ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸಿಎಸ್ಐಆರ್ – ಸಿಎಂಇಆರ್ ಐ ಆಕ್ಸಿಜನ್ ಪುಷ್ಟೀಕರಣ ಘಟಕ – ಸಂಭಾವ್ಯ ಬಹುಮುಖಿ ಜೀವರಕ್ಷಕ 

Posted On: 08 APR 2021 11:50AM by PIB Bengaluru

ಆಮ್ಲಜನಕ ಪುಷ್ಟೀಕರಣ ಘಟಕ ಒಂದು ಸಾಧನವಾಗಿದ್ದು, ಇದು ನಮ್ಮ ಸುತ್ತಮುತ್ತಲಿನ ಆಮ್ಲಜನಕವನ್ನು ತುಂಬಿಕೊಂಡು ನೈಟ್ರೋಜನ್ ಅನ್ನು ಆಯ್ದು ದೂರಮಾಡಿ, ಶುದ್ಧ ಪುಷ್ಟೀಕರಿಸಿದ  ಆಕ್ಸಿಜನ್ ಅನ್ನು ಪೂರೈಸುತ್ತದೆ. ರೀತಿ ಸಾಂದ್ರೀಕರಿಸಿದ ಆಮ್ಲಜನಕವನ್ನು ಆಕ್ಸಿಜನ್ ಮಾಸ್ಕ್ ಅಥವಾ ನೇಸಲ್ ಕಾನ್ನುಲಾ (ಮೂಗಿನ ತೂರುನಳಿಗೆ) ಮೂಲಕ ಉಸಿರಾಟದ ಕಾಯಿಲೆಗಳಿರುವ ರೋಗಿಗಳಿಗೆ ಪೂರೈಸಲಾಗುವುದು. ಸಾಧನವನ್ನು ದೂರದ ಗುಡ್ಡಗಾಡು ಪ್ರದೇಶಗಳಲ್ಲಿ, ಮನೆಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಬಳಕೆ ಮಾಡಬಹುದು. ಇದನ್ನು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳು -ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್(ಸಿಒಪಿಡಿ), ಕ್ರಾನಿಕ್ ಹೈಫೋಕ್ಸೀಮಿಯಾ ಮತ್ತು ಪಲ್ಮನರಿ ಎಡಿಮಾ ಕಾಯಿಲೆಗಳಿರುವ ರೋಗಿಗಳಿಗಾಗಿ ಬಳಸಲಾಗುವುದು. ಇದನ್ನು ಗಂಭೀರ ಸ್ಲೀಪ್ ಅಪ್ನಿಯ ಇರುವವರಿಗೆ ಸಹಾಯಕ ಚಿಕಿತ್ಸೆಯಾಗಿ ಬಳಸಬಹುದು.

ಸಿಎಸ್ಐಆರ್ಸಿಎಂಇಆರ್ ಆಕ್ಸಿಜನ್ ಪುಷ್ಟೀಕರಣ ಘಟಕವನ್ನು  ದೇಶೀಯವಾಗಿ ಅಭಿವೃದ್ಧಿಪಡಿಸಿದ್ದು, ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಷನ್(ಪಿಎಸ್ಎ) ತತ್ವದಡಿ  ಅದು ಕಾರ್ಯನಿರ್ವಹಿಸುತ್ತದೆ ಮತ್ತು ಕೆಲವು ಒತ್ತಡದ ಸಂದರ್ಭಗಳಲ್ಲಿ ನೈಟ್ರೋಜನ್ ಆಯ್ದು ಹೊರಹಾಕಲು ಜಿಯೋಲೈಟ್ ಕಾಲಮ್ ಗಳನ್ನು ಬಳಕೆ ಮಾಡುತ್ತದೆ. ಮೂಲಕ ಆಕ್ಸಿಜನ್  ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಆಕ್ಸಿಜನ್ ಪುಷ್ಟೀಕರಣ ಘಟಕದಲ್ಲಿ ಕಂಪ್ರಸರ್, ಸೋಲೆನಾಯ್ಡ್ ಆಪರೇಟೆಡ್ 3/2 ವಾಲ್ವಸ್ , ಫ್ಲೋ ಮೀಟರ್ ಮತ್ತು ಪ್ರಿ-ಫಿಲ್ಟರ್ ಉಪ ವ್ಯವಸ್ಥೆಗಳಿರುತ್ತವೆ. ಕಂಪ್ರಸರ್ ಒತ್ತಡಕ್ಕೊಳಗಾದ ಗಾಳಿಯನ್ನು ಮಾಡ್ಯೂಲ್ ಗೆ ಪೂರೈಕೆ ಮಾಡುತ್ತದೆ ಮತ್ತು ಅದು ನೈಟ್ರೋಜನ್ ಮೇಲೆ ಅದರ ಆದ್ಯತೆಯ ಪ್ರವೇಶದಿಂದಾಗಿ ಆಮ್ಲಜನಕವು  ಪುಷ್ಟೀಕರಣಗೊಳ್ಳುತ್ತದೆ. ಗಾಳಿಯಲ್ಲಿನ ಕಣಗಳು, ವೈರಾಣು, ಬ್ಯಾಕ್ಟೀರಿಯಾ ಮತ್ತಿತರ ಕಣಗಳನ್ನು ಹೆಪಾ ಫಿಲ್ಟರ್  ಶೋಧಿಸುತ್ತವೆ. ಘಟಕವನ್ನು ಬೆಂಗಳೂರಿನ ಟಿಯುವಿ ರೈನ್ ಲ್ಯಾಂಡ್ ನಲ್ಲಿ ಐಇಸಿ 60601-1 3.1 ಆವೃತ್ತಿಯ ಪರೀಕ್ಷೆ ನಡೆಸಲಾಗಿದೆ.  2012 ವಿದ್ಯುನ್ಮಾನ ಸುರಕ್ಷತಾ ಮಾನದಂಡಗಳನ್ನು ಪಾಲನೆ ಮಾಡಲಾಗಿದೆ. ಮತ್ತು ಸಿಎಸ್ಐಆರ್ಸಿಎಂಇಆರ್ ಐನಲ್ಲಿ ಆಮ್ಲಜನಕ ಪುಷ್ಟೀಕರಣ ಶೇಕಡಾವಾರು ಹರಿವನ್ನು ಪರೀಕ್ಷಿಸಲಾಗಿದೆ. ಆಮ್ಲಜನಕ ಪುಷ್ಟೀಕರಣ ಘಟಕವನ್ನು ಸಿಎಸ್ಐಆರ್ಸಿಎಂಇಆರ್ ಅಭಿವೃದ್ಧಿಪಡಿಸಿದ್ದು, ಇದು 30 ಎಲ್ ಪಿಎಂ ಆಕ್ಸಿಜನ್ ಪುಷ್ಟೀಕರಣದ ವರೆಗೆ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಇದು ವಾಣಿಜ್ಯೀಕವಾಗಿ ಈಗಾಗಲೇ ಲಭ್ಯವಿರುವ ಘಟಕಗಳಲ್ಲಿ  ಇದಿಲ್ಲ. ಯಂತ್ರ 0.5 ಐಪಿಎಂವರೆಗಿನ ನಿಖರತೆಯ ಹರಿವನ್ನು ನಿಯಂತ್ರಿಸುತ್ತದೆ. ಸೌಕರ್ಯ ಅಧಿಕ ಹರಿವಿನ ಆಕ್ಸಿಜನ್ ಥೆರಪಿಗೆ ಸಹಕಾರಿಯಾಗುವುದಲ್ಲದೆ ಇದು ಕೋವಿಡ್-19 ರೋಗಿಗಳ ನಿರ್ವಹಣೆ ಮತ್ತು ಚಿಕಿತ್ಸೆಗೆ ಅತ್ಯುತ್ತಮ ವಿಧಾನ ಎಂಬುದು ಸಾಬೀತಾಗಿದೆ.

ವಾಣಿಜ್ಯಿಕವಾಗಿ ಸದ್ಯ ಲಭ್ಯವಿರುವ ಆಕ್ಸಿಜನ್ ಪುಷ್ಟೀಕರಣ ಘಟಕಗಳು ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ 8,000 ಅಡಿ ಎತ್ತರದ ವರೆಗೆ ಕಾರ್ಯ ನಿರ್ವಹಿಸುತ್ತದೆ. ಆದರೆ ಇವು ಆಪ್ಷನಲ್ ಪ್ಲಗ್ಗಿನ್ ಮಾದರಿಯಲ್ಲಿ ಘಟಕವನ್ನು 14,000 ಅಡಿ ಎತ್ತರದ ವರೆಗೆ ಕಾರ್ಯನಿರ್ವಹಿಸುವಂತೆ ಮಾಡಬಹುದು. ಸಂಕಷ್ಟಗಳ ಸಮಯದಲ್ಲಿ ಯುದ್ಧ ಭೂಮಿ ಮತ್ತು ಮುಂಚೂಣಿ ಪ್ರದೇಶಗಳಲ್ಲಿ ಇದನ್ನು ಬಳಸುವುದು ಸುಲಭ.

ದೇಶದ ಇತರೆ ಸಂಶೋಧನಾ ಸಂಸ್ಥೆಗಳೂ ಸಹ ಇಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ. ಆದರೆ ಸಿಎಸ್ಐಆರ್ಸಿಎಂಇಆರ್ ವ್ಯವಸ್ಥೆ ಶೇ.93ರಷ್ಟು ಆಮ್ಲಜನಕ ಸಾಂದ್ರತೆ ಮಟ್ಟದ ಹೊರ ಹರಿವನ್ನು ಹೊಂದಿದೆ ಮತ್ತು ಸುಮಾರು ಶೇ.27-35ರಷ್ಟು ಹೊರ ಹರಿವನ್ನು ನೀಡುವುದಕ್ಕೆ ಹೋಲಿಸಿದರೆ ಇವು ಐದು ಎಲ್ ಪಿಎಂ ಹೊಂದಿದ್ದು, ತೀರಾ ಮುಂದಿದೆ. ಘಟಕದ ಕಾರ್ಯಕ್ಷಮತೆಯ ಮಾನದಂಡವನ್ನು ಪರಿಶೀಲಿಸಲಾಗಿದ್ದು, ಅದು ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿಗಳಿಗೆ ಸಮಾನವಾಗಿದೆ.

ಸಿಎಸ್ಐಆರ್ಸಿಎಂಇಆರ್ ಐನ ನಿರ್ದೇಶಕರಾದ ಪ್ರೊ||(ಡಾ.) ಹರೀಶ್ ಹಿರಾನಿ ವ್ಯವಸ್ಥೆಯ ಕುರಿತು ಮಾತನಾಡಿ, ಸಿಎಸ್ಐಆರ್ಸಿಎಂಇಆರ್ ಅಭಿವೃದ್ಧಿಪಡಿಸಿರುವ ಆಮ್ಲಜನಕ ಪುಷ್ಟೀಕರಣ ಘಟಕ ಮನೆಗಳಲ್ಲಿ, ಆಸ್ಪತ್ರೆಗಳಲ್ಲಿ, ದೂರ ನಿರ್ಗಮ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ, ರಕ್ಷಣಾ ಪಡೆಗಳಿಗೆ ಅತ್ಯಂತ ಉಪಯುಕ್ತವಾಗಲಿದೆ. ಇದು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಅತ್ಯಂತ ಹೆಚ್ಚು ಪರಿಣಾಮಕಾರಿ ಹಾಗೂ ಅನುಕೂಲಕರವಾಗಲಿದೆ ಎಂದರು. ಘಟಕ ಆಕ್ಸಿಜನ್ ಸಿಲಿಂಡರ್ ಗಳು ಮತ್ತು ವೆಂಟಿಲೇಟರ್ ಗಳ  ಬೇಡಿಕೆ ತಗ್ಗಿಸುವುದಲ್ಲದೆ, ವಾಯುಮಾಲಿನ್ಯ ಹೆಚ್ಚಾಗುವ ಕಾರಣ  ಇದರ ಬೇಡಿಕೆಯೂ ಕ್ರಮೇಣ ಹೆಚ್ಚಾಗಲಿದೆ. ಏಕೆಂದರೆ ಗರಿಷ್ಠ ಆರೋಗ್ಯಕರ ವಾತಾವರಣಕ್ಕೆ ಸೂಕ್ತ ಆಮ್ಲಜನಕ ಮಟ್ಟ ಕಾಯ್ದುಕೊಳ್ಳಲು ಇದು ಅತ್ಯಂತ ಉಪಯುಕ್ತವಾಗಿದೆ.

ಘಟಕದ ವೆಚ್ಚ ಅಂದಾಜು 35,000 ರೂ. ತಗುಲಲಿದೆ. ತಂತ್ರಜ್ಞಾನವನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೆಸರ್ಸ್ ಜೆನ್ ಮೆಡಿಕಲ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಗೆ ಹಸ್ತಾಂತರಿಸಲಾಗಿದೆ.

***



(Release ID: 1710412) Visitor Counter : 233