ರೈಲ್ವೇ ಸಚಿವಾಲಯ

ಬೇಡಿಕೆಗೆ ಅನುಗುಣವಾಗಿ ಭಾರತೀಯ ರೈಲ್ವೆಯಿಂದ ನಿರಂತರ ರೈಲು ಸಂಚಾರ


ಪ್ರಸ್ತುತ ಭಾರತೀಯ ರೈಲ್ವೆಯಿಂದ ಸರಾಸರ ಪ್ರತಿನಿತ್ಯ 1402 ವಿಶೇಷ ರೈಲುಗಳ ಸಂಚಾರ 

5381 ಸಬರ್ಬನ್ ಮತ್ತು 830 ಪ್ರಯಾಣಿಕ ರೈಲು ಸೇವೆಗಳ ಕಾರ್ಯಾಚರಣೆ

प्रविष्टि तिथि: 09 APR 2021 3:41PM by PIB Bengaluru

2020 – 21 ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯಿಂದ ಹಿಂದೆಂದೂ ಇಲ್ಲದಷ್ಟು ದಾಖಲೆ ಪ್ರಮಾಣದಲ್ಲಿ 1232.64 ದಶಲಕ್ಷ ಟನ್ ಸರಕುಗಳ ಸಾಗಣೆ 

ಭಾರತೀಯ ರೈಲ್ವೆ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ರೈಲು ಸೇವೆ ಒದಗಿಸುತ್ತಿದೆ. ಪ್ರತಿದಿನ ಭಾರತೀಯ ರೈಲ್ವೆಯಿಂದ ಸರಾಸರಿ 1402 ವಿಶೇಷ ರೈಲುಗಳು ಸಂಚರಿಸುತ್ತಿವೆ.  

5381 ಸಬರ್ ಬನ್ ಮತ್ತು 830 ಪ್ರಯಾಣಿಕ ರೈಲುಗಳು  ಕಾರ್ಯಾಚರಣೆ ಮಾಡುತ್ತಿವೆ. ಇದಲ್ಲದೇ ಹೆಚ್ಚಿನ ಪ್ರೋತ್ಸಾಹದೊಂದಿಗೆ 28 ವಿಶೇಷ ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ.

2021 ಏಪ್ರಿಲ್ಮೇ ತಿಂಗಳಲ್ಲಿ ಪ್ರಯಾಣಿಕರ ಒತ್ತಡವನ್ನು ನಿಭಾಯಿಸುವ ಉದ್ದೇಶದಿಂದ ಕೇಂದ್ರೀಯ ರೈಲ್ವೆಯಿಂದ 58 ರೈಲುಗಳು [29 ಜೋಡಿ]. ಪಶ್ಚಿಮ ರೈಲ್ವೆಯಿಂದ 60 [30 ಜೋಡಿ] ರೈಲುಗಳು ಸಂಚರಿಸುತ್ತಿವೆ. ಹೆಚ್ಚು ಬೇಡಿಕೆ ಇರುವ ಗೋರಖ್ ಪುರ್, ಪಟ್ನಾ, ದರ್ಬಾಂಗ, ವಾರಾಣಸಿ, ಗುವಾಹತಿ, ಭರೌಣಿ, ಪ್ರಯಾಗ್ ರಾಜ್, ಬೋಕರೋ, ರಾಂಚಿ ಮತ್ತು ಲಖನೌ ಮತ್ತಿತರ ಪ್ರದೇಶಗಳಿಗೆ ರೈಲುಗಳು ಸಂಚಾರ ಮಾಡುತ್ತಿವೆ.  

2020 – 21 ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯಿಂದ ಹಿಂದೆಂದೂ ಇಲ್ಲದಷ್ಟು ದಾಖಲೆ ಪ್ರಮಾಣದಲ್ಲಿ 1232.64 ದಶಲಕ್ಷ ಟನ್ ಸರಕುಗಳನ್ನು ಸಾಗಣೆ ಮಾಡಲಾಗಿದೆ. ಭಾರತೀಯ ರೈಲ್ವೆಗೆ ಸರಕು ಸಾಗಣೆ ವಲಯದಿಂದ 2020-21 ನೇ ಸಾಲಿನಲ್ಲಿ 1,17,386 ಕೋಟಿ ರೂ [ ಅಂದಾಜು] ಹರಿದು ಬಂದಿದ್ದು, ಇದಕ್ಕೂ ಹಿಂದಿನ ವರ್ಷದಲ್ಲಿ 1,13,897 ಕೋಟಿ ರೂ ಕ್ರೋಡೀಕರಣವಾಗಿತ್ತುಹಿಂದಿನ ವರ್ಷ ಭಾರತೀಯ ರೈಲ್ವೆ ಸರಾಸರಿ ವೇಗ ಪ್ರತಿ ಗಂಟೆಗೆ 24 ಕಿಲೋಮೀಟರ್ ಇತ್ತು. ಇದು ಬಹುತೇಕ ದ್ವಿಗುಣಗೊಂಡಿದ್ದು, ಇದೀಗ 44 ಕಿಲೋಮೀಟರ್ ಗೆ ಏರಿಕೆಯಾಗಿದೆ.

2020 ಆಗಸ್ಟ್ ನಿಂದ 450 ಕಿಸಾನ್ ರೈಲುಗಳು ಸಂಚರಿಸಿದ್ದು, 1.45 ಲಕ್ಷ ಟನ್ ಹಾಳಾಗದ ಮತ್ತು ಕೃಷಿ ಉತ್ಪನ್ನಗಳನ್ನು ರೈಲು ಮೂಲಕ ಸಾಗಾಟ ಮಾಡಲಾಗಿದೆ.

***


(रिलीज़ आईडी: 1711114) आगंतुक पटल : 269
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Tamil , Telugu , Malayalam