ಕೃಷಿ ಸಚಿವಾಲಯ

2020-21 ರಲ್ಲಿ ದೇಶದ ಕೃಷಿ ವ್ಯಾಪಾರ ಬೆಳವಣಿಗೆ ದಾಖಲಿಸಿದೆ


ಸಾಂಕ್ರಾಮಿಕದ ನಡುವೆಯೂ 2020, ಏಪ್ರಿಲ್ – 2021 ರ ಫೆಬ್ರವರಿ ಅವಧಿಯಲ್ಲಿ ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳ ರಫ್ತು ಶೇ 18.49 ರಷ್ಟು ಏರಿಕೆ

2020-21 ರ ಅವಧಿಯಲ್ಲಿ ಭಾರತದಲ್ಲಿ ಗೋಧಿ ಶೇ 727 ಮತ್ತು ಅಕ್ಕಿ [ಬಾಸ್ಮತಿ] ಶೇ 132 ರಷ್ಟು ಗಣನೀಯ ಏರಿಕೆ ದಾಖಲು

Posted On: 21 APR 2021 3:18PM by PIB Bengaluru

ಭಾರತ ವರ್ಷಗಳಿಂದ ಕೃಷಿ ಉತ್ಪನ್ನಗಳಲ್ಲಿ ಹೆಚ್ಚುವರಿ ವ್ಯಾಪಾರವನ್ನು ನಿರಂತರವಾಗಿ ದಾಖಲಿಸುತ್ತಿದೆ. 2019-20 ರ ಸಾಲಿನಲ್ಲಿ ಭಾರತದ ಕೃಷಿ ಮತ್ತು ಸಂಬಂಧಿತ ವಲಯದ ರಫ್ತು 2.52 ಲಕ್ಷ ಕೋಟಿ ರೂಪಾಯಿ ಮತ್ತು ಆಮದು 1.47 ಲಕ್ಷ ಕೋಟಿ ರೂಪಾಯಿ. ಸಾಂಕ್ರಾಮಿಕ ಸಂಕಷ್ಟ ಸಂದರ್ಭದಲ್ಲೂ ಜಗತ್ತಿನ ಆಹಾರ ಸರಪಳಿಗೆ ಧಕ್ಕೆಯಾಗದಂತೆ ಮತ್ತು ನಿರಂತರ ರಫ್ತು ಚಟುವಟಿಕೆಯನ್ನು ಮುಂದುವರೆಸಿದೆ. 2020 ರ ಏಪ್ರಿಲ್ – 2021 ಫೆಬ್ರವರಿ ಅವಧಿಯಲ್ಲಿ ಕೃಷಿ ಮತ್ತು ಅವಲಂಬಿತ ಉತ್ಪನ್ನಗಳ ರಫ್ತು ಚಟುವಟಿಕೆ 2.74 ಲಕ್ಷ ಕೋಟಿ ರೂಪಾಯಿಯಷ್ಟಿದ್ದು, ಇದಕ್ಕೂ ಹಿಂದಿನ ವರ್ಷ 2.31 ಲಕ್ಷ ಕೋಟಿ ರೂಪಾಯಿಷ್ಟಿತ್ತು. ಈ ಮೂಲಕ ಶೇ 18.49 ರಷ್ಟು ಬೆಳವಣಿಗೆ ಸಾಧಿಸಿದೆ. ರಫ್ತು ವಲಯದಲ್ಲಿ ಗಣನೀಯ, ಸಕಾರಾತ್ಮಕ ಬೆಳವಣಿಗೆ ಸಾಧಿಸಿದೆ. ಗೋಧಿ, ಇತರೆ ಸಿರಿ ಧಾನ್ಯಗಳು, ಅಕ್ಕಿ[ಬಾಸ್ಮತಿ] ಹೊರತುಪಡಿಸಿ ಸೋಯಾ ಮೀಲ್, ಮಸಾಲೆ ಪದಾರ್ಥಗಳು, ಸಕ್ಕರೆ, ಹತ್ತಿ, ತಾಜಾ ತರಕಾರಿ, ಸಂಸ್ಕರಿಸಿದ ತರಕಾರಿಗಳು, ಆಲ್ಕೋಹಾಲ್ ಯುಕ್ತ ಪಾನೀಯಗಳು ಇದರಲ್ಲಿ ಸೇರಿವೆ. ಗೋಧಿ ಮತ್ತು ಇತರೆ ಸಿರಿಧಾನ್ಯಗಳು ಅತಿ ಹೆಚ್ಚು ಬೆಳವಣಿಗೆ ದಾಖಲಿಸಿವೆ. ಈ ವಲಯದಲ್ಲಿ ಕ್ರಮವಾಗಿ 425 ಕೋಟಿ ರೂಪಾಯಿಯಿಂದ 3283 ಕೋಟಿ ರೂಪಾಯಿಗೆ ಮತ್ತು 1318 ಕೋಟಿ ರೂಪಾಯಿಯಿಂದ 4542 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ರಾಷ್ಟ್ರಗಳಿಂದ ನಿರ್ದಿಷ್ಟವಾಗಿ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಆಪ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿ ಮತ್ತು ಲೆಬೆನಾನ್ ಗೆ ಜಿ2ಜಿ ಹೋಂದಾಣಿಕೆಯಡಿ 40,000 ಮೆಟ್ರಿಕ್ ಟನ್ ಗೋಧಿಯನ್ನು ನಫೆಡ್ ರಫ‍್ತು ಮಾಡಿದೆ. ಗೋಧಿ ರಫ್ತು ವಲಯದಲ್ಲಿ ಭಾರತ ಒಟ್ಟಾರೆ ಶೇ 727 ರಷ್ಟು ಗಣನೀಯ ಪ್ರಗತಿ ದಾಖಲಿಸಿದೆ.

ಅಕ್ಕಿ [ಬಾಸ್ಮತಿಯೇತರ] ವಲಯದಲ್ಲಿ ದೇಶ ಶೇ 132 ರಷ್ಟು ಗಮನಾರ್ಹ ಪ್ರಗತಿ ಸಾಧಿಸಿದೆ. 2019-20 ರಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತು 13,030 ಕೋಟಿ ರೂಪಾಯಿಯಷ್ಟಿದ್ದು, ಇದು 2020-21 ರಲ್ಲಿ 30,277 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಈ ರೀತಿಯ ಬೆಳವಣಿಗೆಗೆ ಅನೇಕ ಕಾರಣಗಳಿದ್ದು, ಮುಖ್ಯವಾಗಿ ಭಾರತ ಹೊಸ ದೇಶಗಳ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಟಿಮೊರೊ-ಲೆಸ್ಟೆ, ಪಪುವ ನ್ಯೂ ಜಿನಿವಾ, ಬ್ರಿ಼ಜಿಲ್. ಚಿಲಿ ಮತ್ತು ಪೋರ್ಟೋ ರಿಕೋದಂತಹ ದೇಶಗಳು ಹೊಸದಾಗಿ ಸೇರ್ಪಡೆಯಾಗಿವೆ. ಟಾಂಗೋ, ಸೆನೆಗಲ್, ಮಲೇಷ್ಯಾ, ಮಡಗಾಸ್ಕರ್, ಇರಾಖ್, ಬಾಂಗ್ಲಾದೇಶ, ಮೊಜಾಂಬಿಕಾ, ವಿಯೆಟ್ನಾಂ, ತಾಂಜೇನಿಯಾ ರೆಪ್ ದೇಶಗಳಿಗೂ ಸಹ ರಫ್ತು ಚಟುವಟಿಕೆ ನಡೆಸುತ್ತಿದೆ.

ಸೋಯಾ ಮಿಲ್ ರಫ್ತು ಸಹ ಶೇ 132 ರಷ್ಟು ಏರಿಕೆಯಾಗಿದ್ದು, 2019 - 20 ರಲ್ಲಿ 3087 ಕೋಟಿ ರೂಪಾಯಿಯಿಂದ 2020-21 ರಲ್ಲಿ 7224 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ.

ಕೃಷಿ ಮತ್ತು ಅವಲಂಬಿತ ವಲಯದಲ್ಲಿ 2020 ರ ಏಪ್ರಿಲ್ ನಿಂದ 2021 ರ ಫೆಬ್ರವರಿಯಲ್ಲಿ ಇತರೆ ಉತ್ಪನ್ನಗಳ ರಫ್ತು ಸಹ ಗಣನೀಯ ಏರಿಕೆ ಕಂಡಿದೆ. ಸಂಬಾರ ಪದಾರ್ಥಗಳು [26,257 ಕೋಟಿ ರೂಪಾಯಿಗೆ 23,562 ಕೋಟಿ ರೂಪಾಯಿಯಿಂದ ಏರಿಕೆ; ಶೇ 11.44 ರಷ್ಟು ಪ್ರಗತಿ]. ಸಕ್ಕರೆ [17,072 ಕೋಟಿ ರೂಪಾಯಿಗೆ, 12226 ಕೋಟಿ ರೂಪಾಯಿಯಿಂದ ಏರಿಕೆ: ಶೇ 39.64 ರಷ್ಟು ಪ್ರಗತಿ], ಕಚ್ಚಾ ಹತ್ತಿ [11,373 ಕೋಟಿ ರೂಪಾಯಿಗೆ, 6771 ಕೋಟಿ ರೂಪಾಯಿಯಿಂದ ಏರಿಕೆ: ಶೇ 67.94 ರಷ್ಟು ಪ್ರಗತಿ], ತಾಜಾ ತರಕಾರಿ [4780 ಕೋಟಿ ರೂಪಾಯಿಗೆ, 4067 ಕೋಟಿ ರೂಪಾಯಿಯಿಂದ ಏರಿಕೆ: ಶೇ 17.54 ರಷ್ಟು ಪ್ರಗತಿ] ಮತ್ತು ಸಂಸ್ಕರಿತ ತರಕಾರಿಗಳು [2846 ಕೋಟಿ ರೂಪಾಯಿಗೆ, 1994 ಕೋಟಿ ರೂಪಾಯಿಯಿಂದ ಏರಿಕೆ: ಶೇ 42.69 ರಷ್ಟು ಸಾಧನೆ] ಮತ್ತಿತರ ವಲಯದ ಪ್ರಗತಿ ಇದಾಗಿದೆ.

2020 ರ ಏಪ್ರಿಲ್ ನಿಂದ 2021 ರ ಫೆಬ್ರವರಿ ಅವಧಿಯಲ್ಲಿ ಕೃಷಿ ಮತ್ತು ಅವಲಂಬಿತ ಕ್ಷೇತ್ರದ ಉತ್ಪನ್ನಗಳ ಆಮದು 141,034.25 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಇದು ಹಿಂದಿನ ವರ್ಷ 137,014.39 ಕೋಟಿ ರೂಪಾಯಿಯಷ್ಟಿತ್ತು. ಒಟ್ಟಾರೆ ಶೇ 2.93 ರಷ್ಟು ಸ್ವಲ್ಪ ಹೆಚ್ಚಳವಾಗಿದೆ.

ಕೋವಿಡ್-19 ಸಂಕಷ್ಟದ ನಡುವೆಯೂ ಕೃಷಿ ವಲಯದ ವ್ಯಾಪಾರ 2020 ರ ‍ಏಪ್ರಿಲ್ – 2021 ರ ಫೆಬ್ರವರಿ ಅವಧಿಯಲ್ಲಿ 132,579.69 ಕೋಟಿ ರೂಪಾಯಿಗೆ ಏರಿಕೆಯಾಗಿದೆ, ಇದು ಇದೇ ಅವಧಿಯ ಹಿಂದಿನ ವರ್ಷದಲ್ಲಿ 93,907.76 ಕೋಟಿ ರೂಪಾಯಿಯಷ್ಟಿತ್ತು.

***


(Release ID: 1713289) Visitor Counter : 276