ಕೃಷಿ ಸಚಿವಾಲಯ

ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಫಿಜಿ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 03 MAR 2021 1:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಗಣರಾಜ್ಯದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಫಿಜಿ ಗಣರಾಜ್ಯದ ಕೃಷಿ ಸಚಿವಾಲಯದ ನಡುವೆ ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ..ಯು.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಭಾರತ ಮತ್ತು ಫಿಜಿ ನಡುವಿನ ತಿಳಿವಳಿಕೆ ಒಪ್ಪಂದವು ಕೆಳಕಂಡ ಕ್ಷೇತ್ರಗಳಲ್ಲಿನ ಸಹಕಾರ ಒದಗಿಸುತ್ತದೆ:

  • ಸಂಶೋಧನಾ ಸಿಬ್ಬಂದಿ, ವೈಜ್ಞಾನಿಕ ತಜ್ಞರು, ವಿಶೇಷಜ್ಞರು ಮತ್ತು ತಾಂತ್ರಿಕ ತರಬೇತುದಾರರ ವಿನಿಮಯ;
  • ತಂತ್ರಜ್ಞಾನದ ವರ್ಧನೆ ಮತ್ತು ವರ್ಗಾವಣೆ;
  • ಕೃಷಿ ಅಭಿವೃದ್ಧಿಗೆ ಮೂಲಸೌಕರ್ಯಗಳ ಅಭಿವೃದ್ಧಿ;
  • ವಿಚಾರಗೋಷ್ಠಿಗಳು ಮತ್ತು ಕಾರ್ಯಾಗಾರಗಳನ್ನು ನಡೆಸುವ ಮೂಲಕ ಅಧಿಕಾರಿಗಳು ಮತ್ತು ರೈತರಿಗೆ ತರಬೇತಿ ನೀಡುವ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ;
  • ಎರಡೂ ದೇಶಗಳ ಖಾಸಗಿ ವಲಯಗಳ ನಡುವೆ ಜಂಟಿ ಸಹಯೋಗದ ಉತ್ತೇಜನ;
  • ಮಾರುಕಟ್ಟೆ ಮತ್ತು ಮೌಲ್ಯವರ್ಧನೆ / ಕೃಷಿ ಸರಕುಗಳ ಡೌನ್‌ ಸ್ಟ್ರೀಮ್ ಸಂಸ್ಕರಣೆಯಲ್ಲಿ ಹೂಡಿಕೆಯ ಉತ್ತೇಜನ;
  • ಕೃಷಿಯ ಎಲ್ಲ ಕ್ಷೇತ್ರಗಳ ಸಾಮರ್ಥ್ಯ ಅಭಿವೃದ್ಧಿಯ ಉತ್ತೇಜನ;
  • ಮಾರುಕಟ್ಟೆ ಪ್ರವೇಶದ ಮೂಲಕ ಕೃಷಿ ಉತ್ಪನ್ನಗಳ ನೇರ ವ್ಯಾಪಾರವನ್ನು ಉತ್ತೇಜಿಸುವುದು;
  • ಸಂಶೋಧನಾ ಪ್ರಸ್ತಾಪಗಳ ಜಂಟಿ ಯೋಜನೆ ಮತ್ತು ಅಭಿವೃದ್ಧಿ ಮತ್ತು ಸಂಶೋಧನಾ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದು;
  • ಫೈಟೊಸಾನಿಟರಿ ಸಮಸ್ಯೆಗಳನ್ನು ನಿಭಾಯಿಸಲು ಭಾರತ - ಫಿಜಿ ಕಾರ್ಯ ಗುಂಪಿನ ಸ್ಥಾಪನೆ, ಮತ್ತು ಪಕ್ಷಗಳು ಪರಸ್ಪರ ಒಪ್ಪುವ ಯಾವುದೇ ರೀತಿಯ ಸಹಕಾರ.

ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ, ಕಾರ್ಯವಿಧಾನಗಳನ್ನು ರೂಪಿಸಲು ಮತ್ತು ಉಭಯ ದೇಶಗಳಲ್ಲಿ  ಕಾರ್ಯಗತಗೊಳಿಸುವ ಏಜೆನ್ಸಿಗಳ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಸಹಕಾರದ ಕಾರ್ಯಕ್ರಮಗಳನ್ನು ಯೋಜಿಸಲು ಮತ್ತು ಶಿಫಾರಸು ಮಾಡಲು ಜಂಟಿ ಕಾರ್ಯ ಗುಂಪನ್ನು (ಜೆಡಬ್ಲ್ಯೂಜಿ) ರಚಿಸಲಾಗುವುದು. ಜೆಡಬ್ಲ್ಯುಜಿ ತನ್ನ ಸಭೆಗಳನ್ನು ಭಾರತ ಮತ್ತು ಫಿಜಿಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುತ್ತದೆ.

ಒಪ್ಪಂದವು ಸಹಿ ಮಾಡಿದ ದಿನಾಂಕದಿಂದ ಜಾರಿಗೆ ಬರಲಿದೆ ಮತ್ತು 5 (ಐದು) ವರ್ಷಗಳವರೆಗೆ ಜಾರಿಯಲ್ಲಿರುತ್ತದೆ.

***



(Release ID: 1702208) Visitor Counter : 183