ಹಣಕಾಸು ಸಚಿವಾಲಯ

ಜಿಎಸ್‌ಟಿ ಸರಳೀಕರಣಕ್ಕೆ ಕ್ರಮ: ಕೇಂದ್ರ ಹಣಕಾಸು ಸಚಿವರು


ಕಸ್ಟಮ್ ಸುಂಕದ ಪರಿಷ್ಕರಣೆ, 400 ಹಳೆಯ ವಿನಾಯ್ತಿಗಳ ಪರಿಶೀಲನೆ

ಮೊಬೈಲ್ ಹಾಗು ಆಟೋ ಬಿಡಿ ಭಾಗಗಳು ಮತ್ತು ಹತ್ತಿ ಮೇಲಿನ ಕಸ್ಟಮ್ ಸುಂಕ ಹೆಚ್ಚಳ

ಸೌರ ಕೋಶಗಳು/ ಫಲಕಗಳಿಗಾಗಿ ಹಂತ ಹಂತದ ತಯಾರಿಕಾ ಯೋಜನೆ

ಕೃಷಿ ಮೂಲಸೌಕರ್ಯ ಸುಧಾರಣೆಗೆ ಬಜೆಟ್ ನಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಪ್ರಸ್ತಾಪ

ಎಂಎಸ್‌ಎಂಇಗಳಿಗೆ ಬೆಂಬಲಕ್ಕೆ ತೆರಿಗೆ ಬದಲಾವಣೆಗಳ ಪ್ರಸ್ತಾವ

Posted On: 01 FEB 2021 1:36PM by PIB Bengaluru

ಕಸ್ಟಮ್ ಸುಂಕದ ರಚನೆಯನ್ನು ಸುಧಾರಿಸುವ, ಅನುಸರಣೆಯನ್ನು ಸುಗಮಗೊಳಿಸುವ ಮತ್ತು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ 2021-22 ಕೇಂದ್ರ ಬಜೆಟ್ ನಲ್ಲಿ ಹಲವಾರು ಪರೋಕ್ಷ ತೆರಿಗೆ ಪ್ರಸ್ತಾಪಗಳನ್ನು ಮಾಡಲಾಗಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2021-22 ನೇ  ಸಾಲಿನ ಕೇಂದ್ರ ಬಜೆಟ್ ಅನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದರು.

ಜಿಎಸ್ಟಿಯ ಹೆಚ್ಚಿನ ಸರಳೀಕರಣ

ಕಳೆದ ಕೆಲವು ತಿಂಗಳುಗಳಲ್ಲಿ ದಾಖಲೆಯ ಜಿ ಎಸ್ ಟಿ ಸಂಗ್ರಹವಾಗಿದೆ ಎಂದು ಶ್ರೀಮತಿ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಜಿಎಸ್ಟಿಯನ್ನು ಇನ್ನಷ್ಟು ಸರಳೀಕರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಜಿಎಸ್ಟಿಎನ್ ವ್ಯವಸ್ಥೆಯ ಸಾಮರ್ಥ್ಯವನ್ನು ಘೋಷಿಸಲಾಗಿದೆ. ತೆರಿಗೆ ವಂಚಕರು ಮತ್ತು ನಕಲಿ ಬಿಲ್ ಗಳನ್ನು ಗುರುತಿಸಲು ತೀವ್ರ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುತ್ತಿದೆ, ತೆರಗೆ ವಂಚಿಸುವವರ ವಿರುದ್ಧ  ವಿಶೇಷ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಜಿಎಸ್ಟಿಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ತೆರಿಗೆ ವ್ಯವಸ್ಥೆಯ ವೈಪರೀತ್ಯಗಳನ್ನು ತೆಗೆದುಹಾಕಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವರು ಸದನಕ್ಕೆ ಭರವಸೆ ನೀಡಿದರು.

ಕಸ್ಟಮ್ ಸುಂಕ ಸುಧಾರಣೆ

ಕಸ್ಟಮ್ ಸುಂಕನೀತಿಯು, ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಮತ್ತು ಜಾಗತಿಕ ಮೌಲ್ಯ ಸರಪಳಿಯನ್ನು ಸೇರಲು ಮತ್ತು ರಫ್ತು ಮಾಡಲು ಭಾರತಕ್ಕೆ ಸಹಾಯ ಮಾಡುವ ಅವಳಿ ಉದ್ದೇಶಗಳನ್ನು ಹೊಂದಿದೆ ಎಂದು ಹಣಕಾಸು ಸಚಿವರು ಹೇಳಿದರು. ಕಚ್ಚಾ ಸಾಮಗ್ರಿಗಳ ಸುಲಭ ಲಭ್ಯತೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಒತ್ತು ನೀಡಬೇಕಾಗಿದೆ ಎಂದು ಅವರು ಹೇಳಿದರು. ನಿಟ್ಟಿನಲ್ಲಿ, ವರ್ಷ ಕಸ್ಟಮ್ ಸುಂಕ ರಚನೆಯಲ್ಲಿರುವ 400 ಹಳೆಯ ವಿನಾಯಿತಿಗಳನ್ನು ಪರಿಶೀಲಿಸುವುದಾಗಿ ಅವರು ಪ್ರಸ್ತಾಪಿಸಿದ್ದಾರೆ. ವ್ಯಾಪಕವಾದ ಸಮಾಲೋಚನೆ ನಡೆಸಲಾಗುವುದು ಮತ್ತು 2021 ಅಕ್ಟೋಬರ್ 1 ರಿಂದ ವಿರೂಪಗಳಿಲ್ಲದ ಪರಿಷ್ಕೃತ ಕಸ್ಟಮ್ ಸುಂಕವನ್ನು ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು. ಇನ್ನು ಮುಂದೆ ಯಾವುದೇ ಹೊಸ ಕಸ್ಟಮ್ ಸುಂಕ ವಿನಾಯಿತಿಗಳು ಅದರ ನೀಡಿದ  ದಿನಾಂಕದ 2 ವರ್ಷಗಳ ನಂತರ ಮಾರ್ಚ್ 31 ರವರೆಗೆ ಮಾನ್ಯತೆಯನ್ನು ಹೊಂದಿರುತ್ತವೆ ಎಂದು ಅವರು ಪ್ರಸ್ತಾಪಿಸಿದರು.

ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಫೋನ್  ಉದ್ಯಮ

ಚಾರ್ಜರ್ಗಳ ಬಿಡಿ ಭಾಗಗಳು ಮತ್ತು ಮೊಬೈಲ್ಗಳ ಬಿಡಿ ಭಾಗಗಳ ಕೆಲವು ವಿನಾಯಿತಿಗಳನ್ನು ಹಿಂಪಡೆಯುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಇದಲ್ಲದೆ, ಮೊಬೈಲ್ಗಳ ಕೆಲವು ಬಿಡಿ ಭಾಗಗಳುಶೂನ್ಯದರದಿಂದ ಶೇಕಡಾ 2.5 ಕ್ಕೆ ಹೆಚ್ಚಾಗುತ್ತವೆ. ಮಿಶ್ರಲೋಹ ಮತ್ತು ಸ್ಟೇನ್ಲೆಸ್ ಸ್ಟೀಲ್ ಸೆಮಿಸ್, ಫ್ಲಾಟ್ ಮತ್ತು ದೀರ್ಘ ಉತ್ಪನ್ನಗಳ ಮೇಲೆ ಕಸ್ಟಮ್ ಸುಂಕವನ್ನು ಏಕರೂಪವಾಗಿ ಶೇಕಡಾ 7.5 ಕ್ಕೆ ಇಳಿಸುವುದಾಗಿ ಅವರು ಘೋಷಿಸಿದರು. 2022 ಮಾರ್ಚ್ 31 ರವರೆಗೆ ಸ್ಟೀಲ್ ಸ್ಕ್ರ್ಯಾಪ್ ಮೇಲಿನ ಸುಂಕಕ್ಕೆ ವಿನಾಯಿತಿ ನೀಡಲು ಸಚಿವರು ಪ್ರಸ್ತಾಪಿಸಿದರು. ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ಎಡಿಡಿ ಮತ್ತು ಸಿವಿಡಿಯನ್ನು ರದ್ದುಪಡಿಸುವುದಾಗಿ ಹಾಗೂ ತಾಮ್ರದ ಚೂರುಗಳ ಮೇಲಿನ ಸುಂಕವನ್ನು  ಶೇಕಡಾ 5 ರಿಂದ 2.5 ರವರೆಗೆ ಕಡಿತಗೊಳಿಸುವುದಾಗಿ ಅವರು ಘೋಷಿಸಿದರು.

ಜವಳಿ/ ರಾಸಾಯನಿಕಗಳು/ ಚಿನ್ನ ಮತ್ತು ಬೆಳ್ಳಿ

ಮಾನವ ನಿರ್ಮಿತ ಜವಳಿಗಳಿಗೆ ಕಚ್ಚಾ ವಸ್ತುಗಳ ಒಳಹರಿವಿನ ಮೇಲಿನ ಸುಂಕವನ್ನು ತರ್ಕಬದ್ಧಗೊಳಿಸುವ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿದ ವಿತ್ತ ಸಚಿವರು, ಪಾಲಿಯೆಸ್ಟರ್ ಮತ್ತು ಇತರ ಮಾನವ ನಿರ್ಮಿತ ಬಟ್ಟೆಗಳಿಗೆ ಸಮನಾಗಿ ನೈಲಾನ್ ಅನ್ನೂ ತರುವುದಾಗಿ ಘೋಷಿಸಿದರು. ಕ್ಯಾಪ್ರೊಲ್ಯಾಕ್ಟಮ್, ನೈಲಾನ್ ಚಿಪ್ಸ್ ಮತ್ತು ನೈಲಾನ್ ಫೈಬರ್ ಮತ್ತು ನೂಲಿನ ಮೇಲಿನ ಬಿಸಿಡಿ ದರವನ್ನು ಶೇಕಡಾ 5 ಕ್ಕೆ ಇಳಿಸುವುದಾಗಿ ಪ್ರಕಟಿಸಿದ ಸಚಿವರು, ಇದು ಜವಳಿ ಉದ್ಯಮ, ಎಂಎಸ್ಎಂಇ ಮತ್ತು ರಫ್ತಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸಲು ರಾಸಾಯನಿಕಗಳ ಮೇಲಿನ ಕಸ್ಟಮ್ಸ್ ಸುಂಕ ದರವನ್ನು ಸೂಕ್ತವಾಗಿ ನಿರ್ಣಯಿಸುವುದಾಗಿಯೂ ಅವರು ಘೋಷಿಸಿದರು. ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ತರ್ಕಬದ್ಧಗೊಳಿಸುಚುದಾಗಿ ಸಚಿವರು ಘೋಷಿಸಿದರು.

ನವೀಕರಿಸಬಹುದಾದ ಇಂಧನ

ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸಲು ಸೌರ ಕೋಶಗಳು ಮತ್ತು ಸೌರ ಫಲಕಗಳ ಹಂತ ಹಂತದ ಉತ್ಪಾದನಾ ಯೋಜನೆಯನ್ನು ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಸೌರ ಇನ್ವರ್ಟರ್ಗಳ ಮೇಲಿನ ಸುಂಕವನ್ನು ಶೇಕಡ 5 ರಿಂದ 20 ಕ್ಕೆ ಮತ್ತು ಸೌರ ಲ್ಯಾಂಟರ್ನ್ಗಳ ಮೇಲೆ ಶೇ 5 ರಿಂದ 15 ಕ್ಕೆ ಹೆಚ್ಚಿಸುವುದಾಗಿ ಅವರು ಘೋಷಿಸಿದರು.

ಬಂಡವಾಳ ಸಾಧನ

ದೇಶೀಯವಾಗಿ ಭಾರಿ ಬಂಡವಾಳ ಸಾಧನಗಳನ್ನು ತಯಾರಿಸುವ ಅಪಾರ ಸಾಮರ್ಥ್ಯವಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ದರ ರಚನೆಯನ್ನು ಸೂಕ್ತ ಸಮಯದಲ್ಲಿ ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು. ಸುರಂಗ ಕೊರೆಯುವ ಯಂತ್ರದ ಮೇಲಿನ ವಿನಾಯಿತಿಗಳನ್ನು ಹಿಂಪಡೆಯುವುದಾಗಿ ಅವರು ಪ್ರಸ್ತಾಪಿಸಿದರು. ಇವುಗಳ ಮೇಲೆ ಶೇ. 7.5 ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಲಾಗುವುದು ಮತ್ತು ಅದರ ಬಿಡಿ ಭಾಗಗಳ ಮೇಲೆ ಶೇ.2.5 ರಷ್ಟು ಸುಂಕ ವಿಧಿಸಲಾಗುವುದು. ಕೆಲವು ವಾಹನ ಬಿಡಿ ಭಾಗಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.15 ಕ್ಕೆ ಏರಿಸುವುದರಿಂದ ಅವುಗಳನ್ನು ಆಟೋ ಬಿಡಿ ಭಾಗಗಳ ಮೇಲಿನ ಸಾಮಾನ್ಯ ದರಕ್ಕೆ ಸಮನಾಗಿ ತರಲಾಗುವುದು.

ಎಂಎಸ್ಎಂಇ ಉತ್ಪನ್ನಗಳು

ಎಂಎಸ್ಎಂಇಗಳಿಗೆ ಅನುಕೂಲವಾಗುವಂತೆ ಬಜೆಟ್ ನಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಉಕ್ಕಿನ ತಿರುಪುಗಳು, ಪ್ಲಾಸ್ಟಿಕ್ ಬಿಲ್ಡರ್ ಸರಕುಗಳು ಮತ್ತು ಸೀಗಡಿ ಆಹಾರಗಳ ಮೇಲಿನ ಸುಂಕವನ್ನು ಶೇ.15 ಕ್ಕೆ ಹೆಚ್ಚಿಸಲಾಗುತ್ತದೆ. ಉಡುಪುಗಳು, ಚರ್ಮ ಮತ್ತು ಕರಕುಶಲ ವಸ್ತುಗಳ ರಫ್ತುದಾರರಿಗೆ ಪ್ರೋತ್ಸಾಹಕವಾಗಿ ಸುಂಕ ರಹಿತ ವಸ್ತುಗಳನ್ನು ಆಮದು ಮಾಡಿಕೊಳ್ಳುವಲ್ಲಿ ವಿನಾಯಿತಿ ನೀಡುವಿಕೆಯನ್ನು ಇದು ಒದಗಿಸುತ್ತದೆ. ಕೆಲವು ರೀತಿಯ ಚರ್ಮದ ಆಮದಿನ ಮೇಲಿನ ವಿನಾಯಿತಿಯನ್ನು ಹಿಂತೆಗೆದುಕೊಳ್ಳಲು ಮತ್ತು ಸಿದ್ಧಪಡಿಸಿದ ಸಂಶ್ಲೇಷಿತ ರತ್ನದ ಕಲ್ಲುಗಳ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.

ಕೃಷಿ ಉತ್ಪನ್ನಗಳು

ರೈತರಿಗೆ ಅನುಕೂಲವಾಗುವಂತೆ, ಕಸ್ಟಮ್ ಸುಂಕವನ್ನು ಹತ್ತಿಯ ಮೇಲೆ ಶೇ,10 ಮತ್ತು ಕಚ್ಚಾ ರೇಷ್ಮೆ ಮತ್ತು ರೇಷ್ಮೆ ನೂಲಿನ ಮೇಲೆ ಶೇ. 15 ಕ್ಕೆ ಏರಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಡಿನೇಚರ್ಡ್ ಈಥೈಲ್ ಆಲ್ಕೋಹಾಲ್ ಮೇಲಿನ ಅಂತಿಮವಾಗಿ ಬಳಕೆ ಆಧಾರಿತ ರಿಯಾಯಿತಿಗಳನ್ನು ಹಿಂತೆಗೆದುಕೊಳ್ಳುವುದಾಗಿಯೂ ಅವರು ಘೋಷಿಸಿದರು.

ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ  ಸೆಸ್

ಕಡಿಮೆ ಸಂಖ್ಯೆಯ ವಸ್ತುಗಳ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಯನ್ನು ಸಚಿವರು ಪ್ರಸ್ತಾಪಿಸಿದರು. "ಸೆಸ್ ಅನ್ನು ಅನ್ವಯಿಸುವಾಗ, ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ನಾವು ಕಾಳಜಿ ವಹಿಸಿದ್ದೇವೆ" ಎಂದು ಅವರು ಹೇಳಿದರು. ಕಸ್ಟಮ್ಸ್ ಸುಂಕದ ವಿಷಯದಲ್ಲಿ ಚಿನ್ನ, ಬೆಳ್ಳಿ, ಆಲ್ಕೋಹಾಲ್ ಪಾನೀಯಗಳು, ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆ, ಸೇಬು, ಕಲ್ಲಿದ್ದಲು, ಲಿಗ್ನೈಟ್ ಮತ್ತು ನಿರ್ದಿಷ್ಟ ರಸಗೊಬ್ಬರಗಳು, ಬಟಾಣಿ, ಕಾಬುಲಿ ಚನಾ, ಬೆಂಗಾಲ್ ಗ್ರಾಂ, ಮಸೂರ ಮತ್ತು ಹತ್ತಿ ಹೆಚ್ಚಿನ ವಸ್ತುಗಳ ಮೇಲೆ ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ಹೊರೆಯಾಗುವುದಿಲ್ಲ.

ಎಐಡಿಸಿಯನ್ನು ಅಬಕಾರಿ ಸುಂಕದಲ್ಲಿ ಪೆಟ್ರೋಲ್ಗೆ ಪ್ರತಿ ಲೀಟರ್ಗೆ 2.5 ರೂ. ಡೀಸೆಲ್ನಲ್ಲಿ ಪ್ರತಿ ಲೀಟರ್ಗೆ 4 ರೂ. ವಿಧಿಸಲಾಗುವುದು. ಆದಾಗ್ಯೂ, ಒಟ್ಟಾರೆ ಗ್ರಾಹಕರು ಯಾವುದೇ ಹೆಚ್ಚುವರಿ ಹೊರೆ ಹೊರರದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್ಎಇಡಿ) ದರಗಳನ್ನು ಬಜೆಟ್ನಲ್ಲಿ ಕಡಿಮೆ ಮಾಡಲಾಗಿದೆ. ಬ್ರಾಂಡ್ ಅಲ್ಲದ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ಗೆ ಕ್ರಮವಾಗಿ ರೂ. 1.4 ಮತ್ತು ರೂ. 1.8 ರೂ. ಮೂಲ ಅಬಕಾರಿ ಸುಂಕ, ಹಾಗೂ  ರೂ. 11 ಮತ್ತು ರೂ. 8 ರೂ. ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗುವುದು.

ಕಾರ್ಯವಿಧಾನಗಳ ತರ್ಕಬದ್ಧಗೊಳಿಸುವಿಕೆ ಮತ್ತು ಅನುಸರಣೆಯನ್ನು ಸರಾಗಗೊಳಿಸುವ ಬಗ್ಗೆ, ಹಣಕಾಸು ಸಚಿವರು ಎಡಿಡಿ ಮತ್ತು ಸಿವಿಡಿ ಸುಂಕಗಳಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಕಸ್ಟಮ್ಸ್ ತನಿಖೆಯನ್ನು ಪೂರ್ಣಗೊಳಿಸಲು, ನಿರ್ದಿಷ್ಟ ಸಮಯದ ಗಡುವು ಸೂಚಿಸಲಾಗುತ್ತಿದೆ ಎಂದು ಅವರು ಹೇಳಿದರು. ಎಫ್ಟಿಎಗಳ ದುರುಪಯೋಗದ ಬಗ್ಗೆ ಪರಿಶೀಲನೆ ನಡೆಸಲು 2020 ರಲ್ಲಿ ಟ್ಯುರಂಟ್ ಸುಂಕ ಉಪಕ್ರಮ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.

***



(Release ID: 1693955) Visitor Counter : 281