ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಮೇ 1ರ ನಂತರ ಹೊಸ ಲಸಿಕೆ ನೀಡಿಕೆ ಕಾರ್ಯತಂತ್ರ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ


ಆಸ್ಪತ್ರೆ ಮೂಲಸೌಕರ್ಯ ವೇಗವರ್ಧನೆಗೆ ಸಮಗ್ರ ಕ್ರಿಯಾಯೋಜನೆ ಸಲ್ಲಿಸಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

Posted On: 24 APR 2021 3:30PM by PIB Bengaluru

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಮತ್ತು ಕೋವಿಡ್-19 ನಿಯಂತ್ರಣ ಕುರಿತ ದತ್ತಾಂಶ ನಿರ್ವಹಣೆ ಮತ್ತು ತಂತ್ರಜ್ಞಾನದ ಉನ್ನತ ಸಮಿತಿ ಅಧ್ಯಕ್ಷ ಡಾ. ಆರ್.ಎಸ್. ಶರ್ಮಾ ಅಧ್ಯಕ್ಷತೆಯಲ್ಲಿ ಹೊಸ ಲಸಿಕೆ ನೀಡಿಕೆ ಕಾರ್ಯತಂತ್ರ(ಮೂರನೇ ಹಂತ) ಪರಿಣಾಮಕಾರಿ ಅನುಷ್ಠಾನ ಕುರಿತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶನ ನೀಡುವ ಸಭೆ ನಡೆಯಿತು. ಸಭೆಯಲ್ಲಿ ಕೋವಿಡ್ ರೋಗಿಗಳಿಗೆ ಹಾಲಿ ಇರುವ ಆಸ್ಪತ್ರೆಗಳು ಮತ್ತು ಕ್ಲಿನಿಕಲ್ ಚಿಕಿತ್ಸಾ ಮೂಲಸೌಕರ್ಯ ಬಲವರ್ಧನೆ ವೃದ್ಧಿ ಯೋಜನೆಗಳ ಕುರಿತು ಪರಾಮರ್ಶೆ ನಡೆಸಲಾಯಿತು.

ಡಾ. ಆರ್.ಎಸ್. ಶರ್ಮಾ ಅವರು ಕೊವಿನ್ ಫ್ಲಾಟ್ ಫಾರಂ ಇದೀಗ ಸ್ಥಿರವಾಗಿದೆ ಮತ್ತು ಯಾವುದೇ ಅಡೆತಡೆ ಇಲ್ಲದೆ ಅದು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಮೇ 1 ರಿಂದ ಆರಂಭವಾಗಲಿರುವ ಹೊಸ ಹಂತದ ಲಸಿಕೆ ನೀಡಿಕೆ ವೇಳೆ ಉಂಟಾಗುವ ಸಂಕೀರ್ಣ ಸಮಸ್ಯೆಗಳನ್ನು ನಿರ್ವಹಿಸಲು ಅದು ಸಜ್ಜಾಗಿದೆ ಎಂದು ಹೇಳಿದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಕಾಲದಲ್ಲಿ ನಿಖರ ದತ್ತಾಂಶವನ್ನು ಅಪ್ ಲೋಡ್ ಮಾಡಲು ಪ್ರಾಮುಖ್ಯ ನೀಡಬೇಕು ಎಂದು ಪ್ರಮುಖವಾಗಿ ಪ್ರತಿಪಾದಿಸಿದ ಅವರು ತಪ್ಪು ಮಾಹಿತಿಯನ್ನು ಸಲ್ಲಿಸಿದರೆ ಇಡೀ ವ್ಯವಸ್ಥೆಯ ಸಮಗ್ರತೆಗೆ ಧಕ್ಕೆಯಾಗಲಿದೆ  ಎಂದು ಹೇಳಿದರು.

2021ರ ಮೇ 1 ರಿಂದ ಆರಂಭವಾಗಲಿರುವ ಮೂರನೇ ಹಂತದ ಲಸಿಕೆ ನೀಡಿಕೆ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಈ ಕೆಳಗಿನ ನಿರ್ದಿಷ್ಟ ಸಲಹೆಗಳನ್ನು ನೀಡಲಾಯಿತು. ಅವುಗಳೆಂದರೆ:

· ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಉದ್ದಿಮೆಗಳ ಆಸ್ಪತ್ರೆಗಳು, ಕೈಗಾರಿಕಾ ಒಕ್ಕೂಟಗಳು ಇತ್ಯಾದಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಸಮರೋಪಾದಿಯಲ್ಲಿ ಹೆಚ್ಚುವರಿ ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳನ್ನು(ಸಿವಿಸಿ) ನೋಂದಣಿ ಮಾಡಬೇಕು. ಆ ಕುರಿತು ಸಕ್ಷಮ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಬೇಕು. ಅರ್ಜಿಗಳನ್ನು/ಮನವಿಗಳನ್ನು ಸಲ್ಲಿಸುವ ಪ್ರಕ್ರಿಯೆ ಕಾರ್ಯತಂತ್ರ ಅನುಸರಿಸಬೇಕು ಮತ್ತು ನೋಂದಣಿ ಬಾಕಿ ಇರುವ ಕುರಿತು ನಿಗಾವಹಿಸಬೇಕು.

     ಎಷ್ಟು ಆಸ್ಪತ್ರೆಗಳು ಲಸಿಕೆಗಳನ್ನು ಖರೀದಿಸಿವೆ ಮತ್ತು ದಾಸ್ತಾನನ್ನು ಹಾಗೂ ಕೋವಿನ್ ನಲ್ಲಿ ಬೆಲೆಗಳನ್ನು ಘೋಷಿಸಿವೆ ಎಂಬುದರ ಕುರಿತು ನಿಗಾವಹಿಸಬೇಕು.

·  ಕೋವಿನ್ ನಲ್ಲಿ ಅರ್ಹ ಜನಸಂಖ್ಯೆಗೆ ಲಸಿಕೆ ನೀಡುವ ಸಮಯದ ಸೂಕ್ತ ಲಭ್ಯತೆ ಕುರಿತು ವೇಳಾಪಟ್ಟಿಗಳನ್ನು ಪ್ರಕಟಿಸಬೇಕು.

·  ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನೇರವಾಗಿ ಲಸಿಕೆಯನ್ನು ಖರೀದಿಸುವ ಕುರಿತು ಆದ್ಯತೆ ಮೇಲೆ ನಿರ್ಧಾರವನ್ನು ಕೈಗೊಳ್ಳಬೇಕು.

· 18 ರಿಂದ 45 ವರ್ಷದೊಳಗಿನ ವಯೋಮಾನದವರಿಗೆ ಲಸಿಕೆ ಪಡೆಯಲು ಕೇವಲ ‘ಆನ್ ಲೈನ್ ಮೂಲಕ ಮಾತ್ರ ನೋಂದಣಿ’ ಸೌಕರ್ಯದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು.

    ಕೋವಿಡ್ ಲಸಿಕಾ ಕೇಂದ್ರಗಳ ಸಿಬ್ಬಂದಿಗೆ ಲಸಿಕೆ, ಎಇಎಫ್ಐ ವರದಿ ಮತ್ತು ನಿರ್ವಹಣೆ, ಕೋವಿನ್ ತರಬೇತಿ ವೇಳಾಪಟ್ಟಿ ಬಳಕೆ ಮತ್ತು ಲಸಿಕೆ ದಾಸ್ತಾನಿನ ವಿವರಗಳನ್ನು ಒದಗಿಸುವ ಕುರಿತು ತರಬೇತಿ ನೀಡುವುದು ಮತ್ತು ಈಗಾಗಲೇ ಲಸಿಕೆ ದಾಸ್ತಾನಿನ ಹೊಂದಾಣಿಕೆ ಕುರಿತು ಖಾಸಗಿಯವರಿಗೆ ಮಾಹಿತಿ ನೀಡಲಾಗಿದೆ.

· ಸಿವಿಸಿಗಳಲ್ಲಿ ಪರಿಣಾಮಕಾರಿಯಾಗಿ ಜನದಟ್ಟಣೆ ನಿರ್ವಹಣೆಗೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು.

ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ರೋಗಿಗಳ ಪರಿಣಾಮಕಾರಿ ಕ್ಲಿನಿಕಲ್ ಚಿಕಿತ್ಸೆಗೆ ಮೂಲಸೌಕರ್ಯ ವೃದ್ಧಿ ಕುರಿತಂತೆ ರಾಜ್ಯಗಳು ಹಾಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವುದು, ಪ್ರತಿ ದಿನದ ಸೋಂಕಿತರ ಸಾವು ಮತ್ತು ಯಾರಿಗೆ ಆಸ್ಪತ್ರೆ ಅಗತ್ಯವಿದೆ ಎಂಬ ಕುರಿತು ತಮ್ಮ ಕೋವಿಡ್ ಮೂಲಸೌಕರ್ಯವನ್ನು ಪರಿಶೀಲನೆ ನಡೆಸಬೇಕು.

ಸಾಮರ್ಥ್ಯವೃದ್ಧಿ ಕುರಿತಂತೆ ಸಮಗ್ರ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು ಕುರಿತು ರಾಜ್ಯಗಳಿಗೆ ಈ ಸೂಚನೆಗಳನ್ನು ನೀಡಲಾಯಿತು:

· ಹೆಚ್ಚುವರಿ ನಿರ್ದಿಷ್ಟ ಕೋವಿಡ್-19 ಆಸ್ಪತ್ರೆಗಳನ್ನು ಗುರುತಿಸುವುದು, ಡಿಆರ್ ಡಿಒ, ಸಿಎಸ್ ಐಆರ್ ಅಥವಾ ಇತರೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳ ಮೂಲಕ ಫೀಲ್ಡ್  ಆಸ್ಪತ್ರೆ ಸೌಕರ್ಯಗಳನ್ನು ಸಿದ್ಧಪಡಿಸುವುದು.

· ಆಕ್ಸಿಜನ್ ಸೌಕರ್ಯದ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ಆಕ್ಸಿಜನ್ ಪೂರೈಕೆ ಲಭ್ಯತೆಯನ್ನು ಖಾತ್ರಿಪಡಿಸುವುದು. ಹಾಸಿಗೆಗಳ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರೀಕೃತ ಕಾಲ್ ಸೆಂಟರ್ ಆಧಾರಿತ ಸೇವಾ ವ್ಯವಸ್ಥೆ ಒದಗಿಸುವುದು.

· ವೈದ್ಯರು ಹಾಗೂ ನರ್ಸ್ ಗಳಿಂದ ಮಾರ್ಗದರ್ಶನ ಮತ್ತು ಸೂಕ್ತ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ರೋಗಿಗಳ ನಿರ್ವಹಣೆ ಮತ್ತು ಆಂಬುಲೆನ್ಸ್ ಸೇವೆಗಳ ಬಲವರ್ಧನೆಗೆ ನಿಯೋಜಿಸುವುದು.

· ಮೌಲಸೌಕರ್ಯ ಕೊರತೆ ಇರುವಂತಹ ಜಿಲ್ಲೆಗಳಲ್ಲಿ ಹೆಚ್ಚುವರಿ ಆಂಬುಲೆನ್ಸ್ ಗಳನ್ನು ನಿಯೋಜಿಸುವ ಮೂಲಕ ಸೂಕ್ತ ರೆಫರೆಲ್ ಲಿಂಕೇಜ್ ಗಳನ್ನು ಸ್ಥಾಪಿಸುವುದು.

· ಹಾಸಿಗೆಗಳ ಹಂಚಿಕೆಗೆ ಸಮಗ್ರ ಕಾಲ್ ಸೆಂಟರ್ ಆಧಾರಿತ ಸೇವಾ ವ್ಯವಸ್ಥೆ ಸ್ಥಾಪಿಸುವುದು.

ರಾಜ್ಯಗಳಿಗೆ ಈ ಸಲಹೆಗಳನ್ನು ನೀಡಲಾಯಿತು:

·  ಲಭ್ಯವಿರುವ ಹಾಸಿಗೆಗಳ ರಿಯಲ್ ಟೈಮ್ ದತ್ತಾಂಶ ನಿರ್ವಹಣೆ ಮಾಡಬೇಕು ಮತ್ತು ಸಾಮಾನ್ಯ ಜನರಿಗೆ ಸುಲಭವಾಗಿ ಅವು ಲಭ್ಯವಾಗುವಂತೆ ಮಾಡಬೇಕು.

·  ಕೋವಿಡ್-19 ಆರೈಕೆಗೆ ಸಂಬಂಧಿಸಿದಂತೆ ಖಾಸಗಿ ಆರೋಗ್ಯ ಸೌಕರ್ಯಗಳನ್ನು ಪಡೆದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು.

·  ಸೋಂಕಿಲ್ಲದ ಮತ್ತು ಅಲ್ಪ ಸೋಂಕಿನ ರೋಗಿಗಳಿಗೆ ಐಸೋಲೇಷನ್ ಗೆ ನಿಗದಿತ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸೇವೆ ವಿಸ್ತರಣೆ ಮಾಡಬೇಕು, ಅದರಿಂದಾಗಿ ಯಾರು ಮನೆಗಳಲ್ಲಿ ಐಸೋಲೇಟ್ ಆಗುವುದಿಲ್ಲವೋ ಮತ್ತು ಸಾಂಸ್ಥಿಕ ಐಸೋಲೇಷನ್ ಬಯಸುತ್ತಾರೋ ಅಂತವರಿಗೆ ಅಗತ್ಯ ಸ್ಥಳಾವಕಾಶ ಮತ್ತು ಆರೈಕೆ ಲಭ್ಯವಾಗುವಂತೆ ಮಾಡಬೇಕು.

·  ಮನೆಗಳಲ್ಲಿ ಐಸೋಲೇಟ್ ಆಗಿರುವ ರೋಗಿಗಳಿಗೆ ಟೆಲಿ ಮೆಡಿಸನ್ ಸೌಕರ್ಯವನ್ನು ಒದಗಿಸಬೇಕು.

·  ತರಬೇತಿ ಪಡೆದ ವೈದ್ಯರ ಮಾರ್ಗದರ್ಶನದಲ್ಲಿ ಅಗತ್ಯ ಆಕ್ಸಿಜನ್, ವೆಂಟಿಲೇಟರ್ ಮತ್ತು ತುರ್ತು ನಿಗಾ ಘಟಕಗಳ ಲಭ್ಯತೆಯನ್ನು ಖಾತ್ರಿಪಡಿಸಬೇಕು, ಜೊತೆಗೆ ಅಗತ್ಯ ಸ್ಟಿರಾಯ್ಡ್ ಮತ್ತು ಇತರೆ ಔಷಧ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

·  ದೊಡ್ಡ ಆಸ್ಪತ್ರೆಗಳೊಳಗೆ ಆಕ್ಸಿಜನ್ ಘಟಕಗಳನ್ನು ಸೃಷ್ಟಿಸಬೇಕು.

· ಕೋವಿಡ್-19 ನಿರ್ವಹಣೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತರು ಮತ್ತು ಇತರೆ ಮುಂಚೂಣಿ ಕಾರ್ಯಕರ್ತರಿಗೆ ನ್ಯಾಯಯುತ ಮತ್ತು ನಿರಂತರ ವೇತನ, ಭತ್ಯೆಗಳನ್ನು ನೀಡಬೇಕು.

ಕೇಂದ್ರ ಸರ್ಕಾರದ ಇಲಾಖೆಗಳು/ಪಿಎಸ್ ಯುಗಳ ಅಧೀನದಲ್ಲಿರುವ ಆಸ್ಪತ್ರೆಗಳಿಗೆ ಪ್ರತ್ಯೇಕ ನಿರ್ದಿಷ್ಟ ಆಸ್ಪತ್ರೆಗಳನ್ನು ಸ್ಥಾಪಿಸುವುದು ಅಥವಾ ಆಸ್ಪತ್ರೆಗಳೊಳಗೆ ಪ್ರತ್ಯೇಕ ಬ್ಲಾಕ್ ಗಳನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಿರುವುದೂ ಸೇರಿ ಕೇಂದ್ರ ಸರ್ಕಾರ ಆಸ್ಪತ್ರೆ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡ ಹಲವು ಕ್ರಮಗಳ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪುನರುಚ್ಚರಿಸಲಾಯಿತು. ಡಿಆರ್ ಡಿಒ ಮತ್ತು ಸಿಎಸ್ಐಆರ್-ಸಿಬಿಆರ್ ಸಮನ್ವಯದೊಂದಿಗೆ ಐಸಿಯು ಹಾಸಿಗೆಗಳು, ಮೇಕ್ ಶಿಫ್ಟ್ ಆಸ್ಪತ್ರೆಗಳು ಮತ್ತು ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದ ಈ ಯೋಜನೆಯನ್ನು ಪುನರುಚ್ಚರಿಸಲಾಯಿತು. ಮೇಕ್ ಶಿಫ್ಟ್ ಆಸ್ಪತ್ರೆಗಳು ಮತ್ತು ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಕಾರ್ಪೊರೇಟ್ ಸಂಸ್ಥೆಗಳು/ಪಿಎಸ್ ಯುಗಳು ಸರ್ಕಾರದ ಇಲಾಖೆಗಳ ಸಿಎಸ್ ಆರ್ ನಿಧಿಯನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಯಿತು. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ(ಎನ್ ಸಿಡಿಸಿ)ದ ಸಹಕಾರದೊಂದಿಗೆ ಆರೋಗ್ಯ ಸೌಕರ್ಯಗಳ ಬಲವರ್ಧನೆಗೆ(18 ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲಿ) ಕೋವಿಡ್ ಸೌಕರ್ಯಗಳನ್ನು ಸೃಷ್ಟಿಸಲು ಸೂಚಿಸಲಾಯಿತು. ಕಡಿಮೆ ಸೋಂಕಿನ ಪ್ರಕರಣಗಳ ನಿರ್ವಹಣೆಗೆ ರೈಲ್ವೆಯನ್ನು ಬಳಸಿಕೊಳ್ಳಲು, ಅದರಲ್ಲಿ 16 ವಲಯಗಳಾದ್ಯಂತ ಲಭ್ಯವಿರುವ 3816 ಬೋಗಿಗಳನ್ನು ಬಳಸಿಕೊಳ್ಳಲು ಮಾಹಿತಿಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಯಿತು. 

****


(Release ID: 1713860) Visitor Counter : 204