ಚುನಾವಣಾ ಆಯೋಗ

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದಲ್ಲಿ ಮತ್ತು ಕೇರಳ, ತಮಿಳುನಾಡು, ಪಾಂಡಿಚೇರಿಯಲ್ಲಿನ ವಿಧಾನಸಭಾ ಕ್ಷೇತ್ರಗಳಿಗೆ ಶಾಂತಿಯುತ ಮತದಾನ


475 ವಿಧಾನಸಭಾ ಕ್ಷೇತ್ರಗಳಾದ್ಯಂತ 1.5 ಲಕ್ಷ ಮತಗಟ್ಟೆಗಳಲ್ಲಿ ನಡೆದ ಮತದಾನ

Posted On: 06 APR 2021 6:54PM by PIB Bengaluru

ಕೇರಳ, ತಮಿಳುನಾಡು, ಪುದುಚೇರಿಗಳಲ್ಲಿ ಮತ್ತು ಮೂರನೇ ಹಂತದಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇಂದು 475 ವಿಧಾನಸಭಾ ಕ್ಷೇತ್ರಗಳಲ್ಲಿನ 1,53,538 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಸಲಾಯಿತು. ವ್ಯಕ್ತಿಗತ ಅಂತರದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು 1500 ರಿಂದ 1000 ಕ್ಕೆ ಇಳಿಸಲಾಗಿದೆ ಎಂಬುದನ್ನೂ ಗಮನದಲ್ಲಿಟ್ಟುಕೊಂಡು ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗಿತ್ತು.

ಮತದಾನದಲ್ಲಿ ಮತದಾರರು, ಮತಗಟ್ಟೆಗಳು ಮತ್ತು ವೀಕ್ಷಕರ ವಿವರಗಳು ಈ ಕೆಳಕಂಡಂತಿವೆ:

ಕೋಷ್ಟಕ 1

ರಾಜ್ಯ

ಕೇರಳ

ತಮಿಳು ನಾಡು

ಪಾಂಡಿಚೇರಿ

ಅಸ್ಸಾಂ 3ನೇ ಹಂತ

ಪಶ್ಚಿಮ ಬಂಗಾಳ 3ನೇ ಹಂತ

ವಿಧಾನಸಭಾ ಕ್ಷೇತ್ರಗಳು

140

234

30

40

31

ಮತಗಟ್ಟೆಯ ಸಂಖ್ಯೆ

40771

88,937

1558

11,401

 

10,871

 

ನೋಂದಾಯಿತ ಮತದಾರರು

2,75,03,199

6,28,69,955

1004197

79,19,641

78,52,425

ನಿಯೋಜಿತರಾದ ಸಾಮಾನ್ಯ ವೀಕ್ಷಕರ ಸಂಖ್ಯೆ

70

150

11

33

22

ನಿಯುಕ್ತರಾದ ಪೊಲೀಸ್ ವೀಕ್ಷಕರ ಸಂಖ್ಯೆ

20

41

5

9

7

ನಿಯುಕ್ತಿಗೊಂಡ ವೆಚ್ಚ ಕುರಿತ ವೀಕ್ಷಕರ ಸಂಖ್ಯೆ

40

119

12

17

9

ಸಂಜೆ 5 ಗಂಟೆವರೆಗೆ ಶೇಕಡಾವಾರ ಮತದಾನ

69.95%

64.92%

77.90%

78.94%

77.68%

Total Number of Assembly Constituencies = 475 (1)

ಒಟ್ಟಾರೆ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 475

ಕೇರಳ

ತಮಿಳುನಾಡು

ಪುದುಚೇರಿ, ಅಸ್ಸಾಂ 3ನೇ ಹಂತ,

 ಪಶ್ಚಿಮ ಬಂಗಾಳ 3ನೇ ಹಂತ

Total Number of Contesting Candidates = 5821

ಒಟ್ಟಾರೆ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ 5821

ಕೇರಳ

ತಮಿಳುನಾಡು

ಪುದುಚೇರಿ, ಅಸ್ಸಾಂ 3ನೇ ಹಂತ,

 ಪಶ್ಚಿಮ ಬಂಗಾಳ 3ನೇ ಹಂತ

ಅಂತರ್ಗತ ಮತ್ತು ಪ್ರವೇಶಾರ್ಹ ಚುನಾವಣೆಗಳನ್ನು ಖಾತ್ರಿಪಡಿಸಲು, ಭಾರತೀಯ ಚುನಾವಣಾ ಆಯೋಗ ಪಿಡಬ್ಲ್ಯುಡಿಗಳು, ಹಿರಿಯ ನಾಗರಿಕರು 80 ವರ್ಷ ವಯಸ್ಸಿನ ಮೇಲ್ಪಟ್ಟವರು, ಕೋವಿಡ್ -19 ಶಂಕಿತ ಅಥವಾ ಪೀಡಿತ ವ್ಯಕ್ತಿಗಳು ಮತ್ತು ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಅಂಚೆ ಮತಪತ್ರ ಸೌಲಭ್ಯದ ಆಯ್ಕೆಯನ್ನು ವಿಸ್ತರಿಸಿತ್ತು. ಈ ಮತದಾರರ ಅನುಕೂಲಕ್ಕಾಗಿ ಸೂಕ್ತವಾದ ವ್ಯವಸ್ಥೆಗಳನ್ನು ಕಲ್ಪಿಸುವ ಹೊಣೆಯನ್ನು ಬೇರು ಮಟ್ಟದ ವೀಕ್ಷಕರು ನೋಡಿಕೊಂಡರು.

ಒಟ್ಟು ಪಿ.ಡಬ್ಲ್ಯು.ಡಿ. ಮತದಾರರ ಸಂಖ್ಯೆ = 906763

WhatsApp Image 2021-04-06 at 5.16.40 PM

80 ವರ್ಷ ಮೇಲ್ಪಟ್ಟ ಒಟ್ಟು ಮತದಾರರು = 2152210

WhatsApp Image 2021-04-06 at 5.16.40 PM (1)

ಪಿ.ಡಬ್ಲ್ಯು.ಡಿ. ಮತದಾರರು ಮತ್ತು 80+  ಮತದಾರರ ವಿವರ ಕೆಳಕಂಡಂತಿದೆ:

ಕೋಷ್ಟಕ 2

ರಾಜ್ಯ

ಕೇರಳ

ತಮಿಳುನಾಡು

ಪಾಂಡಿಚೇರಿ

ಅಸ್ಸಾಂ 3ನೇ ಹಂತ

ಪಶ್ಚಿಮ ಬಂಗಾಳ 3ನೇ ಹಂತ

ಒಟ್ಟು

ಪಿ.ಡಬ್ಲ್ಯುಡಿ. ಮತದಾರರು

294718

4,81,899

12038

54,148

64,083

9,06,763

80+ ಮತದಾರರು

622064

12,87,457

17146

99,471

1,26,177

21,52,210

ಪ್ರಮಾಣಿತ ಕಾರ್ಯವಿಧಾನದ ಪ್ರಕಾರ ಈ ಎಲ್ಲಾ ಇವಿಎಂಗಳು ಮತ್ತು ವಿವಿಪ್ಯಾಟ್ ಗಳು ಈಗಾಗಲೇ ರಾಜಕೀಯ ಪಕ್ಷಗಳು / ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಮೊದಲ ಹಂತದಲ್ಲಿ ಯಾದೃಚ್ಛೀಕವಾಗಿ ಪರಿಶೀಲನೆಯಾಗಿದ್ದು, ಸ್ಥಾಪನೆಯಾಗಿದ್ದವು. ಎಫ್.ಎಲ್.ಸಿ.ಯ ವೇಳೆ ಮತ್ತು ಸ್ಥಾಪನೆಯ ವೇಳೆ ಪ್ರತಿಯೊಂದು ಇವಿಎಂ ಮತ್ತು ವಿವಿಪ್ಯಾಟ್ ಗಳಲ್ಲಿ ಅಣಕು ಮತದಾನ ನಡೆಸಲಾಗಿತ್ತು. ಇಂದು ಮತದಾನದ ಆರಂಭಕ್ಕೆ ಮುನ್ನ ಇವಿಎಂಗಳು ಮತ್ತು ವಿವಿಪ್ಯಾಟ್ ಗಳಲ್ಲಿ ಅಭ್ಯರ್ಥಿಗಳ ಏಜೆಂಟರುಗಳ ಸಮ್ಮುಖದಲ್ಲಿ ಪ್ರಮಾಣಿತ ಕಾರ್ಯವಿಧಾನದಂತೆ ಕನಿಷ್ಠ 50 ಅಣಕು ಮತ ಚಲಾವಣೆ ಮಾಡಿ ತೋರಿಸಲಾಯಿತು.  ಅಣಕು ಮತದಾನದ ಅಂತ್ಯದಲ್ಲಿ ಇವಿಎಂ ಮತಗಳ ಫಲಿತಾಂಶವನ್ನು ವಿವಿಪ್ಯಾಟ್ ಹಾಳೆಗಳ ಜೊತೆಗೆ ತುಲನೆ ಮಾಡಿ ಮತಗಟ್ಟೆ ಏಜೆಂಟರುಗಳಿಗೆ ತೋರಿಸಲಾಯಿತು.   ಅಣಕು ಮತದಾನ ಸಮಯದಲ್ಲಿ ಕಾರ್ಯನಿರ್ವಹಿಸದ ದರವು ಕಳೆದ ಕೆಲವು ಮತದಾನಗಳಲ್ಲಿ ಹೋಲಿಸಿದರೆ / ಆ ಅನುಭವಕ್ಕಿಂತ ಕಡಿಮೆಯಾಗಿತ್ತು.

WhatsApp Image 2021-04-06 at 1.22.42 PM

ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವ ಪ್ರಮುಖ ಉದ್ದೇಶದೊಂದಿಗೆ, ಸೂಕ್ಷ್ಮ ಮತ್ತು ಪ್ರಮುಖ ಮತಗಟ್ಟೆಗಳಿರುವ ಪ್ರತಿಶತ 50ಕ್ಕಿಂತ ಅಧಿಕ ಮತಕೇಂದ್ರಗಳಲ್ಲಿ ಸುರಕ್ಷಿತ ಮತ್ತು ಸುಭದ್ರ ವಾತಾವರಣ ಇದೆ ಎಂಬುದನ್ನು ಖಾತ್ರಿಪಡಿಸಲು ನೇರ ನಿಗಾ ಮತ್ತು ವೆಬ್ ಕ್ಯಾಸ್ಟ್ ಅನ್ನು ಇಸಿಐ ನಿಯಮಾವಳಿ ರೀತ್ಯ ಮಾಡಲಾಯಿತು. ಆಯೋಗ, ಸಿಇಓಗಳು, ಡಿಇಓಗಳು, ವೀಕ್ಷಕರು ಈ ನೇರ ದೃಶ್ಯಗಳನ್ನು ವೀಕ್ಷಿಸಲು, ಈ ಮತಗಟ್ಟೆಗಳ ಮೇಲೆ ತೀವ್ರ ನಿಗಾ ಇಡಲು ಅವಕಾಶ ನೀಡಲಾಗಿತ್ತು.

79395

ಶೇ.51.71

 

 

153538ಗಳ ಪೈಕಿ

ಮತಕೇಂದ್ರಗಳ ಮೇಲೆ

ನೇರ ನಿಗಾ ಇಡಲಾಗಿತ್ತು

ಆಯೋಗದ ಸೂಚನೆಯಂತೆ ಕಾನೂನು ಸುವ್ಯವಸ್ಥೆ ಸಮಸ್ಯೆಯಿಂದಾಗಿ ಮತಗಟ್ಟೆ ಅಧಿಕಾರಿ ಅಗತ್ಯ ಎಂದು ಬಯಸದಿದ್ದರೆ ಸಿಎಪಿಎಫ್ ಸಿಬ್ಬಂದಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತದಾನ ಕೇಂದ್ರದೊಳಗೆ ಪ್ರವೇಶಿಸುವಂತಿಲ್ಲ. ನಿಶ್ಶಬ್ಧ ಅವಧಿಯಲ್ಲಿ ಅಂದರೆ ಮತದಾನದ ಸಮಯ ಮುಗಿಯಲು 48 ಗಂಟೆಗಳ ಮೊದಲು ಮತದಾನ ನಡೆಯುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೊರಗಿನವರನ್ನು ಅನುಮತಿಸಲಾಗುವುದಿಲ್ಲ ಎಂಬುದು ಆಯೋಗದ ಸ್ಪಷ್ಟ ಸೂಚನೆಯಾಗಿದೆ. ಆಯೋಗವು ಡಿಇಒಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವ ವೇಳೆ ಈ ಸೂಚನೆಯನ್ನು ಪುನರುಚ್ಚರಿಸಲಾಯಿತು. ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಯಿತು.

 

WhatsApp Image 2021-04-06 at 12.39.02 PM

WhatsApp Image 2021-04-06 at 10.28.06 AM

WhatsApp Image 2021-04-06 at 10.28.06 AM (1)

  

ಈ ಹಂತದವರೆಗೆ ನಡೆಯುತ್ತಿರುವ ಚುನಾವಣೆಯ ಸಮಯದಲ್ಲಿ, ಅಂದರೆ 2021ರ ಏಪ್ರಿಲ್ 6ರವರೆಗೆ ಐದು ರಾಜ್ಯಗಳಿಂದ ದಾಖಲೆಯ 947.98 ಕೋಟಿ ರೂ.ಗಳ ಮೌಲ್ಯದ ಹಣ, ವಸ್ತು ವಶಪಡಿಸಿಕೊಳ್ಳಲಾಗಿದೆ. ಈ ವಶದಲ್ಲಿ ನಗದು, ಮದ್ಯ, ಮಾದಕ ವಸ್ತುಗಳು, ಉಚಿತ ಉಡುಗೊರೆ ಇತ್ಯಾದಿಗಳು ಸೇರಿದ್ದು, ಇದು 2016ರ ಜಿಇ ಎಲ್.ಎ.ನಲ್ಲಿ ವಶಪಡಿಸಿಕೊಳ್ಳಲಾಗಿದ್ದ 225.7 ಕೋಟಿ ರೂ. ಮೌಲ್ಯಕ್ಕೆ ಹೋಲಿಸಿದರೆ 4.198 ಪಟ್ಟು ಹೆಚ್ಚಾಗಿದೆ. ಆಯೋಗವು ಆಮಿಷ ಮುಕ್ತ ಚುನಾವಣೆಗಳಿಗೆ ವಿಶೇಷ ಒತ್ತು ನೀಡುತ್ತಿದ್ದು, ಅನಗತ್ಯ ಧನಬಲ, ಮದ್ಯ, ಉಚಿತ ಉಡುಗೊರೆಗಳನ್ನು ತಡೆಯುತ್ತಿದೆ. ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ಈ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಗದು, ಮದ್ಯ, ಮಾದಕ ದ್ರವ್ಯಗಳು ಮತ್ತು ಉಚಿತ ಉಡುಗೊರೆಗಳ ಸಾಗಾಟವನ್ನು ಪರೀಕ್ಷಿಸಲು ಒಟ್ಟು 4606 ಫ್ಲೈಯಿಂಗ್ ಸ್ಕ್ವಾಡ್‌ (ಎಫ್‌.ಎಸ್) (ಹಠಾತ್ ಪರಿಶೀಲನೆ ನಡೆಸುವ ತಂಡ) ಗಳು ಮತ್ತು 4670 ಸ್ಥಾಯಿ ಕಣ್ಗಾವಲು ತಂಡಗಳನ್ನು (ಎಸ್‌.ಎಸ್‌.ಟಿ) ನಿಯೋಜಿಸಲಾಗಿತ್ತು, ಡಿಇಒಗಳು, ಜಿಲ್ಲೆಗಳಲ್ಲಿನ ವೆಚ್ಚ ವೀಕ್ಷಕರು ಮತ್ತು ವಿಶೇಷ ವೀಕ್ಷಕರು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ನಿಯುಕ್ತರಾಗಿದ್ದರು. ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿಯ ವಿವಿಧ ನಿಲ್ದಾಣಗಳಲ್ಲಿ ಆದಾಯ ತೆರಿಗೆ ಇಲಾಖೆಯ ಒಟ್ಟು 19 ವಾಯು ಗುಪ್ತಚರ ಘಟಕಗಳನ್ನು (ಎಐಯು) ಸ್ಥಾಪಿಸಲಾಗಿತ್ತು.

ಎಲ್.ಎ. 2016 ಮತ್ತು ಎಲ್.ಎ.2021ರಲ್ಲಿನ ಒಟ್ಟು ವಶ (ಕೋಟಿ ರೂ.ಗಳಲ್ಲಿ)

Total Seizure in LA 2016 vs LA 2021 (in Rs. Cr.)

ಕೇರಳ, ತಮಿಳುನಾಡು, ಪುದುಚೇರಿ, ಅಸ್ಸಾಂ, ಪಶ್ಚಿಮ ಬಂಗಾಳ ಒಟ್ಟು

06.04.2021ರ ಮಧ್ಯಾಹ್ನದವರೆಗೆ ವಶಪಡಿಸಿಕೊಂಡ ವಸ್ತುವಾರು, ರಾಜ್ಯವಾರು ವಿವರ

 

ರಾಜ್ಯಗಳು

ನಗದು

(ಕೋಟಿ ರೂ.ನಲ್ಲಿ)

ಬೆಲೆಬಾಳುವ ಲೋಹ

(ಕೋಟಿ ರೂ.ಗಳಲ್ಲಿ)

ಮಾದಕ/ಅಮಲು ವಸ್ತುಗಳು

ಇತರ ವಸ್ತುಗಳು/ ಉಚಿತ ಉಡುಗೊರೆಗಳು

ಮದ್ಯ

ಒಟ್ಟು (ಕೋಟಿ ರೂ.ಗಳಲ್ಲಿ)

ಒಟ್ಟು ವಶ ಎಲ್.ಎ. 2016ರಲ್ಲಿ (ಕೋಟಿ ರೂ.ಗಳಲ್ಲಿ)

ಎಲ್.ಎ. 2016 ರಿಂದ ಬದಲಾದ ಶೇಕಡಾ

ವಾರು

ಪ್ರಮಾಣ (ಕೆಜೆಯಲ್ಲಿ)

ಮೌಲ್ಯ (ರೂ.ಗಳಲ್ಲಿ)

ಮೌಲ್ಯ (ಕೋಟಿ ರೂ.)

ಪ್ರಮಾಣ (ಲೀ.ಗಳಲ್ಲಿ.)

ಮೌಲ್ಯ (ಕೋಟಿ ರೂ.ಗಳಲ್ಲಿ)

ಕೇರಳ

22.64

49.21

812.01

4.05

1.94

67542.7

5.01

82.84

26.13

+317.03%

ತಮಿಳುನಾಡು

236.51

176.22

-

2.22

25.64

289618.27

5.24

445.81

130.99

+340.33%

ಪುದುಚೇರಿ

5.45

27.42

95

0.25

3.06

27644.82

0.7

36.89

7.74

+476.61%

ಅಸ್ಸಾಂ

26.69

3.69

6940.95

34.4

15.18

2044249.33

39.34

119.29

16.58

+719.48%

ಪಶ್ಚಿಮ ಬಂಗಾಳ

40.27

10.28

255.41

115.89

73.21

1935455.18

23.52

263.15

44.33

+593.61%

ಒಟ್ಟು

331.56

266.82

8103.37

156.81

119.03

4364510.3

73.81

947.98

225.77

+419.88%

 

 

WhatsApp Image 2021-04-06 at 4.11.31 PM (1)

ಉಚಿತ ಉಡುಗೊರೆಗಳ ವಶ

 

 

WhatsApp Image 2021-04-06 at 4.11.32 PM (1)

ನಗದು ವಶ

WhatsApp Image 2021-04-06 at 4.11.31 PM

ಮಾದಕ ವಸ್ತುಗಳ ವಶ

 

WhatsApp Image 2021-04-06 at 4.11.32 PM (2)

ಮದ್ಯ ವಶ

WhatsApp Image 2021-04-06 at 4.11.32 PM

ಬೆಲೆಬಾಳುವ ಲೋಹದ ವಶ

 

ಭಾರತದ ಚುನಾವಣಾ ಆಯೋಗದ ಸಿ ವಿಜಿಲ್ ಆ್ಯಪ್ ನಾಗರಿಕ ಕೇಂದ್ರಿತ ಮೊಬೈಲ್ ಆನ್ವಯಿಕವಾಗಿದ್ದು, ಇದು ಎಂಸಿಸಿ ಉಲ್ಲಂಘನೆಯ ಪ್ರಕರಣಗಳನ್ನು ಸಕಾಲದ ಆಧಾರದ ಮೇಲೆ ವರದಿ ಮಾಡಲು ಜನರಿಗೆ ಅಧಿಕಾರ ನೀಡುತ್ತದೆ, ಆ ಸ್ಥಳದ ಜನಸಂಖ್ಯೆಯ ಸ್ವಯಂ ವಿವರಗಳೊಂದಿಗೆ ಮತ್ತು ಕ್ಷೇತ್ರ ಮಟ್ಟದಲ್ಲಿ ಪರಿಶೀಲನೆಯ ನಂತರ 100 ನಿಮಿಷಗಳಲ್ಲಿ ಪ್ರತಿಕ್ರಿಯಿಸುತ್ತದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 187146 ಪ್ರಕರಣಗಳನ್ನು ಸಿವಿಜಿಲ್ ಆ್ಯಪ್ ಮೂಲಕ ವರದಿ ಮಾಡಲಾಗಿದ್ದು, ಈ ಪೈಕಿ 186647 ಪ್ರಕರಣಗಳನ್ನು ಇಂದಿನವರೆಗೆ (ಮಧ್ಯಾಹ್ನ 4:00) ವಿಲೇವಾರಿ ಮಾಡಲಾಗಿದೆ.

WhatsApp Image 2021-04-06 at 1.18.03 PM

WhatsApp Image 2021-04-06 at 9.17.46 AM

ಐದು ರಾಜ್ಯಗಳ ಮತದಾನ ಕೇಂದ್ರಗಳಾದ್ಯಂತ, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ನೀರಿನ ಸೌಲಭ್ಯವಿರುವ ಶೌಚಾಲಯ, ಬೆಳಕಿಗೆ ಸಾಕಷ್ಟು ವ್ಯವಸ್ಥೆ, ಪಿಡಬ್ಲ್ಯುಡಿ ಮತದಾರರಿಗೆ ಗಾಲಿಕುರ್ಚಿಗೆ ಸೂಕ್ತವಾದ ಇಳಿಜಾರು ರಸ್ತೆ ಮತ್ತು ಪ್ರಮಾಣಿತ ಮತದಾನ ಕಟ್ಟೆಯಂತ ಕನಿಷ್ಠ ಸೌಲಭ್ಯಗಳು (ಎಎಂಎಫ್) ಲಭ್ಯವಿದ್ದವು. ಸಾರಿಗೆ ಸೌಲಭ್ಯ, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಸಹಾಯ ಮಾಡುವ ಸ್ವಯಂಸೇವಕರು ಮತದಾನ ಕೇಂದ್ರಗಳಲ್ಲಿ ಉಪಸ್ಥಿತರಿದ್ದರು.

WhatsApp Image 2021-04-06 at 1.00.27 PM

e

WhatsApp Image 2021-04-06 at 10.43.49 AM

 ಎಲ್ಲ ಮತ ಕೇಂದ್ರಗಳಲ್ಲೂ ಕೋವಿಡ್ -19 ಸುರಕ್ಷತಾ ಶಿಷ್ಟಾಚಾರ ಪಾಲನೆ ಮಾಡಲಾಯಿತು. ಮತದಾರರ ಮತ್ತು ಚುನಾವಣಾ ಸಿಬ್ಬಂದಿಯ ಸುರಕ್ಷತೆಯನ್ನು ಖಾತ್ರಿಪಡಿಸಲು, ಮತದಾನಕ್ಕೆ ಒಂದು ದಿನ ಮೊದಲು ಮತಗಟ್ಟೆಗಳನ್ನು ನೈರ್ಮಲ್ಯಗೊಳಿಸಲಾಗಿತ್ತು, ಥರ್ಮಲ್ ಸ್ಕ್ಯಾನರ್, ಕರ ನೈರ್ಮಲ್ಯಕ ಮತ್ತು ಮಾಸ್ಕ್ ಗಳು ಸಹ ಲಭ್ಯವಿರುವಂತೆ ನೋಡಿಕೊಳ್ಳಲಾಯಿತು.   ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಬಿ.ಎಲ್.ಓ.ಗಳು ಮತ್ತು ಸ್ವಯಂ ಸೇವಕರು ಮತಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದನ್ನು ನಿಯಂತ್ರಿಸಿದರು. ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ, ಕೋವಿಡ್ -19 ಸೋಂಕಿತರಿಗೆ ಸೂಕ್ತ ಕೋವಿಡ್ -19 ಶಿಷ್ಟಾಚಾರದೊಂದಿಗೆ ಮತ್ತು ಆರೋಗ್ಯ ಪ್ರಾಧಿಕಾರಗಳ ನಿಗಾದಲ್ಲಿ ಮತದಾನಕ್ಕೆ ಅವಕಾಶ ನೀಡಲಾಯಿತು. ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳ ಮಧ್ಯೆ ಕೋವಿಡ್ ಸುರಕ್ಷತೆ, ಭಯ ಮುಕ್ತ ಮತ್ತು ಆಮಿಷ ಮುಕ್ತ ಚುನಾವಣೆಗಳಿಗೆ ಪಾರದರ್ಶಕ ಮತ್ತು ಜಾಗರೂಕತೆಯ ಕಾರ್ಯವಿಧಾನವನ್ನು ಖಾತ್ರಿಪಡಿಸಿಕೊಳ್ಳಲು ಆಯೋಗವು ಹೆಚ್ಚಿನ ಒತ್ತು ನೀಡಿತ್ತು. ಬಿಗಿ ಭದ್ರತಾ ವ್ಯವಸ್ಥೆಯಡಿ ಎಸಿಗಳಲ್ಲಿ ಮತದಾನ ನಡೆಸಲಾಯಿತು.

 

WhatsApp Image 2021-04-06 at 10.03.15 AM

WhatsApp Image 2021-04-06 at 10.28.09 AM

WhatsApp Image 2021-04-06 at 10.28.10 AM

ಸುಗಮ ಮತ್ತು ಸುರಕ್ಷಿತ ಚುನಾವಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ರೂಪಿಸಿತ್ತು. ಚುನಾವಣೆಯನ್ನು ಸುಗಮವಾಗಿ, ನ್ಯಾಯ ಸಮ್ಮತವಾಗಿ ನಡೆಸಲು, ಎಲ್ಲರನ್ನೂ ಒಳಗೊಂಡಂತೆ ಮತ್ತು ಸುಗಮ ಪ್ರವೇಶಕ್ಕೆ ಶಾಂತಿಯುತ, ಭಯ ಮುಕ್ತ ಮತ್ತು ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ಸ್ಥಳೀಯ ಪೊಲೀಸ್ ಪಡೆಗಳ ಜೊತೆಗೆ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಗಳನ್ನು ನಿಯೋಜಿಸಲಾಗಿತ್ತು. ಮತದಾರರಿಗೆ ಅದರಲ್ಲೂ  ಸಮಾಜದ ದುರ್ಬಲ ವರ್ಗದವರಿಗೆ ಧೈರ್ಯ ತುಂಬಲು ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ, ನಿಯಮಿತ ಕೇಂದ್ರಗಳಲ್ಲಿ ಗಸ್ತು ಮತ್ತು ಇತರ ವಿಶ್ವಾಸಾರ್ಹತೆ ಮೂಡಿಸುವ ಕ್ರಮಗಳನ್ನು ನಡೆಸಲಾಯಿತು.

 

WhatsApp Image 2021-04-06 at 12.57.57 PM

 

ಎಲ್ಲ ಬಾಧ್ಯಸ್ಥರಿಗೆ ಅದರಲ್ಲೂ ನಿರ್ಭೀತಿಯಿಂದ ಇಂದು ನಡೆದ ಚುನಾವಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಮತದಾರರಿಗೆ ಭಾರತದ ಚುನಾವಣಾ ಆಯೋಗ ಧನ್ಯವಾದ ಅರ್ಪಿಸಿದೆ. ಕೋವಿಡ್ ಶಿಷ್ಟಾಚಾರಗಳೊಂದಿಗೆ ಚುನಾವಣೆ ಪ್ರಕ್ರಿಯೆಯೆಲ್ಲಿ ಪಾಲ್ಗೊಂಡ ಪಿಡ್ಲ್ಯುಡಿ ಮತದಾರರು, ಹಿರಿಯ ನಾಗರಿಕರು, ಸೇವಾ ಮತದಾರರಿಗೆ ವಿಶೇಷವಾಗಿ ಚುನಾವಣಾ ಆಯೋಗ ಧನ್ಯವಾದ ಅರ್ಪಿಸಿದೆ.   ಸಾಂಕ್ರಾಮಿಕದ ನಡುವೆಯೂ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಸುರಕ್ಷಿತ ಚುನಾವಣೆ ನಡೆಸಲು ನೆರವಾದ ಕರ್ತವ್ಯದಲ್ಲಿರುವ ಮತದಾನ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮೇಲ್ವಿಚಾರಣಾ ಸಿಬ್ಬಂದಿ, ವೀಕ್ಷಕರು, ವಿಶೇಷ ವೀಕ್ಷಕರು ರೈಲ್ವೆ ಅಧಿಕಾರಿಗಳು, ಜಾರಿ ಪ್ರಾಧಿಕಾರಗಳು ಮತ್ತು ಆರೋಗ್ಯ ಅಧಿಕಾರಿಗಳು ಸೇರಿದಂತೆ ಇಡೀ ಚುನಾವಣಾ ವ್ಯವಸ್ಥೆಯಲ್ಲಿದ್ದವರ ಸೇವೆಯನ್ನು ಇಸಿಐ ಗೌರವಿಸಿದೆ. ಸುಗಮ ಮತ್ತು ಶಾಂತಿಯುತ ಚುನಾವಣೆಗಳನ್ನು ನಡೆಸಲು ಮಾಧ್ಯಮಗಳು ಸೇರಿದಂತೆ ಎಲ್ಲಾ ಬಾಧ್ಯಸ್ಥರ ಸಕ್ರಿಯ ಸಹಕಾರ, ನಿಕಟ ಸಹಯೋಗ ಮತ್ತು ರಚನಾತ್ಮಕ ಸಹಭಾಗಿತ್ವವನ್ನು ಆಯೋಗ ಕೋರಿದೆ.

ಚುನಾವಣೆ ಸಂಬಂಧಿತ ಮಾಹಿತಿ, ಚಿತ್ರಗಳು ಮತ್ತು ಇತರ ವಿವರಗಳಿಗಾಗಿ ನಮ್ಮ ಅಂತರ್ಜಾಲ ತಾಣ eci.gov.in ಮತ್ತು ಟ್ವಿಟರ್ ಹ್ಯಾಂಡಲ್ @SpokespersonECI&@ECISVEEP ಗೆ ಭೇಟಿ ನೀಡಬಹುದು. ಅತಿ ಹೆಚ್ಚಿನ ರೆಸಲ್ಯೂಷನ್ ಇರುವ ಚಿತ್ರಗಳಿಗಾಗಿ https://pib.gov.in ಗೆ ಭೇಟಿ ನೀಡಿ.



(Release ID: 1710045) Visitor Counter : 410