ಪ್ರಧಾನ ಮಂತ್ರಿಯವರ ಕಛೇರಿ
ಹತ್ತು ನೆರೆ ರಾಷ್ಟ್ರಗಳೊಂದಿಗೆ “ಕೋವಿಡ್ -19 ನಿರ್ವಹಣೆ: ಅನುಭವ, ಉತ್ತಮ ರೂಢಿಗಳು ಮತ್ತು ಮುಂದಿನ ಹಾದಿ” ಕುರಿತ ಕಾರ್ಯಾಗಾರ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
ವೈದ್ಯರು ಮತ್ತು ದಾದಿಯರಿಗೆ ವಿಶೇಷ ವೀಸಾ ಯೋಜನೆ, ಪ್ರಾದೇಶಿಕ ವಿಮಾನ ಆಂಬುಲೆನ್ಸ್ ಒಪ್ಪಂದದ ಸಲಹೆ
Posted On:
18 FEB 2021 4:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 10 ನೆರೆ ರಾಷ್ಟ್ರಗಳಾದ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಪಾಕಿಸ್ತಾನ, ಸೆಶೆಲ್ಸ್, ಶ್ರೀಲಂಕಾ ಹಾಗೂ ಆರೋಗ್ಯ ಕ್ಷೇತ್ರದ ನಾಯಕರು, ತಜ್ಞರು ಮತ್ತು ಅಧಿಕಾರಿಳೊಂದಿಗೆ “ಕೋವಿಡ್ -19 ನಿರ್ವಹಣೆ: ಅನುಭವ, ಉತ್ತಮ ರೂಢಿಗಳು ಮತ್ತು ಮುಂದಿನ ಹಾದಿ” ಕುರಿತ ಕಾರ್ಯಾಗಾರ ಉದ್ದೇಶಿಸಿ ಭಾಷಣ ಮಾಡಿದರು.
ಸಾಂಕ್ರಾಮಿಕದ ಸಂದರ್ಭದಲ್ಲಿ ರಾಷ್ಟ್ರಗಳ ಆರೋಗ್ಯ ವ್ಯವಸ್ಥೆ ನೀಡಿದ ಸಹಕಾರ ಮತ್ತು ತುಂಬಾ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಘಟಿತ ರೂಪದಲ್ಲಿ ಸವಾಲುಗಳನ್ನು ಎದುರಿಸಲು ನೀಡಿದ ಸ್ಪಂದನೆಯನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು.
ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ತಕ್ಷಣದ ವೆಚ್ಚವನ್ನು ಭರಿಸಲು ಕೋವಿಡ್ -19 ತುರ್ತು ಸ್ಪಂದನಾ ನಿಧಿ ಸ್ಥಾಪನೆ ಮಾಡಿದ್ದನ್ನು ಮತ್ತು ಸಂಪನ್ಮೂಲ – ಔಷಧಗಳು, ಪಿಪಿಇ, ಮತ್ತು ಪರೀಕ್ಷಾ ಸಾಧನಗಳ ವಿನಿಮಯವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಪರೀಕ್ಷೆ, ಸೋಂಕು ನಿಯಂತ್ರಣ ಮತ್ತು ವೈದ್ಯಕೀಯ ತ್ಯಾಜ್ಯದ ನಿರ್ವಹಣೆ ಕುರಿತಂತೆ ಪರಸ್ಪರರ ಉತ್ತಮ ರೂಢಿಗಳನ್ನು ಕಲಿತಿದ್ದನ್ನು ಮತ್ತು ಅನುಭವ ಹಂಚಿಕೊಂಡಿದ್ದನ್ನು ಅವರು ಉಲ್ಲೇಖಿಸಿದರು. “ಈ ಸಹಯೋಗದ ಸ್ಫೂರ್ತಿ ಸಾಂಕ್ರಾಮಿಕ ರೋಗದಿಂದ ಕಲಿತ ಅಮೂಲ್ಯ ಮಾರ್ಗವಾಗಿದೆ. ನಮ್ಮ ಮುಕ್ತತೆ ಮತ್ತು ದೃಢ ನಿಶ್ಚಯದ ಮೂಲಕ, ನಾವು ವಿಶ್ವದ ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಶ್ಲಾಘನೆಗೆ ಅರ್ಹವಾಗಿದೆ. ಇಂದು, ನಮ್ಮ ವಲಯದ ಮತ್ತು ಜಗತ್ತಿನ ಆಶಯ ಲಸಿಕೆಗಳನ್ನು ಶೀಘ್ರವಾಗಿ ನೀಡುವುದರ ಮೇಲೆ ಕೇಂದ್ರೀಕರಿಸಿದೆ. ಇದರಲ್ಲೂ ನಾವು ಒಂದೇ ರೀತಿಯ ಸಹಕಾರಿ ಮತ್ತು ಸಹಕಾರಿ ಸ್ಫೂರ್ತಿಯನ್ನು ಕಾಪಾಡಿಕೊಳ್ಳಬೇಕಿದೆ.” ಎಂದು ಪ್ರಧಾನಮಂತ್ರಿ ಹೇಳಿದರು.
ಈ ಆಕಾಂಕ್ಷೆಯನ್ನು ಇನ್ನೂ ಹೆಚ್ಚಿಸುವಂತೆ ರಾಷ್ಟ್ರಗಳಿಗೆ ಕೋರಿದ ಪ್ರಧಾನಮಂತ್ರಿಯವರು, ನಮ್ಮ ವೈದ್ಯರು ಮತ್ತು ದಾದಿಯರಿಗೆ ವಿಶೇಷ ವಿಸಾ ಯೋಜನೆ ರೂಪಿಸುವಂತೆ ಸಲಹೆ ಮಾಡಿದರು. ಇದರಿಂದ ಅವರು, ನಮ್ಮ ವಲಯದಲ್ಲಿ ಆರೋಗ್ಯದ ತುರ್ತುಸ್ಥಿತಿಯಲ್ಲಿ, ಸ್ವೀಕರಿಸುವ ರಾಷ್ಟ್ರದ ಕೋರಿಕೆಯ ಮೇಲೆ ನಮ್ಮ ವಲಯದಲ್ಲಿ ತ್ವರಿತವಾಗಿ ಪ್ರಯಾಣಿಸಬಹುದು ಎಂದರು. ನಮ್ಮ ನಾಗರಿಕ ವಿಮಾನಯಾನ ಸಚಿವಾಲಯಗಳು ವೈದ್ಯಕೀಯ ಆಕಸ್ಮಿಕಗಳ ಸಂದರ್ಭದಲ್ಲಿ ವಿಮಾನ ಆಂಬುಲೆನ್ಸ್ ಗೆ ಒಪ್ಪಂದ ಮಾಡಿಕೊಳ್ಳಬಹುದೇ? ಎಂದೂ ಕೇಳಿದರು. ನಮ್ಮ ಜನಸಂಖ್ಯೆಯಲ್ಲಿ ಕೋವಿಡ್-19 ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಲು, ಕ್ರೋಡೀಕರಿಸಲು ಮತ್ತು ಅಧ್ಯಯನ ಮಾಡಲು ನಾವು ಪ್ರಾದೇಶಿಕ ವೇದಿಕೆಯನ್ನು ನಾವು ರಚಿಸಬಹುದು ಎಂಬ ಸಲಹೆಯನ್ನೂ ನೀಡಿದರು. ಭವಿಷ್ಯದ ಸಾಂಕ್ರಾಮಿಕ ರೋಗ ತಡೆಗಟ್ಟಲು, ಅದೇ ರೀತಿ ನಾವು ತಂತ್ರಜ್ಞಾನ ನೆರವಿನ ಸಾಂಕ್ರಾಮಿಕ ರೋಗ ಶಾಸ್ತ್ರ ಉತ್ತೇಜಿಸಲು ಪ್ರಾದೇಶಿಕ ಜಾಲವನ್ನು ರಚಿಸಬಹುದೇ? ಎಂದೂ ಅವರು ಕೇಳಿದರು.
ಕೋವಿಡ್ -19 ಹೊರತಾಗಿ, ನಾವು ಸಾರ್ವಜನಿಕ ಆರೋಗ್ಯದ ನಮ್ಮ ಯಶಸ್ವಿ ಕಾರ್ಯಕ್ರಮ ಮತ್ತು ನೀತಿಗಳನ್ನು ಹಂಚಿಕೊಳ್ಳಬಹುದು ಎಂಬ ಸಲಹೆಯನ್ನು ಪ್ರಧಾನಮಂತ್ರಿಯವರು ನೀಡಿದರು. ಭಾರತದಿಂದ ನಮ್ಮ ಆಯುಷ್ಮಾನ್ ಭಾರತ ಮತ್ತು ಜನೌಷಧ ಯೋಜನೆಗಳು ನಮ್ಮ ಸ್ನೇಹಿತರಿಗೆ ವಲಯದಲ್ಲಿ ಅಧ್ಯಯನಕ್ಕೆ ಉಪಯುಕ್ತ ಪ್ರಕರಣಗಳಾಗಿವೆ ಎಂದೂ ಸಲಹೆ ಮಾಡಿದರು. “21ನೇ ಶತಮಾನ ಏಷ್ಯಾದ ಶತಮಾನವಾಗಿದೆ, ಇದು ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದ ದ್ವೀಪ ದೇಶಗಳಲ್ಲಿ ಹೆಚ್ಚಿನ ಏಕೀಕರಣವಿಲ್ಲದೆ ಸಾಧ್ಯವಾಗುವುದಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ನೀವು ತೋರಿಸಿದ ಪ್ರಾದೇಶಿಕ ಒಗ್ಗಟ್ಟಿನ ಮನೋಭಾವವು ಅಂತಹ ಏಕೀಕರಣ ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ” ಎಂದು ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.
***
(Release ID: 1699345)
Visitor Counter : 197
Read this release in:
Marathi
,
Tamil
,
Telugu
,
Odia
,
English
,
Urdu
,
Hindi
,
Bengali
,
Manipuri
,
Assamese
,
Punjabi
,
Gujarati
,
Malayalam