ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಮೈಕ್ರೋ ಸೆನ್ಸಾರ್ ಆಧರಿತ ಸ್ಫೋಟಕ ಪತ್ತೆ ಸಾಧನ ನ್ಯಾನೊಸ್ನಿಫರ್ ಅನ್ನು ಬಿಡುಗಡೆ ಮಾಡಿದ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್


ಮೈಕ್ರೋ ಸೆನ್ಸಾರ್ ತಂತ್ರಜ್ಞಾನ ಆಧರಿತ ವಿಶ್ವದ ಮೊದಲ ಮೊದಲ ಸ್ಫೋಟಕ ಪತ್ತೆ ಸಾಧನ ನ್ಯಾನೊಸ್ನಿಫರ್ – ಕೇಂದ್ರ ಶಿಕ್ಷಣ ಸಚಿವರು

ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆ ಸೇರಿ ನ್ಯಾನೊಸ್ನಿಫರ್ ಶೇಕಡ 100ಕ್ಕೆ 100ರಷ್ಟು ಭಾರತದಲ್ಲೇ ತಯಾರಾದ ಉತ್ಪನ್ನವಾಗಿದೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ಈ ಕೈಗಟಕುವ ಬೆಲೆಯ ಸಾಧನದಿಂದ, ಸ್ಫೋಟಕ ಪತ್ತೆ ಸಾಧನ ಆಮದಿನ ಮೇಲಿನ ಅವಲಂಬನೆ ತಗ್ಗುತ್ತದೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ದೇಶೀಯವಾಗಿ ಸಿದ್ಧವಾದ ಸ್ಫೋಟಕ ಪತ್ತೆ ಸಾಧನ(ಇಟಿಡಿ) – ನ್ಯಾನೊಸ್ನಿಫರ್ 10 ಸೆಕೆಂಡ್ ಗಳೊಳಗೆ ಸ್ಫೋಟಕಗಳನ್ನು ಪತ್ತೆ ಹಚ್ಚುತ್ತದೆ - ಕೇಂದ್ರ ಶಿಕ್ಷಣ ಸಚಿವರು

Posted On: 09 APR 2021 3:03PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ವಿಶ್ವದ ಮೊದಲ ಮೈಕ್ರೋ ಸೆನ್ಸಾರ್ ಆಧರಿತ ಸ್ಫೋಟಕ ಪತ್ತೆ ಸಾಧನ(ಇಟಿಡಿ) ನ್ಯಾನೊಸ್ನಿಫರ್ ಅನ್ನು ಬಿಡುಗಡೆ ಮಾಡಿದರು. ಇದನ್ನು ಐಐಟಿ ಬಾಂಬೆ ಸಂಪೋಷಣೆಯಲ್ಲಿ ಆರಂಭವಾಗಿರುವ ನವೋದ್ಯಮ ನ್ಯಾನೊಸ್ನಿಫ್ ಟೆಕ್ನಾಲಜಿಸ್ ಅಭಿವೃದ್ಧಿಪಡಿಸಿದೆ. ಐಐಟಿ ದೆಹಲಿ ನಿರ್ದೇಶಕ ಶ್ರೀ ವಿ. ರಾಮಗೋಪಾಲ್ ರಾವ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನ್ಯಾನೊಸ್ನಿಫರ್ ಅನ್ನು ಹಿಂದಿನ ಐಐಟಿ ದೆಹಲಿಯಿಂದ ಟಿಸಿಲೊಡೆದಿರುವ ವೆಹಾಂತ್ ಟೆಕ್ನಾಲಜಿಸ್ ಮಾರುಕಟ್ಟೆ ಮಾಡಲಿದ್ದು, ಇದು ನವೋದ್ಯಮ ಕ್ರಿತಿಕಲ್ ಸೆಲ್ಯೂಷನ್ಸ್   ಸಂಪೋಷಣಯಲ್ಲಿದೆ

2.jpg1.jpg

ಸಂದರ್ಭದಲ್ಲಿ ಮಾತನಾಡಿದ ಶ್ರೀ ಪೋಖ್ರಿಯಾಲ್ ಅವರು, ನ್ಯಾನೊಸ್ನಿಫರ್ ಅನ್ನು ನ್ಯಾನೊಸ್ನಿಫ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ್ದು, ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಕನಸು ಸಾಕಾರ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ನ್ಯಾನೊಸ್ನಿಫರ್ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನೆ ಸೇರಿ ಶೇ.100ಕ್ಕೆ 100ರಷ್ಟು ಭಾರತದಲ್ಲೇ ಸಿದ್ಧವಾದ ಉತ್ಪನ್ನವಾಗಿದೆ. ನ್ಯಾನೊಸ್ನಿಫರ್ ಗೆ ಬಳಕೆ ಮಾಡಲಾಗಿರುವ ಪ್ರಮುಖ ತಂತ್ರಜ್ಞಾನವನ್ನು ಅಮೆರಿಕ ಮತ್ತು ಯೂರೋಪ್ ಪೇಟೆಂಟ್ ಗಳಿಂದ ರಕ್ಷಿಸಲ್ಪಟ್ಟಿದೆ ಎಂದರು. ಕೈಗೆಟಕುವ ದರದಲ್ಲಿ ಲಭ್ಯವಾಗುವ ಸಾಧನದಿಂದ ನಮ್ಮ ಸ್ಫೋಟಕ ಪತ್ತೆ ಸಾಧನ ಯಂತ್ರಗಳ ಆಮದು ಅವಲಂಬನೆಯನ್ನು ತಗ್ಗಿಸುತ್ತದೆ ಎಂದು ಹೇಳಿದರು. ಅಲ್ಲದೆ ಇದು ಇತರೆ ಸಂಸ್ಥೆಗಳು, ನವೋದ್ಯಮಗಳು ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ದೇಶೀಯವಾಗಿ ಸಂಶೋಧನೆ ಮತ್ತು ಉತ್ಪನ್ನಗಳ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಪ್ರಯೋಗಾಲಯದಿಂದ ಮಾರುಕಟ್ಟೆವರೆಗಿನ ಉತ್ಪನ್ನಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಸ್ಫೋಟಕ ಪತ್ತೆ ಸಾಧಕ ಯಂತ್ರ(ಇಟಿಡಿ) – ನ್ಯಾನೊಸ್ನಿಫರ್ 10 ಸೆಕೆಂಡ್ ಗಳ ಒಳಗೆ ಸ್ಫೋಟಕಗಳನ್ನು ಪತ್ತೆಹಚ್ಚುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಅಲ್ಲದೆ ಇದು ಸ್ಫೋಟಕಗಳನ್ನು ಗುರುತಿಸಿ ಅವುಗಳನ್ನು ನಾನಾ ವರ್ಗಗಳನ್ನಾಗಿ ವಿಭಜಿಸುತ್ತದೆ ಎಂದು ಹೇಳಿದರು. ಇದು ಎಲ್ಲ ಬಗೆಯ ಮಿಲಿಟರಿ, ಸಾಂಪ್ರದಾಯಿಕ ಮತ್ತು ದೇಶೀಯ ಸ್ಫೋಟಕಗಳನ್ನು ಪತ್ತೆಹಚ್ಚುತ್ತದೆ. ನ್ಯಾನೊಸ್ನಿಫರ್ ಸೂರ್ಯನ ಬೆಳಕಿನಲ್ಲೂ ಓದಬಲ್ಲಂತಹ ಬಣ್ಣ ಪ್ರದರ್ಶನದ ಜೊತೆಗೆ ದೃಶ್ಯ ಮತ್ತು ಶ್ರವ್ಯ ಎಚ್ಚರಿಕೆಗಳನ್ನೂ ಸಹ  ನೀಡಲಿದೆ ಎಂದರು.

ಉತ್ಪನ್ನದ ಅಭಿವೃದ್ಧಿಯೊಂದಿಗೆ ಐಐಟಿ ಬಾಂಬೆ ಮತ್ತು ಐಐಟಿ ದೆಹಲಿ ಅವುಗಳಿಂದ ಟಿಸಿಲೊಡೆದು ಆರಂಭವಾದ ಕಂಪನಿಗಳು ರಾಷ್ಟ್ರದ ಭದ್ರತೆಗೆ ಅತ್ಯಾಧುನಿಕ ಮತ್ತು ಕೈಗೆಟಕಬಹುದಾದ ದರದಲ್ಲಿ ದೇಶೀಯ ಉತ್ಪನ್ನಗಳ ಉತ್ಪಾದನೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂಬುದು ಸಾಬೀತಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವರು ಹೇಳಿದರು. ಇದು ಶೈಕ್ಷಣಿಕ ತಜ್ಞರು ಮತ್ತು ಕೈಗಾರಿಕಾ ಸಹಭಾಗಿತ್ವಕ್ಕೆ ಒಂದು ನಿಖರ ಉದಾಹರಣೆಯಾಗಿದೆ. ಇದು ಭಾರತದ ಇತರೆ ನವೋದ್ಯಮಗಳಿಗೂ ಒಂದು ಮಾದರಿಯಾಗಲಿದೆ ಎಂದು ಹೇಳಿದರು. ನಮ್ಮ ರಾಷ್ಟ್ರ ಪ್ರತಿಭೆ, ಜ್ಞಾನ ಮತ್ತು ಶ್ರಮಪಟ್ಟು ದುಡಿಯುವ ಉದ್ದಿಮೆದಾರರಿಂದ ಸಂಪದ್ಭರಿತವಾಗಿದೆ. ಆದ್ದರಿಂದ ನಾವು ಏಕೆ ವಿದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಇದೀಗ ನಮ್ಮ ರಾಷ್ಟ್ರ ನ್ಯಾನೊಸ್ನಿಫರ್ ನಂತಹ ಸ್ಫೋಟಕ ಪತ್ತೆ ಯಂತ್ರಗಳನ್ನು ಅಭಿವೃದ್ಧಿಪಡಿಸಿ ಉತ್ಪಾದನೆ ಮಾಡುತ್ತಿರುವುದು ಅದ್ಭುತ ಕಾರ್ಯ ಎಂದು ಅವರು ಹೇಳಿದರು.

ಭೌಗೋಳಿಕ-ರಾಜಕೀಯ ವಾಸ್ತವತೆಗಳ ಕಾರಣದಿಂದಾಗಿ ನಮ್ಮ ರಾಷ್ಟ್ರ ನಿರಂತರ ಬೆದರಿಕೆಗಳನ್ನು ಎದುರಿಸುತ್ತಿದ್ದು, ಹೆಚ್ಚಿನ ಭದ್ರತೆ ಇರುವ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ, ಹೊಟೇಲ್, ಮಾಲ್  ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಫೋಟಕಗಳ ಪತ್ತೆ ಯಂತ್ರಗಳನ್ನು ಅಳವಡಿಸುವುದು ಸಾಮಾನ್ಯವಾಗಿದೆ. ಅಂತಹ ಕಡೆ ಜನರು ಮತ್ತು ಲಗೇಜ್ ಅಥವಾ ಬ್ಯಾಗೇಜ್ ಗಳನ್ನು ಕ್ಷಿಪ್ರವಾಗಿ ಸ್ಕ್ಯಾನ್ ಮಾಡುವ ಅತ್ಯಾಧುನಿಕ ಪತ್ತೆ ಯಂತ್ರಗಳನ್ನು ಇಂತಹ ಸ್ಥಳಗಳಲ್ಲಿ ತಪಾಸಣಾ ದ್ವಾರಗಳ ಬಳಿ ಅಳವಡಿಸಲಾಗುತ್ತಿದೆ. ಬಹುತೇಕ ಎಲ್ಲ ಸ್ಫೋಟಕ ಪತ್ತೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಅವು ಅತ್ಯಂತ ದುಬಾರಿಯಾಗಿರುವ ಕಾರಣ ನಮ್ಮ ದೇಶ ಅತ್ಯಮೂಲ್ಯ ವಿದೇಶಿ ವಿನಿಮಯವನ್ನು ಕಳೆದುಕೊಳ್ಳುತ್ತಿದೆ. ನ್ಯಾನೊಸ್ನಿಫರ್ ಅಂತಹ ಉತ್ಪನ್ನಗಳಿಗೆ ಒಂದು ನಿಖರ ಪರಿಹಾರವಾಗಿದೆ.

ನ್ಯಾನೊಸ್ನಿಫ್ ಟೆಕ್ನಾಲಜೀಸ್ ವೆಹಾಂತ್ ಟೆಕ್ನಾಲಜೀಸ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆವೆಹಾಂತ್ ಸಂಸ್ಥೆ ಕೃತಕ ಬುದ್ಧಿಮತ್ತೆ/ಮಿಷನ್ ಕಲಿಕೆ ಆಧಾರಿತ ಭೌತಿಕ ಭದ್ರತೆ, ಕಣ್ಗಾವಲು ಮತ್ತು ಸಂಚಾರ ನಿರ್ವಹಣೆ ಹಾಗು ಜಂಕ್ಷನ್ ಗಳಲ್ಲಿ ನಿಯಮಗಳ ಜಾರಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಪರಿಣತಿಗಳಿಸಿದೆ.

ನ್ಯಾನೊಸ್ನಿಫರ್ ನ್ಯಾನೊಗ್ರಾಮ್ ತೂಕದ ಸ್ಫೋಟಕಗಳನ್ನೂ ಸಹ ಶೋಧಿಸಿ ಪತ್ತೆಹಚ್ಚುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ಫಲಿತಾಂಶವನ್ನು ನೀಡುತ್ತದೆ. ಇದು ಮಿಲಿಟರಿ, ವಾಣಿಜ್ಯ ಮತ್ತು ದೇಶೀಯವಾಗಿ ಸಿದ್ಧಪಡಿಸಲಾದ ಸ್ಫೋಟಕಗಳ ಅಪಾಯವನ್ನು ನಿಖರವಾಗಿ ಪತ್ತೆಹಚ್ಚಲಿದೆ. ಅಲ್ಲದೆ ಅದು ನಡೆಸುವ ವಿಶ್ಲೇಷಣೆಯಿಂದಾಗಿ ಸ್ಫೋಟಕಗಳನ್ನು ಸೂಕ್ತ ರೀತಿಯಲ್ಲಿ ವರ್ಗೀಕರಿಸಲು ಸಹ ನೆರವಾಗಲಿದೆ. ಸ್ಥಳೀಯ ಉತ್ಪಾದನೆಯೊಂದಿಗೆ ಎಂಇಎಂಎಸ್ ಸೆನ್ಸರ್ ಒಳಗೊಂಡಂತೆ ಸ್ಥಳೀಯ ಉತ್ಪನ್ನಗಳನ್ನು ಆಧರಿಸಿ ಉತ್ಪಾದಿಸುವುದರಿಂದ ದೇಶಕ್ಕೆ ದೊಡ್ಡ ಪ್ರಮಾಣದ ಆಮದು ವೆಚ್ಚ ಉಳಿತಾಯವಾಗಲಿದೆ.

ಪುಣೆ ಮೂಲದ ಡಿಆರ್ ಡಿಒದ ಹೈ ಎನರ್ಜಿ ಮೆಟೀರಿಯಲ್ ರಿಸರ್ಚ್ ಪ್ರಯೋಗಾಲಯ(ಎಚ್ಇಎಂಆರ್ ಎಲ್) ನಡೆಸಿದ ಪರೀಕ್ಷೆಯಲ್ಲಿ ನ್ಯಾನೊಸ್ನಿಫರ್ ಯಶಸ್ವಿಯಾಗಿದೆ ಮತ್ತು ದೇಶದ ಪ್ರತಿಷ್ಠಿತ ಭಯೋತ್ಪಾದನಾ ನಿಗ್ರಹ ಪಡೆ, ರಾಷ್ಟ್ರೀಯ ಭದ್ರತಾ ದಳ (ಎನ್ ಎಸ್ ಜಿ) ಕೂಡ ಇದನ್ನು ಪರೀಕ್ಷೆಗೊಳಪಡಿಸಿದೆ

***



(Release ID: 1710686) Visitor Counter : 233