ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

`ಆಹಾರ ಕ್ರಾಂತಿ’ ಪ್ರಕಟಿಸಿದ ಡಾ. ಹರ್ಷವರ್ಧನ್


ಮಾತೆ ಅನ್ನಪೂರ್ಣಾ ಚೈತ್ರ ನವರಾತ್ರಿಯ ಪ್ರಥಮ ದಿನದಂದು ಸಾರ್ವಜನಿಕ ಆಂದೋಲನವಾಗಿ ಆಹಾರ ಕ್ರಾಂತಿಯ ಆರಂಭ

“ಆಹಾರ ಕ್ರಾಂತಿ”, ಪೌಷ್ಟಿಕತೆಯ ಬಗ್ಗೆ ಜಾಗೃತಿ ಪಸರಿಸುವ ಸಮರ್ಪಿತ ಅಭಿಯಾನ

ಈ ಹೊಸ ಉಪಕ್ರಮ ಇಡೀ ವಿಶ್ವವೇ ಅನುಕರಿಸುವಂತಹ ಮಾದರಿ

Posted On: 14 APR 2021 1:13PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಪೌಷ್ಟಿಕತೆಯ ಜಾಗೃತಿ ಪಸರಿಸಲು, ಭಾರತದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಎಲ್ಲಾ ಪೌಷ್ಟಿಕ ಆಹಾರ, ಹಣ್ಣುಗಳು ಮತ್ತು ತರಕಾರಿಗಳ ಲಭ್ಯತೆಗೆ ಅವಕಾಶ ನೀಡಲು ಸಮರ್ಪಿತವಾದ ಅಭಿಯಾನ “ಆಹಾರ ಕ್ರಾಂತಿ”ಗೆ ಚಾಲನೆ ನೀಡಿದರು.

ವಿಜ್ಞಾನ ಭಾರತಿ (ವಿಭಾ), ‘ಜಾಗತಿಕ ಭಾರತೀಯ ವಿಜ್ಞಾನಿಗಳು ಮತ್ತು ತಂತ್ರಜ್ಞರ’ ವೇದಿಕೆ (ಜಿ.ಐ.ಎಸ್.ಟಿ.), ವಿಜ್ಞಾನ ಪ್ರಸಾರ್ ಮತ್ತು ಪ್ರವಾಸಿ ಭಾರತೀಯ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಪರ್ಕ (ಪ್ರಭಾಸ್) ಗಳನ್ನು ಒಗ್ಗೂಡಿಸಿ, “ಆಹಾರ ಕ್ರಾಂತಿ”,ಯನ್ನು ಆರಂಭಿಸಲಾಗಿದ್ದು, ‘ಉತ್ತಮ ಆಹಾರ- ಉತ್ತಮ ವಿಚಾರ’ ಇದರ ಉದ್ದೇಶವಾಗಿದೆ.

`ಆಹಾರ ಕ್ರಾಂತಿ’ ಆಂದೋಲನವನ್ನು ಭಾರತ ಮತ್ತು ವಿಶ್ವ ಎದುರಿಸುತ್ತಿರುವ ವಿಲಕ್ಷಣ ಸಮಸ್ಯೆ-ಹಸಿವು ಮತ್ತು ಅಧಿಕವಾದ ಕಾಯಿಲೆ’ಯನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಅಧ್ಯಯನಗಳ ರೀತ್ಯ ಭಾರತದಲ್ಲಿ ಸೇವಿಸಲಾಗುವ ಕ್ಯಾಲರಿಗಿಂತಲೂ ಎರಡು ಪಟ್ಟು ಹೆಚ್ಚು ಉತ್ಪಾದನೆ ಮಾಡುತ್ತದೆ. ಆದಾಗ್ಯೂ, ದೇಶದಲ್ಲಿ ಹಲವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮೂಲ ಕಾರಣವೆಂದರೆ ಪೌಷ್ಟಿಕತೆಯ ಬಗ್ಗೆ ಇರುವ ಜಾಗೃತಿಯ ಕೊರತೆಯಾಗಿದೆ.

ಭಾರತದ ಸಾಂಪ್ರದಾಯಿಕ ಆಹಾರದ ಮೌಲ್ಯಗಳು ಮತ್ತು ಸ್ಥಳೀಯ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರುವ ರೋಗ ಗುಣಪಡಿಸುವ ಶಕ್ತಿ ಮತ್ತು ಸಮತೋಲಿತ ಆಹಾರದಿಂದಾಗುವ ಪವಾಡಗಳ ಬಗ್ಗೆ ಜನರನ್ನು ಪ್ರಚೋದಿಸಲು ಕಾರ್ಯ ನಿರ್ವಹಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಲು ಈ ಆಂದೋಲನವು ಉದ್ದೇಶಿಸಿದೆ. ಸ್ಥಳೀಯ ಮೂಲದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ತುಂಬಿರುವ ಪೌಷ್ಟಿಕಾಂಶದ ಸಮತೋಲಿತ ಆಹಾರದ ಮೇಲೆ ಇದು ಗಮನ ನವೀಕರಿಸುತ್ತದೆ.

ಇನ್ನು ವಿಜ್ಞಾನ ಭಾರತಿ (ವಿಭಾ) ಮತ್ತು ಜಾಗತಿಕ ಭಾರತೀಯ ವಿಜ್ಞಾನಿಗಳು ಮತ್ತು ತಂತ್ರಜ್ಞರ ವೇದಿಕೆ ಕಾರ್ಯಕ್ರಮ  ಆರಂಭಿಸಿದ್ದು, ಇತರ ಹಲವು ಸಂಸ್ಥೆಗಳೂ ಇದಕ್ಕೆ ಕೈಜೋಡಿಸಿವೆ ಮತ್ತು ತಮ್ಮ ಸಂಪನ್ಮೂಲ ಮತ್ತು ನೈಪುಣ್ಯವನ್ನು ಧಾರೆ ಎರೆಯಲು ಸಮ್ಮತಿಸಿವೆ. ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರದ ಸಚಿವಾಲಯಗಳು ಮತ್ತು ಏಜೆನ್ಸಿಗಳಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆ ವಿಜ್ಞಾನ ಪ್ರಸಾರ್ ಮತ್ತು ಪ್ರವಾಸಿ ಭಾರತೀಯ ಶೈಕ್ಷಣಿಕ ಮತ್ತು ವೈಜ್ಞಾನಿಕ  ಸಂಪರ್ಕ (ಪ್ರಭಾಸ್) ಈ ಸಹಯೋಗದ ಪ್ರಯತ್ನದ ಒಂದು ಭಾಗವಾಗಿದೆ. ಅಭಿಯಾನ ಮುಂದುವರೆದಂತೆ ಹೆಚ್ಚಿನ ಸಂಸ್ಥೆಗಳು ಸೇರಲು ಸಿದ್ಧವಾಗಿವೆ.

ವರ್ಚುವಲ್ ಮಾಧ್ಯಮದಲ್ಲಿ ಉಪಕ್ರಮ ಆರಂಭಿಸಿದ ಕೇಂದ್ರ ಸಚಿವರು, ಆಹಾರ ಕ್ರಾಂತಿಯಂತಹ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವನ್ನು ಮಾತೆ ಅನ್ನಪೂರ್ಣೆಯ ಚೈತ್ರ ನವರಾತ್ರಿಯ ಮೊದಲ ದಿನ ಸಾರ್ವಜನಿಕ ಅಭಿಯಾನವಾಗಿ ಅರಂಭಿಸಲಾಗಿದೆ ಎಂದರು.

“ಇಂದು ದೇಶ ಕೋವಿಡ್ -19 ರಂತಹ ಸಾಂಕ್ರಾಮಿಕದ ದಾಳಿಗೆ ತುತ್ತಾಗಿರುವಾಗ, ಸಮತೋಲಿತ ಆಹಾರ ಸೇವನೆ ಸಾಂಕ್ರಾಮಿಕದ ಪರಿಣಾಮವನ್ನು ತಗ್ಗಿಸುವ ವಿಶೇಷ ಸಾಧನವಾಗಿದೆ. ಅಂತಹ ಸಮಯದಲ್ಲಿ, ಸಮತೋಲಿತ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ”, ಎಂದು ಅವರು ಹೇಳಿದರು.

ಸಾಗರೋತ್ತರದ ಭಾರತೀಯ ವಿಜ್ಞಾನಿಗಳು ಈ ಅಭಿಯಾನದ ಮುಂಚೂಣಿಯಲ್ಲಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. “ಪ್ರತಿಯೊಬ್ಬ ಭಾರತೀಯರಿಗೂ ಸಮತೋಲಿತ ಆಹಾರದ ಸಂದೇಶವನ್ನು ತಲುಪಿಸುವುದು ಒಂದು ಉದಾತ್ತ ಪ್ರಯತ್ನವಾಗಿದೆ. ಈ ಕಾರ್ಯಕ್ರಮಕ್ಕಾಗಿ ರೂಪಿಸಲಾಗಿರುವ ಲಾಂಛನ ಶ್ಲಾಘನಾರ್ಹವಾಗಿದೆ ಮತ್ತು ಉತ್ತಮ ಆಹಾರ – ಉತ್ತಮ ವಿಚಾರ ಎಂಬ ಘೋಷವಾಕ್ಯ ದೇಶದ ಎಲ್ಲ ಜನರನ್ನೂ ಒಗ್ಗೂಡಿಸುತ್ತದೆ.”, ಎಂದು ಡಾ. ಹರ್ಷವರ್ಧನ್ ಹೇಳಿದರು.

ಡಾ. ಯೆಲ್ಲೋಜಿರಾವ್ ಮಿರಾಜ್ಕರ್, ಡಾ.ಶ್ರೀನಿವಾಸ ರಾವ್ ಮತ್ತು ಜಿಐಎಸ್ಟಿಯ ಶ್ರೀ ಪ್ರಫುಲ್ ಕೃಷ್ಣ ಅವರ ಕೊಡುಗೆಗಳನ್ನು ಸಚಿವರು ವಿಶೇಷವಾಗಿ ಪ್ರಸ್ತಾಪಿಸಿ, ಅವರು ಸಾರ್ವಜನಿಕ ಅಭಿಯಾನ ಕಾರ್ಯಕ್ರಮಕ್ಕೆ ರೂಪ ನೀಡಲು ಚರ್ಚೆಯನ್ನು ಪ್ರಾರಂಭಿಸಿದರೆಂದರು. “ನೀವೆಲ್ಲರೂ ಬೃಹತ್ ಸವಾಲನ್ನು ನಿಮ್ಮ ಸಮರ್ಥ ಕೈಯಲ್ಲಿ ಎತ್ತುಕೊಂಡಿದ್ದೀರಿ ಎಂಬುದು ನಮಗೆ ಗೊತ್ತು. ಇದು ಹಸಿರು ಮತ್ತು ಶ್ವೇತ ಕ್ರಾಂತಿಯಂತೆ ಶ್ರೀಸಾಮಾನ್ಯರನ್ನು ತಲುಪಲು ಹಲವು ವರ್ಷ ತೆಗೆದುಕೊಳ್ಳುತ್ತದೆ ಎಂದರು.

ಆರೋಗ್ಯವಂತ ವ್ಯಕ್ತಿಗಳು ಮಾತ್ರ ಸಮೃದ್ಧ ಸಮಾಜಕ್ಕೆ ಕಾರಣವಾಗಬಹುದು ಎಂಬುದನ್ನು ಒತ್ತಿ ಹೇಳಿದ ಅವರು, ಭಾರತೀಯ ಆಯುರ್ವೇದವು ಇಡೀ ಜಗತ್ತಿಗೆ ಮಾರ್ಗದರ್ಶಿಯಾಗಿದೆ ಎಂದರು. ಇಂದಿನ ವಿವಿಧ ಆರೋಗ್ಯ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ನಾವು ಜ್ಞಾನವನ್ನು ಬಳಸಲು ಇದು ಸುಸಮಯವಾಗಿದೆ.

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆಹಾರದ ಸಂದೇಶವನ್ನು ಪಸರಿಸುವುದು ಆಹಾರ ಕ್ರಾಂತಿ ಅಭಿವೃದ್ಧಿ ಕಾರ್ಯಕ್ರಮದ ಉದ್ದೇಶವಾಗಿದೆ. ಸಂದೇಶವು ದೇಶದ ಮೂಲೆ ಮೂಲೆಗೆ ತಲುಪುತ್ತದೆ ಎಂದು ಖಾತ್ರಿಪಡಿಸಿಕೊಳ್ಳಲು ಸಮಾಜದ ಪ್ರತಿಯೊಂದು ವಿಭಾಗವೂ ಇದರಲ್ಲಿ ಭಾಗಿಯಾಗುವುದು ಅತ್ಯಗತ್ಯ.

ವಿಜ್ಞಾನ ಪ್ರಸಾರ್ ನಿರ್ದೇಶಕ ನಕುಲ್ ಪರಾಶರ್ ಮಾತನಾಡಿ “ಈ ಅಭಿಯಾನದ ಜೊತೆಗೇ ಬಹು ಆಯಾಮದಲ್ಲಿ ನಾವು ಕಾರ್ಯ ನಿರ್ವಹಿಸಲಿದ್ದು, ಇದು ಉತ್ತಮ ಜಾಗೃತಿ ಉತ್ತೇಜಿಸಲು, ಉತ್ತಮ ಪೌಷ್ಟಿಕತೆ ಮತ್ತು ಉತ್ತಮ ಕೃಷಿಯನ್ನು ಬಯಸುತ್ತದೆ;   ಪಠ್ಯಕ್ರಮದ ಮೂಲಕ ಪೌಷ್ಟಿಕಾಂಶದ ರೂಪ`ಏನು ಮತ್ತು` ಏಕೆ, ಅಥವಾ ಆಟಗಳ ರೂಪಗಳ ಮೂಲಕ ಅಥವಾ `ಹೇಗೆ 'ಎಂಬ ಸೂಚನೆಗಳಂತೆ ಸಂದೇಶಗಳನ್ನು ನೀಡಲಾಗುತ್ತದೆ; ಮತ್ತು ಇಂಗ್ಲಿಷ್ ಮತ್ತು ಹಿಂದಿ ಹೊರತುಪಡಿಸಿ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ಆನ್‌ ಲೈನ್ ಮತ್ತು ಆಫ್‌ ಲೈನ್‌ ನಲ್ಲಿ ವಿಷಯವನ್ನು ಒದಗಿಸಲಾಗುತ್ತದೆ.

ಈ ಸಂದರ್ಭದಲ್ಲಿ, (ಹಿಂದಿ ಮತ್ತು ಇಂಗ್ಲಿಷ್)ನ ಮಾಸಿಕ ವಾರ್ತಾ ಪತ್ರ 'ಆಹಾರ ಕ್ರಾಂತಿ'ಯನ್ನು ಬಿಡುಗಡೆ ಮಾಡಲಾಯಿತು., ಇದನ್ನು ವಿಜ್ಞಾನ ಪ್ರಸಾರ್ ಪ್ರಕಟಿಸುತ್ತಿದೆ.

ವಿಜ್ಞಾನ ಭಾರತಿಯ ಅಧ್ಯಕ್ಷ ಡಾ. ವಿಜಯ್ ಭಾತ್ಕರ್, ಪ್ರಭಾಸ್ ನ ಶ್ರೀ ಧ್ಯಾನೇಶ್ವರ್, ವಿಜ್ಞಾನ ಭಾರತಿಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಸುಧೀರ್ ಜೀ ಬದೋರಿಯಾ, ವಿಜ್ಞಾನ ಭಾರತಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಯಂತ್ ಸಹಸ್ರಬುದ್ಧೆ ಮತ್ತು ಜಿಐಎಸ್.ಟಿ.ಯ ಡಾ. ಯಲ್ಲೋಜಿರಾವ್ ಮಿರಾಜ್ಕರ್, ಡಾ. ಶ್ರೀನಿವಾಸರಾವ್ ಮತ್ತು ಶ್ರೀ ಪ್ರಫುಲ್ ಕೃಷ್ಣ ಅವರು ಹೊಸ ಉಪಕ್ರಮ ಇಡೀ ವಿಶ್ವವೇ ಅನುಸರಿಸಬೇಕಾದ ಮಾದರಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

***



(Release ID: 1712031) Visitor Counter : 304