ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಅಗತ್ಯ ಮಾನದಂಡಗಳನ್ನು ಪೂರೈಸಿದಲ್ಲಿ, ಎಲ್ಲ ಉಕ್ಕನ್ನೂ ಹೆದ್ದಾರಿ ನಿರ್ಮಾಣದಲ್ಲಿ ಬಳಕೆ ಮಾಡಲು ಅನುಮತಿ


ಉಕ್ಕು ಬಳಸಿ ನಿರ್ಮಿಸುವ ಹೆದ್ದಾರಿಯ ವೆಚ್ಚ ತಗ್ಗಿಸುವುದನ್ನು ಖಾತ್ರಿ ಪಡಿಸಲು ಕ್ರಮ

ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ನಿರ್ಬಂಧಿತ ಷರತ್ತುಗಳನ್ನು ಪುನರ್ ಪರಿಶೀಲಿಸಲು ಗಡ್ಕರಿ ಪ್ರಯತ್ನ

प्रविष्टि तिथि: 14 FEB 2021 1:47PM by PIB Bengaluru

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ನಿರ್ದಿಷ್ಟ ಶ್ರೇಣಿಗಳಿಗೆ ಅಗತ್ಯವಾದ ಮಾನದಂಡಗಳನ್ನು ಪೂರೈಸಿದಲ್ಲಿ, ಅದಿರಿನಿಂದ, ಬಿಲ್ಲೆಟ್‌ ಗಳಿಂದ, ಉಂಡೆಗಳಿಂದ ಅಥವಾ ಸ್ಕ್ರ್ಯಾಪ್ ಕರಗಿಸುವಿಕೆಯಿಂದ ತಯಾರಿಸಿದ ಎಲ್ಲಾ ಬಗೆ ಉಕ್ಕನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಳಸಲು ಅನುಮತಿಸಲು ಆದೇಶಗಳನ್ನು ಹೊರಡಿಸಿದೆ. ಬಳಸಲು ಪ್ರಸ್ತಾಪಿಸಲಾದ ಉಕ್ಕಿನ ಅನುಮೋದನೆಗೆ ಮೊದಲು ಮೂರನೇ ವ್ಯಕ್ತಿಯ ಪರಿಶೀಲನೆಯೊಂದಿಗೆ ಎನ್‌..ಬಿ.ಎಲ್-ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಬೇಕಾಗುತ್ತದೆ. ಕ್ರಮವು ಬಾಧ್ಯಸ್ಥರೊಂದಿಗಿನ ವಿಶ್ಲೇಷಣೆ ಮತ್ತು ಚರ್ಚೆಗಳು ಮತ್ತು ತಾಂತ್ರಿಕ ಅಭಿಪ್ರಾಯವನ್ನು ಆಧರಿಸಿರುತ್ತದೆ.

ಮುನ್ನ, ಪ್ರಾಥಮಿಕ/ಸಂಯೋಜಿತ ಉಕ್ಕು ಉತ್ಪಾದಕರಿಗೆ ಮಾತ್ರ ಉತ್ಪಾದಿಸುವ ಉಕ್ಕಿನ ಬಳಕೆಯನ್ನು ಒಪ್ಪಂದದ ನಿಬಂಧನೆಗಳು ಬೇಕಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ವೆಚ್ಚದ ಮೇಲೆ ಪರಿಣಾಮ ಬೀರುವ ಉಕ್ಕಿನ ಬೆಲೆಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ಹೆದ್ದಾರಿ ನಿರ್ಮಾಣಕ್ಕೆ ಬಳಸುವ ನಿರ್ಬಂಧಿಸಬಹುದಾದ ವಸ್ತುಗಳ ಎಲ್ಲ ಷರತ್ತುಗಳನ್ನು ಮರುಪರಿಶೀಲಿಸುವ ಅಗತ್ಯವನ್ನು ಸೂಚಿಸಿದ್ದರು.

ಕ್ರಮದೊಂದಿಗೆ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಬಳಸುವ ಉಕ್ಕಿನ ಪೂರೈಕೆದಾರರ ಸಂಖ್ಯೆ ಹೆಚ್ಚಾಗುತ್ತದೆ, ಇದು ಮಾರುಕಟ್ಟೆಗಳಲ್ಲಿ ಹೆಚ್ಚಿನ ಸ್ಪರ್ಧೆ ಮತ್ತು ಉತ್ತಮ ಬೆಲೆ ಶೋಧನೆಗೆ ಕಾರಣವಾಗುತ್ತದೆ. ಸಚಿವರು ಕೈಗೊಂಡಿರುವ ಹೊಸ ತಂತ್ರಜ್ಞಾನದ ಬಳಕೆಯ ಮೂಲಕ ವೆಚ್ಚವನ್ನು ಕಡಿಮೆ ಮಾಡುವ, ಪೂರೈಕೆದಾರರ ಮೇಲಿನ ನಿರ್ಬಂಧಗಳನ್ನು ತಗ್ಗಿಸುವ ಮತ್ತು ಖರೀದಿ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವ ನಿರಂತರ ಪ್ರಯತ್ನದ ಭಾಗವೂ ಇದಾಗಿದೆ.

***


(रिलीज़ आईडी: 1698048) आगंतुक पटल : 190
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Tamil