ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದಿಂದ 2019-20 ಮತ್ತು 2020-21ನೇ ಹಣಕಾಸು ವರ್ಷಕ್ಕೆ 167.16 ಕೋಟಿ ರೂ. ಲಾಭಾಂಶದ ರಸೀತಿ ಸ್ವೀಕರಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು
Posted On:
17 FEB 2021 4:11PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ಅವರಿಂದು 2019-20ನೇ ಹಣಕಾಸು ವರ್ಷಕ್ಕೆ ಹಿಂದೆಂದಿಗಿಂತ ಹೆಚ್ಚು ಶೇ.28.4ರಷ್ಟು ಅಂದರೆ 117.51 ಕೋಟಿ ರೂ.ಗಳ ಲಾಭಾಂಶವನ್ನು ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತ (ಆರ್.ಸಿ.ಎಫ್.)ನಿಂದ ಸ್ವೀಕರಿಸಿದರು. ಇದರ ಜೊತೆಗೆ ಆರ್.ಸಿ.ಎಫ್. 2020-21ನೇ ಹಣಕಾಸು ವರ್ಷದ ಮಧ್ಯಂತರ ಡಿವಿಡೆಂಡ್ ಮೊತ್ತವಾದ 49.65 ಕೋಟಿ ರೂ.ಗಳ ಲಾಭಾಂಶವನ್ನೂ ಹಸ್ತಾಂತರ ಮಾಡಿತು. ಲಾಭಾಂಶದ ಚೆಕ್ ಅನ್ನು ಆರ್.ಸಿ.ಎಫ್.ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶ್ರೀನಿವಾಸ್ ಸಿ ಮುಡ್ಗೇರಿಕರ್ ಅವರು ಕಾರ್ಯದರ್ಶಿ (ರಸಗೊಬ್ಬರ) ಶ್ರೀ ಆರ್.ಕೆ. ಚತುರ್ವೇದಿ ಮತ್ತು ರಸಗೊಬ್ಬರ ಇಲಾಖೆಯ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸದಾನಂದ ಗೌಡ, ಕೊರೊನಾ ಸಾಂಕ್ರಾಮಿಕದಿಂದ ಎದುರಾದ ಸಂಕಷ್ಟಗಳ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್.ಸಿ.ಎಫ್.ನ ಸಾಧನೆ ಗಣನೀಯವಾಗಿದೆ ಎಂದರು. ಎಲ್ಲಾ ತೊಡಕುಗಳ ಹೊರತಾಗಿಯೂ, ಕಂಪನಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ 221.09 ಕೋಟಿ ರೂ. ನಿವ್ವಳ ಲಾಭ ಗಳಿಸಿರುವುದು (ಡಿಸೆಂಬರ್ 2020ರವರೆಗೆ) ಉಲ್ಲೇಖನಾರ್ಹ, ಕಳೆದ ವರ್ಷದ ಇದೇ ಅವಧಿಯ ರೂ.65.87 ಕೋಟಿ ರೂ.ಗೆ ಹೋಲಿಸಿದರೆ ಶೇ.235.65ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.
ಆರ್.ಸಿ.ಎಫ್. ಭಾರತ ಸರ್ಕಾರ ತನ್ನ ಶೇ.75ರಷ್ಟು ಶೇರು ಹೊಂದಿರುವ ಪ್ರಮುಖ ರಸಗೊಬ್ಬರ ಮತ್ತು ರಾಸಾಯನಿಕ ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇದು ಎರಡು ಕಾರ್ಯಾಚರಣಾ ಘಟಕಗಳನ್ನು ಒಳಗೊಂಡಿದೆ, ಒಂದು ಮುಂಬೈನ ಟ್ರಾಂಬೆಯಲ್ಲಿದ್ದರೆ, ಮತ್ತೊಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಥಾಲ್ ನಲ್ಲಿದೆ. ಆರ್.ಸಿ.ಎಪ್. ಯೂರಿಯಾ, ಸಂಕೀರ್ಣ ರಸಗೊಬ್ಬರ, ಜೈವಿಕ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು, ಪ್ರತಿಶತ 100ರಷ್ಟು ನೀರಿನಲ್ಲಿ ಕರಗುವ ರಸಗೊಬ್ಬರ, ಮಣ್ಣಿನ ಕಂಡೀಷನರ್ ಗಳು ಮತ್ತು ವಿಸ್ತೃತ ಶ್ರೇಣಿಯ ಕೈಗಾರಿಕಾ ರಾಸಾಯನಿಕಗಳನ್ನು ಉತ್ಪಾದನೆ ಮಾಡುತ್ತದೆ. ಕಂಪನಿಯು ಗ್ರಾಮೀಣ ಭಾರತದಲ್ಲಿ ಮನೆ ಮಾತಾಗಿದ್ದು, "ಉಜ್ವಾಲಾ" (ಯೂರಿಯಾ) ಮತ್ತು "ಸುಫಲಾ" (ಸಂಕೀರ್ಣ ರಸಗೊಬ್ಬರಗಳು) ಮುಂತಾದ ಬ್ರಾಂಡ್ ಗಳನ್ನು ಹೊಂದಿದೆ, ಇದು ಹೆಚ್ಚಿನ ಬ್ರಾಂಡ್ ಈಕ್ವಿಟಿಯನ್ನು ಹೊಂದಿದೆ. ಎಲ್ಲಾ ಪ್ರಮುಖ ರಾಜ್ಯಗಳಲ್ಲಿ ಆರ್.ಸಿ.ಎಫ್ ದೇಶಾದ್ಯಂತ ಮಾರುಕಟ್ಟೆ ಜಾಲ ಹೊಂದಿದೆ. ರಸಗೊಬ್ಬರ ಉತ್ಪನ್ನಗಳಲ್ಲದೆ, ಬಣ್ಣಗಳು, ದ್ರಾವಕಗಳು, ಹದ ಮಾಡಿದ ಚರ್ಮ, ಔಷಧಗಳು, ಬೇಕರಿ ಉತ್ಪನ್ನಗಳು ಮತ್ತು ಇತರ ಕೈಗಾರಿಕಾ ಉತ್ಪನ್ನಗಳ ತಯಾರಿಕೆಗಾಗಿ ಆರ್.ಸಿ.ಎಫ್ ಹೆಚ್ಚಿನ ಸಂಖ್ಯೆಯ ಕೈಗಾರಿಕಾ ರಾಸಾಯನಿಕಗಳನ್ನು ಉತ್ಪಾದಿಸುತ್ತದೆ.
2019-20ನೇ ಹಣಕಾಸು ವರ್ಷದ ಸಾಧನೆಯ ಪ್ರಮುಖಾಂಶಗಳು ಈ ಕೆಳಗಿನಂತಿವೆ:
1. ಹಿಂದೆಂದಿಗಿಂತ ಹೆಚ್ಚು ವಾರ್ಷಿಕ ಆದಾಯ ರೂ. 9697.95 ಕೋಟಿ.
2. ಆರ್.ಸಿ.ಎಫ್. 2019-20ನೇ ಸಾಲಿನಲ್ಲಿ ಈಕ್ವಿಟಿ ಶೇರುಗಳಿಗೆ ಹಿಂದೆಂದಿಗಿಂತಲೂ ಹೆಚ್ಚು ಲಾಭಾಂಶ ಶೇ.28.4 ಅಂದರೆ ರೂ.156.68 ಕೋಟಿ ಘೋಷಿಸಿದೆ (ಸರ್ಕಾರದ ಪಾಲು ಶೇ.75 ಅಂದರೆ ರೂ. 117.51 ಕೋಟಿ)
3. ಆರ್.ಸಿ.ಎಫ್.ನ ಪ್ರಮುಖ ಎನ್,ಪಿ.ಕೆ ಗೊಬ್ಬರ ಸುಫಲಾ ವಾರ್ಷಿಕ ಮಾರಾಟ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
4. ಎಫ್.ಸಿ.ವೈ ಅವಧಿಯಲ್ಲಿ ಆರ್.ಸಿ.ಎಫ್ ಎರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿತು: ಸಾವಯವ ಬೆಳವಣಿಗೆ ಉತ್ತೇಜಕ ಮತ್ತು ನೀರಿನಲ್ಲಿ ಕರಗುವ ಸಿಲಿಕಾನ್ ರಸಗೊಬ್ಬರಗಳು.
5. ಆರ್.ಸಿ.ಎಫ್ 2019-20ನೇ ಹಣಕಾಸು ವರ್ಷದಲ್ಲಿ ದಿನಂಪ್ರತಿ 15 ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಕಾರ್ಯಾರಂಭಿಸಿದೆ.
6. ಸರ್ಕಾರಿ ಲೆಕ್ಕದಲ್ಲಿ ಯೂರಿಯಾವನ್ನು ಆಮದು ಮಾಡಿಕೊಳ್ಳಲು ಆರ್,ಸಿ.ಎಫ್ ‘ರಾಷ್ಟ್ರದ ವ್ಯಾಪಾರ ಉದ್ಯಮ’ ಎಂದು ಗುರುತಿಸಲ್ಪಟ್ಟಿದೆ.
ಆತ್ಮ ನಿರ್ಭರ ಭಾರತದ ರಾಷ್ಟ್ರೀಯ ದೃಷ್ಟಿಕೋನಕ್ಕೆ ಸ್ಪಂದನೆಯಾಗಿ, ಮತ್ತು ಪರ್ಯಾಯ ರಾಸಾಯನಿಕ ಉತ್ಪನ್ನ ಆಮದು ಮಾಡಿಕೊಳ್ಳಲು ಆರ್.ಸಿ.ಎಫ್. ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿದೆ:
1. ಆರ್.ಸಿ.ಎಫ್ ತನ್ನ ಟ್ರಾಂಬೆ ಘಟಕದಲ್ಲಿ 2020ರ ಸೆಪ್ಟೆಂಬರ್ 8ರಿಂದ ಮೆಥನಾಲ್ ಉತ್ಪಾದನೆಯನ್ನು ಯಶಸ್ವಿಯಾಗಿ ಪುನರಾರಂಭಿಸಿದೆ. ಮಾರಾಟದ ಹೊರತಾಗಿ, ಆಂತರಿಕವಾಗಿ ಈ ಮೆಥನಾಲ್ ಉತ್ಪಾದನೆಯನ್ನು ಬಳಸುವುದರ ಮೂಲಕ ಮೆಥನಾಲ್ ನ ಅಗತ್ಯವನ್ನು ಪೂರೈಸಲಾಗುತ್ತಿದೆ ಮತ್ತು ಇದರಿಂದಾಗಿ ಆಂತರಿಕ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ಮೆಥನಾಲ್ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.
2. ಅಮೋನಿಯಾ ಬೇಡಿಕೆಯನ್ನು ಪೂರೈಸಲು ಅದರ ಟ್ರಾಂಬೆ ಘಟಕದಲ್ಲಿರುವ ಹೆಚ್ಚುವರಿ ಅಮೋನಿಯಾ ಸ್ಥಾವರದ ಕಾರ್ಯಾಚರಣೆ ಮಾಡಲಾಗಿದೆ. ಇದು ಅಮೋನಿಯಾ ಆಮದನ್ನು ತಗ್ಗಿಸಿದೆ.
3. ಆರ್.ಸಿ.ಎಫ್. ಹಲವು ಕೈಗಾರಿಕಾ ರಾಸಾಯನಿಕ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತಿದ್ದು, ಇವುಗಳಿಗೆ ಉನ್ನತ ಬ್ರಾಂಡ್ ಮೌಲ್ಯ ಇದೆ. ನಮ್ಮ ಕೈಗಾರಿಕಾ ರಾಸಾಯನಿಕ ಘಟಕಗಳ ಉತ್ಪಾದನೆ: ನೈಟ್ರಿಕ್ ಆಸಿಡ್, ಅಮೋನಿಯಂ ನೈಟ್ರೇಟ್, ಅಮೋನಿಯಂ ಬೈಕಾರ್ಬನೇಟ್, ಕಾಂಸನ್ಟ್ರೇಟೆಡ್ ನೈಟ್ರಿಕ್ ಆಮ್ಲ ಮತ್ತು ಸಲ್ಫ್ಯೂರಿಕ್ ಆಮ್ಲಗಳು ಮಾರುಕಟ್ಟೆಯ ಬೇಡಿಕೆಯನ್ನು ಸರಿದೂಗಿಸುವಂತೆ ಪೂರೈಸುತ್ತಿವೆ. ಕೋವಿಡ್- 19 ಸಾಂಕ್ರಾಮಿಕ ರೋಗದಿಂದಾಗಿ ಎದುರಾದ ಸವಾಲುಗಳ ಹೊರತಾಗಿಯೂ, ಪ್ರಸಕ್ತ ವರ್ಷದಲ್ಲಿ ಆರ್.ಸಿ.ಎಫ್ ಕೈಗಾರಿಕಾ ಉತ್ಪನ್ನಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಕೆಲವು ಮುಖ್ಯಾಂಶಗಳು ಈ ಕೆಳಗಿನಂತಿವೆ:
· ನವೆಂಬರ್ 2020ರಲ್ಲಿ 16,561 ಮೆಟ್ರಿಕ್ ಟನ್ ಎಎನ್ ಮೆಲ್ಟ್ ನ ಅತಿ ಹೆಚ್ಚು ಮಾಸಿಕ ಮಾರಾಟದ ಸಾಧನೆ ಮಾಡಲಾಗಿದೆ.
· ಅಮೋನಿಯಾ, ನೈಟ್ರಿಕ್ ಆಸಿಡ್, ಅಮೋನಿಯಂ ನೈಟ್ರೇಟ್ ಮೆಲ್ಟ್, ಅಮೋನಿಯಂ ಬೈಕಾರ್ಬನೇಟ್ ನ ದೈನಿಕ ಗರಿಷ್ಠ ಮಾರಾಟದ ದಾಖಲೆಯನ್ನೂ ಮಾಡಲಾಗಿದೆ.
· ಆರ್.ಸಿ.ಎಫ್ ತನ್ನ ಕೈಗಾರಿಕಾ ಉತ್ಪನ್ನಗಳ ದೈನಂದಿನ ಮಾರಾಟದಲ್ಲಿ 2020ರ ನವೆಂಬರ್ 18ರಂದು 5.44 ಕೋಟಿ ರೂ. ಮಾರಾಟದ ಸಾಧನೆ ಮಾಡಿದೆ
· ಆರ್.ಸಿ.ಎಫ್ ಮಾರುಕಟ್ಟೆಯಲ್ಲಿ ಐಪಿಎ ಆಧಾರಿತ ಕರ ಶುಚಿ ಮಾಡುವ ಜೆಲ್ ಅನ್ನು ಪರಿಚಯಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗ ಪ್ರಸರಣವನ್ನು ನಿಯಂತ್ರಿಸಲು ಸಹಾಯ ಮಾಡಲು ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಉತ್ಪನ್ನವನ್ನು ಪರಿಚಯಿಸಲಾಯಿತು.
*****
(Release ID: 1698760)
Visitor Counter : 266