ಹಣಕಾಸು ಸಚಿವಾಲಯ

2020-21ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ಹೆಚ್ಚುವರಿ ಹಂಚಿಕೆ 45,000 ಕೋಟಿ ರೂ. ಬಿಡುಗಡೆ ಮಾಡಿದ ಹಣಕಾಸು ಸಚಿವಾಲಯ

Posted On: 01 APR 2021 2:15PM by PIB Bengaluru

ಭಾರತ ಸರ್ಕಾರದ ಹಣಕಾಸು ಸಚಿವಾಲಯ 2020-21ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ಹೆಚ್ಚುವರಿ ಹಂಚಿಕೆಯಾಗಿ 45,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದು 2020-21 ಪರಿಷ್ಕೃತ ಅಂದಾಜಿಗಿಂತ ಶೇ. 8.2ರಷ್ಟು ಹೆಚ್ಚಳವಾಗಿದೆ. 2020-21ನೇ ಸಾಲಿನ ಪರಿಷ್ಕೃತ ಅಂದಾಜಿನ ಪ್ರಕಾರ 5,49,959 ಕೋಟಿ ಅಂದರೆ ತೆರಿಗೆ ಮತ್ತು ಸುಂಕಗಳಿಂದ ಸಂಗ್ರಹಿಸಲಾದ ಹಂಚಿಕೆಯ ಶೇ.41ರಷ್ಟು ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡುವ ಅಂದಾಜು ಮಾಡಲಾಗಿತ್ತು. ಆದರೆ ಹಣಕಾಸು ಸಚಿವಾಲಯ 2020-21ನೇ ಸಾಲ್ಲಿನಲ್ಲಿ ಸಂಗ್ರಹವಾಗುವ ತೆರಿಗೆಯ ಒಟ್ಟು ಮೊತ್ತದ ಪ್ರಾಥಮಿಕ ಅಂದಾಜು ಆಧರಿಸಿ 5,94,996 ಕೋಟಿ ರೂ. ಹಣ ಹಂಚಿಕೆ ಮಾಡಿತ್ತು.

ಹಣಕಾಸು ಸಚಿವಾಲಯ ವಿತ್ತೀಯ ಒಕ್ಕೂಟ ವ್ಯವಸ್ಥೆಯ ನೈಜ ಸ್ಫೂರ್ತಿಯೊಂದಿಗೆ ಮೊತ್ತವನ್ನು 2020-21ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಆದಾಯ ಹಂಚಿಕೆ ಮೊತ್ತದಡಿ ಬಿಡುಗಡೆ ಮಾಡಿತ್ತು. ಹೆಚ್ಚುವರಿ ಮೊತ್ತ 45,000 ಕೋಟಿ ರೂ.ಗಳನ್ನು ಎರಡು ಕಂತುಗಳಲ್ಲಿ 14,500 ಕೋಟಿ ರೂ. ಮತ್ತು 30,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 14,500 ಕೋಟಿ ರೂ.ಗಳನ್ನು 2021 ಮಾರ್ಚ್ 26ರಂದು 14ನೇ ನಿಗದಿತ ಕಂತಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಉಳಿದ 30,500 ಕೋಟಿ ರೂ.ಗಳನ್ನು 2021 ಮಾರ್ಚ್ 31ರಂದು ರಾಜ್ಯಗಳಿಗೆ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ.

ಕ್ರ.ಸಂ

ರಾಜ್ಯಗಳು

2020-21 ಪರಿಷ್ಕೃತ ಅಂದಾಜು

2020-21 ಪರಿಷ್ಕೃತ ಹೆಚ್ಚುವರಿ ಅಂದಾಜು

2020-21ನೇ ಹಣಕಾಸು ವರ್ಷದಲ್ಲಿ ಒಟ್ಟು ಬಿಡುಗಡೆ

1

ಆಂಧ್ರಪ್ರದೇಶ

22,611

1,850

24,461

2

ಅರುಣಾಚಲಪ್ರದೇಶ

9,681

792

10,473

3

ಅಸ್ಸಾಂ

17,220

1,409

18,629

4

ಬಿಹಾರ

55,334

4,527

59,861

5

ಛತ್ತೀಸ್ ಗಢ

18,799

1,538

20,338

6

ಗೋವಾ

2,123

174

2,296

7

ಗುಜರಾತ್

18,689

1,529

20,219

8

ಹರಿಯಾಣ

5,951

487

6,438

9

ಹಿಮಾಚಲಪ್ರದೇಶ

4,394

360

4,754

10

ಜಾರ್ಖಂಡ್

18,221

1,491

19,712

11

ಕರ್ನಾಟಕ

20,053

1,641

21,694

12

ಕೇರಳ

10,686

874

11,560

13

ಮಧ್ಯಪ್ರದೇಶ

43,373

3,549

46,922

14

ಮಹಾರಾಷ್ಟ್ರ

33,743

2,761

36,504

15

ಮಣಿಪುರ

3,949

323

4,272

16

ಮೇಘಾಲಯ

4,207

344

4,552

17

ಮಿಝೋರಾಂ

2,783

228

3,011

18

ನಾಗಾಲ್ಯಾಂಡ್

3,151

258

3,409

19

ಒಡಿಶಾ

25,460

2,083

27,543

20

ಪಂಜಾಬ್

9,834

805

10,638

21

ರಾಜಸ್ಥಾನ

32,885

2,690

35,576

22

ಸಿಕ್ಕಿಂ

2,134

175

2,308

23

ತಮಿಳುನಾಡು

23,039

1,885

24,924

24

ತೆಲಂಗಾಣ

11,732

960

12,692

25

ತ್ರಿಪುರಾ

3,899

319

4,218

26

ಉತ್ತರ ಪ್ರದೇಶ

98,618

8,069

1,06,687

27

ಉತ್ತರಾಖಂಡ

6,072

497

6,569

28

ಪಶ್ಚಿಮಬಂಗಾಳ

41,353

3,384

44,737

 

ಒಟ್ಟು

5,49,997

45,000

5,94,996

***


(Release ID: 1708995) Visitor Counter : 216