ಹಣಕಾಸು ಸಚಿವಾಲಯ

ಅಪರಾಧವಲ್ಲವೆಂದು ಪರಿಗಣಿಸುವ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ಎಲ್‌.ಎಲ್‌.ಪಿ.) ಕಾಯ್ದೆ 2008ರ  ಪ್ರಸ್ತಾಪ


ಸಣ್ಣ ಕಂಪನಿಗಳ ವ್ಯಾಖ್ಯಾನದ ಪರಿಷ್ಕರಣೆ

ನವೋದ್ಯಮಗಳಿಗೆ, ನಾವಿನ್ಯದಾರರಿಗೆ 'ಏಕ ವ್ಯಕ್ತಿ ಕಂಪನಿ'ಗಳಲ್ಲಿ ನಿಯಮಗಳ ಸರಳೀಕರಣದ ಪ್ರಸ್ತಾಪ

ತ್ವರಿತ ಋಣ ಪರಿಹಾರಕ್ಕಾಗಿ ಎನ್.ಸಿ.ಎಲ್.ಟಿ. ಚೌಕಟ್ಟಿನ ಬಲವರ್ಧನೆ

ಹೊಸ ಎಂ.ಸಿ.ಎ.21ಆವೃತ್ತಿ 3.0 ಆರಂಭಿಸುವ ಪ್ರಸ್ತಾಪ

Posted On: 01 FEB 2021 1:39PM by PIB Bengaluru

2021-22ನೇ ಸಾಲಿನ ಬಜೆಟ್ ಸಂಸತ್ತಿನಲ್ಲಿ ಮಂಡಿಸುವ ವೇಳೆ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನವೋದ್ಯಮ ಪರಿಸರ ವ್ಯವಸ್ಥೆ ಬಲಪಡಿಸಲು ಸಣ್ಣ ಕಂಪನಿಗಳಿಗೆ ಮತ್ತು ಎಂ.ಎಸ್.ಎಂ..ಗಳಿಗೆ ಸುಧಾರಣೆಯನ್ನು ಪ್ರಸ್ತಾಪಿಸಿದ್ದಾರೆ.

ಅಪರಾಧವಲ್ಲವೆಂದು ಪರಿಗಣಿಸುವ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ಎಲ್‌.ಎಲ್‌.ಪಿ.) ಕಾಯಿದೆ, 2008

ಹಣಕಾಸು ಸಚಿವರು, ಅಪರಾಧವಲ್ಲವೆಂದು ಪರಿಗಣಿಸುವ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ಎಲ್‌.ಎಲ್‌.ಪಿ.) ಕಾಯಿದೆ 2008ನ್ನು ಪ್ರಸ್ತಾಪಿಸಿದ್ದು, ಅದೇ ಮಾದರಿಯಲ್ಲಿ ಕಂಪೆನಿಗಳ ಕಾಯ್ದೆ, 2013 ಅಡಿಯಲ್ಲಿ ಕಾರ್ಯವಿಧಾನ ಮತ್ತು ತಾಂತ್ರಿಕ ಕ್ಷಮಾರ್ಹ ಅಪರಾಧಗಳನ್ನು ನಿರ್ಣಯಿಸುವ ರೀತಿ ಈಗ ಪೂರ್ಣಗೊಂಡಿದೆ ಎಂದರು.

'ಸಣ್ಣ ಕಂಪನಿಗಳ' ವ್ಯಾಖ್ಯಾನದ ಪರಿಷ್ಕರಣೆ

ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು ಕಂಪೆನಿಗಳ ಕಾಯ್ದೆ 2013 ಅಡಿಯಲ್ಲಿ ಸಣ್ಣ ಕಂಪನಿಗಳ ವ್ಯಾಖ್ಯಾನವನ್ನು, ಷೇರುದಾರರಿಂದ ಸಂಗ್ರಹಿಸಿದ ಬಂಡವಾಳದ ಮಿತಿಯನ್ನು50 ಲಕ್ಷ ಮೀರಬಾರದುಎಂಬುದನ್ನು2 ಕೋಟಿ ಮೀರಬಾರದುಮತ್ತು ವಹಿವಾಟು2 ಕೋಟಿ ಮೀರಬಾರದುಎಂಬುದನ್ನು20 ಕೋಟಿ ಮೀರಬಾರದುಎಂದು ಪರಿಷ್ಕರಿಸುವ ಪ್ರಸ್ತಾಪ ಮಾಡಿದ್ದಾರೆ. ಇದು ಕಂಪನಿಗಳ ಅನುಸರಣೆಯ ಅವಶ್ಯಕತೆಗಳನ್ನು ಸರಾಗಗೊಳಿಸುವಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕಂಪನಿಗಳಿಗೆ ಪ್ರಯೋಜನವಾಗಲಿದೆ.

ನವೋದ್ಯಮಗಳು, ನಾವಿನ್ಯದಾರರಿಗೆ 'ಏಕ ವ್ಯಕ್ತಿ ಕಂಪನಿ'ಗಳಲ್ಲಿ ನಿಯಮಗಳ ಸರಳೀಕರಣದ ಪ್ರಸ್ತಾಪ

ನವೋದ್ಯಮಗಳು ಮತ್ತು ನಾವಿನ್ಯದಾರರುಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಮುಂದಿನ ಕ್ರಮವಾಗಿ, ಷೇರುದಾರಿಂದ ಸಂಗ್ರಹಿಸಿದ ಬಂಡವಾಳ ಮತ್ತು ವಹಿವಾಟಿನ ಮೇಲೆ ಯಾವುದೇ ನಿರ್ಬಂಧಗಳಿಲ್ಲದೆ ಒಪಿಸಿಗಳು ಬೆಳೆಯಲು ಅನುವು ಮಾಡಿಕೊಡುವ ಮೂಲಕ ಏಕ ವ್ಯಕ್ತಿ ಕಂಪೆನಿಗಳ (ಒಪಿಸಿ) ಸಂಯೋಜನೆಯನ್ನು ಉತ್ತೇಜಿಸಲು, ಕಂಪನಿ ಯಾವುದೇ ಸಮಯದಲ್ಲಿ ಯಾವುದೇ ಸ್ವರೂಪಕ್ಕೆ ಪರಿವರ್ತನೆಯಾಗಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದು, ಇದು ಭಾರತೀಯ ನಾಗರಿಕನಿಗೆ ಒಪಿಸಿ ಸ್ಥಾಪಿಸಲು ನಿವಾಸಿ ಮಿತಿಯನ್ನು 182 ದಿನಗಳಿಂದ 120 ದಿನಗಳಿಗೆ ಇಳಿಸಲಾಗುತ್ತದೆ ಮತ್ತು ಅನಿವಾಸಿ ಭಾರತೀಯರಿಗೆ (ಎನ್‌.ಆರ್‌.) ಭಾರತದಲ್ಲಿ ಒಪಿಸಿಗಳನ್ನು ಸಂಯೋಜಿಸಲು ಅವಕಾಶ ನೀಡುತ್ತದೆ.

ತ್ವರಿತ ಋಣ ಪರಿಹಾರಕ್ಕೆ ಎನ್.ಸಿ.ಎಲ್.ಟಿ. ಚೌಕಟ್ಟಿನ ಬಲವರ್ಧನೆ

ತ್ವರಿತವಾಗಿ ಪ್ರಕರಣಗಳ ಇತ್ಯರ್ಥ ಖಾತ್ರಿಪಡಿಸಲು, ಹಣಕಾಸು ಸಚಿವರು ಎನ್.ಸಿ.ಎಲ್.ಟಿ. ಚೌಕಟ್ಟನ್ನು ಬಲಪಡಿಸುವ, -ನ್ಯಾಯಾಲಯ ವ್ಯವಸ್ಥೆ ಅನುಷ್ಠಾನಗೊಳಿಸುವ ಮತ್ತು ಋಣ ಪರಿಹಾರದ ಪರ್ಯಾಯ ವಿಧಾನಗಳನ್ನು ಉಲ್ಲೇಖಿಸಿದ್ದಾರೆ ಮತ್ತು ಎಂ.ಎಸ್.ಎಂ..ಗಳಿಗೆ ವಿಶೇಷ ಚೌಕಟ್ಟು ಪರಿಚಯಿಸಿದ್ದಾರೆ.

ಹೊಸ ಎಂ.ಸಿ.. 21 ಆವೃತ್ತಿ 3.0 ಆರಂಭ

ಮುಂಬರವ 2021-22ನೇ ಆರ್ಥಿಕ ವರ್ಷದಲ್ಲಿ, ಸರ್ಕಾರ ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ ಚಾಲಿತ ಎಂ.ಸಿ.. 21 ಆವೃತ್ತಿ 3.0 ಆರಂಭಿಸುವುದಾಗಿ ಹಣಕಾಸು ಸಚಿವರು ಪ್ರಕಟಿಸಿದ್ದಾರೆ. ಎಂ.ಸಿ.. 3.0 ಆವೃತ್ತಿ -ಸುರಕ್ಷತೆ, - ತೀರ್ಪು, -ಸಮಾಲೋಚನೆ ಮತ್ತು ಅನುಸರಣೆ ನಿರ್ವಹಣೆಗೆ ಹೆಚ್ಚುವರಿ ಮಾದರಿಯಾಗಿದೆ.

***



(Release ID: 1694153) Visitor Counter : 281