ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಔಷಧ ಉತ್ಪನ್ನ ಮತ್ತು ವೈದ್ಯಕೀಯ ಸಲಕರಣೆ ವಲಯದ 6ನೇ ಅಂತಾರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಶ್ರೀ ಪೀಯೂಷ್ ಗೋಯೆಲ್ ಭಾಷಣ
ಉತ್ತಮ ಗುಣಮಟ್ಟದ ರೂಢಿಗಳನ್ನು ಅಳವಡಿಸಿಕೊಳ್ಳುವಂತೆ ಮತ್ತು ಉನ್ನತ ಗುಣಮಟ್ಟ ಕಾಪಾಡಿಕೊಳ್ಳುವಂತೆ ಭಾರತೀಯ ಔಷಧ ಉತ್ಪನ್ನ ಮತ್ತು ಆರೋಗ್ಯ ಆರೈಕೆ ವಲಯಕ್ಕೆ ಕರೆ
ಕೋವಿಡ್ -19 ಔಷಧಗಳಿಗೆ ಸಮಾನ ಪ್ರವೇಶವನ್ನು ಪಡೆಯಲು ಹೆಚ್ಚಿನ ದೇಶಗಳಿಗೆ ಅವಕಾಶ ನೀಡುವ ಟ್ರಿಪ್ಸ್ ಮನ್ನಾಕ್ಕಾಗಿ ಭಾರತದ ಪ್ರಸ್ತಾಪಕ್ಕೆ ಡಬ್ಲ್ಯುಟಿಒನಲ್ಲಿ ವ್ಯಾಪಕ ಬೆಂಬಲ
Posted On:
25 FEB 2021 2:10PM by PIB Bengaluru
ಗುಣಮಟ್ಟ, ಸೌಲಭ್ಯ ಮತ್ತು ಉನ್ನತ ಗುಣಮಟ್ಟ ಕಾಯ್ದುಕೊಳ್ಳುವ ವಿಚಾರದಲ್ಲಿನ ಬದ್ಧತೆಗೆ ಸಂಬಂಧಿಸಿದಂತೆ ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯ ಔಷಧ ಉತ್ಪನ್ನ ಮತ್ತು ಆರೋಗ್ಯ ಆರೈಕೆ ವಲಯಕ್ಕೆ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪೀಯೂಷ್ ಗೋಯೆಲ್ ಅವರು ಕರೆ ನೀಡಿದ್ದಾರೆ. ಔಷಧ ಉತ್ಪನ್ನ ಮತ್ತು ವೈದ್ಯಕೀಯ ಸಲಕರಣೆಗಳ ಕ್ಷೇತ್ರದ 6ನೇ ಅಂತಾರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಾವೆಲ್ಲರೂ ಸಂಘಟಿತವಾಗಿ ದೇಶ ಉತ್ತಮ ಉತ್ಪಾದನಾ ರೂಢಿಗಳನ್ನು ಹೊಂದುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು. ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಏನೇ ಬೇಕೆಂದರೂ ಭಾರತ ಎಲ್ಲಕ್ಕೂ ಒಂದೇ ತಾಣ ಎಂಬ ವಿಶ್ವಾಸವನ್ನು ಇಡೀ ಆರೋಗ್ಯ ಪರಿಸರ ವ್ಯವಸ್ಥೆಯು ವಿಶ್ವಕ್ಕೆ ಮೂಡಿಸಬೇಕು ಎಂದರು.
ಗುಣಮಟ್ಟವು ಬೆಲೆಗೆ ಸಿಗುವುದಿಲ್ಲ, ಬದಲಿಗೆ ಗುಣಮಟ್ಟವು ನಮ್ಮ ಬೆಲೆಯನ್ನು ತಗ್ಗಿಸುತ್ತದೆ ಎಂದು ಶ್ರೀ ಗೋಯಲ್ ಹೇಳಿದರು. ನಿಯಂತ್ರಕ ಮತ್ತು ಉತ್ತಮ ಉತ್ಪಾದನಾ ರೂಢಿಗಳು, ವ್ಯವಸ್ಥೆಗಳು ಮತ್ತು ಪ್ರಮಾಣೀಕರಣಗಳು, ಅನುಮೋದನೆಗಳು ಯಾವಾಗಲೂ ಪ್ರಮಾಣದಲ್ಲಿ ವೃದ್ಧಿಸಲು ಮತ್ತು ಬೆಲೆಯನ್ನು ತಗ್ಗಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಭಾರತ ಆರೋಗ್ಯ ಆರೈಕೆ ಕ್ಷೇತ್ರದಲ್ಲಿ ಸುವರ್ಣ ಕಾಲವನ್ನು ಕಂಡಿದೆ ಎಂದು ಸಚಿವರು ಹೇಳಿದರು. ಇಡೀ ವಿಶ್ವವು ಭಾರತೀಯ ಮಾನದಂಡಗಳನ್ನು ಅನುಸರಿಸುವಂತಾಗುವ ಮುಂದಿನ ದಶಕವನ್ನು, ಭಾರತದ ದಶಕವನ್ನಾಗಿ ನಾವು ಮಾಡಬೇಕು ಎಂದು ಅವರು ತಿಳಿಸಿದರು.
ಇದು ಜಗತ್ತಿಗೆ ಸಿ.ಯು.ಆರ್.ಇ. ಅಗತ್ಯವಿದೆ ಎಂದು ಸಚಿವರು ಹೇಳಿದರು. ಸಿ.ಯು.ಆರ್.ಇ. –ಸಂಶೋಧನೆ ಮತ್ತು ಉದ್ದಿಮೆಯ ಮೂಲಕ ವೆಚ್ಚ ದಕ್ಷತೆಯ ಸಾರ್ವತ್ರಿಕ ಪರಿಹಾರದಿಂದ ಹೊರಹೊಮ್ಮಿದೆ. "ಭಾರತವು ಜಗತ್ತನ್ನು ಗುಣಪಡಿಸಲು(ಸಿ.ಯು.ಆರ್.ಇ.) ಹೊರಟಿದೆ ಎಂದು ನಾವು ನಮ್ಮ ಅಂದುಕೊಂಡರೆ, ವೈದ್ಯಕೀಯ-ತಂತ್ರಜ್ಞಾನ, ವೈದ್ಯಕೀಯ ಸಾಧನಗಳು, ಆರೋಗ್ಯ ಆರೈಕೆ ನೀಡಿಕೆ ಕ್ಷೇತ್ರದಲ್ಲಿ ವಿಶ್ವದ ಪ್ರಬಲ ನಾಯಕರಾಗಬೇಕೆಂಬ ನಮ್ಮ ಸಾಮರ್ಥ್ಯದಲ್ಲಿ ಯಾವುದೇ ಮಿತಿಗಳಿಲ್ಲ. ಸಂಶೋಧನೆ ಮತ್ತು ಉದ್ಯಮದ ಮೂಲಕ ವೆಚ್ಚ-ದಕ್ಷತೆಯ ಸಾರ್ವತ್ರಿಕ ಪರಿಹಾರದಿಂದ ಸಿ ಯು ಆರ್ ಇ ಹೊರಬರುತ್ತದೆ.” ಎಂದು ತಿಳಿಸಿದರು.
ಹೆಚ್ಚಿನ ದೇಶಗಳಿಗೆ ಔಷಧಗಳ ಸಮನವಾದ ಪ್ರವೇಶಾವಕಾಶ ಒದಗಿಸಲು ಕೋವಿಡ್-19 ರ ಸಮಯದಲ್ಲಿ ಮನ್ನಾ ಮಾಡುವಂತೆ 2020ರ ಅಕ್ಟೋಬರ್ ನಲ್ಲಿ ಡಬ್ಲ್ಯು.ಟಿ.ಒ.ದ ಟಿಆರ್.ಐ.ಪಿ.ಎಸ್. ಮಂಡಳಿಯ ಮುಂದೆ, ಪ್ರಸ್ತಾಪಿಸಿದ ರಾಷ್ಟ್ರಗಳ ಪೈಕಿ ಭಾರತವು ದಕ್ಷಿಣ ಆಫ್ರಿಕಾದೊಂದಿಗೆ ಮುಂಚೂಣಿಯಲ್ಲಿತ್ತು ಎಂದು ಶ್ರೀ ಗೋಯೆಲ್ ತಿಳಿಸಿದರು. ನಾವೀಗ 57 ಡಬ್ಲ್ಯು.ಟಿ.ಓ. ಸದಸ್ಯರ ಬೆಂಬಲವನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದರು. ಡಬ್ಲ್ಯು.ಟಿ.ಓ.ದಲ್ಲಿ ಭಾರತ ಪ್ರಸ್ತಾಪಿಸಿರುವ ಟ್ರಿಪ್ಸ್ ಮನ್ನಾಗಾಗಿ ಹೃದಯವೈಶಾಲ್ಯ ಪ್ರದರ್ಶಿಸುವಂತೆ ಔಷಧ ತಯಾರಿಕಾ ಉದ್ಯಮಗಳಿಗೆ ಕರೆ ನೀಡಿದ ಅವರು, ಇದು ಸಾಂಕ್ರಾಮಿಕದಿಂದ ಅತಿ ವೇಗವಾಗಿ ಹೊರಬರಲು ಇಡೀ ವಿಶ್ವಕ್ಕೆ ನೆರವಾಗುತ್ತದೆ ಎಂದರು. ಈ ಪ್ರಸ್ತಾಪವು ಅಭಿವೃದ್ಧಿಹೊಂದಿದ ವಿಶ್ವವನ್ನು ಒತ್ತಡಕ್ಕೆ ಸಿಲುಕಿಸಿದ್ದು, ಅವರು ಕೆಲವು ಔಷಧ ಕಂಪನಿಗಳ ಹಿತವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಭಾರತವು ಕೋವಿಡ್ ಸಾಂಕ್ರಾಮಿಕದಿಂದ ಹೊರಬರುವ ಸ್ಪಷ್ಟ ಮಾರ್ಗದಲ್ಲಿದೆ ಎಂದ ಸಚಿವರು, ಔಷಧ ಕೈಗಾರಿಕೆಗಳು ಸಹ ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ಬೆಳವಣಿಗೆ ಸಾಧಿಸುವ ಮಾರ್ಗದಲ್ಲಿವೆ ಎಂದರು. ಔಷಧ ಕೈಗಾರಿಕೆಗಳಿಗೆ 3 ವಿ ಒದಗಿಸಲಾಗಿದೆ: - ವೆಂಟಿಲೇಟರ್ ಗಳು – ವ್ಯಾಕ್ಸಿನ್ (ಲಸಿಕೆ)ಗಳು - ವಿ-ಆಕಾರದ ಚೇತರಿಕೆ, ಮತ್ತು ಈ ಮೂರು ವಿ'ಗಳು ಕೈಗಾರಿಕೆಯ ಶಕ್ತಿಯನ್ನು ಬಿಂಬಿಸುತ್ತವೆ ಎಂದರು. “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳುವಂತೆ, ನಾವು ಈ ಕೋವಿಡ್ ಸಾಂಕ್ರಾಮಿಕದ ಸಂಕಷ್ಟವನ್ನು ಅವಕಾಶವಾಗಿ ಪರಿವರ್ತಿಸಬೇಕು, ಇದನ್ನು ಔಷಧ ಉದ್ಯಮಕ್ಕಿಂತ ಮತ್ತಾರು ಉತ್ತಮವಾಗಿ ಮಾಡಲು ಸಾಧ್ಯ.”, ಎಂದೂ ಅವರು ಹೇಳಿದರು.
***
(Release ID: 1701071)
Visitor Counter : 228