ಪ್ರಧಾನ ಮಂತ್ರಿಯವರ ಕಛೇರಿ

ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಯೋಜನೆಗಳ ಉದ್ಘಾಟನೆ: ಪ್ರಧಾನ ಮಂತ್ರಿ ಭಾಷಣ

Posted On: 22 FEB 2021 6:28PM by PIB Bengaluru

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಜಗದೀಪ್ ಧಂಖರ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಪಿಯೂಷ್ ಗೋಯಲ್ ಜಿ, ಮಂತ್ರಿ ಮಂಡಲದ  ನನ್ನ ಸಹೋದ್ಯೋಗಿ, ಶ್ರೀ ಬಾಬುಲ್ ಸುಪ್ರಿಯೋ ಜಿ, ಇಲ್ಲಿ ಹಾಜರಿರುವ ಇತರ ಗಣ್ಯರು, ಮಹನೀಯರೇ ಮತ್ತು ಮಹನೀಯರೇ, ನಿಮ್ಮೆಲ್ಲರಿಗೂ ಪಶ್ಚಿಮ ಬಂಗಾಳದಲ್ಲಿ ರೈಲು ಮತ್ತು ಮೆಟ್ರೋ ಸಂಪರ್ಕದ ವಿಸ್ತರಣೆಯ ಕಾರ್ಯಕ್ಕಾಗಿ ಅಭಿನಂದನೆಗಳು. ರಾಷ್ಟ್ರಕ್ಕಾಗಿ ಸಮರ್ಪಿತವಾದ ಮತ್ತು ಇಂದು ಉದ್ಘಾಟನೆಯಾದ ಯೋಜನೆಗಳು ಹೂಗ್ಲಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಲಕ್ಷಾಂತರ ಜನರ ಜೀವನವನ್ನು ಸುಲಭಗೊಳಿಸಲಿವೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಉತ್ತಮ ಸಾರಿಗೆ ಎಂದರೆ, ನಮ್ಮ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ  ದೃಢನಿಶ್ಚಯವು ಬಲವಾಗಿರುತ್ತದೆಕೋಲ್ಕತ್ತಾದ ಹೊರತಾಗಿ, ಹೂಗ್ಲಿ, ಹೌರಾ ಮತ್ತು ಉತ್ತರ 24 ಪರಗಣ ಜಿಲ್ಲೆಗಳ ಸ್ನೇಹಿತರು ಸಹ ಈಗ ಮೆಟ್ರೋ ಸೇವಾ ಸೌಲಭ್ಯದ ಲಾಭವನ್ನು ಪಡೆಯುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆಇಂದು, ನವೋಪಾದಿಂದ ದಕ್ಷಿಣೇಶ್ವರಕ್ಕೆ ಉದ್ಘಾಟಿಸಲಾದ ವಿಭಾಗವು ಒಂದೂವರೆ ಗಂಟೆಗಳ ಪ್ರಯಾಣದ ಅಂತರವನ್ನು ಕೇವಲ 25-35 ನಿಮಿಷಗಳಿಗೆ ಇಳಿಸುತ್ತದೆ. ಮೆಟ್ರೊದಿಂದ ಕೇವಲ ಒಂದು ಗಂಟೆಯಲ್ಲಿ ದಕ್ಷಿಣಕೇಶ್ವರದಿಂದ ಕೋಲ್ಕತ್ತಾದ "ಕವಿ ಸುಭಾಸ್" ಅಥವಾ "ನ್ಯೂ ಗರಿಯಾ" ತಲುಪಲು ಈಗ ಸಾಧ್ಯವಾದರೆ,   ರಸ್ತೆಯಲ್ಲಿ ಇದು ಎರಡೂವರೆ ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ ಸೌಲಭ್ಯವು ಶಾಲಾ ಕಾಲೇಜು ಹೋಗುವವರಿಗೆ, ಕಚೇರಿಗಳು ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ನೌಕರರು ಮತ್ತು ಕಾರ್ಮಿಕರಿಗೆ ಹೆಚ್ಚು ಸಹಾಯ ಮಾಡುತ್ತದೆಈಗ ಇಂಡಿಯನ್‌ ಸ್ಟಾಟಿಸ್ಟಿಗಲ್‌  ಇನ್ಸಟಿಟ್ಯೂಟ್‌ ಬಾರಾನಗರ್ ಕ್ಯಾಂಪಸ್ ಮತ್ತು ರವೀಂದ್ರ ಭಾರತಿ ವಿಶ್ವವಿದ್ಯಾಲಯ ಮತ್ತು ವಿಶೇಷವಾಗಿ ಕಲ್ಕತ್ತಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವನ್ನು ತಲುಪುವುದು ಸುಲಭವಾಗುತ್ತದೆ. ಇದಲ್ಲದೆ, ಭಕ್ತಾದಿಗಳಿಗೆ ಕಾಲಿಗಟ್ ಮತ್ತು ದಕ್ಷಿಣೇಶ್ವರದಲ್ಲಿರುವ ಮಾ ಕಾಳಿಯ ದೇವಾಲಯಗಳನ್ನು ತಲುಪುವುದು ತುಂಬಾ ಅನುಕೂಲಕರವಾಗಿದೆ.

ಸ್ನೇಹಿತರೇ,

ಕೋಲ್ಕತಾ ಮೆಟ್ರೋ  ದಶಕಗಳ ಹಿಂದೆಯೇ ದೇಶದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಮೆಟ್ರೋದ ಆಧುನಿಕ ಅವತಾರ ಮತ್ತು ವಿಸ್ತರಣೆ ಕಳೆದ ಕೆಲವು ವರ್ಷಗಳಲ್ಲಿ ಮಾತ್ರ ಪ್ರಾರಂಭವಾಗಿದೆಮತ್ತು, ಮೆಟ್ರೊ ಆಗಿರಲಿ ಅಥವಾ ರೈಲ್ವೆ ವ್ಯವಸ್ಥೆಯಾಗಿರಲಿ, ಇಂದು ಭಾರತದಲ್ಲಿ ಏನೇನು ನಿರ್ಮಾಣವಾಗುತ್ತಿದೆಯೋ ಅದರ ಬಗ್ಗೆ ಮೇಡ್ ಇನ್ ಇಂಡಿಯಾದ ಬಗ್ಗೆ ಸ್ಪಷ್ಟವಾದ ಅಭಿಪ್ರಾಯವಿದೆ ಎಂದು ನನಗೆ ಸಂತೋಷವಾಗಿದೆಹಳಿಗಳನ್ನು ಹಾಕುವುದರಿಂದ ಹಿಡಿದು ಆಧುನಿಕ ಲೋಕೋಮೋಟಿವ್‌ಗಳು ಮತ್ತು ರೈಲುಗಳ ಬೋಗಿಗಳವರೆಗೆ ದೊಡ್ಡ ಪ್ರಮಾಣದಲ್ಲಿ ವಸ್ತು ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ನಮ್ಮ ಕೆಲಸದ ವೇಗವನ್ನು ಹೆಚ್ಚಿಸಿದೆ, ಗುಣಮಟ್ಟವನ್ನು ಸುಧಾರಿಸಿದೆ, ವೆಚ್ಚವನ್ನು ಕಡಿಮೆ ಮಾಡಿದೆ ಮತ್ತು ರೈಲುಗಳ ವೇಗವೂ ಹೆಚ್ಚುತ್ತಿದೆ.

ಸ್ನೇಹಿತರೇ,

ಪಶ್ಚಿಮ ಬಂಗಾಳವು ದೇಶದಲ್ಲಿ ಸ್ವಾವಲಂಬನೆಯ ಪ್ರಮುಖ ಕೇಂದ್ರವಾಗಿದೆ ಮತ್ತು ಇಲ್ಲಿಂದ ಈಶಾನ್ಯಕ್ಕೆ ಮತ್ತು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ವ್ಯಾಪಾರ ಮಾಡಲು ಅಪಾರ ಸಾಮರ್ಥ್ಯವಿದೆ. ಇದರ ದೃಷ್ಟಿಯಿಂದ, ಕಳೆದ ಕೆಲವು ವರ್ಷಗಳಿಂದ ರೈಲ್ವೆ ಜಾಲವನ್ನು ಸಬಲೀಕರಣಗೊಳಿಸಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆಉದಾಹರಣೆಗೆ, ಸಿವೊಕೆ-ರಂಗ್ಪೋ ಹೊಸ ಮಾರ್ಗವು ಸಿಕ್ಕಿಂ ರಾಜ್ಯವನ್ನು ಪಶ್ಚಿಮ ಬಂಗಾಳದೊಂದಿಗೆ ಮೊದಲ ಬಾರಿಗೆ ರೈಲು ಜಾಲದ ಮೂಲಕ ಸಂಪರ್ಕಿಸುತ್ತದೆ. ಕೋಲ್ಕತ್ತಾದಿಂದ ಬಾಂಗ್ಲಾದೇಶಕ್ಕೆ ರೈಲುಗಳು ಓಡುತ್ತಿವೆ. ಇತ್ತೀಚೆಗೆ, ಹಲ್ಡಿಬರಿಯಿಂದ ಇಂಡೋ-ಬಾಂಗ್ಲಾದೇಶದ ಗಡಿಯವರೆಗಿನ ರೈಲು ಮಾರ್ಗವನ್ನು ನಿಯೋಜಿಸಲಾಗಿದೆ. ಕಳೆದ ಆರು ವರ್ಷಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ಹಲವಾರು ಮೇಲ್ಸೇತುವೆಗಳು ಮತ್ತು  ಕೆಳಸೇತುವೆಗಳ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಸ್ನೇಹಿತರೇ,

ಇಂದು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಾಗಿರುವ ನಾಲ್ಕು ಯೋಜನೆಗಳು ಇಲ್ಲಿನ ರೈಲಿನ ಜಾಲವನ್ನು ಮತ್ತಷ್ಟು ಬಲಪಡಿಸುತ್ತವೆ. ಮೂರನೇ ಮಾರ್ಗದ ಪ್ರಾರಂಭದೊಂದಿಗೆ, ಖರಗ್‌ಪುರ-ಆದಿತ್ಯಪುರ ವಿಭಾಗದಲ್ಲಿ ರೈಲು ಸಂಚಾರವು ತುಂಬಾ ಸುಧಾರಿಸುತ್ತದೆ ಮತ್ತು ಹೌರಾ-ಮುಂಬೈ ಮಾರ್ಗದಲ್ಲಿ ರೈಲುಗಳ ವಿಳಂಬವನ್ನು ಕಡಿಮೆ ಮಾಡುತ್ತದೆಅಜಿಮ್‌ಗಂಜ್ ಮತ್ತು ಖಾಗ್ರಾಘಾಟ್ ರಸ್ತೆ ನಡುವೆ ಡಬಲ್ ಲೈನ್ ಸೌಲಭ್ಯವು ಮುರ್ಷಿದಾಬಾದ್ ಜಿಲ್ಲೆಯ ಬಿಡುವಿಲ್ಲದ ರೈಲು ಜಾಲಕ್ಕೆ ಪರಿಹಾರ ನೀಡುತ್ತದೆ. ಇದು ಕೋಲ್ಕತಾ-ಹೊಸ ಜಲ್ಪೈಗುರಿ-ಗುವಾಹಟಿಗೆ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ  ಮತ್ತು ಈಶಾನ್ಯಕ್ಕೆ ಸಂಪರ್ಕವನ್ನು ಸುಧಾರಿಸುತ್ತದೆಡಂಕುನಿ-ಬರುಯಿಪಾರ ನಡುವಿನ ನಾಲ್ಕನೇ ಸಾಲಿನ ಯೋಜನೆ ಬಹಳ ಮುಖ್ಯಅದು ಸಿದ್ಧವಾದ ನಂತರ ಅದು ಹೂಗ್ಲಿಯ ಕಾರ್ಯನಿರತ ಜಾಲದಲ್ಲಿನ ಹೊರೆ ಕಡಿಮೆ ಮಾಡುತ್ತದೆ.   ಅಂತೆಯೇ, ರಸೂಲ್‌ಪುರ ಮತ್ತು ಮಾಗ್ರಾ ವಿಭಾಗವು ಕೋಲ್ಕತ್ತಾಗೆ ಒಂದು ರೀತಿಯ ಹೆಬ್ಬಾಗಿಲಾಗಿದೆ, ಆದರೆ ಇದು ತುಂಬಾ ಕಿಕ್ಕಿರಿದಿದೆ. ಹೊಸ ಮಾರ್ಗದ ಪ್ರಾರಂಭದೊಂದಿಗೆ, ಸಮಸ್ಯೆಯನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಪರಿಹರಿಸಲಾಗುವುದು.

ಸ್ನೇಹಿತರೇ,

ಎಲ್ಲಾ ಯೋಜನೆಗಳು ಪಶ್ಚಿಮ ಬಂಗಾಳವನ್ನು ಕಲ್ಲಿದ್ದಲು ಉದ್ಯಮ, ಉಕ್ಕಿನ ಉದ್ಯಮ, ಗೊಬ್ಬರ ಮತ್ತು ಧಾನ್ಯಗಳನ್ನು ಉತ್ಪಾದಿಸುವ ಪ್ರದೇಶಗಳೊಂದಿಗೆ ಸಂಪರ್ಕಿಸುತ್ತಿವೆ ಹೊಸ ರೈಲ್ವೆ ಮಾರ್ಗಗಳು ಜೀವನವನ್ನು ಸುಲಭಗೊಳಿಸುವುದಲ್ಲದೆ, ಉದ್ಯಮಕ್ಕೆ ಹೊಸ ಆಯ್ಕೆಗಳಿವೆ ಮತ್ತು ಅದು ಉತ್ತಮ ಮೂಲಸೌಕರ್ಯಗಳ ಗುರಿಯಾಗಿದೆಇದೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್. ಇದು ಆತ್ಮನಿರ್ಭರ ಭಾರತದ ಅಂತಿಮ ಗುರಿಯಾಗಿದೆನಾವೆಲ್ಲರೂ ಗುರಿಯೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಬೇಕೆಂಬ ಆಶಯದೊಂದಿಗೆ ನಾನು ಪಿಯೂಷ್ ಜಿ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಕಳೆದ ಹಲವಾರು ವರ್ಷಗಳಿಂದ ಪಶ್ಚಿಮ ಬಂಗಾಳದ ರೈಲ್ವೆ ವಲಯ ಮತ್ತು ರೈಲ್ವೆ ಮೂಲಸೌಕರ್ಯದಲ್ಲಿನ ಬಾಕಿ ಇರುವ ನ್ಯೂನತೆಗಳನ್ನು ತೆಗೆದುಹಾಕಲು ನಾವು ತೆಗೆದುಕೊಂಡ ಜವಾಬ್ದಾರಿಯನ್ನು ಪೂರೈಸುತ್ತೇವೆ ಮತ್ತು ಬಂಗಾಳದ ಕನಸುಗಳನ್ನು ಸಹ ಸಾಕಾರಗೊಳಿಸುತ್ತೇವೆ.

ನಿರೀಕ್ಷೆಯೊಂದಿಗೆ, ನಿಮಗೆ ಅನಂತ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

***


(Release ID: 1700212) Visitor Counter : 183