ಪ್ರಧಾನ ಮಂತ್ರಿಯವರ ಕಛೇರಿ

ಪಿಎಂ ಕಿಸಾನ್ ಯೋಜನೆಗೆ 2 ವರ್ಷ ಪೂರ್ಣ


ನಮ್ಮ ರೈತರ ದೃಢತೆ ಮತ್ತು ಉತ್ಸಾಹ ಸ್ಫೂರ್ತಿದಾಯಕ: ಪ್ರಧಾನ ಮಂತ್ರಿ

ಸರಕಾರದಿಂದ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಐತಿಹಾಸಿಕ ಹೆಚ್ಚಳ: ನರೇಂದ್ರ ಮೋದಿ

Posted On: 24 FEB 2021 10:54AM by PIB Bengaluru

ದೇಶದ ಕೃಷಿಕರ ಘನತೆ ಮತ್ತು ಸಮೃದ್ಧಿಯ ಜೀವನ ಖಚಿತಪಡಿಸುವ ಉದ್ದೇಶದಿಂದ ಜಾರಿಗೆ ತಂದ ಪ್ರಧಾನ ಮಂತ್ರಿಗಳ – ಕಿಸಾನ್ ಯೋಜನೆಯು ಇಂದಿಗೆ 2 ವರ್ಷಗಳ ಸಮಗ್ರ ಪೂರ್ಣಗೊಳಿಸಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕುರಿತು ಸರಣಿ ಟ್ವೀಟ್’ಗಳನ್ನು ಮಾಡಿದ್ದು, “2 ವರ್ಷಗಳ ಹಿಂದೆ ಇದೇ ದಿನ ನಮ್ಮ ಶ್ರಮಜೀವಿ ರೈತರ ಘನತೆ ಮತ್ತು ಸಮೃದ್ಧಿಯ ಜೀವನ ಖಚಿತಪಡಿಸಲು ಯೋಜನೆಯನ್ನು ಅನಾವರಣಗೊಳಿಸಲಾಗಿತ್ತು. ದೇಶದ ಜನತೆಗೆ ಆಹಾರದ ಅವಶ್ಯಕತೆಗಳನ್ನು ನಿರಂತರ ಒದಗಿಸಲು ಹಗಲಿರುಳು ಕಠಿಣ ಶ್ರಮ ವಹಿಸುವ ನಮ್ಮ ರೈತರ ತಾಳ್ಮೆ, ದೃಢತೆ ಮತ್ತು ಉತ್ಸಾಹ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ” ಎಂದಿದ್ದಾರೆ.

ಕಳೆದ 7 ವರ್ಷಗಳಿಂದ ಕೇಂದ್ರ ಸರಕಾರ, ರೈತರ ಅಭ್ಯುದಯಕ್ಕಾಗಿ, ಕೃಷಿ ವಲಯದ ಪರಿವರ್ತನೆಗಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಉತ್ತಮ ನೀರಾವರಿಯಿಂದ ಹಿಡಿದು ಹೆಚ್ಚಿನ ತಂತ್ರಜ್ಞಾನ ಬಳಕೆವರೆಗೆ, ಹೆಚ್ಚಿನ ಸಾಲ ಸೌಲಭ್ಯ ಮತ್ತು ಮಾರುಕಟ್ಟೆಯಿಂದ ಬೆಳೆ ವಿಮೆವರೆಗೆ, ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಮಣ್ಣಿನ ಆರೋಗ್ಯ ಕಾಪಾಡಲು ಗಮನ ಸೇರಿದಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ.

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಐತಿಹಾಸಿಕ ಹೆಚ್ಚಳ ಮಾಡಿದ ಗೌರವ ನಮ್ಮ ಸರಕಾರದ್ದಾಗಿದೆ. ರೈತರ ವರಮಾನವನ್ನು ದುಪ್ಪಟ್ಟು ಮಾಡಲು ಸಾಧ್ಯವಿರುವ ಎಲ್ಲಾ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದೇಶದ ಕೃಷಿಕರಿಗಾಗಿ ಕೇಂದ್ರ ಸರಕಾರ ಕೈಗೊಂಡಿರುವ ಕಾರ್ಯಗಳು ಮತ್ತು ಒಳನೋಟವುಳ್ಳ ಸಮಗ್ರ ಮಾಹಿತಿಯನ್ನು ನಮೋ ಆ್ಯಪ್’ನಲ್ಲಿ ನೀವು ನೋಡಬಹುದು.

पीएम किसान निधि की लॉन्चिंग को आज दो साल पूरे हो रहे हैं।अन्नदाताओं के कल्याण को समर्पित इस योजना से करोड़ों किसान भाई-बहनों के जीवन में जो बदलाव आए हैं, उससे हमें उनके लिए और अधिक काम करने की प्रेरणा मिली है। 

अन्नदाताओं के जीवन को आसान बनाने और उनकी आय दोगुनी करने का जो संकल्प देश ने लिया है, उसमें पीएम किसान निधि की महत्वपूर्ण भूमिका है। आज हमारे किसान आत्मनिर्भर भारत अभियान के भी अभिन्न अंग बन रहे हैं"।

***


(Release ID: 1700398) Visitor Counter : 236