ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿಯವರ ಉತ್ತರ

Posted On: 08 FEB 2021 12:50PM by PIB Bengaluru

ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ನೀಡಿದರು. ಮೇಲ್ಮನೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಮತ್ತು ಕೊಡುಗೆ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರಪತಿ ಅವರ ಭಾಷಣ ಭರವಸೆ ಮತ್ತು ವಿಶ್ವಾಸ ತುಂಬಿದೆ ಎಂದು ಹೇಳಿದರು. 
ಭಾರತ ಇಂದು ಅವಕಾಶಗಳ ಭೂಮಿಯಾಗಿದೆ ಮತ್ತು ಜಗತ್ತಿನ ಕಣ್ಣು ಭಾರತದ ಮೇಲಿದೆ. ಭಾರತದಿಂದ ನಿರೀಕ್ಷೆಗಳಿದ್ದು, ಈ ಗ್ರಹದ ಸುಧಾರಣೆಗಾಗಿ ಭಾರತ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ. ಭಾರತ 75 ನೇ ಸ್ವಾತಂತ್ರ್ಯೋತ್ಸವಕ್ಕೆ ಕಾಲಿಡುತ್ತಿದ್ದು, ನಾವೀಗ ಸಂಭ್ರಮಾಚರಣೆಯ ಸ್ಪೂರ್ತಿ ಪಡೆಯಬೇಕು. ಮುಂಬರುವ 2047 ರ ಸ್ವಾತಂತ್ರ್ಯೋತ್ಸವ ಶತಮಾನವನ್ನು ತಲುಪಲಿದ್ದು, ದೇಶಕ್ಕಾಗಿ ನಮ್ಮ ದೃಷ್ಟಿಯ ಪ್ರತಿಜ್ಞೆಗಳಿಗೆ ನಮ್ಮನ್ನು ಪುನರ್ ವಿಮರ್ಶಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. 
ಕೋವಿಡ್ ಸಂಕ್ರಾಮಿಕ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಿದ ಯಶಸ್ಸು ಒಂದು ಪಕ್ಷ ಅಥವಾ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ. ಇದು ದೇಶದ ಯಶಸ್ಸು ಸಹ ಆಗಿದೆ ಮತ್ತು ನಾವು ಅಂತಹ ಸಂಭ್ರಮವನ್ನು ಆಚರಿಸಬೇಕು. ದೇಶ ಸ್ಮಾಲ್ ಫಾಕ್ಸ್ ಮತ್ತು ಪೊಲೀಯೋದಂತಹ ಬೆದರಿಕೆಗಳನ್ನು ನೋಡಿದೆ. ಭಾರತಕ್ಕೆ ಲಸಿಕೆ ಸಿಗುತ್ತದೆ ಮತ್ತು ಎಷ್ಟು ಜನರಿಗೆ ದೊರೆಉತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈ ದಿನಗಳಲ್ಲಿ ನಾವು ಜಗತ್ತಿಗೆ ಲಸಿಕೆ ಪೂರೈಸುತ್ತಿದ್ದೇವೆ ಮತ್ತು ಜಗತ್ತಿನ ಅತಿ ದೊಡ್ಡ ಲಸಿಕೆ ಅಭಿಯಾನವನ್ನು ನಡೆಸುತ್ತಿದ್ದೇವೆ. ಇದು ನಮ್ಮ ಸ್ವಯಂ ಆತ್ಮ ವಿಶ್ವಾಸವನ್ನು ವೃದ್ಧಿಸಿದೆ. ಕೋವಿಡ್ 19 ಅವಧಿ ನಮ್ಮ ಒಕ್ಕೂಟ ಚೌಕಟ್ಟು ಮತ್ತು ಸಹಕಾರ ಒಕ್ಕೂಟ ವ್ಯವಸ್ಥೆಗೆ ಹೊಸ ಶಕ್ತಿ ತುಂಬಿದೆ ಎಂದರು. 
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಟೀಕೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಭಾರತೀಯ ಪ್ರಜಾಪ್ರಭುತ್ವ ಪಾಶ್ಚಿಮಾತ್ಯ ಸಂಸ್ಥೆಯಲ್ಲ, ಇದೊಂದು ಮಾವನೀಯ ಸಂಸ್ಥೆ. ಭಾರತೀಯ ರಾಷ್ಟ್ರೀಯತೆಯ ಮೇಲಿನ ಸರ್ವಾಂಗೀಣ ದಾಳಿಯ ಬಗ್ಗೆ ದೇಶವಾಸಿಗಳನ್ನು ಎಚ್ಚರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು. 
ನೇತಾಜಿ ಸುಬಾಷ್ ಚಮದ್ರ ಬೋಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಭಾರತೀಯ ರಾಷ್ಟ್ರೀಯತೆ ಕಿರಿದಾದುದ್ದಲ್ಲ. ಸ್ವಾರ್ಥಿ ಅಥವಾ ಆಕ್ರಮಣಕಾರಿಯೂ ಅಲ್ಲ.  ಇದು ಸತ್ಯಂ, ಶಿವಂ ಸುಂದರಂ ಕಲ್ಪನೆಯನ್ನು ಆಧರಿಸಿದೆ. “ ಭಾರತ ವಿಶ‍್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಷ್ಟೇ ಅಲ್ಲ, ಭಾರತ ಪ್ರಜಾಪ್ರಭುತ್ವದ ತಾಯಿ”  ಇದು ನಮ್ಮ ನೀತಿ ಮತ್ತು ರಾಷ್ಟ್ರದ ಮನೋಧರ್ಮ ಪ್ರಜಾಪ್ರಭುತ್ವವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 
ಕೊರೋನಾ ಸಮಯದಲ್ಲಿ ದೇಶಗಳು ವಿದೇಶಿ ಬಂಡವಾಳ ಹೂಡಿಕೆಯಿಂದ ವಂಚಿತವಾದಾಗ ಭಾರತ ದಾಖಲೆ ಪ್ರಮಾಣದಲ್ಲಿ ಹೂಡಿಕೆ ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ದೇಶ ವಿದೇಶಿ ಕರೆನ್ಸಿ ಎಫ್.ಡಿ.ಐ ನಲ್ಲಿ ಬಲಿಷ್ಠ ಸಾಧನೆ ಮಾಡಿದ್ದು, ಇಂಟರ್ ನೆಟ್ ಬಳಕೆ, ಡಿಜಿಟಲ್ ಆರ್ಥಿಕತೆ, ಹಣಕಾಸು ಒಳಗೊಳ್ಳುವಿಕೆ. ಶೌಚಾಲಯ ನಿರ್ಮಾಣದ ವಿಸ್ತರಣೆ, ಕೈಗೆಟುಕುವ ದರದಲ್ಲಿ ವಸತಿ, ಅಡುಗೆ ಅನಿಲ ಮತ್ತು ಉಚಿತ ವೈದ್ಯಕೀಯ  ಸೌಲಭ್ಯ ಕ್ಷೇತ್ರಗಳಲ್ಲಿ ವಿಸ್ತರಣೆಯಾಗಿದೆ.  ನಮ್ಮ ಮುಂದೆ ಸವಾಲುಗಳಿವೆ ಮತ್ತು ನಾವು ಸಮಸ್ಯೆಗಳ ಅಥವಾ ಪರಿಹಾರದ ಭಾಗವಾಗಬೇಕೆ ಎಂಬುದನ್ನು ನಾವು ನಿರ್ಧರಿಸಬೇಕು ಎಂದು ಪ್ರಧಾನಮಂತ್ರಿಯವರು ತಿಳಿಸಿದರು. 
2014 ರ ನಂತರ ನಮ್ಮ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತಂದಿದ್ದು, ರೈತರ ಸಬಲೀಕರಣದ ಗುರಿ ಹೊಂದಲಾಗಿದೆ. ಬೆಳೆ ವಿಮೆ ಯೋಜನೆಯಲ್ಲಿ ಬದಲಾವಣೆ ತಂದಿದ್ದು, ರೈತ ಸ್ನೇಹಿಯನ್ನಾಗಿ ಮಾಡಲಾಗಿದೆ. ಪಿಎಂ ಕಿಸಾನ್ ಯೋಜನೆಯನ್ನು ಸಹ ಜಾರಿಗೆ ತರಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸರ್ಕಾರ ಸಣ್ಣ ರೈತರಿಗಾಗಿ ಕೆಲಸ ಮಾಡುತ್ತಿದ್ದು, ಪಿಎಂ ಎಫ್.ಬಿ.ವೈ  ಯೋಜನೆಯಡಿ 90,000 ಕೋಟಿ ರೂಪಾಯಿ ಮೊತ್ತವನ್ನು ರೈತರು ಕ್ಲೈಮ್ ಮಾಡಿದ್ದಾರೆ. ಕಿಸಾನ್ ಕ್ರಿಡಿಟ್ ಕಾರ್ಡ್, ಮಣ್ಣು ಆರೋಗ್ಯ ಚೀಟಿ ಮತ್ತು ಕೃಷಿ ಸಮ್ಮಾನ್ ನಿಧಿಯಿಂದ ರೈತರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ರಸ್ತೆ ಸಂಪರ್ಕದಲ್ಲಿ ಸುಧಾರಣೆಯಾಗಿದ್ದು, ಇದರಿಂದ ರೈತರ ಉತ್ಪನ್ನಗಳನ್ನು ನಿಗದಿತ ಸ್ಥಳಗಳಿಗೆ ತಲುಪಿಸಲು ಸಹಕಾರಿಯಾಗಲಿದೆ. ಕಿಸಾನ್ ರೈಲ್ ಮತ್ತು ಕಿಸಾನ್ ಉಡಾನ್ ಯೋಜನೆಯಂತಹ ಪ್ರಯತ್ನಗಳು ಕೂಡ ಸಹಕಾರಿಯಾಗಿವೆ. ಸಣ್ಣ ರೈತರ ಜೀವನಮಟ್ಟದಲ್ಲಿ ಸುಧಾರಣೆಯಾಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.  ಖಾಸಗಿ ಅಥವಾ ಸಹಕಾರಿ ವಲಯದೊಂದಿಗೆ ಕೆಲಸ ಮಾಡಲು ಡೈರಿ ಕ್ಷೇತ್ರದಂತೆಯೇ ಅವರಿಗೆ ಏಕೆ ಸ್ವಾತಂತ್ರ್ಯ ಇರಬಾರದು ಎಂದು ಪ್ರಧಾನಮಂತ್ರಿಯವರು ಪ್ರಶ್ನಿಸಿದರು. 
ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಮತ್ತು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ರೈತರ ಕಲ್ಯಾಣಕ್ಕಾಗಿ ಮುಂದುವರೆಯಲು ಎಲ್ಲಾ ಪಕ್ಷಗಳು ಮುಂದಾಗಬೇಕು ಎಂದು ಪ್ರಧಾನಮಂತ್ರಿಯವರು ಆಹ್ವಾನ ನೀಡಿದರು. “ಕನಿಷ್ಠ ಬೆಂಬಲ ಬೆಲೆ ಎಂ.ಎಸ್.ಪಿ ಯೋಜನೆ ಮುಂದುವರೆಯಲಿದೆ. ಎಂ.ಎಸ್.ಪಿ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ. ಕೈಗೆಟಕುವ ದರದಲ್ಲಿ ಪಡಿತರ ಪೂರೈಕೆ ವ್ಯವಸ್ಥೆ ಮುಂದುವರೆಯಲಿದೆ. ಮಂಡಿಗಳನ್ನು ಆಧುನೀಕರಣಗೊಳಿಸಲಾಗುವುದು” ರೈತರ ಕಲ್ಯಾಣಕ್ಕಾಗಿ ನಾವು ರಾಜಕೀಯ ಲೆಕ್ಕಾಚಾರಕ್ಕಿಂತ ಮೇಲೇರಬೇಕು ಎಂದರು.

ದೇಶವನ್ನು ಅಸ್ಥಿರಗೊಳಿಸುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸಿಖ್ಖರ ಕೊಡಗೆಯ ಬಗ್ಗೆ ದೇಶ ಹೆಮ್ಮೆ ಪಡುತ್ತದೆ.  ಈ ಸಮುದಾಯ ದೇಶಕ್ಕೆ ಹೆಚ್ಚು ಕೊಡುಗೆ ನೀಡಿದೆ. ಗುರು ಸಾಹಿಬ್ ಅವರ ಆಶಿರ್ವಾದ ಮತ್ತು ನುಡಿಗಳು ಅಮೂಲ್ಯ, ನಗರ ಮತ್ತು ಗ್ರಾಮೀಣ ವಿಭಜನೆಯನ್ನು ನಿವಾರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. 
ಯುವ ಶಕ್ತಿಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಯುವ ಸಮೂಹವನ್ನು ಬಲಪಡಿಸುವ ಪ್ರಯತ್ನಗಳು ದೇಶದ ಉಜ್ವಲ ಭವಿಷ್ಯಕ್ಕಾಗಿ ಸಮೃದ್ಧ ಲಾಭಾಂಶವನ್ನು ನೀಡುತ್ತವೆ. ಅಂತೆಯೇ ಯುವ ಸಮೂಹ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತ್ವರಿತವಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. 

ಆರ್ಥಿಕತೆಯ ಚೇತರಿಕೆ ಮತ್ತು ಬೆಳವಣಿಗೆಗೆ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ ಎಂ.ಎಸ್.ಎಂ.ಇ ನಿರ್ಣಾಯಕವಾಗಿದ್ದು, ಈ ವಲಯದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳಿವೆ. ಕೊರೋನಾ ಸಂಕಷ್ಟ ಕಾಲದಲ್ಲಿ ಇದಕ್ಕಾಗಿಯೇ ವಿಶೇಷ ಗಮನಹರಿಸಿ ಉತ್ತೇಜನ ಪ್ಯಾಕೇಜ್ ನೀಡಲಾಗಿದೆ ಎಂದರು. 
ಸರ್ಕಾರದ ಮಹತ್ವಾಕಾಂಕ್ಷೆಯ ಸಬ್ಕ ಸಾತ್, ಸಬ್ಕ ವಿಕಾಸ್. ಸಬ್ಕ ವಿಶ್ವಾಸ್ ಆಶಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಕ್ಸಲ್ ಸಮಸ್ಯಾತ್ಮಕ ಪ್ರದೇಶಗಳು ಮತ್ತು ಈಶಾನ್ಯ ಭಾಗದಲ್ಲಿ ಪರಿಸ್ಥಿತಿ ಸಹಜತೆಗೆ ತರಲು ನಡೆಸಿದ ಕ್ರಮಗಳನ್ನು ಒತ್ತಿ ಹೇಳಿದರು. ಇಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಮುಂಬರುವ ದಿನಗಳಲ್ಲಿ ದೇಶದ ಅಭಿವೃದ್ದಿಯಲ್ಲಿ ಪೂರ್ವ ಪ್ರದೇಶಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಪ್ರಧಾನಮಂತ್ರಿಯವರು ಭರವಸೆ ವ್ಯಕ್ತಪಡಿಸಿದರು.

 



(Release ID: 1696284) Visitor Counter : 254