ಸಂಸ್ಕೃತಿ ಸಚಿವಾಲಯ

‘ಆಜಾದಿ ಕ ಅಮೃತ ಮಹೋತ್ಸವ’ದ ಭಾಗವಾಗಿ 25 ದಿನಗಳ ಕಾಲ ನಡೆದ ದಂಡಿಯಾತ್ರೆಗೆ ವರ್ಣರಂಜಿತ ತೆರೆ


ದಂಡಿ ಉಪ್ಪಿನ ಸತ್ಯಾಗ್ರಹ ಜಲಾನಯನ ಅಭಿಯಾನವಾಗಿ ಇತಿಹಾಸದ ದಿಕ್ಕನ್ನು ಬದಲಿಸಿತು ಎಂದು ಶ್ರೀ ಎಂ. ವೆಂಕಯ್ಯನಾಯ್ಡು ಹೇಳಿಕೆ

ಸಾಂಕೇತಿಕ ದಂಡಿಯಾತ್ರೆ ನಮ್ಮ ಸ್ವಾವಲಂಬನೆ ಮತ್ತು ಆತ್ಮಗೌರವದ ನಮ್ಮ ಪಯಣವನ್ನು ಪುನರುಜ್ಜೀವಗೊಳಿಸಿದೆ; ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್

Posted On: 06 APR 2021 6:30PM by PIB Bengaluru

 ‘ಆಜಾದಿ ಕ ಅಮೃತ ಮಹೋತ್ಸವ’ದ ಭಾಗವಾಗಿ ಕಳೆದ 25 ದಿನಗಳಿಂದ ನಡೆಯುತ್ತಿದ್ದ  ದಂಡಿ ಪಾದಯಾತ್ರೆ ಇಂದು ಗುಜರಾತ್ ನ ದಂಡಿಯ ರಾಷ್ಟ್ರೀಯ ಉಪ್ಪು ಸತ್ಯಾಗ್ರಹ ಸ್ಮಾರಕದಲ್ಲಿ ವರ್ಣರಂಜಿತ ತೆರೆಕಂಡಿತು, ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಇದಕ್ಕೆ ಸಾಕ್ಷಿಯಾದರು. ಈ ಕಾರ್ಯಕ್ರಮವನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಗುಜರಾತ್ ರಾಜ್ಯ ಸರ್ಕಾರ ಆಯೋಜಿಸಿತ್ತು. ಗುಜರಾತ್  ಗವರ್ನರ್ ಶ್ರೀ ಆಚಾರ್ಯ ದೇವವ್ರತ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಗುಜರಾತ್ ನ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ, ಸಿಕ್ಕಿಂ ಮುಖ್ಯಮಂತ್ರಿ ಶ್ರೀ ಪ್ರೇಮ್ ಸಿಂಗ್ ತಮಂಗ್, ಗುಜರಾತ್ ನ ಉಪಮುಖ್ಯಮಂತ್ರಿ ಶ್ರೀ ನಿತಿನ್ ಪಟೇಲ್, ಸಂಸತ್ ಸದಸ್ಯ ಶ್ರೀ ಸಿ.ಆರ್. ಪಾಟೀಲ್, ಸಾಬರಮತಿ ಆಶ್ರಮ ಟ್ರಸ್ಟ್ ನ ಉಪಾಧ್ಯಕ್ಷರ ಕಾರ್ಯದರ್ಶಿ ಶ್ರೀ ಐ.ವಿ. ಸುಬ್ಬರಾವ್, ಟ್ರಸ್ಟಿ ಶ್ರೀ ಸುದರ್ಶನ ಅಯ್ಯಂಗಾರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

          ಈ    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಗಾಂಧಿ ಅವರ ಮಹತ್ವದ ದಂಡಿ ಉಪ್ಪಿನ ಸತ್ಯಾಗ್ರಹ ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಲಾನಯನ ಆಂದೋಲನವಾಗಿ ಮಾರ್ಪಟ್ಟಿತು ಎಂದರು ಮತ್ತು ಅದು ಇತಿಹಾಸದ ದಿಕ್ಕನ್ನು ಬದಲಿಸಿತು ಎಂದು ಶ್ರೀ ನಾಯ್ಡು ಹೇಳಿದರು. “ನಾವು ಇಂದು ಸಾಂಕೇತಿಕವಾಗಿ ನಡೆಸುತ್ತಿರುವ ದಂಡಿ ಸತ್ಯಾಗ್ರಹ ನಾವು ಸವಾಲುಗಳನ್ನು ಎದುರಿಸುವಾಗ ನಮ್ಮ ರಾಷ್ಟ್ರದ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ” ಎಂದು ಹೇಳಿದರು.

   ಮಹಾತ್ಮ ಗಾಂಧೀಜಿ ಅವರು ಸದಾ ತಮ್ಮ ಎದುರಾಳಿಗಳಿಗೂ ವಿನಮ್ರ ಮತ್ತು ಗೌರವಯುತ ಭಾಷೆಯನ್ನು ಬಳಕೆ ಮಾಡುತ್ತಿದ್ದರು. ಅದರಿಂದ ನಾವೆಲ್ಲಾ ಸ್ಫೂರ್ತಿ ಪಡೆಯಬೇಕಿದೆ ಎಂದು ಉಪರಾಷ್ಟ್ರಪತಿ ಹೇಳಿದರು. “ಗಾಂಧೀಜಿ ಅವರ ಅಹಿಂಸಾ ತತ್ವ ಕೇವಲ ದೈಹಿಕ ಹಿಂಸಾಚಾರಕ್ಕೆ ಮಾತ್ರ ಸೀಮಿತವಾದುದಲ್ಲ, ಬದಲಿಗೆ  ಅದು ಅಹಿಂಸೆಯನ್ನು ಪದಗಳಲ್ಲಿ ಮತ್ತು ಚಿಂತನೆಗಳಲ್ಲೂ ಸಹ ಅಂತರ್ಗತವಾಗಿ ಸೇರಿದೆ” ಎಂದು ಹೇಳಿದರು.  

          75ನೇ ಸ್ವಾತಂತ್ರ್ಯ ವರ್ಷಾಚರಣೆ ಅಂಗವಾಗಿ ಆಯೋಜಿಸಿರುವ 75 ವಾರಗಳ “ಆಜಾದಿ ಕ ಅಮೃತ ಮಹೋತ್ಸವ” ಕಾರ್ಯಕ್ರಮಕ್ಕೆ 2021ರ ಮಾರ್ಚ್ 12ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಬರಮತಿ ಆಶ್ರಮದಲ್ಲಿ ಚಾಲನೆ ನೀಡಿದ್ದರು. ಈ ಉತ್ಸವ ಕಳೆದ 75 ವರ್ಷಗಳಲ್ಲಿ ಭಾರತ ಸಾಧಿಸಿರುವ ಕ್ಷಿಪ್ರ ಪ್ರಗತಿಯನ್ನು ಸಂಭ್ರಮಿಸುವ ಉತ್ಸವವಾಗಿದೆ. ಈ ಉತ್ಸವ ನಮ್ಮಲ್ಲಿ ಹುದುಗಿರುವ ಅಂತರ್ಗತ ಶಕ್ತಿಗಳನ್ನು ಮರು ಸಂಶೋಧಿಸಲು ಉತ್ತೇಜಿಸುತ್ತದೆ ಮತ್ತು ರಾಷ್ಟ್ರಗಳ ಸಾಲಿನಲ್ಲಿ ನಮ್ಮ ನ್ಯಾಯಯುತ ಸ್ಥಾನವನ್ನು ಗಳಿಸಲು ನಮ್ಮ ಪ್ರಾಮಾಣಿಕ, ವ್ಯವಸ್ಥಿತ ಕ್ರಿಯೆಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತದೆ ಎಂದರು.  

ಉಪರಾಷ್ಟ್ರಪತಿಗಳ ಭಾಷಣದ ಪೂರ್ಣ ಪಠ್ಯಕ್ಕೆ ಇಲ್ಲಿ ಕ್ಲಿಕ್ ಮಾಡಿ

https://pib.gov.in/PressReleasePage.aspx?PRID=1709866

          ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, 91 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಅವರು ದೇಶದಲ್ಲಿ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಜಾಗೃತಗೊಳಿಸಲು ಈ ಪಯಣವನ್ನು ಆರಂಭಿಸಿದ್ದರು ಮತ್ತು ಇದೀಗ 91 ವರ್ಷಗಳ ನಂತರ ಸಾಂಕೇತಿಕ ದಂಡಿಯಾತ್ರೆ ಮಾರ್ಚ್ 12ರಂದು ಆರಂಭವಾಗಿದ್ದು, ಇದು ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ನಮ್ಮ ಪಯಣದ ಪುನರುಜ್ಜೀವದ ಸಂಕೇತವಾಗಿದೆ ಎಂದರು. ಆದರೆ ಈ ಪಯಣ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಇದು ಆಜಾದಿ ಕ ಅಮೃತ ಮಹೋತ್ಸವದ ಆರಂಭವಷ್ಟೇ ಎಂದರು.

          ಇತಿಹಾಸದ ಈ ಪಯಣವನ್ನು ಪುನರಾವರ್ತಿಸುತ್ತಿರುವ ಉದ್ದೇಶ ನಮ್ಮ ಯುವ ಪೀಳಿಗೆಗೆ ಹೇಗೆ ನಮ್ಮ ಪೀಳಿಗೆ ಸ್ವಾತಂತ್ರ್ಯವನ್ನು ಗಳಿಸಿತು ಎಂಬುದರ ಕುರಿತು ಅರಿವು ಮೂಡಿಸುವುದಾಗಿದೆ ಎಂದು ಹೇಳಿದರು. ಏಳು ಸಚಿವರು, 11 ಶಾಸಕರು ಮತ್ತು 121 ಜನರು ಈ ಯಾತ್ರೆಯಲ್ಲಿ ತಮ್ಮ ಜೊತೆ ಭಾಗವಹಿಸಿದ್ದಕ್ಕೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು. ಅಮೃತ ಮಹೋತ್ಸವದಲ್ಲಿ ಭಾಗಿಯಾಗುವ ಮೂಲಕ ಅದನ್ನು ಜನ ಮಹೋತ್ಸವವನ್ನಾಗಿ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಯ ಮೇಲೂ ಇದೆ ಎಂದು ಹೇಳಿದರು. ದೇಶ 75 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದಕ್ಕೆ ಇದೇ ಸೂಕ್ತ ಮಾರ್ಗ ಎಂದು ಸಚಿವರು ಹೇಳಿದರು.

          ಭಾರತ ಇಂದು ತನ್ನ ಶಕ್ತಿಯಿಂದಾಗಿ ಜಾಗತಿಕ ವೇದಿಕೆಯ ಶಕ್ತಿಶಾಲಿ ರಾಷ್ಟ್ರವಾಗಿ ಮುನ್ನಡೆಯುತ್ತಿದೆ. ಕೊರೊನಾ ಲಸಿಕೆಯನ್ನು ಇಡೀ ವಿಶ್ವಕ್ಕೆ ಪೂರೈಸಲಾಗುತ್ತಿದೆ ಎಂದು ಶ್ರೀ ಪ್ರಹ್ಲಾದ್ ಸಿಂಗ್ ಹೇಳಿದರು. ಸದ್ಯದಲ್ಲೇ ನಮ್ಮ ರಾಷ್ಟ್ರ ವಿಶ್ವ ಗುರುವಾಗಿ ಜಗತ್ತನ್ನೇ ಮುನ್ನಡೆಸಲಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.  

          ಇದಕ್ಕೂ ಮುನ್ನ ಉಪರಾಷ್ಟ್ರಪತಿ ಅವರು ಪ್ರಾರ್ಥನಾ ಮಂದಿರದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದ ಯಾತ್ರಾರ್ಥಿಗಳ ಜೊತೆ ಸಂವಾದ ನಡೆಸಿದರು. ಗಾಂಧೀಜಿ ಅವರು 1930ರ ಏಪ್ರಿಲ್ 4ರಂದು ರಾತ್ರಿ ಕಳೆದ ಸೈಫಿ ವಿಲ್ಲಾಗೆ ಉಪರಾಷ್ಟ್ರಪತಿ ಭೇಟಿ ನೀಡಿದ್ದರು. ಆನಂತರ ಶ್ರೀ ವೆಂಕಯ್ಯನಾಯ್ಡು ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ಗೌರವಾರ್ಥ ನಿರ್ಮಿಸಿರುವ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕಕ್ಕೆ ಭೇಟಿ ನೀಡಿದ್ದರು.

ಕಾರ್ಯಕ್ರಮದ ವೇಳೆ ಉಪರಾಷ್ಟ್ರಪತಿ ಅವರು ಗುಜರಾತ್ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಉತ್ಪನ್ನಗಳಿಗೆ ಜಿಐ ಟ್ಯಾಗ್ ಹೊಂದಿರುವ ವಿಶೇಷ ಲಕೋಟೆಗಳನ್ನು  ಬಿಡುಗಡೆ ಮಾಡಿದರು. ಸಿಕ್ಕಿಂ, ಛತ್ತೀಸ್ ಗಢ ಮತ್ತು ಗುಜರಾತ್ ನ ಜಾನಪದ ಕಲಾವಿದರು ನಡೆಸಿಕೊಟ್ಟ ಅವಿಸ್ಮರಣೀಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವರು ಸಾಕ್ಷಿಯಾದರು.

***



(Release ID: 1710003) Visitor Counter : 478