ಪ್ರಧಾನ ಮಂತ್ರಿಯವರ ಕಛೇರಿ

ಬೆಳೆ ವಿಮೆ ಯೋಜನೆ ಕುರಿತು ರೈತನಿಗೆ ಪತ್ರ ಬರೆದ ಪ್ರಧಾನಮಂತ್ರಿ


“ಬೀಜದಿಂದ ಮಾರುಕಟ್ಟೆ”ವರೆಗೆ ರೈತರ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಿ ಸರಾಗಗೊಳಿಸಲು ನಿರಂತರ ಪ್ರಯತ್ನ: ಪ್ರಧಾನಮಂತ್ರಿ

Posted On: 18 MAR 2021 7:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದಿನಚರಿ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಸಮಯ ಸಿಕ್ಕಾಗಲೆಲ್ಲಾ ಅವರು ಜನರ ಪತ್ರಗಳು ಮತ್ತು ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅಂತಹ ಒಂದು ಪತ್ರವನ್ನು ಉತ್ತರಾಖಂಡದ ನೈನಿತಾಲ್ ಖೀಮಾನಂದ್ ಅವರಿಂದ ಸ್ವೀಕರಿಸಿದ್ದರು. ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಯಶಸ್ವಿಯಾಗಿ ಐದು ವರ್ಷ ಪೂರ್ಣಗೊಳಿಸಿದ ಹಾಗೂ ಸರ್ಕಾರದ ಇನ್ನಿತರ ಪ್ರಯತ್ನಗಳ ಕುರಿತು ನರೇಂದ್ರ ಮೋದಿ ಆ್ಯಪ್ [ನಮೋ ಆ್ಯಪ್] ಮೂಲಕ ಪತ್ರ ಬರೆದು ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದ್ದರುಪ್ರಧಾನಮಂತ್ರಿ ಅವರು ಖೀಮಾನಂದ ಅವರಿಗೆ ಪತ್ರ ಬರೆದು ತಮ್ಮ ಅಮೂಲ್ಯವಾದ ಚಿಂತನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕೃಷಿ ಸೇರಿದಂತೆ ವಿವಿಧ ವಲಯಗಳಲ್ಲಿನ ಸುಧಾರಣೆಗೆ ಸರ್ಕಾರ ಕೈಗೊಂಡ ಅವಿರತ ಪ್ರಯತ್ನಗಳ ಕುರಿತು ತಾವು ತಮ್ಮ ಅಮೂಲ್ಯ ದೃಷ್ಟಿಕೋನವನ್ನು ಹಂಚಿಕೊಂಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ಅಭಿವೃದ್ದಿಯಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಾಗುವುದು.” ಎಂದು ಪ್ರಧಾನಮಂತ್ರಿ ಅವರು ಪತ್ರ ಬರೆದಿದ್ದಾರೆ. “ ಇಂತಹ ಸಂದೇಶಗಳು ದೇಶಕ್ಕೆ ಸೇವೆ ಸಲ್ಲಿಸುವ ಬದ್ಧತೆ ಮತ್ತು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ತಮಗೆ ಹೊಸ ಶಕ್ತಿ ನೀಡುತ್ತದೆ.” ಎಂದಿದ್ದಾರೆ.

ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಯಶಸ್ಸಿನ ಕುರಿತು ಉಲ್ಲೇಖಿಸಿರುವ ಪ್ರಧಾನಮಂತ್ರಿ ಅವರು, “ ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿರುವ ರೈತರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸಲು ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ನಿರಂತರವಾಗಿ ತನ್ನ ಪಾತ್ರ ನಿರ್ವಹಣೆ ಮಾಡುತ್ತಿದೆ. ಯೋಜನೆ ಹವಾಮಾನದ ಅನಿಶ್ಚಿತತೆಗಳಿಗೆ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತಿದೆ. ರೈತ ಸ್ನೇಹಿ ವಿಮಾ ಯೋಜನೆಯ ಪ್ರಯೋಜನಗಳನ್ನು ಕೋಟ್ಯಂತರ ರೈತರು ಇಂದು ಪಡೆಯುತ್ತಿದ್ದಾರೆ.” ಎಂದು ಹೇಳಿದ್ದಾರೆ.

ಕೃಷಿ ಮತ್ತು ರೈತ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯ ಪ್ರಯತ್ನಗಳ ಇನ್ನಷ್ಟು ವಿವರಗಳನ್ನು ತಮ್ಮ ಪತ್ರದಲ್ಲಿ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದ್ದಾರೆ. “ ಕಳೆದ ಐದು ವರ್ಷಗಳಲ್ಲಿ ಪಾರದರ್ಶಕ ಕ್ಲೈಮ್ ವ್ಯವಸ್ಥೆ ಹೊಂದಿರುವಫಸಲ್ ಭೀಮಾ” [ಬೆಳೆ ವಿಮೆ] ಯೋಜನೆ ಅತ್ಯಂತ ವ್ಯಾಪಕವಾಗಿದೆ. ರೈತ ಕಲ್ಯಾಣಕ್ಕಾಗಿ ನಮ್ಮ ದೃಢ ನಿಶ್ಚಯದ ಪ್ರಯತ್ನಗಳಿಗೆ ಉದಾಹರಣೆಯಾಗಿ ಯೋಜನೆ ಹೊರ ಹೊಮ್ಮಿದೆ. ‘ ಬೀಜದಿಂದ ಮಾರುಕಟ್ಟೆವರೆಗೆ ರೈತರ ಯಾನದಲ್ಲಿ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಂಕಷ್ಟಗಳನ್ನು ತೆಗೆದುಹಾಕಲು ಸರ್ಕಾರ ಸುಸ್ಥಿರ ಪ್ರಯತ್ನಗಳನ್ನು ಮಾಡುತ್ತಿದೆರೈತರ ಪ್ರಗತಿ ಮತ್ತು ಸಮೃದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಲಿದೆಎಂದು ಹೇಳಿದ್ದಾರೆ.

ದೇಶದ ಪ್ರಗತಿಯಲ್ಲಿ ಜನರ ಕೊಡುಗೆ ಮತ್ತು ಪಾತ್ರವನ್ನು ಶ‍್ಲಾಘಿಸಿರುವ ಪ್ರಧಾನಮಂತ್ರಿ ಅವರು, ಮುಂದುವರೆದು ಹೀಗೆ ಬರೆಯುತ್ತಾರೆಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ಬಲಿಷ್ಠ, ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವತ್ತ ದೇಶ ಇಂದು ವೇಗವಾಗಿ ಸಾಗುತ್ತಿದೆಸಮಸ್ತ ನಾಗರಿಕರ ವಿಶ್ವಾಸದಿಂದ ಶಕ್ತಿಯುತ ದೇಶವಾಗಿದ್ದು, ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ದೃಢತೆ ಹೊಂದಿದೆ. ವಿಶ್ವ ವೇದಿಕೆಯಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಪ್ರಯತ್ನಗಳು ಮತ್ತಷ್ಟು ತೀವ್ರಗೊಳ್ಳುತ್ತವೆ ಎಂಬ ಬಗ್ಗೆ ತಮಗೆ ಖಾತ್ರಿಯಿದೆ.” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಖೀಮಾನಂದ ಅವರು ಬೆಳೆ ವಿಮೆ ಯೋಜನೆ ಐದು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು. ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ನಾಗರಿಕರ ಪ್ರಗತಿ ಮತ್ತು ವಿವಿಧ ಕಲ್ಯಾಣ ಕಾರ್ಯಕ್ರಮಗಳ ಜಾರಿಗಾಗಿ ನಿರಂತರವಾಗಿ ತನ್ನ ಪ್ರಯತ್ನದಲ್ಲಿ ತೊಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು

***



(Release ID: 1706542) Visitor Counter : 192