂದಿಗೆ ಹಂಚಿಕೊಂಡೆವು. ನಾವು ರೋಗಿಗಳ ಭಯ ದೂರ ಮಾಡುವಲ್ಲಿ ನಿರತರಾದೆವು ಸರ್. ಕೆಲವು ಜನರು ಕೋವಿಡ್ ಹೆಸರು ಕೇಳಿದರೇ ಹೆದರುತ್ತಿದ್ದರು. ಅವರ ರೋಗ ಲಕ್ಷಣ ಪಟ್ಟಿ ಮಾಡುವಾಗಲೇ ಅವರಿಗೆ ಲಕ್ಷಣಗಳಿದ್ದವು ಎಂಬುದು ನಮಗೆ ತಿಳಿಯುತ್ತಿತ್ತು. ಆದರೆ, ಅವರು ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು, ಮಾಡಿಸಿಕೊಳ್ಳುತ್ತಿರಲಿಲ್ಲ. ನಾವು ಅವರಿಗೆ ಸಮಾಧಾನ, ತಿಳಿವಳಿಕೆ ಹೇಳುತ್ತಿದ್ದೆವು, ಮತ್ತು ಸರ್ ರೋಗದ ತೀವ್ರತೆ ಹೆಚ್ಚಾದಾಗ ಅವರ ಶ್ವಾಸಕೋಶಕ್ಕೂ ಸೋಂಕು ತಾಗಿರುತ್ತಿತ್ತು. ಆಗ ಅವರಿಗೆ ತೀವ್ರ ನಿಗಾ ಘಟಕದ ಅಗತ್ಯವುಂಟಾಗುತ್ತಿತ್ತು. ಜತೆಗೆ, ಸೋಂಕಿನಿಂದ ಅವರ ಪೂರ್ತಿ ಕುಟುಂಬ ಚಿಕಿತ್ಸೆಗಾಗಿ ಬರುತ್ತಿತ್ತು. ಇಂಥ 1-2 ಪ್ರಕರಣಗಳನ್ನು ನೋಡಿದ್ದೇವೆ ಸರ್. ಮತ್ತು ಎಲ್ಲ ವಯೋಮಾನದವರೊಂದಿಗೂ ನಾನು ಕೆಲಸ ಮಾಡಿದ್ದೇನೆ. ಅವರಲ್ಲಿ ಚಿಕ್ಕ ಮಕ್ಕಳಿದ್ದರು. ಮಹಿಳೆಯರು, ಪುರುಷರು, ಹಿರಿಯರು ಎಲ್ಲ ರೀತಿಯ ರೋಗಿಗಳೂ ಇರುತ್ತಿದ್ದರು. ಅವರಲ್ಲಿ ನಾವು ವಿಚಾರಿಸಿದಾಗ ಎಲ್ಲರೂ ಹೇಳುತ್ತಿದ್ದುದು ಒಂದೇ, ನಾವು ಭಯದಿಂದ ಮೊದಲೇ ಬರಲಿಲ್ಲ ಎಂದು. ಎಲ್ಲರಿಂದಲೂ ಇದೇ ಉತ್ತರ ದೊರೆತಿತ್ತು. ಭಯಪಡುವುದ ಏನೂ ಇಲ್ಲ, ನೀವು ನನಗೆ ಸಹಕಾರ ನೀಡಿ ನಾನು ನಿಮ್ಮ ಜತೆ ಇರುತ್ತೇನೆ, ನೀವು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ ಎಂದು ನಾನು ಅವರಿಗೆ ತಿಳಿಹೇಳಿದೆ ಸರ್. ನಾವು ಅವರಿಂದ ಇಷ್ಟನ್ನು ಮಾಡಿಸಿದೆವು ಸರ್.

ಮೋದಿ: ಭಾವನಾ ಅವರೇ, ನಿಮ್ಮೊಂದಿಗೆ ಮಾತನಾಡಿದ್ದು ನನಗೆ ಸಂತಸ ನೀಡಿದೆ. ತಾವು ಬಹಳಷ್ಟು ಉತ್ತಮ ಮಾಹಿತಿ ನೀಡಿದ್ದೀರಿ. ತಾವು ಸ್ವಂತ ಅನುಭವ ಹಂಚಿಕೊಂಡಿದ್ದೀರಿ. ಇದರಿಂದ ದೇಶವಾಸಿಗಳಿಗೆ ಒಂದು ಸಕಾರಾತ್ಮಕ ಸಂದೇಶ ಹೋಗುತ್ತದೆ. ತಮಗೆ ಅತ್ಯಂತ ಧನ್ಯವಾದಗಳು ಭಾವನಾ.

ಭಾವನಾ: ತುಂಬ ಧನ್ಯವಾದಗಳು ಸರ್. ತುಂಬ ಧನ್ಯವಾದಗಳು, ಜೈ ಹಿಂದ್ ಸರ್

ಮೋದಿ: ಜೈ ಹಿಂದ್

ಭಾವನಾ ಅವರೇ ಮತ್ತು ಶುಶ್ರೂಷೆ ಸಿಬ್ಬಂದಿ, ತಮ್ಮಂಥಹ ಸಾವಿರಾರು-ಲಕ್ಷಾಂತರ ಸಹೋದರ-ಸಹೋದರಿಯರು ಸರಿಯಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದೀರಿ. ಇದು ನಮಗೆಲ್ಲರಿಗೂ ಪ್ರೇರಣೆಯಾಗಿದೆ. ತಾವು ತಮ್ಮ ಆರೋಗ್ಯದ ಬಗೆಗೂ ಹೆಚ್ಚಿನ ಗಮನ ನೀಡಿ. ತಮ್ಮ ಕುಟುಂಬದ ಕುರಿತೂ ಕಾಳಜಿವಹಿಸಿ.

ಸ್ನೇಹಿತರೆ, ಈಗ ನಮ್ಮ ಜೊತೆಗೆ ಬೆಂಗಳೂರಿನಿಂದ ಸೋದರಿ ಸುರೇಖಾ ಸಂಪರ್ಕಕ್ಕೆ ಬರಲಿದ್ದಾರೆಸುರೇಖಾ ಅವರು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬನ್ನಿ ಅವರ ಅನುಭವಗಳನ್ನು ಕೇಳೋಣ.  

ಮೋದಿಯವರುಸುರೇಖಾ ಅವರೇ ನಮಸ್ಕಾರ

ಸುರೇಖಾ: ನಮ್ಮ ದೇಶದ ಪ್ರಧಾನಿಯವರೊಂದಿಗೆ ಮಾತನಾಡುತ್ತಿರುವುದು ನಿಜಕ್ಕೂ ಬಹಳ ಹೆಮ್ಮೆಯ ಮತ್ತು ಗೌರವದ ವಿಷಯ ಸರ್

ಮೋದಿಯವರುಸುರೇಖಾ ಅವರೇ ಎಲ್ಲ ಸುಶ್ರೂಷಕ ಸಿಬ್ಬಂದಿ ಮತ್ತು ಆಸ್ಪತ್ರೆಯ ಸಿಬ್ಬಂದಿ ಜೊತೆಗೆ ನೀವು ತುಂಬಾ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದೀರಿ. ಇಡೀ ದೇಶ ತಮಗೆ ಆಭಾರಿಯಾಗಿದೆ. ಕೋವಿಡ್19 ವಿರುದ್ಧದ ಹೋರಾಟದಲ್ಲಿ ಜನರಿಗೆ ನಿಮ್ಮ ಸಂದೇಶವೇನು

ಸುರೇಖಾ: ಹೌದು ಸರ್…. ಒಬ್ಬ ಜವಾಬ್ದಾರಿಯುತ ನಾಗರಿಕಳಾಗಿ ನಾನು ಖಂಡಿತ ಕೆಲ ವಿಷಯ ಹೇಳಬಯಸುತ್ತೇನೆ. ನಿಮ್ಮ ನೆರೆಹೊರೆಯವರೊಂದಿಗೆ ಮಾನವೀಯತೆಯಿಂದ ವರ್ತಿಸಿ ಮತ್ತು ಬೇಗ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಸೂಕ್ತ ಅನುಸರಣೆ ನಮಗೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ ನಿಮಗೆ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ದಯವಿಟ್ಟು ನೀವು ಉಳಿದವರಿಂದ ದೂರ ಉಳಿಯಿರಿ. ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಎಷ್ಟು ಬೇಗ ಸಾಧ್ಯವೋ ಚಿಕಿತ್ಸೆ ಪಡೆಯಿರಿ.

ಸಮುದಾಯಕ್ಕೆ ರೋಗದ ಬಗ್ಗೆ ಜಾಗೃತಿ ಅವಶ್ಯಕವಾಗಿದೆ. ಸಕಾರಾತ್ಮಕ ಚಿಂತನೆ ಇರಲಿ, ಆತಂಕಕ್ಕೊಳಗಾಗಬೇಡಿ ಹಾಗೂ ಒತ್ತಡಕ್ಕೊಳಗಾಗಬೇಡಿ. ಇದು ರೋಗಿಯ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಲಸಿಕೆ ದೊರಕಿರುವುದಕ್ಕೆ ಹೆಮ್ಮೆ ಪಡುತ್ತೇವೆ ಮತ್ತು ಸರ್ಕಾರಕ್ಕೆ ಕೃತಜ್ಞರಾಗಿದ್ದೇವೆ. ನಾನು ಈಗಾಗಲೇ ಲಸಿಕೆ ಪಡೆದಿದ್ದೇನೆ. ನನ್ನ ಸ್ವಂತ ಅನುಭವವನ್ನು ಜನತೆಯೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಯಾವುದೇ ಲಸಿಕೆ ತಕ್ಷಣ ಶೇ 100 ರಷ್ಟು ಸುರಕ್ಷತೆಯನ್ನು ನೀಡಲಾರದು. ರೋಗನಿರೋಧಕ ಶಕ್ತಿ ಬೆಳೆಯಲು ಸಮಯ ಬೇಕಾಗುತ್ತದೆ. ಲಸಿಕೆ ಪಡೆಯಲು ಭಯಬೇಡ. ಎಲ್ಲರೂ ಲಸಿಕೆ ಪಡೆದುಕೊಳ್ಳಿ; ಸ್ವಲ್ಪ ಅಡ್ಡಪರಿಣಾಮ ಆಗಬಹುದು  ಮನೆಯಲ್ಲೇ ಇರಿ, ಆರೋಗ್ಯವಾಗಿರಿ, ರೋಗಲಕ್ಷಣಗಳಿರುವವರಿಂದ ದೂರವಿರಿ ಮತ್ತು ಅನವಶ್ಯಕವಾಗಿ ಮೂಗು, ಕಣ್ಣುಗಳನ್ನು ಮತ್ತು ಬಾಯನ್ನು ಮುಟ್ಟಬೇಡಿ  ಎಂಬ ಸಂದೇಶವನ್ನು ನಾನು ನೀಡಬಯಸುತ್ತೇನೆ. ದಯಮಾಡಿ ವೈಯಕ್ತಿಕ ಅಂತರ ಕಾಯ್ದುಕೊಳ್ಳಿ, ಸರಿಯಾಗಿ ಮುಖಗವಸು ಧರಿಸಿ, ನಿಯಮಿತವಾಗಿ ಕೈತೊಳೆಯಿರಿ ಮತ್ತು ಮನೆಯಲ್ಲಿಯೇ ಮನೆಮದ್ದುಗಳನ್ನು ಬಳಸಬಹುದಾಗಿದೆ. ದಯಮಾಡಿ ಆಯುರ್ವೇದ ಕಷಾಯ ಕುಡಿಯಿರಿ, ಆವಿ ತೆಗೆದುಕೊಳ್ಳಿ ಮತ್ತು ಪ್ರತಿದಿನ ಪದೇ ಪದೇ ಬಾಯಿ ಮುಕ್ಕಳಿಸಿ ಜೊತೆಗೆ ಉಸಿರಾಟದ ವ್ಯಾಯಾವನ್ನೂ ಮಾಡಿರಿ. ಕೊನೆಯದಾಗಿ ಮುಂಚೂಣಿ ಕಾರ್ಯಕರ್ತರು ಮತ್ತು ವೃತ್ತಿಪರರ ಬಗ್ಗೆ ಸಹಾನುಭೂತಿ ಇರಲಿ. ನಿಮ್ಮ ಸಹಕಾರ ಮತ್ತು ಬೆಂಬಲ ನಮಗೆ ಬೇಕು. ನಾವು ಒಗ್ಗೂಡಿ ಹೋರಾಡೋಣ. ನಾವು ಖಂಡಿತ ಕೊರೊನಾವನ್ನು ಹಿಮ್ಮೆಟ್ಟಿಸಬಲ್ಲೆವು. ಇದೇ ನಾನು ಜನರಿಗೆ ನೀಡುವ ಸಂದೇಶ ಸರ್.  

ಮೋದಿಯವರುಧನ್ಯವಾದ ಸುರೇಖಾ ಅವರೇ

ಸುರೇಖಾ: ಧನ್ಯವಾದ ಸರ್

ಸುರೇಖಾ ಅವರೇ ಖಂಡಿತ ನೀವು ಸಂಕಷ್ಟದ ಸಮಯದಲ್ಲಿ ಚುಕ್ಕಾಣಿ ಹಿಡಿದಿದ್ದೀರಿ. ನಿಮ್ಮ ಬಗ್ಗೆ ಕಾಳಜಿ ಇರಲಿ. ನಿಮ್ಮ ಕುಟುಂಬದವರಿಗೂ ನನ್ನ ಅನಂತ ಶುಭಹಾರೈಕೆಗಳು. ಭಾವನಾ ಅವರು ಮತ್ತು ಸುರೇಖಾ ಅವರು ಹೇಳಿದಂತೆ ಕೊರೊನಾ ವಿರುದ್ಧ ಹೋರಾಟಕ್ಕೆ ಸಕಾರಾತ್ಮಕ ಭಾವನೆ ಬಹಳ ಅವಶ್ಯಕವಾದದ್ದು  ಮತ್ತು ದೇಶಬಾಂಧವರು ಇದನ್ನು ಕಾಪಾಡಿಕೊಳ್ಳಬೇಕು ಎಂದು ದೇಶದ ಜನತೆಗೂ ನಾನು ಆಗ್ರಹಿಸುತ್ತೇನೆ.

ಸ್ನೇಹಿತರೆ, ವೈದ್ಯರು, ಶುಶ್ರೂಷಕ ಸಿಬ್ಬಂದಿ ಜೊತೆ ಜೊತೆಗೆ ಸಮಯದಲ್ಲಿ ಆಂಬುಲೆನ್ಸ್ ಚಾಲಕರು ಮತ್ತು ಪ್ರಯೋಗಾಲಯದ ತಂತ್ರಜ್ಞರಂತಹ ಮುಂಚೂಣಿ ಕಾರ್ಯಕರ್ತರು ಇದನ್ನು ದೇವರಂತೆ ಕೆಲಸ ಮಾಡುತ್ತಿದ್ದಾರೆ. ಒಬ್ಬ ರೋಗಿಯ ಬಳಿ ಒಂದು ಆಂಬುಲೆನ್ಸ್ ತಲುಪಿದರೆ ಅವನಿಗೆ ಚಾಲಕ ದೇವದೂತನಂತೆಯೇ ಕಾಣುತ್ತಾನೆಈಎಲ್ಲ ಸೇವೆಗಳ ಬಗ್ಗೆ, ಅವರ ಅನುಭವದ ಬಗ್ಗೆ ದೇಶ ಖಂಡಿತ ತಿಳಿದುಕೊಳ್ಳಬೇಕು. ನಮ್ಮ ಜೊತೆ ಈಗ ಇಂಥ ಒಬ್ಬ ಸಜ್ಜನರಾದ ಶ್ರೀಯುತ ಪ್ರೇಮ್ ವರ್ಮಾ ಅವರಿದ್ದಾರೆ. ಅವರ ಹೆಸರಿಂದಲೇ ಅದರ ಅರಿವಾಗುತ್ತದೆ. ಅವರು ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೇಮ್ ವರ್ಮಾ ಅವರು ತಮ್ಮ ಕೆಲಸವನ್ನು ಸಂಪೂರ್ಣ ಶ್ರದ್ಧೆ ಮತ್ತು ಪ್ರೀತಿಯಿಂದ ನಿರ್ವಹಿಸುತ್ತಾರೆ, ಬನ್ನಿ ಅವರೊಂದಿಗೆ ಮಾತಾಡೋಣ  

ಮೋದಿಯವರು: ನಮಸ್ತೆ ಪ್ರೇಮ್ ಅವರೇ..

ಪ್ರೇಮ್ ವರ್ಮಾ: ನಮಸ್ತೆ ಸರ್

ಮೋದಿಯವರು: ಸೋದರ ಪ್ರೇಮ್

ಪ್ರೇಮ್ ವರ್ಮಾ: ಹೇಳಿ ಸರ್

ಮೋದಿಯವರು: ನೀವು ನಿಮ್ಮ ಕೆಲಸದ ಬಗ್ಗೆ

ಪ್ರೇಮ್ ವರ್ಮಾ: ಹಾಂ ಸರ್

ಮೋದಿಯವರು: ಸ್ವಲ್ಪ ವಿಸ್ತಾರವಾಗಿ ಹೇಳುತ್ತೀರಾ, ನಿಮ್ಮ ಅನುಭವದ ಬಗ್ಗೆಯೂ ಹೇಳಿ  ಪ್ರೇಮ್: ನಾನು CATS ಆಂಬುಲೆನ್ಸ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ನಮಗೆ ಕಂಟ್ರೋಲ್ ರೂಮಿನಿಂದ ಟ್ಯಾಬ್ ಗೆ ಕರೆ ಬರುತ್ತದೆ. 102 ರಿಂದ ಕರೆ ಬಂದ ಕೂಡಲೇ ನಾವು ರೋಗಿಯ ಬಳಿಗೆ ಹೋಗುತ್ತೇವೆ. 2 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕಿಟ್ ಧರಿಸಿ, ಕೈಗವಸು, ಮುಖಗವಸು ಧರಿಸಿ, ರೋಗಿ ಎಲ್ಲಿಗೆ, ಯಾವ ಆಸ್ಪತ್ರೆಗೆ ಡ್ರಾಪ್ ಮಾಡು ಎಂದು ಹೇಳುತ್ತಾರೋ ಅಲ್ಲಿಗೆ ಆದಷ್ಟೂ ಬೇಗ ಡ್ರಾಪ್ ಮಾಡುತ್ತೇವೆ.  

ಮೋದಿಯವರು: ನಿಮಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆಯೇ?

ಪ್ರೇಮ್: ಖಂಡಿತ ಸರ್

ಮೋದಿಯವರು: ಹಾಗಾದರೆ ಬೇರೆಯವರು ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ನಿಮ್ಮ ಅನಿಸಿಕೆಯೇನು? ಕುರಿತು ನಿಮ್ಮ ಸಂದೇಶವೇನು?  

ಪ್ರೇಮ್: ಖಂಡಿತ ಸರ್. ಎಲ್ಲರೂ ಡೋಸ್ ಗಳನ್ನುಹಾಕಿಸಿಕೊಳ್ಳಲೇಬೇಕು. ಇದು ಅವರ ಕುಟುಂಬಕ್ಕೂ ಒಳ್ಳೆಯದು. ನನ್ನ ತಾಯಿಯೇ ನನಗೆ ಉದ್ಯೋಗವನ್ನು ಬಿಟ್ಟುಬಿಡು ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾನು ಕೂಡ ಉದ್ಯೋಗ ಬಿಟ್ಟುಬಿಟ್ಟರೆ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಯಾರು ಹೋಗುತ್ತಾರೆ? ಎಂದು ಕೇಳಿದೆ. ಏಕೆಂದರೆ ಕೊರೊನಾ ಕಾಲಘಟ್ಟದಲ್ಲಿ ಎಲ್ಲರೂ ಪಲಾಯನಗೈಯ್ಯುತ್ತಿದ್ದಾರೆ. ಎಲ್ಲರೂ ಉದ್ಯೋಗ ತೊರೆಯುತ್ತಿದ್ದಾರೆ. ನಾನು ಉದ್ಯೋಗ ತೊರೆಯಲಾರೆ ಎಂದು ನನ್ನ ತಾಯಿಗೆ ಹೇಳಿದೆ.  

ಮೋದಿಯವರು: ಪ್ರೇಮ್ ಅವರೆ ತಾಯಿಯನ್ನು ದುಖಿಃತಳಾಗಿಸಬೇಡಿ. ಅವರಿಗೆ ತಿಳಿಹೇಳಿ

ಪ್ರೇಮ್: ಆಯ್ತು ಸರ್

ಮೋದಿಯವರು: ಆದರೆ ನೀವು ತಾಯಿಯ ಬಗ್ಗೆ ಹೇಳಿದಿರಲ್ಲ

ಪ್ರೇಮ್: ಹಾಂ ಸರ್

ಮೋದಿಯವರು: ಇದು ಮನಸ್ಸಿಗೆ ತಾಗುವ ವಿಷಯ

ಪ್ರೇಮ್: ಹಾಂ ಸರ್

ಮೋದಿಯವರು: ನಿಮ್ಮ ತಾಯಿಯವರಿಗೂ ನನ್ನ ನಮಸ್ಕಾರ ತಿಳಿಸಿ

ಪ್ರೇಮ್: ಖಂಡಿತ

ಮೋದಿಯವರು: ಹಾಂ

ಪ್ರೇಮ್: ಆಯ್ತು ಸರ್

ಮೋದಿಯವರು: ಪ್ರೇಮ್ ಅವರೆ ನಿಮ್ಮ ಮೂಲಕ

ಪ್ರೇಮ್: ಹಾಂ ಸರ್

ಮೋದಿಯವರು: ನಮ್ಮ ಆಂಬುಲೆನ್ಸ್ ಚಾಲಕರು

ಪ್ರೇಮ್: ಹಾಂ ಸರ್

ಮೋದಿಯವರು: ಎಷ್ಟೊಂದು ಅಪಾಯದ ಮಧ್ಯೆಯೇ ಕೆಲಸ ಮಾಡುತ್ತಿದ್ದಾರೆ

ಪ್ರೇಮ್: ಹೌದು ಸರ್

ಮೋದಿಯವರು: ಇವರೆಲ್ಲರ ತಾಯಿ ಏನು ಯೋಚಿಸುತ್ತಿರಬೇಕು?

ಪ್ರೇಮ್: ಖಂಡಿತ ಸರ್

ಮೋದಿಯವರು: ವಿಚಾರ ಶ್ರೋತೃಗಳಿಗೆ ತಲುಪಿದಾಗ

ಪ್ರೇಮ್: ಹಾಂ ಸರ್

ಮೋದಿಯವರು: ಖಂಡಿತ ಅವರ ಮನಸ್ಸಿಗೂ ಅದು ನಾಟುತ್ತದೆ.

ಪ್ರೇಮ್: ಹೌದು ಸರ್

ಮೋದಿಯವರುಪ್ರೇಮ್ ಅವರೆ ಅನಂತ ಧನ್ಯವಾದಗಳು ನೀವು ಒಂದು ರೀತಿಯಲ್ಲಿ ಪ್ರೀತಿಯ ಹೊಳೆಯನ್ನೇ ಹರಿಸುತ್ತಿದ್ದೀರಿ

ಪ್ರೇಮ್: ಧನ್ಯವಾದಗಳು ಸರ್

ಮೋದಿಯವರು : ಧನ್ಯವಾದಗಳು ಸೋದರ

ಪ್ರೇಮ್: ಧನ್ಯವಾದಗಳು

ಸ್ನೇಹಿತರೆ, ಪ್ರೇಮ್ ವರ್ಮಾ ಅವರು ಮತ್ತು ಇಂಥ ಸಾವಿರಾರು ಜನರು ಇಂದು ತಮ್ಮ ಜೀವವನ್ನು ಪಣಕ್ಕೊಡ್ಡಿ ಜನರ ಸೇವೆಗೈಯ್ಯುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಬದುಕುಳಿಯುತ್ತಿರುವ ಎಲ್ಲ ಜೀವಗಳ ರಕ್ಷಣೆಯಲ್ಲಿ ಆಂಬುಲೆನ್ಸ್ ಚಾಲಕರ ಪಾತ್ರವೂ ಹಿರಿದಾದುದು. ಪ್ರೇಮ್ ಅವರೇ ನಿಮಗೆ ಮತ್ತು ದೇಶಾದ್ಯಂತದ ನಿಮ್ಮ ಸಹೋದ್ಯೋಗಿಗಳಿಗೆ ನಾನು ಮನಃಪೂರ್ವಕ ಪ್ರೇಮ್: ಧನ್ಯವಾದಗಳು ತಿಳಿಸುತ್ತೇನೆ. ಸಕಾಲಕ್ಕೆ ತಲುಪುತ್ತಿರಿ ಜೀವಗಳನ್ನು ಉಳಿಸುತ್ತಿರಿ ಎಂದು ಹಾರೈಸುತ್ತೇನೆ

ನಮ್ಮ ಪ್ರೀತಿಯ ದೇಶವಾಸಿಗಳೇ, ಈಗ ಬಹಳಷ್ಟು ಜನರು ಕೊರೋನಾ ಸೋಂಕಿತರಾಗುತ್ತಿದ್ದಾರೆ. ಆದರೆ, ಕೊರೋನಾದಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಅದಕ್ಕಿಂತ ಹೆಚ್ಚಿದೆ ಎನ್ನುವುದು ಸತ್ಯವಾದ ವಿಚಾರ. ಗುರುಗ್ರಾಮದ ಪ್ರೀತಿ ಚತುರ್ವೇದಿ ಅವರೂ ಕೊರೋನಾವನ್ನು ಸೋಲಿಸಿದ್ದಾರೆ. ಪ್ರೀತಿ ಅವರು, “ಮನದ ಮಾತುಕಾರ್ಯಕ್ರಮದಲ್ಲಿ ನಮ್ಮ ಜೊತೆಯಾಗಿದ್ದಾರೆ. ಅವರ ಅನುಭವ ಎಲ್ಲರಿಗೂ ಪ್ರಯೋಜನ ನೀಡಬಲ್ಲದು.

ಮೋದಿ: ಪ್ರೀತಿ ಅವರೇ, ನಮಸ್ತೆ

ಪ್ರೀತಿ: ನಮಸ್ತೆ ಸರ್, ತಾವು ಹೇಗಿದ್ದೀರಿ?

ಮೋದಿ: ನಾನು ಚೆನ್ನಾಗಿದ್ದೇನೆ. ಎಲ್ಲಕ್ಕಿಂತ ಮೊದಲು ನಾನು ತಮ್ಮ ಕೋವಿಡ್ -19 ಸೋಂಕಿನ

ಪ್ರೀತಿ: ಸರ್

ಮೋದಿ: ಪರಿಣಾಮಕಾರಿ ಹೋರಾಟ ನಡೆಸುತ್ತಿರುವ ಬಗ್ಗೆ

ಪ್ರೀತಿ: ಜೀ

ಮೋದಿ: ಮೆಚ್ಚುಗೆ ಸೂಸುತ್ತೇನೆ.

ಪ್ರೀತಿ: ತುಂಬ ಧನ್ಯವಾದಗಳು ಸರ್

ಮೋದಿ: ತಮ್ಮ ಆರೋಗ್ಯ ಇನ್ನಷ್ಟು ಶೀಘ್ರವಾಗಿ ಉತ್ತಮಗೊಳ್ಳಲಿ ಎಂದು ನಾನು ಆಶಿಸುತ್ತೇನೆ.

ಪ್ರೀತಿ: ಧನ್ಯವಾದಗಳು ಸರ್

ಮೋದಿ: ಪ್ರೀತಿ ಅವರೇ

ಪ್ರೀತಿ: ಹಾ ಸರ್

ಮೋದಿ: ತಮ್ಮ ಅಲೆಯಲ್ಲಿ ತಮ್ಮದೇ ಸಂಖ್ಯೆ ಭರ್ತಿಯಾಗಿದೆ, ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಇದಕ್ಕೆ ತುತ್ತಾಗಿದ್ದಾರೆ ಎನಿಸುತ್ತದೆ.

ಪ್ರೀತಿ: ಇಲ್ಲ..ಇಲ್ಲ ಸರ್. ನನಗೊಬ್ಬಳಿಗೇ ಬಂದಿತ್ತು.

ಮೋದಿದೇವರ ಕೃಪೆ ಆಯಿತು. ಒಳ್ಳೆಯದಾಯಿತು.

ಪ್ರೀತಿ; ಹೌದು ಸರ್

ಮೋದಿ: ತಾವು ತಮ್ಮ ಸೋಂಕಿನ ಸ್ಥಿತಿ, ಅನುಭವದ ಬಗ್ಗೆ ಹೇಳಿದರೆ ಇಂಥ ಸಮಯದಲ್ಲಿ ಹೇಗೆ ತಮ್ಮನ್ನು ತಾವು ನಿಭಾಯಿಸಿಕೊಳ್ಳಬೇಕೆಂದು ನಮ್ಮ ಕೇಳುಗರಿಗೆ ಬಹುಶಃ ಮಾರ್ಗದರ್ಶನ ಸಿಗುತ್ತದೆ.

ಪ್ರೀತಿ: ಆಯಿತು ಸರ್. ನನಗೆ ಆರಂಭಿಕ ಹಂತದಲ್ಲಿ ಅತೀವ ಸುಸ್ತಾಯಿತು. ಅದಾದ ಬಳಿಕ, ಗಂಟಲಿನಲ್ಲಿ ಸ್ವಲ್ಪ ಕಿರಿಕಿರಿ ಆಗಲು ಆರಂಭವಾಯಿತು. ಆಗ ನನಗೆ ಇದು ಕೊರೋನಾ ಲಕ್ಷಣ ಎಂದೆನಿಸಿ ನಾನು ಪರೀಕ್ಷೆ ಮಾಡಿಸಿಕೊಂಡೆ. ಎರಡನೇ ದಿನ ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ನಾಣು ಸ್ವಯಂ ಕ್ವಾರಂಟೈನ್ ಮಾಡಿಕೊಂಡೆ. ಒಂದು ಕೋಣೆಯಲ್ಲಿ ಪ್ರತ್ಯೇಕವಾಗಿದ್ದು, ವೈದ್ಯರೊಂದಿಗೆ ಸಮಾಲೋಚನೆ ಮಾಡಿದೆ. ಅವರು ಸೂಚಿಸಿದ ಚಿಕಿತ್ಸೆ ಆರಂಭಿಸಿದೆ.

ಮೋದಿ: ಹಾಗಾದರೆ, ತಾವು ಶೀಘ್ರವಾಗಿ ಕಾರ್ಯತ್ಪರವಾಗಿದ್ದರಿಂದ ತಮ್ಮ ಕುಟುಂಬ ಬಚಾವಾಯಿತು.

ಪ್ರೀತಿ: ಹೌದು ಸರ್. ಕುಟುಂಬದ ಎಲ್ಲರಿಗೂ ಪರೀಕ್ಷೆ ಮಾಡಿಸಲಾಗಿತ್ತು. ಎಲ್ಲರದ್ದೂ ನೆಗೆಟಿವ್ ಬಂತು, ನಾನೊಬ್ಬಳೇ ಪಾಸಿಟಿವ್ ಆಗಿದ್ದುದು. ಅದಕ್ಕೂ ಮುನ್ನವೇ ನಾನೇ ಮುಂದಾಗಿ ಒಂದು ಕೋಣೆಯೊಳಗೆ ಪ್ರತ್ಯೇಕವಾಗಿದ್ದೆ. ನನಗೆ ಅಗತ್ಯವಾಗಿದ್ದ ಎಲ್ಲ ಸಾಮಗ್ರಿಗಳನ್ನು ಇರಿಸಿಕೊಂಡು ಸ್ವಯಂ ಬಂಧನ ವಿಧಿಸಿಕೊಂಡಿದ್ದೆ. ಅದರೊಂದಿಗೆ ನಾನು ವೈದ್ಯರೊಂದಿಗೆ ಸಮಾಲೋಚಿಸಿ ಚಿಕಿತ್ಸೆಯನ್ನೂ ಆರಂಭಿಸಿದೆ. ಸರ್. ನಾನು ಔಷಧದ ಜತೆ ಜತೆಗೇ ಯೋಗ, ಪ್ರಾಣಾಯಾಮ, ಆಯುರ್ವೇದವನ್ನೂ ಶುರು ಮಾಡಿದೆರೋಗ ನಿರೋಧಕ ಶಕ್ತಿ ಹೆಚ್ಚಲು ಕಾಡಾವನ್ನೂ ತೆಗೆದುಕೊಳ್ಳಲು ಆರಂಭಿಸಿದೆ. ಅತ್ಯಂತ ಆರೋಗ್ಯಕರ ಆಹಾರವನ್ನೇ ಸೇವನೆ ಮಾಡುತ್ತಿದ್ದೆ. ಪ್ರೊಟೀನ್ ಭರಿತವಾಗಿರುವ ಆಹಾರ ಪದ್ಧತಿ ಅನುಸರಿಸಿದೆ. ಸಾಕಷ್ಟು ದ್ರವಾಹಾರ ಸೇವನೆ ಮಾಡಿದೆ. ಬಿಸಿನೀರಿನ ಆವಿ ತೆಗೆದುಕೊಂಡೆ. ಗಂಟಲಿನ ಗಾರ್ಗಲ್ ಮಾಡಿದೆ ಮತ್ತು ಬಿಸಿನೀರನ್ನೇ ಕುಡಿಯುತ್ತಿದ್ದೆ. ಪ್ರತಿದಿನ ಎಲ್ಲ ಕ್ರಮಗಳನ್ನು ಅನುಸರಿಸಿದೆ. ಮಾನಸಿಕ ದೃಢತೆ ಹೆಚ್ಚಿಸಿಕೊಳ್ಳಲು ಯೋಗದ ಮೊರೆ ಹೋಗಿದ್ದೆ. ಉಸಿರಾಟದ ವ್ಯಾಯಾಮಗಳನ್ನು ಹೆಚ್ಚು ಹೆಚ್ಚು ಮಾಡುತ್ತಿದ್ದೆ. ಇದರಿಂದ ನನಗೆ ಆರಾಮವೆನಿಸುತ್ತಿತ್ತು.

ಮೋದಿ: ಹಾಂ, ಒಳ್ಳೆಯದು ಪ್ರೀತಿ, ತಮ್ಮ ಹಂತಹಂತದ ಪ್ರಕ್ರಿಯೆ ಮುಗಿದ ಬಳಿಕ ತಾವು ಸಂಕಟದಿಂದ ಹೊರಬಂದಿರಿ.

ಪ್ರೀತಿ: ಹೌದು ಸರ್

ಮೋದಿ: ಈಗ ತಮ್ಮ ನೆಗೆಟಿವ್ ವರದಿಯೂ ಬಂದಿದೆ

ಪ್ರೀತಿ: ಹೌದು ಸರ್

ಮೋದಿ: ಹಾಗಿದ್ದರೆ ತಾವು ತಮ್ಮ ಆರೋಗ್ಯಕ್ಕಾಗಿ ಹಾಗೂ ಅದರ ಕಾಳಜಿಗಾಗಿ ಈಗ ಏನು ಮಾಡುತ್ತಿರುವಿರಿ?

ಪ್ರೀತಿ: ಸರ್, ನಾನು ಯೋಗವನ್ನು ನಿಲ್ಲಿಸಿಯೇ ಇಲ್ಲ.

ಮೋದಿ: ಹಾಂ.

ಪ್ರೀತಿ: ಮೊದಲು ನನ್ನನ್ನು ನಾನು ಸಾಕಷ್ಟು ನಿರ್ಲಕ್ಷ್ಯ ಮಾಡುತ್ತಿದ್ದೆ. ಈಗ ಬಹಳಷ್ಟು ಗಮನ ನೀಡುತ್ತಿದ್ದೇನೆ.

ಮೋದಿ: ಧನ್ಯವಾದ ಪ್ರೀತಿ ಅವರೇ

ಪ್ರೀತಿ: ತುಂಬ ಧನ್ಯವಾದಗಳು ಸರ್

ಮೋದಿ: ತಾವು ಯಾವ ಮಾಹಿತಿ ನೀಡಿದ್ದೀರೋ ಅದು ಬಹಳಷ್ಟು ಜನರಿಗೆ ಉಪಯೋಗವಾಗುತ್ತದೆ. ತಾವು ಆರೋಗ್ಯದಿಂದಿರಿ, ತಮ್ಮ ಕುಟುಂಬದ ಜನರು ಆರೋಗ್ಯದಿಂದಿರಲಿ. ತಮಗೆ ಅತ್ಯಂತ ಶುಭಕಾಮನೆಗಳು.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ವೈದ್ಯಕೀಯ ವಲಯದ ಜನರು, ಮುಂಚೂಣಿ ಕಾರ್ಯಕರ್ತರು ಹೇಗೆ ಹಗಲುರಾತ್ರಿ ಸೇವೆಯಲ್ಲಿ ನಿರತರಾಗಿದ್ದಾರೋ ಹಾಗೆಯೇ, ಸಮಾಜದ ಇತರ ಜನರು ಸಹ ಸಮಯದಲ್ಲಿ ಹಿಂದುಳಿದಿಲ್ಲ. ದೇಶ ಮತ್ತೊಂದು ಬಾರಿ ಒಂದಾಗಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ದಿನಗಳಲ್ಲಿ ಕ್ವಾರಂಟೈನ್ ನಲ್ಲಿರುವ ಕುಟುಂಬಗಳಿಗೆ ಔಷಧ ತಲುಪುತ್ತಿರುವುದನ್ನು ನಾನು ನೋಡುತ್ತಿದ್ದೇನೆಯಾರೋ ತರಕಾರಿ, ಹಾಲು, ಹಣ್ಣುಗಳನ್ನು ಪೂರೈಸುತ್ತಿದ್ದಾರೆ. ಕೆಲವರು ಆಂಬುಲೆನ್ಸ್ ಅನ್ನು ಉಚಿತವಾಗಿ ರೋಗಿಗಳಿಗೆ ಒದಗಿಸುತ್ತಿದ್ದಾರೆ. ಸವಾಲಿನ ಸಮಯದಲ್ಲೂ ಸ್ವಯಂ ಸೇವಾ ಸಂಘಟನೆಗಳು ಮುಂದೆ ಬಂದು ದೇಶದ ಬೇರೆ ಬೇರೆ ಭಾಗಗಳಲ್ಲಿ ಇನ್ನೊಬ್ಬರಿಗೆ ಎಷ್ಟು ಸಾಧ್ಯವೋ ಅಷ್ಟು ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿವೆ. ಬಾರಿ, ಗ್ರಾಮಗಳಲ್ಲಿ ಹೊಸ ರೀತಿಯ ಜಾಗೃತಿ ಕಂಡುಬರುತ್ತಿದೆ. ಕೋವಿಡ್ ನಿಯಮಗಳನ್ನು ಶಿಸ್ತಾಗಿ ಪಾಲನೆ ಮಾಡುತ್ತಿರುವ ಜನರು ತಮ್ಮ ಗ್ರಾಮವನ್ನು ಕೊರೋನಾದಿಂದ ರಕ್ಷಿಸುತ್ತಿದ್ದಾರೆ. ಜನರು ಹೊರಗಡೆಯಿಂದ ಬರುತ್ತಿರುವ ಜನರಿಗೆ ಸರಿಯಾದ ವ್ಯವಸ್ಥೆಯನ್ನೂ ಕಲ್ಪಿಸುತ್ತಿದ್ದಾರೆ. ನಗರಗಳಲ್ಲೂ ಸಾಕಷ್ಟು ಸಂಖ್ಯೆಯ ಯುವಕರು ಮುಂದೆ ಬಂದು, ತಮ್ಮ ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚದಂತೆ ಸ್ಥಳೀಯ ನಿವಾಸಿಗಳ ಜತೆಗೂಡಿ ಪ್ರಯತ್ನಿಸುತ್ತಿದ್ದಾರೆ. ಅಂದರೆ, ಒಂದೆಡೆ ದೇಶವು ಹಗಲು-ರಾತ್ರಿ ಆಸ್ಪತ್ರೆ, ವೆಂಟಿಲೇಟರ್ ಹಾಗೂ ಔಷಧಗಳಿಗಾಗಿ ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ದೇಶವಾಸಿಗಳು ಸಹ ಮನಃಪೂರ್ವಕವಾಗಿ ಕೊರೋನಾ ಸವಾಲನ್ನು ಎದುರಿಸುತ್ತಿದ್ದಾರೆ. ಭಾವನೆ ನಮಗೆ ಎಷ್ಟು ಚೈತನ್ಯ ನೀಡುತ್ತದೆ, ವಿಶ್ವಾಸ ನೀಡುತ್ತದೆ. ಈಗ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ಸಮಾಜದ ಅತಿ ದೊಡ್ಡ ಸೇವೆಯಾಗಿದೆ. ಇದು ಸಮಾಜದ ಶಕ್ತಿಯನ್ನು ಹೆಚ್ಚಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದುಮನದ ಮಾತುಕಾರ್ಯಕ್ರಮದ ಸಂಪೂರ್ಣ ಚರ್ಚೆಯನ್ನು ನಾವು ಕೊರೋನಾ ಮಹಾಮಾರಿ ಮೇಲೆಯೇ ಮಾಡಿದ್ದೇವೆ. ಏಕೆಂದರೆ, ರೋಗವನ್ನು ನಿರ್ಮೂಲನೆ ಮಾಡುವುದು ಇಂದು ನಮ್ಮ ಪ್ರಾಥಮಿಕ ಆದ್ಯತೆಯಾಗಿದೆ. ಇಂದು ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಸಂದರ್ಭದಲ್ಲಿ ನಾನು ಎಲ್ಲ ದೇಶವಾಸಿಗಳಿಗೆ ಶುಭಾಶಯ ಕೋರುತ್ತೇನೆ. ಭಗವಾನ್ ಮಹಾವೀರರ ಸಂದೇಶ ನಮಗೆ ಸ್ಥಿರತೆ ಮತ್ತು ಆತ್ಮಸಂಯಮದ ಪ್ರೇರಣೆ ನೀಡುತ್ತದೆ. ಇದು ರಮ್ ಜಾನ್ ಪವಿತ್ರ ಮಾಸದ ಆಚರಣೆಯೂ ನಡೆಯುತ್ತಿದೆ, ಮುಂದೆ ಬುದ್ಧ ಪೂರ್ಣಿಮೆಯೂ ಇದೆ. ಗುರು ತೇಗ್ ಬಹಾದ್ದೂರ್ ಅವರ 400ನೇ ಜನ್ಮ ಶತಮಾನೋತ್ಸವದ ಪ್ರಕಾಶ ಪರ್ವವೂ ಇದೆ. ಇನ್ನೊಂದು ಮಹತ್ವಪೂರ್ಣ ದಿನ-ಪೋಚಿಶೆ ಬೋಯಿಶಾಕ್-ಅಂದರೆ, ಟ್ಯಾಗೋರ್ ಜಯಂತಿಯೂ ಇದೆ. ಇವರೆಲ್ಲರೂ ನಮಗೆ ನಮ್ಮ ಕರ್ತವ್ಯ ನಿಭಾಯಿಸಲು ಪ್ರೇರಣೆ ನೀಡುತ್ತಾರೆ. ಓರ್ವ ನಾಗರಿಕರಾಗಿ ನಾವು ನಮ್ಮ ಜೀವನದಲ್ಲಿ ಎಷ್ಟು ಕುಶಲತೆಯಿಂದ ನಮ್ಮ ಕರ್ತವ್ಯ ನಿಭಾಯಿಸುತ್ತೇವೋ ಅಷ್ಟು ಶೀಘ್ರ ನಾವು ಸಂಕಟದಿಂದ ಮುಕ್ತರಾಗಿ ಭವಿಷ್ಯದ ಪಥದಲ್ಲಿ ಮುಂದೆ ಹೆಜ್ಜೆ ಇಡಬಲ್ಲೆವು. ಆಶಯಗಳೊಂದಿಗೆ ನಾನು ತಮ್ಮೆಲ್ಲರಲ್ಲಿ ಮತ್ತೊಮ್ಮೆ ಒತ್ತಾಯಿಸುತ್ತೇನೆ, ಏನೆಂದರೆ, ಲಸಿಕೆಯನ್ನು ನಮಗೆಲ್ಲರಿಗೂ ಹಾಕಲಾಗುತ್ತದೆ. ಆದರೂ ಎಚ್ಚರಿಕೆಯಿಂದಿರಬೇಕು. ಔಷಧವೂನಿಯಮವೂ. ಮಂತ್ರವನ್ನು ಎಂದಿಗೂ ಮರೆಯಬಾರದು. ನಾವೆಲ್ಲರೂ ಸೇರಿ ಬಹುಬೇಗ ಆಪತ್ತಿನಿಂದ ಹೊರಬರುತ್ತೇವೆ. ವಿಶ್ವಾಸದೊಂದಿಗೆ, ತಮಗೆಲ್ಲರಿಗೂ ಅತ್ಯಂತ ಧನ್ಯವಾದಗಳು, ನಮಸ್ಕಾರ.

***



(Release ID: 1714026) Visitor Counter : 255