ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಆಪ್ಟಿಕಲ್ ಸಂವೇದಕಗಳು, ಬೆಳಕು-ಹೊರಸೂಸುವ ಉದ್ದೇಶಗಳಿಗಾಗಿ, ಶಕ್ತಿ ಪರಿವರ್ತನೆ ಮತ್ತು ಸಂಯೋಜನೆಗಳಿಗೆ ಉಪಯುಕ್ತವಾದ ಆಪ್ಟಿಕಲ್ ವಸ್ತುಗಳನ್ನು ತಯಾರಿಸಲು ಸಣ್ಣ ಚುಕ್ಕೆಗಳನ್ನು ಮಾರ್ಪಡಿಸಿರುವರು ಇನ್ಸ್‌ ಪೈರ್‌ ಫ್ಯಾಕಲ್ಟಿ ಫೆಲೋಶಿಪ್ಪನ್ನು ಪಡೆದವರು


ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಗೆ ಆರಂಭವಿದೆ ಆದರೆ ಅಂತ್ಯವಿಲ್ಲ ಮತ್ತು ಸಮಯದೊಂದಿಗೆ ವಿಕಸನಗೊಳ್ಳುತ್ತದೆ: ಕಾರ್ಯದರ್ಶಿ, ಡಿಎಸ್‌ ಟಿ, ಪ್ರೊಫೆಸರ್ ಅಶುತೋಷ್ ಶರ್ಮಾ ಹೇಳಿಕೆ

Posted On: 01 APR 2021 12:22PM by PIB Bengaluru

ಪಶ್ಚಿಮ ಬಂಗಾಳ ರಾಜ್ಯದ  ಉತ್ತರ ಬಂಗಾಳ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಡಾ.ಸತ್ಯಪ್ರಿಯ ಭಂಡಾರಿಯವರಿಗೆ ಸಣ್ಣ ನ್ಯಾನೊಸ್ಕೇಲ್ ಹರಳುಗಳ ಚಟುವಟಿಕೆಯು ಆಸಕ್ತಿಯನ್ನು ಕೆರಳಿಸಿತು, ಇದು ನೇರಳಾತೀತ ಬೆಳಕಿನಿಂದ ಹೊಡೆದಾಗ, ಅನೇಕ ಬಣ್ಣಗಳ ಬೆಳಕನ್ನು ಹೊರಸೂಸುತ್ತದೆ.

ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಸ್ಥಾಪಿಸಲಾದ ಇನ್‌-ಸ್ಪೈರ್‌ ಫ್ಯಾಕಲ್ಟಿ ಫೆಲೋಶಿಪ್ಪನ್ನು ಪಡೆದಿರುವವರು ಆಪ್ಟಿಕಲ್ ಸಂವೇದಕಗಳು, ಬೆಳಕು-ಹೊರಸೂಸುವ ಬಳಕೆಗಳು, ಸಂಯೋಜನೆಗಳು ಮತ್ತು ಪ್ರತಿದೀಪಕ ಜೈವಿಕ ಲೇಬಲ್‌ಗಳಲ್ಲಿ ಸುಸ್ಥಿರ ಅನ್ವಯಿಕೆಗಳನ್ನು ಹೊಂದಬಹುದಾದ ಆಪ್ಟಿಕಲ್ ವಸ್ತುಗಳನ್ನು ತಯಾರಿಸಲು ಕ್ವಾಂಟಮ್ ಡಾಟ್ಸ್ (ಕ್ಯೂಡಿ) ಎಂದು ಕರೆಯಲ್ಪಡುವ ನ್ಯಾನೊಸ್ಕೇಲ್ ಹರಳುಗಳ ಮೇಲ್ಮೈಯನ್ನು ಮಾರ್ಪಡಿಸಲು ಭಾರತದ ರಾಸಾಯನಿಕ ಪ್ರತಿಕ್ರಿಯೆಗಳನ್ನು ಬಳಸುತ್ತಿದ್ದಾರೆ.

ಕ್ಯೂಡಿಗಳ ಮೇಲ್ಮೈಯನ್ನು ರಾಸಾಯನಿಕವಾಗಿ ಮಾರ್ಪಡಿಸುವುದು ಅವುಗಳ ಆಪ್ಟಿಕಲ್ ವೈಶಿಷ್ಟ್ಯಗಳನ್ನು ಬದಲಾಯಿಸಲು ಮತ್ತು ಹೊಸ ಆಪ್ಟಿಕಲ್ ವಸ್ತುಗಳನ್ನು ತಯಾರಿಸಲು ಒಂದು ನವೀನ ಮಾರ್ಗವಾಗಿದೆ, ಇದು ಬಿಳಿ ಬೆಳಕು ಹೊರಸೂಸುವ (ಡಬ್ಲ್ಯುಎಲ್ಇ) ವಸ್ತುಗಳನ್ನು ತಯಾರಿಸಲು ಉಪಯುಕ್ತವಾಗಿದೆ, ರೋಗ ಸ್ಪಂದಿಸುವ ಅಣುಗಳನ್ನು ಅಥವಾ ಪರಿಸರ ಮಾಲಿನ್ಯಕಾರಕಗಳನ್ನು ಪತ್ತೆಹಚ್ಚಲು ರೇಟಿಯೊಮೆಟ್ರಿಕ್ ಸಂವೇದಕಗಳು, ಫೋಟೊಕ್ಯಾಟಲಿಸ್ಟ್‌ಗಳು (ಎಚ್ 2 ಉತ್ಪಾದನೆ) ಮತ್ತು ಕ್ಯಾನ್ಸರ್ ಕೋಶಗಳ ಚಿತ್ರಣಗಳಲ್ಲಿ ಉಪಯೋಗಿಸಬಹುದಾಗಿದೆ

ಡಾ. ಭಂಡಾರಿ ಅವರ ರಾಸಾಯನಿಕವಾಗಿ ಮಾರ್ಪಡಿಸಿದ ಕ್ಯೂಡಿಗಳನ್ನು ವಿಟ್ರೊ ಪಿಹೆಚ್‌ನ ರೇಟಿಯೊಮೆಟ್ರಿಕ್ ಪತ್ತೆಹಚ್ಚುವಿಕೆ, ಅಮೈನೊ ಆಸಿಡ್ ಮತ್ತು ವಿಟಮಿನ್ ಬಿ 12 ಪತ್ತೆಹಚ್ಚುವಿಕೆ, ಹಗಲು-ಪ್ರಕಾಶಮಾನವಾದ ಬೆಳಕನ್ನು ಹೊರಸೂಸಬಲ್ಲ ಸುಧಾರಿತ ಡಬ್ಲ್ಯೂಎಲ್ಇ ವಸ್ತುಗಳನ್ನು ಅಭಿವೃದ್ಧಿಪಡಿಸುವುದು, ಕ್ಯಾನ್ಸರ್ ಕೋಶಗಳನ್ನು ಚಿತ್ರಿಸುವ ಸಾಮರ್ಥ್ಯ ಮತ್ತು ಕಿಣ್ವಗಳ ಪ್ಯಾಕೇಜಿಂಗ್ ಅನ್ನು ಅವುಗಳ ಚಟುವಟಿಕೆಯನ್ನು ಹೆಚ್ಚಿಸಲು ಬಳಸಬಹುದು.

ಕೆಮಿಕಲ್ ಕಮ್ಯುನಿಕೇಷನ್ಸ್, ಅಡ್ವಾನ್ಸ್ಡ್ ಆಪ್ಟಿಕಲ್ ಮೆಟೀರಿಯಲ್ಸ್, ಕೆಮಿಸ್ಟ್ರಿ ಎನ್ನುವ  ಏಷ್ಯನ್ ನಿಯತಕಾಲಿಕೆಯು ಮತ್ತು ನ್ಯಾನೊಸ್ಕೇಲ್ ಅಡ್ವಾನ್ಸಸ್ ಎಂಬ ನಿಯತಕಾಲಿಕಗಳಲ್ಲಿ ಸಂಶೋಧನೆಯನ್ನು ಪ್ರಕಟಿಸಲಾಗಿದೆ. ಡಾ. ಭಂಡಾರಿಯವರು ಸುಧಾರಿತ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಆಪ್ಟೊಎಲೆಟ್ರೊನಿಕ್ ವಸ್ತುಗಳು ಮತ್ತು ಸಂವೇದಕಗಳ ನಿರ್ಮಾಣದಲ್ಲಿ ಕೆಲಸ ಮಾಡಿದ್ದಾರೆ, ಕ್ಷೇತ್ರದಲ್ಲಿ ಹೊಸ ಮಾದರಿಯನ್ನು ರೂಪಿಸಿದ್ದಾರೆ.

ಐಐಟಿ ಗುವಾಹಟಿಯ ಸಹಯೋಗದೊಂದಿಗೆ, ಅವರು ಡ್ಯುಯಲ್ ಎಮಿಟಿಂಗ್ ನ್ಯಾನೊಪ್ರೊಬ್ ಅನ್ನು ಸ್ಥಾಪಿಸಿದರು, ಇದು ಎಚ್ಜಿ2 + ಮತ್ತು ಕ್ಯು2 + ಅಯಾನುಗಳನ್ನು ಪತ್ತೆಹಚ್ಚಲು ಸಂವೇದಕವಾಗಿ ಕಾರ್ಯನಿರ್ವಹಿಸುತ್ತದೆ. ಕಾರ್ಯದ ಬಗ್ಗೆ ಇತ್ತೀಚೆಗೆಜರ್ನಲ್ ಆಫ್ ಮೆಟೀರಿಯಲ್ ಕೆಮಿಸ್ಟ್ರಿ ಸಿಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಇನ್ಸ್ ಪೈರ್ ಫ್ಯಾಕಲ್ಟಿ ಫೆಲೋಶಿಪ್ನೊಂದಿಗೆ, ಮನೆಯ ಬೆಳಕು, ಪರ್ಯಾಯ ಇಂಧನ ಉತ್ಪಾದನೆ, ಉತ್ತಮ ಮಾನವ ಆರೋಗ್ಯ ಮೇಲ್ವಿಚಾರಣೆ ಮತ್ತು ಸ್ವಚ್ಛ ಮತ್ತು ಸುಸ್ಥಿರ ಪರಿಸರಕ್ಕಾಗಿ ಬಳಸಬಹುದಾದ ಸುಧಾರಿತ ಶಕ್ತಿ ಮತ್ತು ಸಂವೇದನಾ ಆನ್ವಯಿಕೆಗಳಿಗಾಗಿ ಕ್ಯೂಡಿ ಆಧಾರಿತ ಆಪ್ಟಿಕಲ್ ವಸ್ತುಗಳನ್ನು ತಯಾರಿಸಲು ಅವರು ಕೆಲಸ ಮಾಡುತ್ತಿದ್ದಾರೆ.

ಪ್ರಕಟಣೆಗಳ ಕೊಂಡಿಗಳು:

1. https://doi.org/10.1039/C9CC01088B   

2. https://doi.org/10.1039/D0NA00540A  

3. https://doi.org/10.1039/D0TC01788D  

4. https://doi.org/10.1002/asia.202000466  

ಹೆಚ್ಚಿನ ವಿವರಗಳಿಗಾಗಿ ಡಾ.ಸತ್ಯಪ್ರಿಯ ಭಂಡಾರಿ (saty.nano[at]gmail[dot]com; satyapriya@nbu.ac.in) ಅವರನ್ನು ಸಂಪರ್ಕಿಸಬಹುದು.

***


(Release ID: 1708992) Visitor Counter : 210