ಸಂಪುಟ
ಬಾಲಾಪರಾಧ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015 ರ ತಿದ್ದುಪಡಿಗಳಿಗೆ ಕೇಂದ್ರ ಸಂಪುಟದ ಅನುಮೋದನೆ
Posted On:
17 FEB 2021 3:52PM by PIB Bengaluru
ಮಕ್ಕಳ ಹಿತರಕ್ಷಣೆಯನ್ನು ಖಚಿತಪಡಿಸಿಕೊಳುವ ಸಲುವಾಗಿ ಮಕ್ಕಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಕ್ರಮಗಳನ್ನು ಕೈಗೊಳ್ಳಲು 2015 ರ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ತಿದ್ದುಪಡಿಗಳಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ತಿದ್ದುಪಡಿಗಳ ಪ್ರಸ್ತಾವವನ್ನು ಮಂಡಿಸಿತ್ತು.
ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಸಲುವಾಗಿ ಕಾಯ್ದೆಯ ಸೆಕ್ಷನ್ 61 ರ ಅಡಿಯಲ್ಲಿ ದತ್ತು ಆದೇಶಗಳನ್ನು ಹೊರಡಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಧಿಕಾರಿಗೆ ಅಧಿಕಾರ ನೀಡುವುದು ಈ ತಿದ್ದುಪಡಿಗಳಲ್ಲಿ ಸೇರಿದೆ. ಈ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಮಕ್ಕಳ ಪರವಾಗಿ ಸಮನ್ವಯದ ಪ್ರಯತ್ನಗಳನ್ನು ಪಡೆದುಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಕಾಯಿದೆಯಡಿ ಮತ್ತಷ್ಟು ಅಧಿಕಾರ ನೀಡಲಾಗಿದೆ. ಸಿಡಬ್ಲ್ಯೂಸಿ ಸದಸ್ಯರ ನೇಮಕಕ್ಕೆ ಅರ್ಹತಾ ಮಾನದಂಡಗಳನ್ನು ವ್ಯಾಖ್ಯಾನಿಸುವುದು ಮತ್ತು ಈ ಹಿಂದೆ ವಿವರಿಸಲಾಗದ ಅಪರಾಧಗಳನ್ನು ‘ಗಂಭೀರ ಅಪರಾಧ’ ಎಂದು ವರ್ಗೀಕರಿಸುವುದು ಪ್ರಸ್ತಾಪದ ಇತರ ಕೆಲವು ಅಂಶಗಳು. ಕಾಯಿದೆಯ ವಿವಿಧ ನಿಬಂಧನೆಗಳ ಅನುಷ್ಠಾನದಲ್ಲಿದ್ದ ಹಲವಾರು ತೊಂದರೆಗಳನ್ನು ಪರಿಹರಿಸಲಾಗಿದೆ.
****
(Release ID: 1698762)
Visitor Counter : 713
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam