ಗೃಹ ವ್ಯವಹಾರಗಳ ಸಚಿವಾಲಯ

ಛತ್ತೀಸ್ ಗಢದಲ್ಲಿ ನಕ್ಸಲರ ದಾಳಿಯಿಂದ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶ್ಹಾ ಅವರಿಂದ ಗೌರವ ನಮನ

ನಕ್ಸಲರ ವಿರುದ್ಧ ನಮ್ಮ ಹೋರಾಟ ಮತ್ತಷ್ಟು ಬಲಿಷ್ಠವಾಗಿ ಮುಂದುವರಿಯಲಿದೆ. ನಕ್ಸಲರ ಹಾವಳಿಗೆ ಅಂತ್ಯ ಹಾಡುತ್ತೇವೆ; ಕೇಂದ್ರ ಗೃಹ ಸಚಿವರು

ಗೃಹ ಸಚಿವಾಲಯ, ಗುಪ್ತಚರ ಇಲಾಖೆ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಉನ್ನತಾಧಿಕಾರಿಗಳೊಂದಿಗೆ ಭದ್ರತಾ ಪರಾಮರ್ಶೆ ಸಭೆ ನಡೆಸಿದ ಅಮಿತ್ ಶ್ಹಾ

Posted On: 04 APR 2021 9:58PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶ್ಹಾ ಅವರು, ಛತ್ತೀಸ್ ಗಢದ ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ದೇಶದ ರಕ್ಷಣೆ ಮತ್ತು ಭದ್ರತೆಗಾಗಿ ತೋರಿದ ತ್ಯಾಗ ಮತ್ತು ಬಲಿದಾನವನ್ನು ವ್ಯರ್ಥವಾಗಿಸಲು ನಾವೆಂದೂ ಬಿಡುವುದಿಲ್ಲ, ಈ  ಪ್ರಮುಖ  ವಿಚಾರವನ್ನು ಹುತಾತ್ಮ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರ ಗಮನಕ್ಕೆ ತರಲು ಬಯಸುತ್ತೇನೆ ಎಂದು ಭರವಸೆ ನೀಡಿದರು.

ನಕ್ಸಲರ ವಿರುದ್ಧ ಸರ್ಕಾರದ ಹೋರಾಟ ಮತ್ತು ಪ್ರಯತ್ನಗಳು ಮತ್ತಷ್ಟು ಬಲಿಷ್ಠವಾಗಿ ಮುಂದುವರಿಯಲಿವೆ. ಈ ಹೋರಾಟವನ್ನು ನಾವು ಅಂತ್ಯಕ್ಕೆ ಕೊಂಡೊಯ್ಯಲಿದ್ದೇವೆ ಎಂದು ಸಚಿವರು ತಿಳಿಸಿದರು.

ನಕ್ಸಲರು ಮತ್ತು ಪೊಲೀಸ್ ಸಿಬ್ಬಂದಿಯ ಗುಂಡಿನ ಕಾಳಗದಲ್ಲಿ ಸಾವು-ನೋವುಗಳ ಅಂಕಿ-ಅಂಶಕ್ಕೆ ಸಂಬಂಧಿಸಿದಂತೆ ಎಲ್ಲವನ್ನೂ ಈಗಲೇ ಹೇಳಲು ಸಾಧ್ಯವಿಲ್ಲ, ಏಕೆಂದರೆ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದರು.

https://static.pib.gov.in/WriteReadData/userfiles/image/image0010J3C.jpg

ನಂತರ ಗೃಹ ಸಚಿವ ಅಮಿತ್ ಶ್ಹಾ ಅವರು ಗೃಹ ಸಚಿವಾಲಯ, ಗುಪ್ತಚರ ಇಲಾಖೆ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಉನ್ನತಾಧಿಕಾರಿಗಳ ಜೊತೆ ಸಭೆ ನಡೆಸಿ, ಛತ್ತೀಸ್ ಗಢ ಸೇರಿದಂತೆ ದೇಶದ ಭದ್ರತಾ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದರು.

 

*****(Release ID: 1709599) Visitor Counter : 2