ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
‘ಪಿಡಿಐಎಲ್’ನಿಂದ 2019-20ನೇ ಸಾಲಿನ 9.55 ಕೋಟಿ ರೂ. ಲಾಭಾಂಶ ಮತ್ತು 2020-21ನೇ ಸಾಲಿನ 6.93 ಕೋಟಿ ರೂ. ಮಧ್ಯಂತರ ಲಾಭಾಂಶವನ್ನು ಸ್ವೀಕರಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು
Posted On:
30 MAR 2021 3:45PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ ಅವರು, ‘ಪ್ರಾಜೆಕ್ಟ್ಸ್ ಅಂಡ್ ಡೆವಲಪ್‌ಮೆಂಟ್ ಇಂಡಿಯಾ ಲಿಮಿಟೆಡ್’ನ(ಪಿಡಿಐಎಲ್) ಹಣಕಾಸು ನಿರ್ದೇಶಕ ಶ್ರೀ ಡಿ.ಎಸ್. ಸುಧಾಕರ್ ರಾಮಯ್ಯ ಅವರಿಂದ 2019-20ನೇ ಸಾಲಿನ 9.55 ಕೋಟಿ ರೂ. ಲಾಭಾಂಶ ಮತ್ತು 2020-21ನೇ ಸಾಲಿನ 6.93 ಕೋಟಿ ರೂ. ಮಧ್ಯಂತರ ಲಾಭಾಂಶವನ್ನು ಸ್ವೀಕರಿಸಿದರು. ಈ ಸಂದರ್ಭ ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಆರ್.ಕೆ. ಚತುರ್ವೇದಿ, ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಅಪರ್ಣಾ ಶರ್ಮ ಮತ್ತು ಪಿಡಿಐಎಲ್‌ನ ಹಿರಿಯ ಅಕಾರಿಗಳು ಉಪಸ್ಥಿತರಿದ್ದರು.
2019-20ನೇ ಸಾಲಿನಲ್ಲಿ ಪಿಡಿಐಎಲ್ ಅತ್ಯಧಿಕ ಆರ್ಥಿಕ ಕಾರ್ಯದಕ್ಷತೆ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಅಂದರೆ, ಈ ಸಾಲಿನಲ್ಲಿ ತನ್ನ ಕಾರ್ಯಾಚರಣೆ ಮೂಲಕ ಸಂಸ್ಥೆಯು 133.01 ಕೋಟಿ ರೂ. ಆದಾಯ ಗಳಿಸಿದೆ. ಈ ಅವಯಲ್ಲಿ 142.16 ಕೋಟಿ ರೂ. ಒಟ್ಟು ಆದಾಯ, 41.86 ಕೋಟಿ ರೂ. ತೆರಿಗೆ ಪೂರ್ವ ಲಾಭ ಮತ್ತು 31.83 ಕೋಟಿ ರೂ. ತೆರಿಗೆ ನಂತರದ ಲಾಭವನ್ನು ಸಂಸ್ಥೆ ಗಳಿಸಿದೆ.
ಪಿಡಿಐಎಲ್ ಪ್ರಸ್ತುತ ‘ಹೆಚ್‌ಯುಆರ್‌ಎಲ್’ನ ಮೂರು ಪ್ರಮುಖ ಯೋಜನೆಗಳು, ತೆಲ್ಚರ್ ಯೋಜನೆಗೆ ಯೋಜನಾ ನಿರ್ವಹಣೆ ಸಲಹೆ (ಪಿಎಂಸಿ) ಸೇವೆಗಳನ್ನು ಒದಗಿಸುತ್ತಿದೆ. ಜೊತೆಗೆ, ತೈಲ ಮತ್ತು ಅನಿಲ ವಲಯದ ಇತರೆ ಕಾರ್ಯಾದೇಶಗಳನ್ನೂ ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ.
ಪಿಡಿಐಎಲ್ ಒಂದು ‘ಮಿನಿ ರತ್ನ’, ವರ್ಗ-1ಕ್ಕೆ ಸೇರಿದ ಪ್ರತಿಷ್ಠಿತ ವಿನ್ಯಾಸ ಎಂಜಿನಿಯರಿಂಗ್ ಮತ್ತು ಸಲಹಾ ಸಂಸ್ಥೆಯಾಗಿದೆ. ಯೋಜನಾಪೂರ್ವ ಚಟುವಟಿಕೆಗಳು, ಯೋಜನಾ ನಿರ್ವಹಣೆ ಸಲಹೆ, ವಿನ್ಯಾಸ ಮತ್ತು ಎಂಜಿನಿಯರಿಂಗ್, ಗುಣಮಟ್ಟ ಖಾತರಿ ಸೇವೆಗಳನ್ನು ಸಂಸ್ಥೆಯು ಒದಗಿಸುತ್ತದೆ.
***
(Release ID: 1708533)
Visitor Counter : 184