ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಮಹಾರಾಷ್ಟ್ರಕ್ಕೆ ರೆಮ್ಡಿಸಿವೀರ್ ಪೂರೈಕೆಗೆ ಕೇಂದ್ರ ಸರ್ಕಾರ ಎಲ್ಲ ಸಾಧ್ಯ ರೀತಿಯಲ್ಲಿ ನೆರವಾಗುತ್ತಿದೆ: ಶ್ರೀ ಮನ್ಸುಖ್ ಮಾಂಡವೀಯ

Posted On: 17 APR 2021 5:05PM by PIB Bengaluru

ಭಾರತ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಸಂಪರ್ಕದಲ್ಲಿದ್ದು, ಎಲ್ಲ ಸಾಧ್ಯ ರೀತಿಯಲ್ಲಿ ರೆಮ್ಡಿಸಿವೀರ್ ಪೂರೈಕಗೆ ನೆರವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಇಂದು ತಿಳಿಸಿದ್ದಾರೆ. ಸರಣಿ ಟ್ವೀಟ್ ನಲ್ಲಿ ಅವರು, ತದ್ವಿರುದ್ಧವಾಗಿ ಮಹಾರಾಷ್ಟ್ರ ಸರ್ಕಾರ ನೀಡುತ್ತಿರುವ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದಾರೆ.

ದೇಶದಲ್ಲಿ ಉತ್ಪಾದನೆಯನ್ನು ದುಪ್ಪಟ್ಟು ಮಾಡಲಿದೆ, ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು 12.4.2021ರಿಂದ 20 ಘಟಕಗಳಿಗೆ ತ್ವರಿತ ಅನುಮೋದನೆ ನೀಡಲಾಗಿದೆ ಎಂದು ಸಚಿವ ಶ್ರೀ ಮಾಂಡವೀಯ ತಿಳಿಸಿದ್ದಾರೆ. ಮಹಾರಾಷ್ಟ್ರದ ಜನತೆಗೆ ಅಗತ್ಯ ಪ್ರಮಾಣದ ರೆಮ್ಡಿ ಸಿವೀರ್ ಪೂರೈಕೆಯನ್ನು ಖಾತ್ರಿಪಡಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ದಾಖಲೆಗಳ ಪ್ರಕಾರ, ಇಓಯುನ ಒಂದೇ ಒಂದು ಘಟಕ ಮತ್ತು ಎಸ್.ಇ.ಜಢ್ ನಲ್ಲಿ ಒಂದು ಘಟಕ ಇದೆ. ಸರ್ಕಾರ ರೆಮ್ಡಿಸಿವೀರ್ ನ ಎಲ್ಲ ಉತ್ಪಾದಕರನ್ನೂ ಸಂಪರ್ಕಿಸಿದೆ. ಅಂತಹ ಯಾವುದೇ ರವಾನೆ ನಿಂತಿಲ್ಲ ಎಂದು ಹೇಳಿದ್ದಾರೆ.

16 ಕಂಪನಿಗಳ ಪಟ್ಟಿ, ದಾಸ್ತಾನಿನ ಲಭ್ಯತೆ ಮತ್ತು ಡಬ್ಲ್ಯು.ಎಚ್.ಓ - ಜಿಎಂಪಿಯನ್ನು ಹಂಚಿಕೊಳ್ಳುವಂತೆ ಸಂಬಂಧಿತ ಜನರಿಗೆ ಸಚಿವರು ಮನವಿ ಮಾಡಿದ್ದಾರೆ. ದೇಶದ ಜನರಿಗೆ ನೆರವಾಗಲು ಕೇಂದ್ರ ಸರ್ಕಾರ ಎಲ್ಲ ಸಾಧ್ಯ ಕಾರ್ಯ ಮಾಡಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

***



(Release ID: 1712479) Visitor Counter : 147